Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ- ಮಲ್ಲಪ್ಪ ಖೊದ್ನಾಪೂರ(ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಪರ್ಶಿಯಾದ ಒಂದು ಗಾದೆಯಂತೆ “ ಚಿಕ್ಕದು ಎನ್ನುವ ಕೆಲಸಗಳನ್ನು ಈಗಲೇ ಚೆನ್ನಾಗಿ ಮಾಡು. ಆಗ ದೊಡ್ಡ ಕೆಲಸ-ಕಾರ್ಯಗಳು ತಾವಾಗಿಯೇ ಹುಡುಕಿಕೊಂಡು ಬರುತ್ತವೆ” ಎಂಬ ಉಲ್ಲೇಖವಿದೆ. ಅದನ್ನೇ ೧೨ ನೇಯ ಶತಮಾನದಲ್ಲಿ ಬಸವಣ್ಣವರು “ಕಾಯಕವೇ ಕೈಲಾಸ” “ಕೈ ಕೆಸರಾದರೆ ಬಾಯಿ ಮೊಸರು” ಎಂದು ಹೇಳಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತುತ್ತಿನ ಚೀಲ ತುಂಬಿಕೊಳ್ಳಲು ಮತ್ತು ಜೀವನ ನಿರ್ವಹಣೆಗಾಗಿ ದುಡಿಮೆ ಮಾಡಲೇಬೇಕು. ಹಾಗೆಂದ ಮಾತ್ರಕ್ಕೆ ಬೇಕಾ ಬಿಟ್ಟಿಯಾಗಿ ಅಥವಾ ಮನಸ್ಸಿಲ್ಲದೆ, ಉದಾಸೀನತೆಯಿಂದ ಕೆಲಸ ಮಾಡುವುದು ಸರಿಯಲ್ಲ. ನಾವು ಮಾಡುವ ಪ್ರತಿ ಕೆಲಸ-ಕಾರ್ಯವು ಯಾವುದೇ ಆಗಿರಬಹುದು. ಅದನ್ನು ಸರಿಯಾಗಿ ಶ್ರದ್ಧೆ, ನಿಷ್ಠೆ, ಕಾರ್ಯತತ್ಪರತೆ, ಕಾರ್ಯದಕ್ಷತೆ ಹಾಗೂ ಮನಸ್ಸಿಗೆ ತೃಪ್ತಿದಾಯಕವಾಗಿ ಹಾಗೂ ಎಷ್ಟು ಚೆನ್ನಾಗಿ ಮಾಡುತ್ತೇವೆ ಎನ್ನುವದು ಅತಿ ಮುಖ್ಯವಾಗಿದೆ. ನಾವು ಎಂತಹ ಜೀವನ ನಡೆಸುತ್ತೇವೆಂಬುದನ್ನು ನಮ್ಮ ಕೆಲಸವೇ ತಿಳಿಸುತ್ತದೆ. ಆದ್ದರಿಂದ ನಾವು ಮಾಡುವ ಕೆಲಸ ಚಿಕ್ಕದು, ದೊಡ್ಡದು ಅಥವಾ ಯಾವುದೇ ಕೆಲಸವಾಗಿರಲಿ ಅದನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿನ ಆಧುನಿಕತೆ, ಜೀವನ ಶೈಲಿ, ಆಹಾರ ಪದ್ಧತಿ-ಕ್ರಮ ಮತ್ತು ಊಟೋಪಚಾರದ ವ್ಯವಸ್ಥೆಯಲ್ಲಾಗುತ್ತಿರುವ ಬದಲಾವಣೆಯ ಪರಿಣಾಮದಿಂದಾಗಿ ನಮ್ಮ ಆರೋಗ್ಯದಲ್ಲಿ ಏರುಪೇರುಗಳಾಗುತ್ತಿವೆ. ಅದರಲ್ಲೂ ಮಕ್ಕಳು, ಯುವಕರು ಮತ್ತು ಮಹಿಳೆಯರು ನಮ್ಮ ಆಹಾರ ಪದ್ಧತಿಯನ್ನು ಬಿಟ್ಟು ಫಾಸ್ಟ ಫುಡ್, ಫಿಜ್ಜಾ, ಬರ್ಗರ್, ಡೋನಟ್, ಜಂಕ್ ಫುಡ್ ಮತ್ತು ಸಂಸ್ಕರಿತ ಆಹಾರ ಪದಾರ್ಥಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ರಕ್ತಹೀನತೆ, ಅನಿಮೀಯಾ, ಮಧುಮೇಹ ಮತ್ತು ಹೃದಯ ಸಂಬಂಧಿ ರೋಗಗಳಿಂದ ಬಳಲುತ್ತಿರುವುದು ಕಳವಳಕಾರಿ ಸಂಗತಿ ಎಂದು ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಕಲ್ಯಾಣ ಘಟಕ, ಎನ್.