ಬೇನಾಳ ಶಾಲೆಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿS* ಆಲಮಟ್ಟಿರಲ್ಲಿ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟನೆ B*
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕ್ರೀಡಾಕೂಟಗಳು ಕಾಟಾಚಾರಕ್ಕೆ ನಡೆಯದೇ, ಪ್ರತಿ ಶಾಲೆಯ ಮಕ್ಕಳು ಪ್ರತಿ ಕ್ರೀಡೆಗಳಲ್ಲಿಯೂ ಧನಾತ್ಮಕವಾಗಿ ಭಾಗವಹಿಸಬೇಕು, ಆ ನಿಟ್ಟಿನಲ್ಲಿ ಶಾಲೆಯ ಶಿಕ್ಷಕರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಬಸವನಬಾಗೇವಾಡಿ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್. ಅವಟಿ ಹೇಳಿದರು.
ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಂಗಳವಾರ ಜರುಗಿದ ಆಲಮಟ್ಟಿ ವಲಯದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಶಿಕ್ಷಕ ಬಸವರಾಜ ಯರವಿನತೆಲಿಮಠ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಂಯೋಜಕ ಯು.ವೈ.ಬಶೆಟ್ಟಿ , ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮುಕಾರ್ತಿಹಾಳ, ಪ್ರಧಾನ ಕಾರ್ಯದರ್ಶಿ ಸಲೀಂ ದಡೆದ
ಸಲೀಂ ದಡೆದ, ಎಸ್.ಎಂ. ಪಾಟೀಲ, ಎಸ್.ಬಿ. ತಿಮ್ಮಾಪುರ, ಪಿ.ಎಲ್. ಕುಲಕರ್ಣಿ, ಬಿ.ಡಿ. ಚಲವಾದಿ, ಡಿ.ಕೆ. ಪಾಟೀಲ, ಸಿ.ಬಿ. ಚಿಮ್ಮಲಗಿ, ಡಿ.ವೈ. ವಾಲೀಕಾರ, ಎನ್.ಬಿ.ದಾಸರ, ಕೆ.ಎಸ್. ಮಾಳಗೊಂಡ, ಸಿಆರ್ ಪಿಗಳಾದ ಸುರೇಶ ಹುರಕಡ್ಲಿ, ಭಾಷಾಸಾಬ್ ಮನಗೂಳಿ, ಪ್ರಕಾಶ ದೋರನಳ್ಳಿ ಇದ್ದರು.
ಜಿ.ಸಿ.ದ್ಯಾವಣ್ಣವರ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಸಮಗ್ರ ವೀರಾಗ್ರಣಿ ಪ್ರಶಸ್ತಿ
ವೈಯಕ್ತಿಕ ವಿಭಾಗ ಹಾಗೂ ಗುಂಪು ಪ್ರಶಸ್ತಿಗಳಲ್ಲಿ ಬಹುತೇಕ ಪ್ರಶಸ್ತಿಗಳನ್ನು ಪಡೆದ ಬೇನಾಳ ಆರ್.ಎಸ್ ಗ್ರಾಮದ ಮಾದರಿ ಪ್ರಾಥಮಿಕ ಶಾಲೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು.

