Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಪತ್ರಿಕಾ ಭವನ ನವೀಕರಣಕ್ಕಾಗಿ ಸಚಿವ ಎಂ.ಬಿ.ಪಾಟೀಲರಿಗೆ ಮನವಿ

ನದಿಯಲ್ಲಿ ಬಿದ್ದ ಟಿಪ್ಪರ್ ಕ್ರೇನ್ ಮೂಲಕ ಮೇಲಕ್ಕೆ :ಚಾಲಕನ ಶವ ಪತ್ತೆ

ರಸ್ತೆ ಅಪಘಾತ: ಸ್ಥಳದಲ್ಲೇ ಓರ್ವನ ಸಾವು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಪತ್ರಿಕಾ ಭವನ ನವೀಕರಣಕ್ಕಾಗಿ ಸಚಿವ ಎಂ.ಬಿ.ಪಾಟೀಲರಿಗೆ ಮನವಿ
(ರಾಜ್ಯ ) ಜಿಲ್ಲೆ

ಪತ್ರಿಕಾ ಭವನ ನವೀಕರಣಕ್ಕಾಗಿ ಸಚಿವ ಎಂ.ಬಿ.ಪಾಟೀಲರಿಗೆ ಮನವಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು & ಕಾರ್ಯಕಾರಿಣಿ ಸದಸ್ಯರಿಂದ ಮನವಿ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಪತ್ರಿಕಾ ಭವನ ನವೀಕರಣ ಕಾರ್ಯಕ್ಕೆ ಆರ್ಥಿಕ ಸಹಾಯ ಅಥವಾ ನವೀಕರಣ ಮಾಡಬೇಕೆಂದು ಒತ್ತಾಯಿಸಿ ಉಸ್ತುವಾರಿ ಸಚಿವ ಎಂ ಬಿ ಪಾಟೀಲರಿಗೆ ಗೃಹ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.
ನಗರದ ಸೊಲ್ಲಾಪುರ ರಸ್ತೆಯಲ್ಲಿರೋ ಸಚಿವ ಎಂ ಬಿ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಕಾರ್ಯಕಾರಿಣಿ ಸದಸ್ಯರು ಭೇಟಿಯಾಗಿ ಮನವಿ ಸಲ್ಲಿಸಿದರು.
ಸಚಿವರಿಗೆ ಮನವಿ ನೀಡಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘ ವಿಜಯಪುರ ಜಿಲ್ಲಾ ಅಧ್ಯಕ್ಷ ಅಶೋಕ ಯಡಳ್ಳಿ, ಶತಮಾನದ ಹೊಸ್ತಿಲಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಕಚೇರಿ ಪತ್ರಿಕಾ ಭವನವು ಮೂಲ ಸೌಲಭ್ಯಗಳ ಕೊರತೆಯಿಂದ ನರಳುತ್ತಿದ್ದು, ಅದಕ್ಕೆ ತುರ್ತಾಗಿ ಕಾಯಕಲ್ಪ ಒದಗಿಸಲು ಮುಂದಾಗಬೇಕಿದೆ. ವಿಜಯಪುರ ಜಿಲ್ಲಾ ಪಂಚಾಯತ ರಸ್ತೆಯಲ್ಲಿರುವ, ಜಿಲ್ಲೆಯ ಪತ್ರಕರ್ತರ ಶಕ್ತಿಕೇಂದ್ರವಾಗಿರುವ ಈ ಪತ್ರಿಕಾ ಭವನಕ್ಕೆ ಪತ್ರಿಕಾ ಭವನ ಕಟ್ಟಡವನ್ನು ನೆಲದಲ್ಲಿ ಮೂರು ಅಡಿ ಎತ್ತರಿಸುವ ಅನಿವಾರ್ಯತೆ ಇದೆ. ಭವನದ ಕಿಟಕಿ ಮತ್ತು ಬಾಗಿಲುಗಳು ಶಿಥಿಲಗೊಂಡಿದ್ದು ಅವುಗಳ ದುರಸ್ಥಿ ಆಗಬೇಕಿದೆ. ಪತ್ರಿಕಾ ಭವನದ ಇಡೀ ಕಟ್ಟಡದಲ್ಲಿ ಕೆಲ ರಿನೋವೇಷನ್ ಮಾಡಿಸಬೇಕಿದೆ. ಕುಡಿಯುವ ನೀರು, ಭವನದ ಆವರಣದಲ್ಲಿರೋ ಸಸಿ ಮರಗಳಿಗೆ ಹಾಗೂ ಉದ್ಯಾನವಕ್ಕಾಗಿ ಕೊಳವೆ ಬಾವಿಯ ಅವಶ್ಯಕತೆಯಿದೆ. ಪಾಳು ಬಿದ್ದಿರುವ ಶೌಚಾಲಯದ ದುರಸ್ತಿಯಾಗಬೇಕಿದೆ. ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲು ಬೇಕಾದ ಪೀಠೋಪಕರಣಗಳು ಸೇರಿದಂತೆ, ತಾಂತ್ರಿಕ ಸೌಲಭ್ಯ ಕಲ್ಪಿಸಿ, ಒಳ ಆವರಣಕ್ಕೆ ಆಧುನಿಕ ಸ್ಪರ್ಶ ನೀಡಬೇಕಿದೆ. ಭವನದ ಕಂಪೌಂಡ್ ಗೋಡೆಯನ್ನು ಎತ್ತರಿಸಿ ಕಬ್ಬಿಣದ ಗೇಟ್ ಅಳವಡಿಕೆ ಹಾಗೂ ಮಹಾದ್ವಾರ ನಿರ್ಮಾಣ ಮಾಡಬೇಕಿದೆ. ಭವನದ ಆವರಣದಲ್ಲಿ ವಿಶಾಲವಾದ ಸ್ಥಳ ಲಭ್ಯವಿದ್ದು, ಅಲ್ಲಿ ಪತ್ರಕರ್ತರ ಸಭೆ – ಸಮಾರಂಭಗಳಿಗಾಗಿ ಸಮುದಾಯ ಭವನದ ನಿರ್ಮಾಣ ಅಗತ್ಯವಿದೆ. ಭವನದ ಹೊರ ಆವರಣದಲ್ಲಿ ಉದ್ಯಾನವನ, ಪಾರ್ಕಿಂಗ್ ನಿರ್ಮಾಣ ಹಾಗೂ ವಿದ್ಯುತ್ ದೀಪಗಳು, ಸಿಸಿ ಕ್ಯಾಮರಾಗಳ ಸೌಲಭ್ಯ ಕಲ್ಪಿಸಬೇಕಿದೆ. ಆದ್ದರಿಂದ ತಾವು ಪತ್ರಿಕಾ ಭವನಕ್ಕೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಅನುದಾನದ ಅವಶ್ಯಕತೆ ಇದೆ. ಸೂಕ್ತ ರೀತಿಯ ಅನುದಾನದಲ್ಲಿ ಆದಷ್ಟು ಹೆಚ್ಚಿನ ಆರ್ಥಿಕ ಸಹಾಯ ಒದಗಿಸಬೇಕೆಂದು ಸಚಿವ ಎಂ ಬಿ ಪಾಟೀಲರಿಗೆ ವಿನಂತಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲರು, ನಾನು ಯಾವಾಗಲೂ ಪತ್ರಕರ್ತರ ಸಂಘದ ಬೆಳವಣಿಗೆಗೆ ಸಹಕರಿಸುವೆ. ಸದಾ ಒತ್ತಾಡದಲ್ಲಿರುವ ಪತ್ರಕರ್ತರ ಏಳಿಗೆಗೆ ಸ್ಪಂದಿಸುವ ಕೆಲಸ ನಮ್ಮಿಂದ ಆಗಲಿದೆ. ಪತ್ರಿಕಾ ಭವನಕ್ಕೆ ಸೌಲಭ್ಯ ಕಲ್ಪಿಸಲು ತಮ್ಮಿಂದ ಹಾಗೂ ಸಂಸ್ಥೆಯಿಂದ ಆಗುವ ಸಹಾಯವನ್ನು ಮಾಡುವ ಭರವಸೆ ನೀಡಿದರು.
ಇದೇ ವೇಳೆ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಇಂದುಶೇಖರ್ ಮಣೂರ, ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸಚಿವ ಎಂ ಬಿ ಪಾಟೀಲರು ಯಾವಾಗಲು ಸಹಾಯ ಸಹಕಾರ ನೀಡುತ್ತಾ ಬಂದಿದ್ದಾರೆ. ಪತ್ರಕರ್ತರಿಗಾಗಿ ಬಿಎಲ್ಡಿಇ ಸಂಸ್ಥೆಯ ಬಿ ಎಂ ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಿಂದ ಆರೋಗ್ಯ ಕಾರ್ಡ್ ನೀಡಿದ್ದಾರೆ. ಸಂಘದ ಚಟುವಟಿಕೆಗಳಿಗೆ ಬೆಂಬಲಿಸುತ್ತಾ ಬಂದಿದ್ದಾರೆ. ಸದ್ಯ ಪತ್ರಿಕಾ ಭವನದ ನವೀಕರಣಕ್ಕೆ ಸಿ ಎಸ್ ಆರ್ ಅನುದಾನವನ್ನು ಕಾನೂನು ವ್ಯಾಪ್ತಿಯಲ್ಲಿ ಒದಗಿಸೋ ಭರವಸೆ ನೀಡಿದ್ದಾರೆ ಎಂದರು.
ಈ ವೇಳೆ ರಾಷ್ಟ್ರೀಯ ಮಂಡಳಿ ಸದಸ್ಯ ಶರಣಬಸಪ್ಪ ಮಸಳಿ, ಉಪಾಧ್ಯಕ್ಷ ಶಶಿಕಾಂತ ಮೆಂಡೆಗಾರ, ಖಜಾಂಚಿ ರಾಹುಲ್ ಆಪ್ಟೆ, ಕಾರ್ಯಕಾರಿ ಸದಸ್ಯರಾದ ಮಹೇಶ ವಿ ಶೆಟಗಾರ, ಗುರುರಾಜ ಗದ್ದನಕೇರಿ, ಗೋಪಾಲ ಕಣಿಮನಿ ಮತ್ತು ಸುನೀಲ ಗೊಡೆನ್ನವರ, ಸುನೀಲ ಕಾಂಬಳೆ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.

