Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಹಳಕಟ್ಟಿ ಪ್ರೌಢಶಾಲೆಗೆ ಸಮಗ್ರ ಶಿಕ್ಷಣ ಸಮನ್ವಯಾಧಿಕಾರಿ ಎಂ.ಎ.ಗುಳೇದಗುಡ್ಡ ಬೇಟಿ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಕರೇ ಆಧಾರಸ್ತಂಭ. ಗುರುಬಳಗವೇ ಸ್ಪೂತಿ೯ದಾತರು. ಮೊಗ್ಗಿನ ಮನಸ್ಸುಗಳ ಶೈಕ್ಷಣಿಕ ಪ್ರಗತಿ ರೂಪಿಸುವಲ್ಲಿ ಗುರುದೇವೋಭವದ ಪಾತ್ರ ಹಿರಿದು ಎಂದು ಕನಾ೯ಟಕ ಸಮಗ್ರ ಶಿಕ್ಷಣ ವಿಜಯಪುರ ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಎಂ.ಎ.ಗುಳೇದಗುಡ್ಡ ಹೇಳಿದರು.ಸ್ಥಳೀಯ ಎಸ್.ವಿ.ವಿ.ಸಂಸ್ಥೆಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಗೆ ಅನಿರೀಕ್ಷಿತ ಬೇಟಿ ನೀಡಿ ಮಾತನಾಡಿದ ಅವರು, ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವ ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅವರನ್ನು ತಿದ್ದಿ,ತೀಡಿ ಶಿಕ್ಷಣದ ಮುಖ್ಯವಾಹಿನಿಗೆ ತರಬೇಕು. ಆ ದಿಸೆಯಲ್ಲಿ ಕಲಿಕಾಸಕ್ತಿಯಿಂದ ದೂರಿರುವ ಮಕ್ಕಳಲ್ಲಿ ಓದಾಸಕ್ತಿ- ಬರಹಾಸಕ್ತಿ ಮೂಡಿಸಿ ಪ್ರೋತ್ಸಾಹಿಸಬೇಕು. ಓದುವ ಹವ್ಯಾಸ ಹಾಗೂ ಬರವಣಿಗೆ ಕೌಶಲ್ಯ ಮೂಡಿಸಿದರೆ ಮಾತ್ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಕಾಣಲು ಸಾಧ್ಯ ಎಂದರು.ವಿದ್ಯಾರ್ಥಿಗಳ ದಾಖಲಾತಿ, ಹಾಜರಾತಿ, ಸಿಬ್ಬಂದಿ ಹಾಜರಾತಿ, ಪಠ್ಯ ಯೋಜನೆಯ ಮಕ್ಕಳ ಕಲಿಕಾ ಗುಣಮಟ್ಟ ಸೇರಿದಂತೆ ಶೈಕ್ಷಣಿಕ ಯೋಜನೆಗಳ ಅನುಷ್ಟಾನ ಪರಿಶೀಲಿಸಿದರು.ಮಕ್ಕಳಲ್ವಿ ಬೆಂಚ್ ತಾರತಮ್ಯ ಭಾವನೆ ನೀಗಿಸಲು “U” ಶೇಪ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರೈತರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಉತ್ತರ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಶಂಕರಗೌಡ ಹಿರೇಗೌಡರ ಮಾತನಾಡಿ, ಬೆಳೆ ಪರಿಹಾರ ಆಗಸ್ಟ್ ತಿಂಗಳಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು, ಬಂಡಿ ದಾರಿ ರಸ್ತೆ ಸುಧಾರಣೆ ಹಾದಿ ಸಮಸ್ಯೆ , ಕಬ್ಬಿನ ವೈಜ್ಞಾನಿಕ ಬಂಬಲ ಬೆಲೆ, ರಾತ್ರಿ ಹೊತ್ತು ವಿದ್ಯುತ್ ಹಳೆಯ ರಾತ್ರಿ ಸಮಯದಲ್ಲಿ ತೋಟದ ಲೈನನ್ನು ರಾತ್ರಿ ನಿರಂತರ ವಿದ್ಯುತ್ ನೀಡಬೇಕು, ಅಕ್ರಮ-ಸಕ್ರಮ ಯೋಜನೆ ಪುನಾ ಜಾರಿಗೆ ತರುವುದು ಶೀಘ್ರ ಸಂಪರ್ಕ ಯೋಜನೆಯಿಂದ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ, ಹಳೆಯ ಆರ್ ಆರ್ ನಂಬರ್ ೧೦೦೦೦ರೂಪಾಯಿ ಮತ್ತು ಹೊಸ ಆರ್ ಆರ್ ನಂಬರ್ ೧೫೦೦೦ರೂಪಾಯಿ ಶುಲ್ಕ ಪಾವತಿಸುವ ಆದೇಶ ಹಿಂಪಡೇಯಬೇಕು ,ವೈಶಾಲಿ ವಿಂಡ್ ಪವರ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಗುಲಾಬ್ ರಾಮಚಂದ್ರ ಚವಾಣ್ ಕುಮಟಗಿ ಗ್ರಾಮದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕ ಹಾಗೂ ಬಿ.ಎಲ್.ಡಿ.ಇಯ ಶ್ರೀ ಬಿ.ಎಮ್. ಪಾಟೀಲ ನರ್ಸಿಂಗ್ ಮಹಾವಿದ್ಯಾಲಯ ವಿಜಯಪುರ ಇವರ ಸಹಯೋಗದಲ್ಲಿ ಬುಧವಾರ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನ ಅಂಗವಾಗಿ ಜನಜಾಗೃತಿ ಜಾಥಾಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರದ ಅಧ್ಯಕ್ಷರಾದ ಹರೀಶ.ಎ ಅವರು ಹಸಿರು ನಿಶಾನೆ ತೊರುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರದ ಅಧ್ಯಕ್ಷರಾದ ಹರೀಶ.ಎ ಅವರು, ಮಾನಸಿಕ ಆರೋಗ್ಯದ ಕುರಿತು ಸಮುದಾಯದಲ್ಲಿ ತಿಳುವಳಿಕೆ ಮೂಡಿಸಬೇಕು ಶಾಲಾ-ಕಾಲೇಜುಗಳಲ್ಲಿ ಹಾಗೂ ಕೆಲಸದ ಸ್ಥಳದಲ್ಲಿ ಜಾಗೃತಿ ಶಿಬಿರ ಆಯೋಜಿಸಿ ಮಾನಸಿಕ ಸ್ವಾಸ್ಥ್ಯದ ಕುರಿತು ತಿಳಿ ಹೇಳಬೇಕು. ವಿದ್ಯಾರ್ಥಿಗಳು ಓದಿನೆಡೆಗೆ ಒಲವು ಹೊಂದಿ ಜೀವನ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಮೂಲಕ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಮಹಿಳೆಯರಿಗಾಗಿ ಕಾಯಕ ಸ್ಪೂರ್ತಿ, ಪಾದುಕೆ ಕುಟೀರ ಯೋಜನೆ, ಮಾರುಕಟ್ಟೆ ಸಹಾಯ ಯೋಜನೆ, ಕೌಶಲ್ಯ ಉನ್ನತೀಕರಣ ಯೋಜನೆ, ಚರ್ಮ ಶಿಲ್ಪ ಯೋಜನೆ, ವಸತಿ ಯೋಜನೆ, ಕಿರು ಆರ್ಥಿಕ ನೇರ ಸಾಲ, ಸ್ವಾವಲಂಭಿ-ಸಂಚಾರಿ ಮಾರಾಟ ಮಳಿಗೆ ಯೋಜನೆಗಳಿಗಾಗಿ ಅಕ್ಟೋಬರ್ ೮ರೊಳಗೆ ಸೇವಾ ಸಿಂಧು ಪೊರ್ಟಲ್ ಮೂಲಕ ಆನಲೈನ್ ಅರ್ಜಿ ಸಲ್ಲಿಸಬಹುದಾಗಿದೆ.ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಜಿಲ್ಲೆಯ ಜಿಲ್ಲಾ ಸಂಯೋಜಕರು ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಕಚೇರಿಗೆ ಸಲ್ಲಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರ ಕಚೇರಿಗೆ ಭೇಟಿ ನೀಡಬಹುದಾಗಿದೆ ಎಂದು ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರತಿ ವರ್ಷದಂತೆ ಸೆ.