ಝಳಕಿ ಪೋಲಿಸ್ ಠಾಣಾಧಿಕಾರಿ ಮತ್ತು ಸಿಬ್ಬಂಧಿಗಳಿಗೆ ರಕ್ಷಾ ಬಂಧನ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಹೋದರ-ಸಹೋದರಿಯರ ಬಾಂಧವ್ಯದ ಪ್ರತೀಕವಾದ ರಕ್ಷಾ ಬಂಧನ ಹಬ್ಬ, ಕೇವಲ ಒಂದು ನೂಲಿನ ಬಗ್ಗುವಿಕೆ ಅಲ್ಲ- ಅದು ಸಹೋದರಿಯರ ನಂಬಿಕೆ, ಮಮತೆ ಮತ್ತು ಜೀವಿತಾವಧಿಯ ರಕ್ಷಣೆಯ ಪ್ರತಿಜ್ಞೆ. ಶ್ರಾವಣ ಮಾಸದ ನೂಲ ಹುಣ್ಣಿಮೆಯ ಸಂಭ್ರಮದಲ್ಲಿ ಈ ಮಧುರ ಸಂಪ್ರದಾಯ ಝಳಕಿ ಪೊಲೀಸ್ ಠಾಣೆಯಲ್ಲೂ ಅರಳಿ ಬಂತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮಹಿಳಾ ಸಿಬ್ಬಂದಿಗಳು, ಪಿಎಸ್‌ಐ ಮಂಜುನಾಥ ಎಸ್.ಟಿ. ಅವರ ನೇತೃತ್ವದಲ್ಲಿ, ಠಾಣೆಯ ಎಲ್ಲ ಆರಕ್ಷಕರ ಕೈಗೆ ರಕ್ಷಾ ಕಟ್ಟಿ, ಅವರ ಸುರಕ್ಷಿತ ಸೇವೆಗೆ ಕೃತಜ್ಞತೆ ಸಲ್ಲಿಸಿದರು. ಸಿಹಿ ಹಂಚಿ, ಶುಭಾಶಯ ಕೋರಿದರು,
ರಕ್ಷಾ ಬಂಧನ ಕಟ್ಟಿಕೊಂಡು ಮಾತನಾಡಿದ ಝಳಕಿ ಠಾಣಾಧಿಕಾರಿ ಮಂಜುನಾಥ ತೀರಕನ್ನವರ ಸಹೋದರತ್ವದ ಮಧುರ ನಂಟು ರಕ್ಷಾ ಬಂಧನ, ಪೊಲೀಸ್ ಸಿಬ್ಬಂದಿ ಕೇವಲ ಕಾನೂನು-ಸುವ್ಯವಸ್ಥೆಯ ರಕ್ಷಕರು ಮಾತ್ರವಲ್ಲ, ಸಮಾಜದ ಕುಟುಂಬದ ಭಾಗವೆಂಬ ಸಂದೇಶವನ್ನು ಹಂಚಿದರು.
“ಸಹೋದರತ್ವದ ಪ್ರತೀಕವಾದ ರಕ್ಷಾ ಬಂಧನವು ಅಣ್ಣ-ತಂಗಿಯರ ಭಾವನಾತ್ಮಕ ಬಾಂಧವ್ಯವನ್ನು ಗಟ್ಟಿಗೊಳಿಸುವ ದಿನ. ನಮ್ಮ ಹಿರಿಯರು ಉಳಿಸಿಕೊಂಡಿರುವ ಈ ವಾಡಿಕೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ,” ಎಂದು ಠಾಣಾಧಿಕಾರಿ ಮಂಜುನಾಥ ತೀರಕನ್ನವರ ಭಾವನಾತ್ಮಕವಾಗಿ ಹೇಳಿದರು.
ಈ ಸಂಧರ್ಭದಲ್ಲಿ ತಾಲೂಕಿನ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಜಯಶ್ರೀ, ಎಸ್ ಬಿ ಉಮರಾಣಿ, ಸಿಬ್ಬಂದಿ ಶಿವಾನಂದ ಬಿರಾದಾರ, ಪ್ರಶಾಂತ ಪೂಜಾರಿ, ಶಂಭುಲಿಂಗ ಪೂಜಾರಿ, ಲಕ್ಶ್ಮಣ ಬೊಮ್ಮನಳ್ಳಿ, ಸೋಮನಾಥ ಶಿವೂರ, ವಲಯದ ಮೇಲ್ವಿಚಾರಕ ಅಶ್ವಿನಿ ಸಂಗೊಳ್ಳಿ, ಮಹಾಂತೇಶ ವ್ಹಿ.ಎ. ಮತ್ತು ಸ್ವರೂಪ ಸೇವಾ ಪ್ರತಿನಿಧಿಗಳಾದ ಶಾಹಿನ, ಸುರೇಖಾ, ಪ್ರಿಯಾ, ಸಂಗೀತ, ಶ್ರೀದೇವಿ ಶಾಹಿರಾಬಾನು ