ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಾರಿಗೆ ನೌಕರರ ಮುಸ್ಕರದಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸಿದ ಘಟನೆ ಚಡಚಣ ಬಸ್ ನಿಲ್ದಾಣದಲ್ಲಿ ಕಂಡು ಬಂತು. ಅನಾಹುತ ತಡೆಗಟ್ಟಲು ಚಡಚಣ ಪೋಲಿಸರು ಮುಂಜಾಗ್ರತೆ ಕ್ರಮ ಕೈಗೊಂಡಿದ್ದರು.
ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಹಳ್ಳಿಗಳಿಂದ ಮುಕ್ಕಾಮ ಬಸ್ ಇದ್ದುದರಿಂದ ಪಟ್ಟಣಕ್ಕೆ ಬಂದರು ಆದರೆ ಮರಳಿ ತಮ್ಮ ಊರಿಗೆ ಹೋಗಲು ಬಸ್ ಬರಲೆಇಲ್ಲ ಖಾಸಗಿ ವಾಹನಗಳಿಗಾಗಿ ವಿದ್ಯಾರ್ಥಿಗಳ ಪರದಾಟ ಕಂಡುಬಂತು.
ಸಾರಿಗೆ ಸಂಘಟನೆಗಳ ಜತೆ ಮುಖ್ಯಮಂತ್ರಿ ನಡೆಸಿದ ಮನವೊಲಿಕೆ ಪ್ರಯತ್ನ ವಿಫಲ, ಒಂದು ದಿನ ಮಟ್ಟಿಗೆ ಸಾರಿಗೆ ನೌಕರರ ಮುಸ್ಕರ. ಅವರ ವಿವಿಧ ಬೇಡಿಕೆಗಳಾದ ಹಿಂದಿನ ೨೦೨೪ರ ಜ ೧ರಿಂದ ಅನ್ವಯ ಆಗುವಂತೆ ವೇತನ ಪರಿಷ್ಕರಣೆ, ಸಾರಿಗೆ ನೌಕರರ ೩೮ತಿಂಗಳ ಬಾಕಿ ವೇತನ ಬಿಡುಗಡೆ ಮಾಡಬೇಕು. ಹಿಂದಿನ ೨೦೨೪ರ ಜ ೧ರಿಂದ ಅನ್ವಯ ಆಗುವಂತೆ ವೇತನ ಪರಿಷ್ಕರಣೆ, ಖಾಸಗಿಕರಣ ನಿಲ್ಲಬೇಕು. ವಿದ್ಯುತ್ ಚಾಲಿತ ಬಸ್‌ನಲ್ಲೂ ಸಾರಿಗೆ ಸಂಸ್ಥೆಯ ಚಾಲಕರನ್ನೇ ನಿಯೋಜಸಬೇಕು ಇನ್ನು ಹಲವಾರು ಬೇಡಿಕೆಗಳನ್ನಿಟ್ಟು ಸಾರಿಗೆ ನೌಕರರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಇಳಿದಿದ್ದಾರೆ.
ಚಡಚಣ ಬಸ್ ನಿಲ್ದಾಣದಲ್ಲಿ ಬಸ್‌ಗಳು ಬಂದಿಲ್ಲ ಪ್ರಯಾಣಿಕರಿಗೆ ಮಾಧ್ಯಮಗಳ ಮುಖಾಂತರ ಮೊದಲೆ ಗೊತ್ತಿದ್ದುದರಿಂದ ಪ್ರಯಾಣಿರು ಇಲ್ಲ, ಇದ್ದರು ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಇದ್ದರು ಖಾಸಗಿ ವಾಹನಗಳು ಪ್ರಯಾಣಿಕರಿಗೆ ಲಭ್ಯವಿದ್ದುದರಿಂದ ಪರ್ಯಾಯವಾಗಿ ಇಂಡಿ,ವಿಜಯಪುರಕ್ಕೆ ಹೋಗಲು ವಾಹನದ ದರ ಹೆಚ್ಚಿಗೆ ಅಳವಡಿಸಿದ್ದರು ಅನಿವಾರ್ಯ ಕಾರಣಗಳಿಂದ ಹೋಗಲೆಬೇಕಾದ ಪ್ರಯಾಣಿಕರು ಹೆಚ್ಚಿಗೆ ಹಣ ಕೊಟ್ಟು ಹೋಗುತ್ತಿರುವದು ಕಂಡು ಬಂದಿತು.
ರಾಜ್ಯ ಸರಕಾರ, ಸಾರಿಗೆ ನೌಕರರ ಬೇಡಿಕೆಯನ್ನು ಈಡೇರಿಸಿ ಮುಸ್ಕರ ಹಿಂಪಡೆಯಲು ಮನವಲಿಸಿ ಕೆಲಸಕ್ಕೆ ಹಾಜರಾಗುವಂತೆ ಕ್ರಮಗೈಗೊಳ್ಳಬೇಕೆಂದು ಎಂದು ಸಾರ್ವಜನಿಕರ ಅಭೀಪ್ರಾಯವಾಗಿದೆ.