೩೦ರಿಂದ ಅಕ್ಟೋಬರ್ ೦೪ರವರೆಗೆ ರಾಜ್ಯದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳು ಭೇಟಿ ನೀಡಲು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬಸ್ಸು ಮತ್ತು ರೈಲಿನ ಮೂಲಕ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ರಾಜ್ಯದಿಂದ ನಾಗಪುರಕ್ಕೆ ಭೇಟಿ ನೀಡಲಿರುವ ಅನುಯಾಯಿಗಳು ಸಮಾಜ ಕಲ್ಯಾಣ ಇಲಾಖೆಯhttps://swd.karnataka.gov.in ವೆಬ್‌ಸೈಟ್ ಮೂಲಕ ಆ.೨೫ರಿಂದ ಸೆ.೯ರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ವಿಜಯಪುರ ಜಿಲ್ಲೆಯ ಅನುಯಾಯಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ ಮನವಿ ಮಾಡಿಕೊಂಡಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೫-೨೬ನೇ ಸಾಲಿನಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಕರ್ನಾಟಕ ರಾಜ್ಯ ಕೌಶಲ್ಯ ಓಲಿಂಪಿಕ್ಸ್–೨೦೨೫ ಆರಂಭಿಸಿದೆ. ಕರ್ನಾಟಕ ರಾಜ್ಯ ಕೌಶಲ್ಯ ಓಲಿಂಪಿಕ್ಸ್–೨೦೨೫ ಅನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸಿ, ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸುಧಾರಿತ ತರಬೇತಿ ನೀಡಿ, ವಿಭಾಗ ಮಟ್ಟ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಿ, ಮುಂದಿನ ದಿನಗಳಲ್ಲಿ ಜರಗುವ India Skill competition Karnataka-2025&World Skills-೨೦೨೬ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ನೀಡಲಾಗುವುದು. ಈ ಕಾರ್ಯಕ್ರಮವು ಚೀನಾ ದೇಶದ ಶಾಂಘೈನಲ್ಲಿ ಆಯೋಜನೆಗೊಳ್ಳುವುದು.ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳಿಗೆ ೬೩ ವಿವಿಧ ಕೌಶಲ್ಯಗಳ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.ಆನ್‌ಲೈನ್ ನೋಂದಣಿಗಾಗಿ http://www.skillindiadigital.gov.in/homeಲಿಂಕ್‌ನ್ನು ಉಪಯೋಗಿಸಿ ಅಥವಾ ಇಲ್ಲಿರುವ ಕ್ಯೂಆರ್-ಕೋಡ್‌ನ್ನು ಸ್ಕ್ಯಾನ್ ಮಾಡಿ ದಿನಾಂಕ:೩೦-೦೯-೨೦೨೫ ರೊಳಗಾಗಿ ನೋಂದಾಯಿಸಿ ಕೊಳ್ಳಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಜಿಲ್ಲೆಯ ಬಾಗಲಕೋಟೆ ರಸ್ತೆ, ಮಹಾನಗರ ಪಾಲಿಕೆ ಹತ್ತಿರವಿರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ, ದೂ.ಸಂಖ್ಯೆ: ೦೮೩೫೨-೨೯೭೦೧೯,ಮೊ: ೯೭೪೧೭೫೩೫೬೫, ಮೊ: ೮೨೧೭೬೧೫೨೫೭ ಹಾಗೂ ಮೊ: ೯೬೨೦೨೦೨೧೦೨ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಮಟ್ಟದ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಬೆಳಗಾವಿ ವಿಭಾಗಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ.೨೦೨೫-೨೬ನೇ ಸಾಲಿನ ಬೆಳಗಾವಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವು ವಿವಿಧ ಜಿಲ್ಲೆಯಲ್ಲಿ ನಡೆಯಲಿದ್ದು, ಸೆಪ್ಟೆಂಬರ್ ೧೧ರ ಬೆಳಿಗ್ಗೆ ೯ಗಂಟೆಗೆ ಬಾಗಲಕೋಟೆಯ ನವನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗ, ಗದಗದ ಕೆ.ಎಚ್.ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೮ಗಂಟೆಗೆ ಹಾಕಿ ಮತ್ತು ಪುಟ್ಬಾಲ್ ದೂರವಾಣಿ ಸಂಖ್ಯೆ: ೦೮೩೭೨-೨೩೮೩೪೫ ಸಂಪರ್ಕಿಸಬಹುದಾಗಿದೆ. ವಿಜಯಪುರ ಜಿಲ್ಲೆಯ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂದು ಬೆಳಿಗ್ಗೆ ೮ ಗಂಟೆಗೆ ಅಥ್ಲೆಟಿಕ್ ಮತ್ತು ಜುಡೋ ಕ್ರೀಡೆಗಳು ನಡೆಯುತ್ತಿದ್ದು, ೦೮೩೫೨-೨೫೧೦೮೫ಸಂಪರ್ಕ ಸಂಪರ್ಕಿಸಬಹುದು. ಸೆಪ್ಟೆಂಬರ್ ೧೧ ಮತ್ತು ೧೨ರಂದು ಬೆಳಗಾವಿ ಜಿಲ್ಲೆಯ ಹಾರೂಗೇರಿಯ ವಾಲ್ಮೀಕಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ (ಬಿ.ಪಿ.ಇಡಿ) ಮಹಾವಿದ್ಯಾಲಯದ ಆಟದ ಮೈದಾನದಲ್ಲಿ ಹ್ಯಾಂಡಬಾಲ್ ಕ್ರೀಡೆ ನಡೆಯಲಿದ್ದು, ಮಾರುತಿ ಪೂಜಾರಿ ಮೊ : ೮೭೨೨೪೬೩೧೭೫, ನಾಮದೇವ ಮೀರಜಕರ ಮೊ: ೯೩೭೯೭೪೪೭೩೧ ಮಾಹಿತಿಗೆ ಸಂಪರ್ಕಿಸಬಹುದು.ಸೆ.೧೧ ಹಾಗೂ ೧೨ರಂದು ಬೆಳಗಾವಿ ಜಿಲ್ಲೆಯ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸನ್ 2025-26 ನೇ ಸಾಲಿನಲ್ಲಿ ಮಂಜೂರಿಸಲಾದ ರೂ.11 ಲಕ್ಷ ಅನುದಾನದಲ್ಲಿ ಖರೀದಿಸಲಾದ ನೂತನ ಮಹಿಂದ್ರಾ ಬೋಲೆರೋ ವಾಹನವನ್ನು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಬುಧವಾರ ಆರಕ್ಷಕ ನಿರೀಕ್ಷಕರು, ವಾಹನ ಸಾರಿಗೆ ವಿಭಾಗ, ಡಿಎಆರ್ ವಿಜಯಪುರ ರವರಿಗೆ ಕೀ ನೀಡುವ ಮೂಲಕ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿಗಳಾದ ಸುನೀಲ ಕಾಂಬ್ಳೆ, ಮುರಗೆಪ್ಪ ಉಪಾಸೆ, ಸಿಪಿಐ ಗಳಾದ ರವಿ ಯಡವಣ್ಣವರ, ರಾಯಗೊಂಡ ಜಾನವಾರ, ಪರಶುರಾಮ ಮನಗೂಳಿ, ಪಿ.ಎಸ್.ಐ ಯತಿಂದ್ರ, ಆರ್.ಪಿ.ಐ ಈರಸಂಗಪ್ಪ ತೇಲಿ, ಆರ್.ಎಸ್.ಐ ಶ್ರೀರಂಗಪ್ಪ, ಎ.ಆರ್.ಎಸ್.ಐ ಅಶೋಕ ಕಾಂಬ್ಳೆ, ಹವಾಲ್ದಾರ್ ವಿಶ್ವನಾಥ ಚವ್ಹಾಣ ಮತ್ತಿತರರು ಇದ್ದರು.
ಚಿಮ್ಮಡದ ಸರಕಾರಿ ಗೋಮಾಳ ಜಮೀನು ಖಾಸಗಿ ವ್ಯಕ್ತಿಗಳ ಹೆಸರಿಗೆ ಪರಭಾರೆ ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದ ಸರಕಾರಿ ಗೋಮಾಳ ಜಮೀನು ಖಾಸಗಿ ವ್ಯಕ್ತಿಗಳ ಹೆಸರಿಗೆ ಪರಭಾರೆ ಮಾಡಿಕೊಂಡಿರುವ ಭೂಗಳ್ಳರನ್ನು ಹಾಗೂ ಅವರಿಗೆ ಸಹಕಾರ ನೀಡಿದ ಅಧಿಕಾರಿಗಳನ್ನು ಬಂಧಿಸುವಂತೆ ಆಗ್ರಹಿಸಿ ಗ್ರಾಮದ ಪ್ರಮುಖರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.ಗ್ರಾಮದ ವ್ಯಾಪ್ತಿಯಲ್ಲಿರುವ ಸರ್ವೆ ನಂ. ೫೯/೧ ರಲ್ಲಿನ ಸುಮಾರು ೧೯ ಎಕರೆ ೨೩ ಗುಂಟೆ ಜಮೀನು ಸರಕಾರ ಜಾನುವಾರುಗಳನ್ನು ಮೇಯಿಸಲು (ಗೋಮಾಳ) ಮೀಸಲಿರಿಸಿತ್ತು ಅದಕ್ಕೆ ಧಾಖಲೆಗಳಲ್ಲಿ ಗುರುಚರಣ (ಸರಕಾರಿ ಜಮೀನು) ಎಂದು ನೊಂದನಿಯಾಗಿರುತ್ತದೆ ಈ ಭಾಗದಲ್ಲಿ ಬಹುತೇಕ ಗೋಮಾಳ ಜಾಗೆಗಳಿಗೆ ಗುರುಚರಣ ಎಂದೇ ದಾಖಲಾಗಿರುತ್ತವೆ ಇದನ್ನೇ ದುರುಪಯೋಗ ಪಡೆದುಕೊಂಡ ಶಿವಮೊಗ್ಗದ ಶ್ರೀ ಗುರುಚರಣ ಬಿನ್ ಮುರುಳಪ್ಪ ಎನ್ನುವ ವ್ಯಕ್ತಿ ಆ.೧೪ರಂದು ಶಿವಮೊಗ್ಗದ ಉಪನೊಂದನಾಧಿಕಾರಿ ಕಛೇರಿಯಲ್ಲಿ ತಮ್ಮ ಹೆಸರಿಗೆ ಮುಕ್ತ್ಯಾರ ಪತ್ರ (ಜಿಪಿಎ) ಮಾಡಿಕೊಂಡಿದ್ದಾರೆ, ನಂತರ ದಿನಾಂಕ ೨೬-೮-೨೦೨೫ರಂದು ಒಟ್ಟು ಮುಕ್ತ್ಯಾರ ಪತ್ರದನ್ವಯ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಿನ ಮೋರಟಗಿ ವಲಯ ಮಟ್ಟದ ಕ್ರೀಡಾಕೂಟಗಳನ್ನು ಬಗಲೂರ ಪ್ರೌಢಶಾಲೆ ಯಲ್ಲಿ ಆಯೋಜಿಸಲಾಗಿತ್ತು.ಈ ಕ್ರೀಡಾ ಕೂಟಗಳಲ್ಲಿ ಸರಕಾರಿ ಪ್ರೌಢಶಾಲೆ ಸೋಮಜಾಳ ವಿದ್ಯಾರ‍್ಥಿ/ನಿಯರು ಗಳು ಥ್ರೋ ಬಾಲ್ ನಲ್ಲಿ ಪ್ರಥಮ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ವಿದ್ಯಾರ‍್ಥಿಗಳ ಈ ಸಾಧನೆಗೆ ಎಸ್ ಡಿ ಎಮ್ ಸಿ ಸದಸ್ಯರು ಮುಖ್ಯಪಾಧ್ಯಾಯರು ಶಿಕ್ಷಕರು ರ‍್ಷ ವ್ಯಕ್ತ ಪಡಿಸಿದ್ದಾರೆ.ಈ ಸಂದರ‍್ಭದಲ್ಲಿ ದೈಹಿಕ ಶಿಕ್ಷಕ ಭೀಮರಾಯ ಅರಳಗುಂಡಗಿ, ಎನ್ ಎಸ್ ಬಿರಾದಾರ, ಸಂತೋಷ ಅಮರಗೊಂಡ, ಸೂರ‍್ಯಕಾಂತ್ ಸಾಲೋಟಗಿ, ರಾಕೇಶ್ ಬಿರಾದಾರ ಇದ್ದರು
