ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ೨೦೨೫-೨೬ನೆಯ ಸಾಲಿನ ಬಜೆಟ್ ಸಭೆ ಕರೆಯುವಂತೆ ಮಾ.೨೬ರಂದು ಪತ್ರ ಬರೆಯಲಾಗಿತ್ತು. ಆದರೆ ಸಿಂದಗಿ ಪುರಸಭೆ ಮುಖ್ಯಾಧಿಕಾರಿ ಯಾವುದೇ ಮುನ್ಸೂಚನೆ ಇಲ್ಲದೇ ನನ್ನ ಹಾಗೂ ಮೇಲಾಧಿಖಾರಿಗಳ ಗಮನಕ್ಕೆ ತರದೇ ತಮ್ಮ ಅಧಿಕಾರವನ್ನು ದುರುಪಯೋಗ ಪಡೆಸಿಕೊಂಡು ರದ್ದುಪಡಿಸಿರುವ ಪರಿಣಾಮ ಪಟ್ಟಣದ ಸಾರ್ವಜನಿಕರಿಗೆ ಮತ್ತು ಪೌರ ಕರ್ಮಿಕರ ಸಿಬ್ಬಂದಿಗಳಿಗೆ ಸರಿಯಾದ ಸಮಯದಲ್ಲಿ ವೇತನ ಮಾಡಲು ಸಾಧ್ಯವಾಗುತ್ತಿದೆ. ಇದರಿಂದ ಪುರಸಭೆ ಆಡಳಿತ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಿಂದಗಿ ಪುರಸಭೆ ಆರ್ಥಿಕವಾಗಿ ಹಿಂದುಳಿಯುವುದಕ್ಕೆ ತಾವೇ ಕಾರಣಿಕರ್ತರಾಗಿದ್ದು, ಅದನ್ನು ಸರಿದೂಗಿಸುವ ಉದ್ದೇಶದಿಂದ ಮೇ.೦೯ರಂದು ಪುರಸಭೆ ಬಜೆಟ್ ಸಭೆಯನ್ನು ಕರೆಯುವಂತೆ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಮುಖ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.

