Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಶಿಕಾರಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ನಗರದ ಜಿಲ್ಲಾಧಿಕಾರಿಗಳ ಕಚೇರಿ ರಸ್ತೆಯಲ್ಲಿರುವ ಡಿಡಿಪಿಐ ಕಚೇರಿ ಹತ್ತಿರದ ಉಪ ಕೃಷಿ ನಿರ್ದೇಶಕ-೧ ಕಚೇರಿ ಕಟ್ಟಡಕ್ಕೆ ದಿನಾಂಕ : ೦೩-೧೦-೨೦೨೫ ರಿಂದ ಸ್ಥಳಾಂತರಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಕರ್ನಾಟಕ ರಾಜ್ಯದ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ವತಿಯಿಂದ ಬೆಂಗಳೂರಿನ ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕನಲ್ಲಿ ನಡೆದ ನಾನು ವಿಜ್ಞಾನಿ-2025 ಟೆಲಿಸ್ಕೋಪ್ ತಯಾರಿಕೆ ಕಾರ್ಯಾಗಾರದಲ್ಲಿ ಪ್ರಥಮ ಫೌಂಡೇಶನ್ ವಿಜ್ಞಾನ ಆವಿಷ್ಕಾರ ಮತ್ತು ಸಂಶೋಧನಾ ಕೇಂದ್ರದಲ್ಲಿ ತಾಲ್ಲೂಕಿನ ಹೊನವಾಡದ ಸರ್ಕಾರಿ ಶಾಲೆಯ ಎಂಟನೇ ತರಗತಿ ಮತ್ತು ಪಿಯುಸಿ ತರಗತಿಯ ಗ್ರಾಮದ ಏಳು ವಿದ್ಯಾರ್ಥಿಗಳು ಕೇವಲ 45 ನಿಮಿಷದಲ್ಲಿ ಟೆಲಿಸ್ಕೋಪ್ ತಯಾರಿಸಿ ವಿಶ್ವ ದಾಖಲೆ ( ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್) ನಿರ್ಮಿಸಿದ್ದಾರೆ.ವಿಧ್ಯಾರ್ಥಿಗಳಾದ ವಿಠ್ಠಲ ನರಳೆ, ಚಂದ್ರಕಾಂತ್ ತುಪ್ಪದ, ಪ್ರಥಮ ಖಂಡೆಕರ, ಶಾಂತಾ ತುಪ್ಪದ, ಪ್ರತಿಕ್ಷಾ ಜನಗೊಂಡ, ಪ್ರತಿಜ್ಞಾ ಜನಗೊಂಡ ಅಶ್ವಿನಿ ರಾಮತೀರ್ಥ ಪ್ರಶಸ್ತಿ ಪತ್ರ ಸ್ವೀಕರಿಸಿದರು.ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಂಗಳವಾರ ತಮ್ಮ ಕಛೇರಿಗೆ ಬರಮಾಡಿಕೊಂಡು ಮಕ್ಕಳಿಗೆ ಸನ್ಮಾನಿಸಿ ಹಲವಾರು ವೈಜ್ಞಾನಿಕ ಪ್ರಶ್ನೆಗಳನ್ನು ಕೇಳಿ ಪ್ರಶಂಸೆ ವ್ಯಕ್ತಪಡಿಸಿದರು. ಮಕ್ಕಳು ತಯಾರಿಸಿದ ಅತ್ಯಾಧುನಿಕ ನ್ಯೂಟಾನಿಯನ ದೂರದರ್ಶಕ ಕಂಡು ಎಲ್ಲರನ್ನು…
ಲೇಖನ- ಡಾ.ಶಶಿಕಾಂತ.ಪಟ್ಟಣಪುಣೆ – ರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದ ನೆಲದಲ್ಲಿ ಬಸವಣ್ಣ ಮತ್ತು ಅನೇಕ ಶರಣರ ನೇತೃತ್ವದಲ್ಲಿ ನಡೆದ ಅಭೂತಪೂರ್ವವಾದ ಸಮತೆಯ ಕ್ರಾಂತಿಯ ಫಲವಾಗಿ ಸಾರ್ವಕಾಲಿಕ ಸಮಾನತೆಯ ಆಂದೋಲನ ಆರಂಭವಾಯಿತು. ಇದು ವರ್ಗ ವರ್ಣ ಲಿಂಗ ಭೇದ ರಹಿತ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಶ್ರೇಣೀಕೃತವಲ್ಲದ ಶ್ರೇಷ್ಠ ಚಳುವಳಿಯಾಗಿದೆ. ಯಾವುದೇ ಹಂತದಲ್ಲೂ ಜೇಷ್ಠತೆ ಶ್ರೇಷ್ಠತೆ ಅಲ್ಲಗಳೆದು ಎಲ್ಲ ಕಾಲಕ್ಕೂ ಅರ್ಥಪೂರ್ಣ ಸಾಮಾಜಿಕ ಧಾರ್ಮಿಕ ಆಧ್ಯಾತ್ಮಿಕ ಸಾಹಿತಿಕ ಸೈದ್ಧಾಂತಿಕ ನಿಲುವನ್ನು ಗಟ್ಟಿಗೊಳಿಸಿದ ಜಗವು ಕಂಡ ಶ್ರೇಷ್ಠ ಸಿದ್ಧಾಂತವಾಗಿದೆ. “ಲಾಂಛನಕ್ಕೆ ಶರಣೆಂಬೆಲಾಂಛನಕ್ಕೆ ತಕ್ಕ ಆಚಾರವಿಲ್ಲದಿದ್ದೊಡೆನಿನ್ನ ಸಾಕ್ಷಿಯಾಗಿ ಚಿ ಎಂಬೆಕೂಡಲ ಸಂಗಮದೇವ” ಅಂದು ಮಠಗಳನ್ನು ಕಾವಿಧಾರಿಗಳನ್ನು ಅಕ್ಕ ಮಾತೆ ಸ್ವಾಮಿ ಎಂಬ ದುಡಿಯದ ಜನರನ್ನು ಬಸವಣ್ಣ ಮತ್ತು ಶರಣರು ತಿರಸ್ಕರಿಸಿ ಅವರು ಕಾವಿ ಕಾವಿ ಹೊದ್ದು ತಿರುಗುವ ಜೀವಗಳ್ಳರು ಎಂದು ಕರೆದದ್ದುಂಟು. ಅಂದು ಬಸವಣ್ಣನವರು ಅಸ್ಪ್ರಶ್ಯರನ್ನು ದಲಿತರನ್ನು ಅಪ್ಪಿಕೊಂಡು ಮುಖ್ಯ ವಾಹಿನಿಗೆ ತಂದರು. ಇಂದು ಲಿಂಗಾಯತರೆನಿಸಿದ ನಾವು ಅವರನ್ನು ಮತ್ತೆ ಸಮಾಜದಿಂದ ದೂರ ಇಟ್ಟಿದ್ದೇವೆ.…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನಾನು ನೀನು ಜೊತೆಯಲ್ಲಿರಬೇಕು ಅಂತ ಆ ಬ್ರಹ್ಮ ಬರೆದಿರುವನೋ ಇಲ್ವೋ ಗೊತ್ತಿಲ್ಲ. ಅದೇನಾದರೂ ಆಗಲಿ ನನ್ನೆದೆಯಲ್ಲಿ ನಿನಗಾಗಿಯೇ ಅಂತ ಬಚ್ಚಿಟ್ಟಿರುವ ಬೆಚ್ಚನೆಯ ಪ್ರೀತಿಯನ್ನು ಜೀವವಿರುವವರೆಗೂ ಹಂಚಿಕೊಳ್ಳಬೇಕೆಂದು ಬಯಸುತಿದೆ ಈ ಜೀವ. ನೀ ಸನಿಹವಿದ್ದರೆ ಅದೇ ಸ್ವರ್ಗ. ನನ್ನ ಉಸಿರಿಗಿಂತ ಹೆಚ್ಚು ನಿನ್ನ ಪ್ರೀತಿಸ್ತಿನಿ ಕಣೆ. ನನ್ನ ನಿನ್ನ ಹೆಸರು ಇತಿಹಾಸದಲ್ಲಿ ದಾಖಲಾಗಲಿ ಹಾಗೆ ನಿನ್ನೊಲವಿನಲಿ ಮುಳುಗಿ ಬಿಡುವೆ. ಮೆತ್ತನೆಯ ನಿನ್ನೆದೆಯ ಮೇಲೊರಗಿ ಕರಗಿ ಬಿಡುವೆ. ನಿನ್ನದೇ ಕನಸು ಕಂಗಳಲ್ಲಿ ತುಂಬಿ ದಿನ ರಾತ್ರಿ ನವಿರಾಗಿ ಕಾಡುತಿರುವೆ. ನನ್ನ ಹೃದಯದಲ್ಲಿಯೇ ಅವಿತುಕೊಂಡಿದ್ದರೂ ಎದುರಿಗೆ ಬರದೇ ಕಾಡುತಿರುವೆ. ಪ್ರೀತ್ಸೋಕೆ ಇಂಥದೇ ಋತುಮಾನ ಬೇಕಿಲ್ಲ ಗೆಳತಿ. ನನ್ನೀ ಮೈ ಮನ ಪ್ರೀತಿಗೆ ಸದಾ ಸಿದ್ಧವಾಗಿಯೇ ಇದೆ. ನಿನ್ನ ಬರುವಿಕೆಗಾಗಿ ಚೆಲುವಾದ ತಯಾರಿ ನಡೆಸಿದೆ. ಸಮ್ಮಿಲನದ ಕ್ಷಣ ನೆನೆದು ಮನಸ್ಸು ಒಳಗೊಳಗೆ ಖುಷಿ ಪಡುತಿದೆ. ನಗು ನಗುತ ನನ್ನೆಡೆ ನೋಡುತ ಒಂದೇ ಒಂದು ಮಾತು ಆಡಿದ ಆ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪ್ರತಿ ಗಾಪಂ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳೆ ಜಿಲ್ಲಾಡಳಿತ ಹಾನಿಗೊಳಗಾದ ರೈತರ ಪಟ್ಟಿ ಲಗತ್ತಿಸಬೇಕು. ನಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ರೈತರಿಗೆ ಅನ್ಯಾಯ ಮಾಡುವ ಪ್ರಯತ್ನ ಮಾಡಿದರೆ ಕಾನೂನು ಮೀರಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಕೂಡಲೇ ಬೇಡಿಕೆಗಳು ಈಡೇರಿಕೆ ಮಾಡದೇ ಹೋದಲ್ಲಿ ಗ್ರಾಮ, ಹೋಬಳಿ, ತಾಲೂಕು ಕೇಂದ್ರಗಳಲ್ಲಿರುವ ಕಛೇರಿಯ ಮುಂಭಾಗ ಹಾಗೂ ಮುಖ್ಯ ರಸ್ತೆಗಳನ್ನು ತಡೆದು ಬೇಡಿಕೆ ಈಡೇರಿಕೆ ಮಾಡುವವರೆ ಹೋರಾಟ ಮಾಡಬೇಕಾಗುತ್ತದೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಎಚ್ಚರಿಕೆ ನೀಡಿದರು.ಸಿಂದಗಿ ಪಟ್ಟಣದ ತಹಶೀಲ್ದಾರ್ ಆವರಣದಲ್ಲಿ ಬಿಜೆಪಿ ಮಂಡಲ ಹಾಗೂ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡ ಅಹೋರಾತ್ರಿ ೪ನೆಯ ದಿನದ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿದ ಅವರು, ಆಲಮೇಲ ಮತ್ತು ಸಿಂದಗಿ ತಾಲೂಕುಗಳ ರೈತರು ಬೆಳೆದ ಸಾವಿರಾರು ಹೆಕ್ಟ್ರ ಪ್ರದೇಶದ ಬೆಳೆಯನ್ನು ಪ್ರಕೃತಿ ವಿಕೋಪದಿಂದ ಸಂಪೂರ್ಣ ನಷ್ಟವೆಂದು ಘೋಷಿಸಿ ತಾಲೂಕುಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಸರಕಾರಕ್ಕೆ ಕೂಡಲೇ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಮೂಲಕ ಸಬಲೀಕರಣದತ್ತ ಸಾಗಬೇಕು ಎಂದು ಮಹಿಳಾ ವಿವಿಯ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಲಕ್ಷ್ಮಿದೇವಿ ವೈ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ತಿಕೋಟಾ ಗ್ರಾಮದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇದೇ ಸಂದರ್ಭದಲ್ಲಿ ಶಿವಮೊಗ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಡಾ.ಶುಭಾ ಮರವಂತೆ ಮಾತನಾಡಿ, ಗ್ರಾಮೀಣ ಮಹಿಳೆಯರು ಸಕಲ ಕೌಶಲ್ಯಗಳನ್ನು ಹೊಂದಿದ್ದು, ಅವುಗಳ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಸುಮನ ಕೋಲ್ಹಾರ ಮಾತನಾಡಿ, ಗ್ರಾಮೀಣ ಮಹಿಳೆಯರಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡಿದೆ. ಅವುಗಳ ಸದುಪಯೋಗವನ್ನು ಮಾಡಿಕೊಳ್ಳಬೇಕು. ಮಹಿಳೆಯ ರಾಜಕೀಯ ಸಬಲೀಕರಣಕ್ಕಾಗಿ ಮೀಸಲಾತಿಯ ಅಸ್ತçವನ್ನು ಸಮರ್ಥವಾಗಿ ಉಪಯೋಗಿಸಬೇಕು. ಅಧಿಕಾರದಲ್ಲಿ ಇರುವುದು ಮಾತ್ರ ಸಾಕಾಗುವುದಿಲ್ಲ, ಅದನ್ನು ಪ್ರಯೋಗಿಸಿದಾಗ ಮಾತ್ರ ಗ್ರಾಮಗಳ ಹಾಗೂ ಮಹಿಳಾ ಸಮುದಾಯದ ನಿಜವಾದ ಅಭಿವೃದ್ಧಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಬಬಲೇಶ್ವರದಲ್ಲಿ ಬಯಲಾಟ ಕಲಾವಿದರ ಸಮೀಕ್ಷೇಯನ್ನು ಇತ್ತೀಚಿಗೆ ನಡೆಸಲಾಯಿತು. ಪಟ್ಟಣದ ಹನುಮಾನ ದೇವಸ್ಥಾನದ ಆವರಣದಲ್ಲಿ ತಾಲೂಕಿನ ಹಲವಾರು ಜನ ಕಲಾವಿದರು ಪಾಲ್ಗೊಂಡು ತಂತಮ್ಮ ಮಾಹಿತಿಯನ್ನು ಹಂಚಿಕೊಂಡು ದಾಖಲಿಸಿದರು.ರಾಜ್ಯ ಬಯಲಾಟ ಅಕಾಡೆಮಿಯ ಅಧ್ಯಕ್ಷ ಕೆ. ಆರ್. ದುರ್ಗಾದಾಸ ಅವರ ಸೂಚನೆಯ ಮೇರೆಗೆ ವಿಜಯಪುರ ಜಿಲ್ಲೆಯಲ್ಲಿ ಕಲಾವಿದರ ಸಮೀಕ್ಷಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಸಮೀಕ್ಷಕಿ, ನಿವೃತ್ತ ಕನ್ನಡ ಪ್ರಾಧ್ಯಾಪಕಿ ಶ್ರೀಮತಿ ಮೀನಾಕ್ಷಿ ಪಾಟೀಲ (ಕಲ್ಯಾಣಿ) ಹೇಳಿದರು.ಬಯಲಾಟ ಆಸಕ್ತರಲ್ಲಿ ಹಲವಾರು ಜನ ಡಾಕ್ಟರೇಟ್ ಪದವಿ ಪಡೆದವರಾಗಿದ್ದಾರೆ. ಗ್ರಾಮೀಣ ಜನತೆ ತಮ್ಮ ನಿತ್ಯದ ಕೃಷಿ ಕಾಯಕದೊಂದಿಗೆ ಈಗಲೂ ಈ ಕಲೆಯನ್ನು ಉಳಿಸಿ-ಬೆಳೆಸಿಕೊಂಡು ಹೋಗುತ್ತಿರುವುದು ಅಭಿಮಾನದ ಸಂಗತಿ ಎಂದರು. ಆಧುನಿಕ ತಂತ್ರಜ್ಞಾನ ಕಾಲದಲ್ಲಿ ಇಂಥ ಅಪರೂಪದ ಮೂಲ ಕಲೆಗಳು ಮರೆಯಾಗುತ್ತಿರುವುದನ್ನು ಮನಗಂಡು, ಮತ್ತೆ ಅದನ್ನು ವರ್ತಮಾನ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಕಲೆಯನ್ನು ಜೀವಂತವಾಗಿರಿಸುವ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕಾಗಿದೆ ಎಂದರು.ಬಬಲೇಶ್ವರ ತಾಲೂಕಿನ ಬಯಲಾಟ ತಜ್ಞರು ಭಾಗಿಯಾಗಿ ಹಂಚಿಕೊಂಡ ಮಾಹಿತಿಯನ್ನು ದಾಖಲಿಸಿಕೊಳ್ಳಲಾಯಿತು.ಇದೇ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿಪರೀತ ಮಳೆಯಿಂದಾಗಿ ತಾಲೂಕಿನ ಕೃಷಿ ಬೆಳೆಗಳಾದ ತೊಗರಿ, ಹತ್ತಿ, ಮೆಕ್ಕೆಜೋಳ ಮತ್ತು ಸಜ್ಜಿ ಸೇರಿದಂತೆ ವಿವಿಧ ಬೆಳೆಗಳು ಹಾಳಾಗಿವೆ. ದ್ರಾಕ್ಷಿ, ದಾಳಿಂಬೆ, ಲಿಂಬೆ ಹಾಗೂ ಬಾಳೆ ನೀರು ನಿಂತು ಹಾಳಾಗಿವೆ. ಆದ್ದರಿಂದ ಯಾವುದೇ ಜಂಟಿ ಸಮೀಕ್ಷೆ, ವೈಮಾನಿಕ ಸಮೀಕ್ಷೆ ಎಂದು ನೆಪ ಹೇಳದೆ ೧೫ದಿನದೊಳಗಾಗಿ ಜಿಲ್ಲೆಯ ಎಲ್ಲರಿಗೂ ರೈತರಿಗೆ ಪರಿಹಾರ ಬರಲೇಬೇಕೆಂದು ರೈತ ಸಂಘ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಒತ್ತಾಯಿಸಿದ್ದಾರೆ.