ಎಸ್.ಎಸ್ ಘಟಕ ಮತ್ತು ಸ್ಪಂದನ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಡಿಯಲ್ಲಿ ಜರುಗಿದ ರಕ್ತ ತಪಾಸಣೆ ಮತ್ತು ಅನಿಮೀಯಾ ತಡೆಗಟ್ಟುವ ಅರಿವು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ವಿಶೇಷವಾಗಿ ಮಕ್ಕಳಲ್ಲಿ ಪೌಷ್ಟಿಕ ಮತ್ತು ಪೋಷಕಾಂಶಗಳ ಕೊರತೆಯಿಂದ ರಕ್ತಹೀನತೆಯಂತಹ ತೊಂದರೆಗಳು ಉಂಟಾಗಿ ಆರೋಗ್ಯದಲ್ಲಿ ಸಮಸ್ಯೆಯಾಗುತ್ತಿದೆ. ಆದ್ದರಿಂದ ಉತ್ತಮ ಆರೋಗ್ಯಕ್ಕಾಗಿ ಹಾಲು, ತರಕಾರಿ, ಕಾಳು-ಧಾನ್ಯ ಮತ್ತು ಪೌಷ್ಟಿಕ ಆಹಾರ…
*ಉದಯರಶ್ಮಿ ದಿನಪತ್ರಿಕೆ* ತಿಕೋಟಾ: ಪಟ್ಟಣದ ಮಲ್ಲಿಕಾರ್ಜುನ ದೇವಸ್ತಾನದ ಹೊಸ ಕಟ್ಟಡ ನಿರ್ಮಿಸಲು ರಾಜು ಬನಪ್ಪ ಮೇತ್ರಿ ಅವರು ಕುಟುಂಬಸ್ತರು ಕುಡಿಕೊಂಡು ಒಂದು ಲಕ್ಷ ಒಂದು ರೂ ತಮ್ಮ ಮನೆಯಲ್ಲಿ ದೇವಸ್ತಾನದ ಕಾರ್ಯದರ್ಶಿ ಬಸವರಾಜ ಬಂಡಿ ಅವರಿಗೆ ನೀಡಿದರು. ದೇವಸ್ತಾನ ಅಭಿವೃದ್ದಿ ಕುರಿತು ಮಾತನಾಡಿದ ತಿಕೋಟಾ ಹಿರೆಮಠದ ಶಿವಬಸವ ಶಿವಾಚಾರ್ಯರು ದೇವಸ್ತಾನ ಅಭಿವೃದ್ದಿ ಆಗಬೇಕಾದರೆ ಭಕ್ತರ ಕಾಣಿಕೆಯಿಂದ ಮಾತ್ರ ಸಾದ್ಯವಾಗುತ್ತದೆ. ಭಕ್ತರು ತಮ್ಮ ತಮ್ಮ ಶಕ್ತ್ಯಾನುಸಾರ ಕಾಣಿಕೆ ಸಲ್ಲಿಸಿದರೆ ದೇವಸ್ತಾನ ಸಂಪೂರ್ಣ ಅಭಿವೃದ್ದಿಯಾಗುತ್ತದೆ ಎಂದು ಹೇಳಿದರು.ಇದೆ ಸಂದರ್ಭದಲ್ಲಿ ಎಸ ಎಸ ಸಾಲಿಮಠ, ಆರ ಬಿ ದೇಸಾಯಿ, ರಾವತ ಕಂಭಾರ, ರಾಜು ಕಡಿಬಾಗಿಲ, ಮುರಘೇಶ ಗಣಿ, ಅಪ್ಪು ತೇಲಿ, ಶನ್ಮುಖಯ್ಯಾ ಮಠಪತಿ ಚಿದಾನಂದ ಮಠಪತಿ, ಶಿವಾನಂದ ಚೌಧರಿ, ಬಾಬು ಪರೀಟ, ಸಂತೋಷ ಮಾಳಿ, ಸುನಿಲ ಪರಮಾಜ, ಮಲ್ಲು ಮೇತ್ರಿ, ಪ್ರಕಾಶ ಮೇತ್ರಿ, ಡಾ ಆನಂದ ರಾ ಮೇತ್ರಿ, ಶಿವಪ್ಪ ಕೋಳ್ಳಿ, ಕಲ್ಲಪ್ಪ ಕೋರಿ, ಮತ್ತು ಇತರರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಲ್ಲೂಕು ಮಟ್ಟದ ಪತ್ರಕರ್ತರು ತಮ್ಮ ವೃತ್ತಿ ನಿರತ ಚಟುವಟಿಕೆಗಳ ಸಂಬಂಧ ತಮ್ಮ ಜಿಲ್ಲಾದ್ಯಂತ ಉಚಿತವಾಗಿ ಸಂಚರಿಸಲು ಅನುಕೂಲವಾಗುವಂತೆ ಉಚಿತ ಬಸ್ ಪಾಸ್ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಪತ್ರಕರ್ತರು ತಾವು ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಗಳಿಂದ ಸೇವಾ ಪ್ರಮಾಣಪತ್ರ, ಶಿಫಾರಸ್ಸು ಪತ್ರ ಮತ್ತು 11 ತಿಂಗಳುಗಳ ವೇತನಪತ್ರ (ಲೈನೇಜ್/ಸಂಭಾವನೆ/ಕಮೀಷನ್ ಪಡೆದಿರುವ ದಾಖಲೆ)ಗಳನ್ನು ಅಥವಾ ವೇತನ ಜಮಾ ಆಗಿರುವ ಮಾಹಿತಿ ಇರುವಂತಹ ಬ್ಯಾಂಕ್ ಸ್ಟೇಟಮೆಂಟ್ ಲಗತ್ತಿಸಿ “ಸೇವಾಸಿಂಧು” ಪೋರ್ಟಲ್ (https://sevasindhu.karnataka.gov.in) ಮೂಲಕ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.ಆನ್ ಲೈನ್ ನಲ್ಲಿ ಸಲ್ಲಿಸಲಾದ ಅರ್ಜಿ ಮತ್ತು ಲಗತ್ತಿಸಲಾಗಿರುವ ದಾಖಲೆಗಳ ಒಂದು ಪ್ರತಿಯನ್ನು ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.ಸ್ವೀಕೃತ ಅರ್ಜಿಗಳನ್ನು ಆಯ್ಕೆ ಸಮಿತಿಯ ಸಭೆಯಲ್ಲಿ ಪರಿಶೀಲಿಸಿ ಬಸ್ ಪಾಸ್ ಮಂಜೂರು ಮಾಡಲಾಗುತ್ತದೆ.ಎಲ್ಲ ತಾಲ್ಲೂಕುಗಳ ಅರ್ಹ ಪತ್ರಕರ್ತರು ಕೂಡಲೇ “ಸೇವಾಸಿಂಧು” ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸುವುದರ ಮೂಲಕ ಈ ಸದುಪಯೋಗ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪುರಾಣ ಕಥೆಗಳ ಮೂಲಕ ನಮ್ಮಲ್ಲಿ ಜ್ಞಾನ ಹಾಗೂ ಮೌಲ್ಯಧಾರಿತ ಗುಣಗಳನ್ನು ಬೆಳೆಯಲು ಸಹಕಾರಿಯಾಗುವುದು ಎಂದು ಬೆಂಗಳೂರಿನ ಶಿಕ್ಷಣ ತಜ್ಞ ಡಾ.ಗಣೇಶ ಭಟ್ಟ ಹೇಳಿದರು.