ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರೊ.ಅನಿಲ ಆರ್. ಪಾಟೀಲ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.
ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಸಾಯನಿಕ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಅನಿಲ್ ಆರ್. ಪಾಟೀಲ ಅವರು ಪ್ರೊ. ಲೋಕೇಶ್ ಎ.ಶಾಸ್ತ್ರಿ ಮಾರ್ಗದರ್ಶನದಲ್ಲಿ “ಡಿಸೈನ್ ಸಿಂಥೆಸಿಸ್ ಆಂಡ ಕ್ಯಾರಕ್ಟರೈಸೇಶನ್ ಆಫ್ ಕೋಮರಿನ್ ಸಿ 4 ಅರೋಮ್ಯಾಟಿಕ್ ಅಜಾ ಕಾಂಪೌಂಡ್ಸ್ ಅಂಡ್ ಇಟ್ಸ್ ಫೋಟೋಫಿಸಿಕಲ್ ಸ್ಟಡಿಸ್”(Design , Synthesis and Characterisation of Coumarin C4-Aromatic Aza Compounds and its Photophysical Studies) ಎಂಬ ವಿಷಯದ ಸಂಶೋಧನೆ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಲಭಿಸಿದೆ.
ಡಾ. ಅನಿಲ್ ಪಾಟೀಲ ಸಾಧನೆಗೆ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಆರ್.ಎಂ.ಮಿರ್ದೆ, ಉಪ ಪ್ರಾಚಾರ್ಯ ಡಾ.ಅನೀಲ ಬಿ. ನಾಯಕ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.