ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜಕೀಯದಲ್ಲಿ ಸಚ್ಚಾರಿತ್ಯ ಕಾಪಾಡುವಲ್ಲಿ ನಾರಿಶಕ್ತಿ ಪಾತ್ರ ಅನನ್ಯವಾಗಿದ್ದು, ಎಲ್ಲ ನಾರಿಯರು ಒಗ್ಗೂಡಿ ಕಾಪಾಡಬೇಕಿದೆ ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ ಪ್ರತಿಪಾದಿಸಿದರು.
ಶನಿವಾರ ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಹಿಳಾ ಮೋರ್ಚಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಜಗತ್ತಿನಲ್ಲಿ ನಾರಿ ಶಕ್ತಿ ಸಮಾಜದ ಏಳ್ಗೆಗೆ ದುಡಿಯಬೇಕೆಂದು ಅವರು ಕರೆ ನೀಡಿದರು.
ವಿಜಯಪುರ ಜಿಲ್ಲೆಯ ಮಹಿಳೆಯರ ಯಾವುದೇ ಸಮಸ್ಯೆಗಳಿಗೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಧ್ವನಿಯಾಬೇಕು. ಅಲ್ಲದೇ ಮಹಿಳೆಯರ ಸುರಕ್ಷತೆ ಬಗ್ಗೆ ರಾಜ್ಯ ಸರ್ಕಾರ ಮಾಡಿದ ತಪ್ಪುಗಳನ್ನು ಎತ್ತಿ ತೋರಿಸಬೇಕು ಎಂದು ಅವರು ಹೇಳಿದರು.
ಜಿಲ್ಲೆಯ ವಿವಿಧೆಡೆ ಬೀದಿ-ದೀಪಗಳ ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ ಇದರಿಂದ ಮಹಿಳೆಯರ ಸರಗಳ್ಳತನ ನಡೆದಿವೆ. ಕಾಂಗ್ರೆಸ್ ಸರ್ಕಾರ ಮಹಿಳೆಯರ ಸುರಕ್ಷತೆಗೆ ಬೇಕಾದ ಕಾನೂನು ಸುವ್ಯಸ್ಥೆ ಬಿಗಿಗೊಳಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ವಪ್ನಾ ಕಣಮುಚನಾಳ ಪ್ರಾಸ್ತವಾಗಿಕವಾಗಿ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ರಾಜ್ಯ ಉಪಾಧ್ಯಕ್ಷರು ಡಾಕ್ಟರ್ ವಿಜಯಲಕ್ಷ್ಮಿ ತುಂಗಳ, ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ ಸುಬ್ಬಯ್ಯಣ್ಣ, ಈರಣ್ಣ ರಾವೂರ್, ಮಳುಗೌಡ ಪಾಟಿಲ್, ಶ್ರೀಮತಿ ಶಿಲ್ಪಾ ಕುದರಗೊಂಡ, ಮಲ್ಲಮ್ಮ ಜೋಗುರ್, ಗೀತಾ ಚೌದ್ರಿ ಶ್ರೀಮತಿ ಛಾಯಾ.ಮಸಿ, ಶ್ರೀಮತಿ ಗಾಯತ್ರಿ, ಶ್ರೀಮತಿ ಸುಶ್ಮಿತಾ ವಾಂಡ್ಕಾರ್, ಶ್ರೀಮತಿ ಭಾರತಿ ಶಿವಣಗಿ ಇತರರು ಇದ್ದರು.

