Author: editor.udayarashmi@gmail.com

ಬೇನಾಳ ಶಾಲೆಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿS* ಆಲಮಟ್ಟಿರಲ್ಲಿ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟನೆ B* ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಕ್ರೀಡಾಕೂಟಗಳು ಕಾಟಾಚಾರಕ್ಕೆ ನಡೆಯದೇ, ಪ್ರತಿ ಶಾಲೆಯ ಮಕ್ಕಳು ಪ್ರತಿ ಕ್ರೀಡೆಗಳಲ್ಲಿಯೂ ಧನಾತ್ಮಕವಾಗಿ ಭಾಗವಹಿಸಬೇಕು, ಆ ನಿಟ್ಟಿನಲ್ಲಿ ಶಾಲೆಯ ಶಿಕ್ಷಕರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಬಸವನಬಾಗೇವಾಡಿ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್. ಅವಟಿ ಹೇಳಿದರು.ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಂಗಳವಾರ ಜರುಗಿದ ಆಲಮಟ್ಟಿ ವಲಯದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಶಿಕ್ಷಕ ಬಸವರಾಜ ಯರವಿನತೆಲಿಮಠ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಂಯೋಜಕ ಯು.ವೈ.ಬಶೆಟ್ಟಿ , ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮುಕಾರ್ತಿಹಾಳ, ಪ್ರಧಾನ ಕಾರ್ಯದರ್ಶಿ ಸಲೀಂ ದಡೆದಸಲೀಂ ದಡೆದ, ಎಸ್.ಎಂ. ಪಾಟೀಲ, ಎಸ್.ಬಿ. ತಿಮ್ಮಾಪುರ, ಪಿ.ಎಲ್. ಕುಲಕರ್ಣಿ, ಬಿ.ಡಿ. ಚಲವಾದಿ, ಡಿ.ಕೆ. ಪಾಟೀಲ, ಸಿ.ಬಿ. ಚಿಮ್ಮಲಗಿ, ಡಿ.ವೈ. ವಾಲೀಕಾರ, ಎನ್.ಬಿ.ದಾಸರ, ಕೆ.ಎಸ್. ಮಾಳಗೊಂಡ, ಸಿಆರ್ ಪಿಗಳಾದ ಸುರೇಶ ಹುರಕಡ್ಲಿ, ಭಾಷಾಸಾಬ್ ಮನಗೂಳಿ, ಪ್ರಕಾಶ ದೋರನಳ್ಳಿ ಇದ್ದರು.ಜಿ.ಸಿ.ದ್ಯಾವಣ್ಣವರ ಕ್ರೀಡಾಪಟುಗಳಿಗೆ ಪ್ರತಿಜ್ಞಾ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಹಾಲುಮತ ಬಾಂಧವರ ಹೃದಯಾಂತರಾಳ ನೊರೆ ಹಾಲಿನಷ್ಟೇ ಪವಿತ್ರವಾದುದು, ಪ್ರತಿಯೊಂದು ಶುಭಕಾರ್ಯಕ್ಕೂ ನೀವೇ ಆರಂಭಿಕರು. ಆದರೂ ಮೌಢ್ಯ ಕಂದಾಚಾರದಲ್ಲಿ ನಿಮ್ಮ ಬದುಕಿನ ದೋಣಿ ಮುಳುಗೇಳುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ವಿಷಾದ ವ್ಯಕ್ತಪಡಿಸಿದರು.