BIJAPUR NEWS patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ನದಿಯಲ್ಲಿ ಬಿದ್ದ ಟಿಪ್ಪರ್ ಕ್ರೇನ್ ಮೂಲಕ ಮೇಲಕ್ಕೆ :ಚಾಲಕನ ಶವ ಪತ್ತೆ

ರಸ್ತೆ ಅಪಘಾತ: ಸ್ಥಳದಲ್ಲೇ ಓರ್ವನ ಸಾವು

ದಿನಕ್ಕೊಂದು ವಚನ, ಹಳಕಟ್ಟಿಯವರಿಗೆ ನಿಜ ನಮನ :ನಾರಾಯಣ ಶಾಸ್ತ್ರಿ

ಜು.29ರೊಳಗೆ ಮತದಾರರ ವಿವರ ದೃಢೀಕರಿಸಿ :ಶಾಸಕ ಸವದಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಪತ್ರಿಕಾ ಭವನ ನವೀಕರಣಕ್ಕಾಗಿ ಸಚಿವ ಎಂ.ಬಿ.ಪಾಟೀಲರಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ನದಿಯಲ್ಲಿ ಬಿದ್ದ ಟಿಪ್ಪರ್ ಕ್ರೇನ್ ಮೂಲಕ ಮೇಲಕ್ಕೆ :ಚಾಲಕನ ಶವ ಪತ್ತೆ
    In (ರಾಜ್ಯ ) ಜಿಲ್ಲೆ
  • ರಸ್ತೆ ಅಪಘಾತ: ಸ್ಥಳದಲ್ಲೇ ಓರ್ವನ ಸಾವು
    In (ರಾಜ್ಯ ) ಜಿಲ್ಲೆ
  • ದಿನಕ್ಕೊಂದು ವಚನ, ಹಳಕಟ್ಟಿಯವರಿಗೆ ನಿಜ ನಮನ :ನಾರಾಯಣ ಶಾಸ್ತ್ರಿ
    In (ರಾಜ್ಯ ) ಜಿಲ್ಲೆ
  • ಜು.29ರೊಳಗೆ ಮತದಾರರ ವಿವರ ದೃಢೀಕರಿಸಿ :ಶಾಸಕ ಸವದಿ
    In (ರಾಜ್ಯ ) ಜಿಲ್ಲೆ
  • ಅಂಗೈಯಲ್ಲಿ ಅರಮನೆ
    In ಭಾವರಶ್ಮಿ
  • ಮಾಹಿತಿಗಳ ಜಾಲದಲ್ಲಿ ಮಕ್ಕಳು ಸಿಲುಕದಿರಲಿ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 03, 2026
    In ದಿನಪತ್ರಿಕೆ
  • ನದಿಗೆ ಬಿದ್ದ ಟಿಪ್ಪರ್ ಮೇಲಕ್ಕೆತ್ತುವ ಕಾರ್ಯಾಚರಣೆ ವಿಫಲ
    In (ರಾಜ್ಯ ) ಜಿಲ್ಲೆ
  • ರಾಜ್ಯ ಸರ್ಕಾರದ ಕರಡು ನಿಯಮಕ್ಕೆ ಉಪನ್ಯಾಸಕರ ತೀವ್ರ ವಿರೋಧ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.