ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಗಳ ಸಮ್ಮೇಳನ
ವಿಜಯಪುರ: ನೆನಪುಗಳ ಬುತ್ತಿ ಅಜರಾಮರ ನನ್ನ ಮೊದಲ ಗುರು ಕಲಿಸಿದ ಅಕ್ಷರ ರಠ ಇಂದಿಗೂ ನನಲ್ಲಿ ಅಚ್ಚಾಗಿದೆ ಅಂತಹ ಗುರುಗಳನ್ನು ಎಂದೆಂದಿಗೂ ಮರೆಯಲಾಗದು ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ವಿ ಎಂ. ಸುರಪುರ ತಮ್ಮ ಪ್ರಾಥಮಿಕ ಶಿಕ್ಷಣದಿಂದ ಪ್ರಾಚಾರ್ಯ ಹಂತದ ಸವಿ ನೆನಪುಗಳನ್ನು ಬಿಚ್ಚಿಟ್ಟರು.
ನಗರದ ಬಿ ಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ದಿನಾಂಕ ೦೧-೦೮-೨೦೨೫ ರಂದು ಅಯೋಜಿಸಲಾದ ಹಳೆ ವಿದ್ಯಾರ್ಥಿಗಳ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ತಮ್ಮ ಬಾಲ್ಯದ ಸವಿನೆನಪುಗಳು ಮತ್ತು ಬಾಲ್ಯದ ಗುರುಗಳನ್ನು ಸ್ಮರಿಸಿದರಲ್ಲಗೆ, ತಮ್ಮ ವೃತ್ತಿ ಜೀವನದ ಮಾರ್ಗದರ್ಶನದ ಸವಿ ನೆನಪುಗಳನ್ನು ಮೆಲಕು ಹಾಕಿದರು.
ನಮ್ಮ ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಸಾಧಿಸಲು ಗುರುಗಳ ಪಾತ್ರ ಅನನ್ಯ ಗುರುಗಳ ಅದರಂತೆ ಇಂದು ಅತಿ ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಯಿತು ಎಂದು ತಮ್ಮ ಶಾಯರಿಗಳ ಮೂಲಕ ಗುರು ಮತ್ತು ಶಿಷ್ಯರ ಅವಿನಾಬಾವ ಸಂಬಂಧ ಸಾರವನ್ನು ಬಿಂಬಿಸಿದರು.
ಅದೇ ರೀತಿಯಾಗಿ ಇಂದಿನ ಪ್ರಾಧ್ಯಪಾಕರು ನಿರಂತರವಾಗಿ ಓದುವ ಹವ್ಯಾಸವನ್ನು ತಮ್ಮ ನಿರಂತರವಾಗಿ ರೂಡಿಸಿಕೊಳ್ಳಬೇಕು,ನಾನು ಎಲವನ್ನು ಬಲ್ಲೆ ಎಂಬುದು ಸಲ್ಲದು, ಎಲ್ಲವನ್ನು ಮೆಟ್ಟಿ ನಿಂತು ಮತ್ತೆ ಕಲಿಯುವಂತಹ ಹವ್ಯಾಸ ಬೆಳೆಸಿಕೊಳ್ಳಬೇಕು. ಹೊಸ ಹೊಸ ಪುಸ್ತಕದ ಪ್ರೇಮಿಯಾಗಿ ನೂತನ ವಿನೂತನವಾದ ಜ್ಞಾನವನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ಆಡಳಿತಾಧಿಕಾರಿ ಪ್ರೊ.ವಿ.ಎಸ್ ಬಗಲಿ ಮಾತನಾಡಿ, ಈ ಸಂಸ್ಥೆಯ ಅತ್ಯಂತ ಹಳೆಯ ಮಹಾವಿದ್ಯಾಲಯ ಉತ್ತರ ಕರ್ನಾಟಕದ ಅತ್ಯಂತ ಹಳೆಯ ಜನಪ್ರೀಯ ಕಾಲೇಜು ಕನಾಳ ಚನಗೌಡ ಪಾಟೀಲ ಅವರ ಅವರ ಕೊಡುಗೆ ಅನನ್ಯವಾದದ್ದು ಅಂತಹ ಕಾಲೇಜಿನಲ್ಲಿ ನಿವೆಲ್ಲರೂ ಅಧ್ಯಯನ ಮಾಡಿದ್ದೀರಿ ನೀವೆಲ್ಲರೂ ಇಲ್ಲಿಗೆ ಬರಲು ನಿಮ್ಮ ಕೊನೆಯ ದಿನಗಳ, ನಿಮ್ಮ ಸುವರ್ಣ ದಿನಗಳು ಸವಿ ನೆಪುಗಳ್ನು ಬಿಚ್ಚಿಡಲು ಒಟ್ಟಿಗೆ ಹಂಚಿಕೊಳ್ಳುವ ಸುಸಂದರ್ಭ. ಗುರುಗಳ ಸನ್ಮಾರ್ಗದಲ್ಲಿ ನಡೆದುಕೊಂಡು ಮುಂದೆಯೂ ಭವಿಷ್ಯದಲ್ಲಿ ನಿಮ್ಮ ಕೊಡುಗೆಯನ್ನು ಅವಶ್ಯವಾದದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಪ್ರೊ.ಬಿ.ಜಿ.ಮಠ ಮತ್ತು ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಮಾತನಾಡಿದರು.
ಹಳೆಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಶ್ರೀಮತಿ ಅನುರಾಧಾ ಮತ್ತು ಅವರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಅಯೋಜಿಸಲಾಯಿತು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ನಿವೃತ್ತ ಆಡಳಿತಾಧಿಕಾರಿ ಡಾ.ಕೆ.ಜಿ.ಪೂಜಾರಿ, ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರೊ.ಎಸ್ ಜೆ. ಪವಾರ, ಕೋಶಾಧಿಕಾರಿ ಪ್ರೊ.ಆರ್.ಹೆಚ್.ಬಿದರಿ ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್.ಪಾಟೀಲ, ಹಳೆಯ ವಿದ್ಯಾರ್ಥಿ ಸಂಘದ ಮುಖ್ಯಸ್ಥ ಡಾ.ಪ್ರದೀಪ ಚವ್ಹಾಣ, ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಡಾ.ಅನೀಲ.ಭೀ.ನಾಯಕ, ನಿವೃತ್ತ ಪ್ರಾಚಾರ್ಯ ಡಾ.ಯು.ಎಸ್.ಪೂಜೇರಿ, ಡಾ.ಎ.ಎಸ್ ಪೂಜಾರಿ, ಪ್ರೊ.ಜಿ.ಆರ್.ಅಂಬಲಿ, ಪ್ರೊ.ಬಿ.ಎಸ್.ಬಗಲಿ, ಡಾ.ಮಹೇಶ ಕುಮಾರ ಕೆ, ನಿವೃತ್ತ ಪಾಚಾರ್ಯರು ಮತ್ತು ಪ್ರಾಧ್ಯಾಪಕರು, ಮಹಾವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಪ್ರೊ.ಶ್ವೇತಾ ಸವನೂರ ಕಾರ್ಯಕ್ರಮ ನಿರೂಪಿಸಿದರು.