ಸಮೀಪದ ಹುಣಶಾಳ-ಪಿಸಿ ಗ್ರಾಮದಲ್ಲಿ ಭಾನುವಾರ ಚಾಲನೆ ಪಡೆದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಹಾಲುಮತ ಬಾಂಧವರಿಂದ ಕುರಿಮರಿ ಮತ್ತು ಕಂಬಳಿಯ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ನಾನು ಹುಟ್ಟಿದಾಗ ಉಸಿರು, ಬೆಳೆಯುತ್ತಿರುವಾಗ ಉಸಿರು ನೀಡಿ ಬೆಳೆಸಿದ ಕುರುಬ ಜನಾಂಗ ಕುಲ ಕಸುಬಾದ ಕುರಿ ಕಾಯುವ ಜತೆಗೆ ರಾಜ್ಯದ ಮುಖ್ಯಮಂತ್ರಿ ಗಾದಿಯವರೆಗೂ ತಮ್ಮ ಕಾರ್ಯವೈಖರಿ ಖಚಿತಪಡಿಸಿದ್ದರೂ ಹೆಚ್ಚಿನ ಶಿಕ್ಷಣ ಪಡೆಯುವುದರಲ್ಲಿ ಹಿಂದುಳಿದಿದೆ. ಜಗತ್ತು ಮುಂದುವರೆದಂತೆ ನಾವೂ ಕೂಡ ಭವಿಷ್ಯದ ನಮ್ಮ ಕುಡಿಗಳಿಗೆ ಉನ್ನತ ಶಿಕ್ಷಣ ನೀಡಲು ಮುಂದಾಗಬೇಕಿದೆ. ಕುರಿಮರಿಯಂತಿದ್ದ ನನ್ನನ್ನು ಸಾಕಿ ಬೆಳೆಸಿ ಇಂದು ರಾಜ್ಯದ ಶಿಕ್ಷಕರ ಸಂಘದ ಅಧ್ಯಕ್ಷ ಸ್ಥಾನದವರೆಗೆ ತಂದು ನಿಲ್ಲಿಸಿದ್ದೀರಿ. ನಿಮ್ಮ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಸಾರ್ವಜನಿಕರ ತೆರಿಗೆ ಹಣದಲ್ಲಿಯೇ ನಿರ್ಮಾಣಗೊಂಡಿರುವ ಸಾರ್ವಜನಿಕ ಸ್ವತ್ತುಗಳನ್ನು ಹಾಳಾಗದಂತೆ ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರದ್ದಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಉಮಾಶ್ರೀ ಹೇಳಿದರು.ಗ್ರಾಮದ ಯಮನೂರಪ್ಪನ ದೇವಸ್ಥಾನದ ಹತ್ತಿರ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ನಿರ್ಮಾಣವಾಗಲಿರುವ ಸಮುದಾಯ ನೈರ್ಮಲ್ಯ ಸಂಕೀರ್ಣ ಘಟಕ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಶೋಷಿತ ಸಮುದಾಯ ಬಯಲು ಬಹಿರ್ದೆಸೆಗೆ ಹೋಗಬಾರದೆಂಬ ಕಾಳಜಿಯಿಂದ ನಿರ್ಮಿಸಲಾಗುತ್ತಿರುವ ಈ ನೈರ್ಮಲ್ಯ ಘಟಕವನ್ನು ಗುತ್ತಿಗೆದಾರರು ವ್ಯವಸ್ಥಿತವಾಗಿ ನಿರ್ಮಿಸಬೇಕು, ಗ್ರಾಮಸ್ಥರು ಸ್ವಚ್ಚತೆಯೊಂದಿಗೆ ಉಪಯೋಗಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.ಗ್ರಾ.ಪಂ. ಅಧ್ಯಕ್ಷೆ ಬಂಗಾರೆವ್ವ ಜಾಲಿಕಟ್ಟಿ, ತಾ.ಪಂ. ಕಾರ್ಯನಿರ್ವಾಹಕ ಅಭಿಯಂತರ ಸಿದ್ದಪ್ಪ ಪಟ್ಟಿಹಾಳ, ಕಾಂಗ್ರೆಸ್ ತೇರದಾಳ ಮತಕ್ಷೇತ್ರದ ಅಧ್ಯಕ್ಷ ಲಕ್ಮಣ ದೇಸಾರಟ್ಟಿ, ರಾಜಶೇಖರ ಭದ್ರಣ್ಣವರ, ಪ್ರವೀಣ ಪೂಜೇರಿ, ಗ್ರಾ.ಪಂ. ಸದಸ್ಯ ಬಾಳಪ್ಪ ಗಡೆಪ್ಪನವರ, ನಾಗಪ್ಪ ಆಲಕನೂರ, ತುಕಾರಾಮ ದೊಡಮನಿ, ಸದಸ್ಯೆ ಮಂಜುಳಾ ರವಿಂದ್ರ ದೊಡವಾಡ, ಶಿವಪ್ಪ ನಾಗನೂರ, ಅರುಣ ಗಾಣಿಗೇರ, ಮಹಾಲಿಂಗ ಬಳಗಾರ, ಅಶೋಕ ಧಡೂತಿ, ರವಿ ದೊಡವಾಡ,…

Read More

ವಿಜಯಪುರದಲ್ಲಿ ನಡೆದ ವಿವಿಧ ಇಲಾಖೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸಿಇಓ ರಿಷಿ ಆನಂದ್ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಗತಿಯನ್ನು ಗುರಿಯಾಗಿಟ್ಟುಕೊಳ್ಳದೇ ಎಲ್ಲರೂ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಸಮನ್ವಯದಿಂದ ಹಾಗೂ ಯೋಜನಾಬದ್ಧವಾಗಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು ನಗರದ ಜಿಲ್ಲಾ ಪಂಚಾಯತಿಯಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ವಿಡಿಯೋ ಸಂವಾದದ ಮೂಲಕ ಆಯೋಜಿಸಲಾದ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಮನರೇಗಾ, ಸ್ವಚ್ಚ ಭಾರತ ಮಿಷನ್ ಮತ್ತು ವಸತಿ ಯೋಜನೆ ಸೇರಿದಂತೆ ಎಲ್ಲಾ ಯೋಜನೆಗಳಲ್ಲಿ ನಿಯಮಾನುಸಾರ ಪ್ರಗತಿ ಸಾಧಿಸಬೇಕು ಎಂದರು.ತಾಲೂಕಾ ಪಂಚಾಯತಿಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಸಂಬಂಧಿಸಿದ ವಿಭಾಗದ ಸಹಾಯಕ ನಿರ್ದೇಶಕರು ಸತತ ಕ್ಷೇತ್ರ ಭೇಟಿ ನೀಡಿ ಸಮರ್ಪಕ ಹಾಗೂ ನಿಗದಿತ ಕಾಲಾವಧಿಯಲ್ಲಿ ಯೋಜನೆಗಳು ಅನುಷ್ಠಾನಗೊಳ್ಳುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿ ಗುರುತಿಸಿರುವ ಜಿಲ್ಲೆಯ ಬುಡಕಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಹೋಂ ಸ್ಟೇ ನಿರ್ಮಿಸಲು ಹಾಗೂ ನವೀಕರಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.