ಸಿಂದಗಿ ಪಟ್ಟಣ ಹೊರವಲಯದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ ಹಮ್ಮಿಕೊಂಡ ವಿದ್ಯಾರ್ಥಿ ಹಾಗೂ ಶಿಕ್ಷಕರ ಮಾರ್ಗದರ್ಶನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ನಮ್ಮ ಸುತ್ತಮತ್ತ ಪರಿಸರದ ವಾತಾವರಣದಲ್ಲಿ ಸಸಿ ನೆಡೆಸುವುದು. ನೀರುಣಿಸುವುದರ ಜೊತೆಗೆ ಅವುಗಳ ರಕ್ಷಣಿ ಮಾಡುವುದು. ನಮ್ಮಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.ಈ ವೇಳೆ ಬೆಂಗಳೂರಿನ ಜೀವಶಾಸ್ತ್ರ ತಜ್ಞ ಪ್ರಕಾಶ ಎಂ.ಬಿ., ಪ್ರಾಧ್ಯಾಪಕಿ ಕವಿತಾ ಎಸ್. ಮಾತನಾಡಿ, ಜ್ಞಾನವೆಂಬುವುದು ಅತ್ಯಂತ ಹರಿತವಾದ ಆಯುಧ ಜೀವನ ಯಶಸ್ವಿಗೊಳಿಸಬೇಕಾದರೆ ಅಕ್ಷರದ ಜ್ಞಾನ ಅವಶ್ಯಕವಾಗಿ ಪಡೆದುಕೊಳ್ಳಬೇಕು. ಭಾಷಾ ಕೌಶಲ್ಯ ಬೆಳೆಯಲು ಕ್ರಮಬದ್ಧತೆ, ವಾಕ್ಯ ರಚನೆ, ಸರಳ ಮತ್ತು ಸ್ಪಷ್ಟತೆಗೆ ವ್ಯಾಕರಣ ಕಲಿಕೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಲಿಕೆಯ ಸರಳ ವಿಧಾನದ ಜೊತೆಗೆ ಕೌಶಲ್ಯಭರಿತ ತರಬೇತಿ, ಶಿಕ್ಷಕರಿಗೆ ಕಲಿಸುವಿಕೆ ವಿಧಾನ, ಸರಳ ಹಾಗೂ ವಿನೂತನ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನೆರೆ ಹಾವಳಿಯಿಂದಾಗಿ ತತ್ತರಿಸಿದ ಈ ಭಾಗಕ್ಕೆ ವಿಶೇಷ ಪ್ಯಾಕೇಜ ಬಿಡುಗಡೆ ಮಾಡಬೇಕು. ಅತಿವೃಷ್ಟಿಯಿಂದ ಹಾನಿಯಾದ ರೈತರಿಗೆ ೨೫ಸಾವಿರ ಪರಿಹಾರ ಕೊಡಬೇಕು. ಮಳೆಯಿಂದ ಬಿದ್ದ ಮನೆಗೆ ಬಿಜೆಪಿ ಸರಕಾರ ಕೊಟ್ಟಂತೆ ೫ಲಕ್ಷ ಕೊಡಬೇಕು. ಭೀಮಾ ನದಿ ಪ್ರವಾಹ ಬಾದಿತ ಗ್ರಾಮಗಳನ್ನು ಸ್ಥಳಾಂತರಿಸಿ ಶಾಶ್ವತ ವಸತಿ ಸೌಲಭ್ಯ ಒದಗಿಸಿಕೊಡಬೇಕು. ಬಸವ ವಸತಿ ಯೋಜನೆಯಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕು. ಬಹುವಾರ್ಷಿಕ ಬೆಳೆಗಳಿಗೆ ಎಕರೆಗೆ ೧ಲಕ್ಷ ರೂ. ನೀಡಬೇಕು. ಸಿಂದಗಿ, ಆಲಮೇಲ ತಾಲೂಕಿನ ರಸ್ತೆ-ಗುಂಡಿಗಳನ್ನು ತಕ್ಷಣದಲ್ಲಿ ಮುಚ್ಚಿಸಬೇಕು ಎಂದು ಮಾಜಿ ಶಾಸಕ ರಮೇಶ ಭೂಸನೂರ ಒತ್ತಾಯಿಸಿದರು.ಸಿಂದಗಿ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನಾದ್ಯಂತ ವರುಣಾರ್ಭಟದಿಂದ ಕಬ್ಬಿನ ಬೆಳೆ ಶೇ.೨೦ರಷ್ಟು ಹಾನಿಯಾದದ್ದನ್ನು ಹೊರತು ಪಡಿಸಿದರೆ ಉಳಿದೆಲ್ಲ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಕೇಂದ್ರ ಸರಕಾರ ಕಬ್ಬಿಗೆ ಎಫ್‌ಆರ್‌ಪಿ ಬೆಲೆ ನಿಗದಿಪಡಿಸಿದೆ. ಹಾಗೆಯೇ ರಾಜ್ಯ ಸರಕಾರವು ಪ್ರತಿ ಟನ್‌ಗೆ ಕಬ್ಬಿಗೆ ೪೫೦೦ ರೂ. ಘೋಷಣೆ ಮಾಡಬೇಕು. ಉಳಿದೆಲ್ಲ ಬೆಳೆ ಹಾನಿಗೆ ಗರಿಷ್ಟ ಪರಿಹಾರ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸಂವಿಧಾನದ ಅತ್ಯಂತ ಶ್ರೇಷ್ಠ ಅಂಗಗಳಲ್ಲಿ ನ್ಯಾಯಾಂಗವು ಒಂದು. ನ್ಯಾಯಾಲಯವನ್ನು ದೇವಾಲಯವೆಂದು, ನ್ಯಾಯಾಧೀಶರನ್ನು ದೇವರೆಂದು ಪೂಜಿಸಲಾಗುತ್ತದೆ. ಇಂತಹ ಪವಿತ್ರ ಸ್ಥಾನ ಮತ್ತು ವ್ಯಕ್ತಿಯ ಮೇಲೆ ಅವಮಾನಕಾರಿಯಾಗಿ ಶೂ ಎಸೆದದ್ದು ಖಂಡನಾರ್ಹ. ಅದು ಕೇವಲ ವ್ಯಕ್ತಿಗತ ಅವಮಾನವಲ್ಲದೇ ಸಂವಿಧಾನದ ಮೇಲೆ ಮಾಡಿದ ಪ್ರಹಾರ ಎಂದು ಮಾಜಿ ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಆಕ್ರೋಶ ವ್ಯಕ್ತಪಡಿಸಿದರು.ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ಘಟನೆಯನ್ನು ಖಂಡಿಸಿ ಅ.೧೬ರಂದು ವಿಜಯಪುರ ಬಂದ್ ಹಾಗೂ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ವಿಜಯಪುರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಎಲ್ಲ ಸಂಘಟನೆಗಳು ಸಹಕಾರ ನೀಡಬೇಕು.ಇದೇ ಸಂದರ್ಭದಲ್ಲಿ ದಲಿತ ಮುಖಂಡರಾದ ರವಿ ಹೋಳಿ, ಧರ್ಮಣ್ಣ ಯಂಟಮಾನ, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ತಾಲೂಕಾಧ್ಯಕ್ಷ ಸಲೀಂ ಮರ್ತೂರ ಮಾತನಾಡಿ, ಇಂತಹ ವ್ಯವಸ್ಥೆಯ ವಿರುದ್ಧ ಜ್ಯಾತ್ಯಾತೀತ, ಪಕ್ಷಾತೀತ ಪ್ರತಿಭಟನೆ ನಡೆಯದೇ ಇರುವುದು ವಿಷಾದನೀಯ. ಇದಕ್ಕೆ ಎಲ್ಲ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಚಟುವಟಿಕೆಯ ನಿಷೇಧದ ಕುರಿತು ಇಷ್ಟೊಂದು ಬೇಜವಾಬ್ದಾರಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದರೆ, ಇದು ಅವರ ಮೂರ್ಖತನದ ಪ್ರದರ್ಶನ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಟೀಕಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಇತಿಹಾಸ ಮತ್ತು ಹಿನ್ನೆಲೆ, ಅದರ ಕಾರ್ಯ ಚಟುವಟಿಕೆಯ ಮಾಹಿತಿ ಇಲ್ಲದೇ ಇದ್ದವರು ಪ್ರಚಾರದ ಗಿಳಿನಿಂದ ಇಂತಹ ಹೇಳಿಕೆ ನೀಡುತ್ತಾರೆ.ಪ್ರಿಯಾಂಕ್ ಖರ್ಗೆ ಅವರ ಕಣ್ಣು ಸಿಎಂ ಗದ್ದುಗೆಯ ಮೇಲೆ ಇರುವಂತೆ ಗೋಚರಿಸುತ್ತದೆ. ಆದ ಕಾರಣ ಹೈಕಮಾಂಡ್ ಮತ್ತು ಗಾಂಧಿ ಕುಟುಂಬವನ್ನು ಓಲೈಸುವ ದಿಸೆಯಲ್ಲಿ ಪತ್ರ ಬರೆದಿರುವಂತೆ ಎದ್ದು ಕಾಣುತ್ತಿದೆ. ಆರ್‌ಎಸ್‌ಎಸ್ 100 ವರ್ಷ ಪೂರೈಸಿದ ಈ ಶುಭ ಘಳಿಗೆಯಲ್ಲಿ ದೇಶದಾದ್ಯಂತ ಚಟುವಟಿಕೆ, ಪಥ ಸಂಚಲನ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಖರ್ಗೆ ಪತ್ರದ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೆಲ್ಲದಕ್ಕೂ ಕಾಲ ಉತ್ತರ ಕೊಡಲಿದೆ. ಸಚಿವರಾಗಿ ರಾಜ್ಯ ಸರಕಾರವನ್ನು ಮುಜುಗರಕ್ಕೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಲ್ಲೂಕು ಮಟ್ಟದ ಪತ್ರಕರ್ತರು ತಮ್ಮ ವೃತ್ತಿ ನಿರತ ಚಟುವಟಿಕೆಗಳ ಸಂಬಂಧ ತಮ್ಮ ಜಿಲ್ಲಾದ್ಯಂತ ಉಚಿತವಾಗಿ ಸಂಚರಿಸಲು ಅನುಕೂಲವಾಗುವಂತೆ ಉಚಿತ ಬಸ್ ಪಾಸ್ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಪತ್ರಕರ್ತರು ತಾವು ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಗಳಿಂದ ಸೇವಾ ಪ್ರಮಾಣಪತ್ರ, ಶಿಫಾರಸ್ಸು ಪತ್ರ ಮತ್ತು 11 ತಿಂಗಳುಗಳ ವೇತನಪತ್ರ (ಲೈನೇಜ್/ಸಂಭಾವನೆ/ಕಮೀಷನ್ ಪಡೆದಿರುವ ದಾಖಲೆ)ಗಳನ್ನು ಅಥವಾ ವೇತನ ಜಮಾ ಆಗಿರುವ ಮಾಹಿತಿ ಇರುವಂತಹ ಬ್ಯಾಂಕ್ ಸ್ಟೇಟಮೆಂಟ್ ಲಗತ್ತಿಸಿ “ಸೇವಾಸಿಂಧು” ಪೋರ್ಟಲ್ (https://sevasindhu.karnataka.gov.in) ಮೂಲಕ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.