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಂಟಿ ಸಮೀಕ್ಷೆ ನೆಪದಲ್ಲಿ ಯಾವುದೇ ಸಮಯವನ್ನು ಹಾಳು ಮಾಡದೆ ರೈತರಿಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ತಾಲೂಕು ದಂಡಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಳೆದ ಐದು ತಿಂಗಳಿಂದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಸುರಿದ ವಿಪರೀತ ಮಳೆಯಿಂದಾಗಿ ಎಲ್ಲ ಬೆಳೆಗಳು ಸಂಪೂರ್ಣ ನೀರಲ್ಲಿ ನಿಂತು ಹಾಳಾಗಿವೆ. ಜಂಟಿ ಸಮೀಕ್ಷೆ ನೆಪದಲ್ಲಿ ಯಾವುದೇ ಸಮಯವನ್ನು ಹಾಳು ಮಾಡದೆ ತಾಲೂಕಿನ ಪ್ರತಿಯೊಬ್ಬ ರೈತರಿಗೂ ಒಣ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಮತ್ತು ವಿಜಯ ದಶಮಿ ನಿಮಿತ್ಯ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅ.೧೮ ಶನಿವಾರದಂದು ಮದ್ಯಾಹ್ನ ೩ಗಂಟೆಗೆ ಪಟ್ಟಣದ ಸಾರಂಗಮಠದಿಂದ ನಾನಾ ವೃತ್ತ, ರಸ್ತೆಗಳ ಮಾರ್ಗವಾಗಿ ಆರ್.ಡಿ.ಪಾಟೀಲ ಕಾಲೇಜಿನ ಆವರಣದವರೆಗೆ ಪಥ ಸಂಚಲನ ನಡೆಯಲಿದೆ. ಬಳಿಕ ಆರ್.ಡಿ.ಪಾಟೀಲ ಕಾಲೇಜಿನ ಮೈದಾನದಲ್ಲಿ ನಡೆಯುವ ಸಭೆಯಲ್ಲಿ ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಪ್ರಾಂತ ಸಹ ಬೌದ್ಧಿಕ ಪ್ರಮುಖ ರಾಮಚಂದ್ರ ಎಡಕೆ ಆಗಮಿಸಲಿದ್ದಾರೆ ಎಂದು ಸಂಘದ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಮತ್ತು ವಿಜಯ ದಶಮಿ ನಿಮಿತ್ಯ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅ.೧೮ ಶನಿವಾರದಂದು ಮದ್ಯಾಹ್ನ ೩ಗಂಟೆಗೆ ಪಟ್ಟಣದ ಸಾರಂಗಮಠದಿಂದ ನಾನಾ ವೃತ್ತ, ರಸ್ತೆಗಳ ಮಾರ್ಗವಾಗಿ ಆರ್.ಡಿ.ಪಾಟೀಲ ಕಾಲೇಜಿನ ಆವರಣದವರೆಗೆ ಪಥ ಸಂಚಲನ ನಡೆಯಲಿದೆ. ಬಳಿಕ ಆರ್.ಡಿ.ಪಾಟೀಲ ಕಾಲೇಜಿನ ಮೈದಾನದಲ್ಲಿ ನಡೆಯುವ ಸಭೆಯಲ್ಲಿ ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಪ್ರಾಂತ ಸಹ ಬೌದ್ಧಿಕ ಪ್ರಮುಖ ರಾಮಚಂದ್ರ ಎಡಕೆ ಆಗಮಿಸಲಿದ್ದಾರೆ ಎಂದು ಸಂಘದ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