ಜಿಲ್ಲೆಯ ತಾಳಿಕೋಟಿ ತಾಲ್ಲೂಕಿನ ಕಲಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲಕೇರಿ, ಅಸ್ಕಿ ಗ್ರಾಪಂ ವ್ಯಾಪ್ತಿಯ ಅಸ್ಕಿ, ಸಾಸನೂರ ಗ್ರಾಪಂ ವ್ಯಾಪ್ತಿಯ ಸೋಮನಾಳ, ಕೊಣ್ಣೂರ ಗ್ರಾಪಂನ ಕೊಣ್ಣೂರ ಹಾಗೂ ಪಡೇಕನೂರ ಗ್ರಾಮಗಳನ್ನು, ಬಾವೂರ ಗ್ರಾಪಂ ವ್ಯಾಪ್ತಿಯ ವನಹಳ್ಳಿ, ತುಂಬಗಿ ಗ್ರಾಪಂನ ತುಂಬಗಿ ಹಾಗೂ ಹೊಸಳ್ಳಿ ಗ್ರಾಮವನ್ನು, ಭಂಟನೂರ ಗ್ರಾಪಂ ವ್ಯಾಪ್ತಿಯ ಭಂಟನೂರು ಗ್ರಾಮವನ್ನು, ಹಿರೂರ ಗ್ರಾಪಂನ ತಮದಡ್ಡಿ ಗ್ರಾಮವನ್ನು, ಮಿಣಜಗಿ ಗ್ರಾಪಂ ಮಿಣಜಗಿಯ ಗ್ರಾಮವನ್ನು, ಕೊಡಗಾನೂರ ಗ್ರಾಪಂ ವ್ಯಾಪ್ತಿಯ ಕೊಡಗಾನೂರ, ಕಾರಗನೂರ, ಬೇಳೂರು ಹಾಗೂ ನಾವದಗಿ ಗ್ರಾಮವನ್ನು, ಬ.ಸಾಲವಾಡಗಿಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾಲವಾಡಗಿ ಹಾಗೂ ಗುಂಡಕನಾಳ ಗ್ರಾಮವನ್ನು, ಮೂಕಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗೂರು ಗ್ರಾಮಗಳನ್ನು ಗುರುತಿಸಲಾಗಿದ್ದು,…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಶತಮಾನ ಕಂಡ ಉರ್ದು ಶಾಲೆಯನ್ನು, ಶಿಕ್ಷಣ ಇಲಾಖೆ ಸಾರ್ವಜನಿಕರಿಗೆ ಮಾಹಿತಿ ನೀಡದೇ ಏಕಾಏಕಿ ಸ್ಥಳಾಂತರಿಸಿರುವದನ್ನು ವಿರೋಧಿಸಿ ಆ.೬ ರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುಕೊಳ್ಳುತ್ತಿರುವದಾಗಿ ರಾಜ್ಯ ಮುಸ್ಲಿಂ ಕೌನ್ಸಿಲ್ ಮತ್ತು ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ತಿಳಿಸಿದ್ದಾರೆ.ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ನಗರದ ಮಧ್ಯ ಭಾಗದಲ್ಲಿ ಶತಮಾನದಿಂದ ನಡೆದುಕೊಂಡ ಬಂದಿರುವ ಉರ್ದು ಶಾಲೆ ಸುಮಾರು ೧೨೫ ವರ್ಷಕ್ಕಿಂತ ಮೇಲ್ಪಟ್ಟಿರುವ ಶಾಲೆಯಾಗಿದೆ. ಈ ಹಿಂದೆ ಶಾಲೆ ಆರಂಭಿಸಿ ಶಿಕ್ಷಕರು ನಿವೃತ್ತಿ ಆದ ನಂತರ ಎಲ್ಪಿಎಸ್ ಶಾಲೆ ಡೈಸ್ ಕೋಡ್ ನೆಪದಲ್ಲಿ ಬಂದು ಮಾಡಲಾಗಿದೆ. ಈಗ ಶಾಲೆ ಪುರಸಭೆಗೆ ಹಸ್ತಾಂತರಿಸುವ ಕುತಂತ್ರ ತೆರೆಯ ಮರೆಯಲ್ಲಿ ನಡೆಯುತ್ತಿದೆ. ಇದು ನಮ್ಮ ಆಕ್ರೋಷಕ್ಕೆ ಕಾರಣವಾಗಿದೆ ಎಂದು ಹಳೆಯ ವಿದ್ಯಾರ್ಥಿಗಳ ಸಂಘಟನೆ ತಿಳಿಸಿದೆ. ಸಾರ್ವಜನಿಕರಿಗೆ ಮಾಹಿತಿ ನೀಡದೇ ಈ ಶಾಲೆಯನ್ನು ಬೇರೆ ಕಡೆಗೆ ಸ್ಥಳಾಂತರಿಸಿದ್ದು ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯ ಕಾರ್ಯ ಆಗಿದೆ. ಮುಂಚೆ ಅನೇಕ ಬಾರಿ ಸಂಬAದಪಟ್ಟ…

Read More

ದೂರುದಾರರು ತೋರಿಸಿದ ಸ್ಥಳಗಳಲ್ಲಿ ಮಹಿಳೆ ಸೇರಿ ಮೂವರ ಅಸ್ಥಿಪಂಜರ ಪತ್ತೆ ಎಂದು ಹೇಳಿದ ವಕೀಲ ಮಂಜುನಾಥ್​ ಮಂಗಳೂರು: ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 6 ದಿನಗಳಿಂದ ಅನಾಮಿಕ ತೋರಿಸಿದ ಜಾಗದಲ್ಲಿ ಎಸ್​ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.7ನೇ ದಿನವಾದ ಮಂಗಳವಾರವೂ ಉತ್ಕನನ ಕಾರ್ಯ ಪುನರಾರಂಭಿಸಿದ ವಿಶೇಷ ತನಿಖಾ ತಂಡ(SIT)ಕ್ಕೆ ಯಾವುದೇ ಮಾನವ ಅಸ್ಥಿಪಂಜರದ ಅವಶೇಷಗಳು ಕಂಡುಬಂದಿಲ್ಲ ಎನ್ನಲಾಗಿದೆ.ಭಾರೀ ಮಳೆಯ ನಡುವೆ ಸಾಕ್ಷಿ-ದೂರುದಾರ ತೋರಿಸಿರುವ 11 ಮತ್ತು 12ನೇ ಸ್ಥಳಗಳಲ್ಲಿ SITಯ ತನಿಖಾಧಿಕಾರಿ ಮತ್ತು ಪುತ್ತೂರು ವಿಭಾಗದ ಸಹಾಯಕ ಆಯುಕ್ತ(AC) ಸ್ಟೆಲ್ಲಾ ವರ್ಗೀಸ್ ಅವರ ಮೇಲ್ವಿಚಾರಣೆಯಲ್ಲಿ ಮಂಗಳವಾರ ಸಹ ಸಮಾಧಿ ಅಗೆಯುವ ಕಾರ್ಯ ನಡೆಸಲಾಯಿತು. ಆದರೆ ಯಾವುದೇ ಅವಶೇಷಗಳ ಕುರುಹು ಇಲ್ಲದ ಕಾರಣ SIT ಯ ಪ್ರಯತ್ನಗಳು ಯಾವುದೇ ಫಲಿತಾಂಶ ನೀಡಿಲ್ಲ. ಇಲ್ಲಿಯವರೆಗೆ SIT ಅಗೆದ 12 ಸ್ಥಳಗಳಲ್ಲಿ, ಕೇವಲ ಒಂದು ಸ್ಥಳದಲ್ಲಿ ಮಾತ್ರ ಮಾನವ ಅಸ್ಥಿಪಂಜರ ಪತ್ತೆಯಾಗಿದೆ ಎನ್ನಲಾಗಿದೆ.ಏತನ್ಮಧ್ಯೆ, ಧರ್ಮಸ್ಥಳದಲ್ಲಿ ದಶಕದ ಹಿಂದೆ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಸಾರಿಗೆ ನೌಕರರ ಮುಸ್ಕರದಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸಿದ ಘಟನೆ ಚಡಚಣ ಬಸ್ ನಿಲ್ದಾಣದಲ್ಲಿ ಕಂಡು ಬಂತು. ಅನಾಹುತ ತಡೆಗಟ್ಟಲು ಚಡಚಣ ಪೋಲಿಸರು ಮುಂಜಾಗ್ರತೆ ಕ್ರಮ ಕೈಗೊಂಡಿದ್ದರು.ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಹಳ್ಳಿಗಳಿಂದ ಮುಕ್ಕಾಮ ಬಸ್ ಇದ್ದುದರಿಂದ ಪಟ್ಟಣಕ್ಕೆ ಬಂದರು ಆದರೆ ಮರಳಿ ತಮ್ಮ ಊರಿಗೆ ಹೋಗಲು ಬಸ್ ಬರಲೆಇಲ್ಲ ಖಾಸಗಿ ವಾಹನಗಳಿಗಾಗಿ ವಿದ್ಯಾರ್ಥಿಗಳ ಪರದಾಟ ಕಂಡುಬಂತು.ಸಾರಿಗೆ ಸಂಘಟನೆಗಳ ಜತೆ ಮುಖ್ಯಮಂತ್ರಿ ನಡೆಸಿದ ಮನವೊಲಿಕೆ ಪ್ರಯತ್ನ ವಿಫಲ, ಒಂದು ದಿನ ಮಟ್ಟಿಗೆ ಸಾರಿಗೆ ನೌಕರರ ಮುಸ್ಕರ. ಅವರ ವಿವಿಧ ಬೇಡಿಕೆಗಳಾದ ಹಿಂದಿನ ೨೦೨೪ರ ಜ ೧ರಿಂದ ಅನ್ವಯ ಆಗುವಂತೆ ವೇತನ ಪರಿಷ್ಕರಣೆ, ಸಾರಿಗೆ ನೌಕರರ ೩೮ತಿಂಗಳ ಬಾಕಿ ವೇತನ ಬಿಡುಗಡೆ ಮಾಡಬೇಕು. ಹಿಂದಿನ ೨೦೨೪ರ ಜ ೧ರಿಂದ ಅನ್ವಯ ಆಗುವಂತೆ ವೇತನ ಪರಿಷ್ಕರಣೆ, ಖಾಸಗಿಕರಣ ನಿಲ್ಲಬೇಕು. ವಿದ್ಯುತ್ ಚಾಲಿತ ಬಸ್‌ನಲ್ಲೂ ಸಾರಿಗೆ ಸಂಸ್ಥೆಯ ಚಾಲಕರನ್ನೇ ನಿಯೋಜಸಬೇಕು ಇನ್ನು ಹಲವಾರು ಬೇಡಿಕೆಗಳನ್ನಿಟ್ಟು ಸಾರಿಗೆ ನೌಕರರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಇಳಿದಿದ್ದಾರೆ.ಚಡಚಣ ಬಸ್…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇವರ ಸ್ಮರಣೆಯಿಂದ ಪ್ರತಿಯೊಬ್ಬರ ಬದುಕಿನಲ್ಲಿ ನೆಮ್ಮದಿ ಮೂಡಿ, ಧನಾತ್ಮಕ ಶಕ್ತಿಯ ಅನುಭವವಾಗುತ್ತದೆ ಎಂದು ಮ ಘ ಚ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಸೋಮವಾರ ಸಂಜೆ ತಾಲೂಕಿನ ನಾಗಠಾಣ ಗ್ರಾಮದ ಉದಯಲಿಂಗೇಶ್ವರ ಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪುರಾಣ ಕಾರ್ಯಕ್ರಮದಲ್ಲಿ ‘ಉದಯಲಿಂಗೇಶ್ವರ ಚರಿತಾಮೃತ’ ಧ್ವನಿಸುರುಳಿ ಬಿಡುಗಡೆ ಮಾಡಿ ಅವರು ಮಾತನಾಡಿದರು.ದೇವರ ನಾಮ ಸ್ಮರಣೆಯು ಸರಳ ಆದರೆ ಪರಿಣಾಮಕಾರಿಯಾಗಿದೆ. ಇದು ಎಲ್ಲರ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಯಶಸ್ಸನ್ನು ತರುತ್ತದೆ ಎಂದು ಹೇಳಿದರು.ಧ್ವನಿಸುರುಳಿ ರಚಿಸಿದ ಕರ್ಜಗಿಯ ಶಿವಾನಂದ ಶಾಸ್ತ್ರಿ ಮಾತನಾಡಿ, ಉದಯಲಿಂಗರ ಸ್ಮರಣೆ ನಮಗೆಲ್ಲ ಶ್ರೀರಕ್ಷೆ. ದೇವರ ಸ್ಮರಣೆಯು ನಮ್ಮಲ್ಲಿ ವಿಶ್ವ ಭ್ರಾತೃತ್ವದ ಭಾವವನ್ನು ಮೂಡಿಸುತ್ತದೆ ಎಂದರು.ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ಉತ್ಸಾಹ ಮತ್ತು ಭಕ್ತಿಯಿಂದ ದೇವರ ಸ್ಮರಣೆಯನ್ನು ಜೀವನದ ಎಲ್ಲಾ ಕಾರ್ಯಗಳಲ್ಲಿ ಅಳವಡಿಸಿಕೊಂಡು, ನಮ್ಮ ಇಷ್ಟ ದೇವರು-ಗುರುವನ್ನು ಸದಾ ಸ್ಮರಿಸುತ್ತಿರಬೇಕು. ನಮ್ಮಲ್ಲಿ ವಿಶ್ವ ಪ್ರೀತಿಯ ಭಾವ ಮೂಡಿಸುವಲ್ಲಿ ದೇವರ ಸ್ಮರಣೆ ಮುಖ್ಯವಾಗಿದೆ ಎಂದು ಹೇಳಿದರು.ಉಮರಾಣಿಯ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದಿಂದ ಜಿಲ್ಲೆಯ ಛಾಯಾಗ್ರಾಹಕರ ಮಕ್ಕಳಿಗೆ ೨೦೨೪-೨೦೨೫ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.೮೦ ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣಗೊಂಡ ಛಾಯಾಗ್ರಾಹಕರ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಸಂಘದಿಂದ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಲಾಗಿದೆ. ವಿಜಯಪುರ ಜಿಲ್ಲೆಯ ಎಲ್ಲ ತಾಲೂಕಿನ ಛಾಯಾಗ್ರಾಹಕರು ತಮ್ಮ ಮಕ್ಕಳ ಪ್ರಸಕ್ತ ಸಾಲಿನ ಶಾಲೆಯ ಧೃಡೀಕೃತ ಎಸ್.ಎಸ್.ಎಲ್.ಸಿ. ಮತ್ತು ಧೃಡೀಕೃತ ಕಾಲೇಜಿನ ದ್ವಿತೀಯ ಪಿ.ಯು.ಸಿ ಅಂಕಪಟ್ಟಿ, ಆಧಾರ ಕಾರ್ಡ, ವಿದ್ಯಾರ್ಥಿಯ ಬ್ಯಾಂಕ್ ವಿವರ, ಇತ್ತಿಚ್ಚಿನ ಎರಡು ಪಾಸಪೋರ್ಟ ಅಳತೆಯ ಭಾವಚಿತ್ರ ಗಳೊಂದಿಗೆ ದಿನಾಂಕ ೧೫-೦೮-೨೦೨೫ರ ಒಳಗಡೆ ಸಂಘದ ಕಛೇರಿ, ಅಧ್ಯಕ್ಷರು, ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಅಂಗಡಿ ನಂ. ೨೦೧, ಮೊದಲನೆ ಮಹಡಿ, ಎಸ್.ಎಸ್. ಕಾಂಪ್ಲೇಕ್ಸ, ಸಿದ್ದೇಶ್ವರ ದೇವಸ್ಥಾನದ ಹತ್ತಿರ, ಬಿ.ಎಲ್.ಡಿ.ಇ. ರಸ್ತೆ, ವಿಜಯಪುರ-೫೮೬೧೦೧ ಇಲ್ಲಿಗೆ ತಲುಪಿಸಲು ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ದ ಅಧ್ಯಕ್ಷ ರಮೇಶ ಚವ್ಹಾಣ ಕೋರಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿಅಧ್ಯಕ್ಷರು, ರಮೇಶ ಚವ್ಹಾಣ…

Read More