ಆನ್ ಲೈನ್ ನಲ್ಲಿ ಸಲ್ಲಿಸಲಾದ ಅರ್ಜಿ ಮತ್ತು ಲಗತ್ತಿಸಲಾಗಿರುವ ದಾಖಲೆಗಳ ಒಂದು ಪ್ರತಿಯನ್ನು ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.ಸ್ವೀಕೃತ ಅರ್ಜಿಗಳನ್ನು ಆಯ್ಕೆ ಸಮಿತಿಯ ಸಭೆಯಲ್ಲಿ ಪರಿಶೀಲಿಸಿ ಬಸ್ ಪಾಸ್ ಮಂಜೂರು ಮಾಡಲಾಗುತ್ತದೆ.ಎಲ್ಲ ತಾಲ್ಲೂಕುಗಳ ಅರ್ಹ ಪತ್ರಕರ್ತರು ಕೂಡಲೇ “ಸೇವಾಸಿಂಧು” ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸುವುದರ ಮೂಲಕ ಈ ಸದುಪಯೋಗ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮುದಾಯಗಳನ್ನು ಪೀಡಿಸುವ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಬ್ರೆಜಿಲ್ ನ ಸಾ ಪೌಲೊ ವಿಶ್ವವಿದ್ಯಾಲಯದ ಶರೀರ ಕ್ರಿಯಾ ಶಾಸ್ತ್ರ ವಿಭಾಗದ ಸಲಹೆಗಾರ ಪ್ರೊ. ಬೆನೆಡಿಟೊ ಎಚ್. ಮಚಾಡೊ ಹೇಳಿದ್ದಾರೆ.ಗುರುವಾರ ತಮ್ಮ ಪತ್ನಿ ಮತ್ತು ತಮ್ಮದೇ ವಿವಿಯ ಔಷಧ ರಸಾಯನಶಾಸ್ತ್ರ ವಿಭಾಗದ ನಿಕಟಪೂರ್ವ ಪ್ರಾಧ್ಯಾಪಕಿ ಪ್ರೊ. ಲೂಸಿಯಾನ್ ಎಂ. ಬೆನಧ್ಯಾಕ್ ಅವರ ಜೊತೆ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ನಗರದ ಬಿ.ಎಲ್.ಡಿ.ಇ ಸಂಸ್ಶೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಕಾಲೇಜ್ ಆಫ್ ಫಾರ್ಮಸಿ ಆ್ಯಂಡ್ ರಿಸರ್ಚ್ ಸೆಂಟರ್ ಗೆ ಮತ್ತೋಭೇಟಿ ನೀಡಿದ ಅವರು, ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಜಗತ್ತಿನಲ್ಲಿ ಸಮುದಾಯಗಳನ್ನು ಪೀಡಿಸುವ ರೋಗಗಳನ್ನು ನಿಂಯತ್ರಿಸಲು ಸಾಮೂಹಿಕ ಪ್ರಯತ್ನ ನಡೆಯಬೇಕು. ಆರ್ಥಿಕ ವಿಷಯಗಳಿಂತ ಹೆಚ್ಚಿನದನ್ನು ಪ್ರತಿನಿಧಿಸುವ ಬ್ರಿಕ್ಸ್ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಬಿ.ಎಲ್.ಡಿ.ಇ ಫಾರ್ಮಸಿ ಕಾಲೇಜು ನ್ಯಾಕ್ ನಿಂದ ಎ++ ಮಾನ್ಯತೆ ಪಡೆದ ಕೀರ್ತಿಗೆ ಪಾತ್ರವಾಗಿರುವುದು ಸಂತಸ ತಂದಿದೆ. ಮುಂಬರುವ ದಿನಗಳಲ್ಲಿ ಈ ಕಾಲೇಜು ಮತ್ತು ಡೀಮ್ಡ್…
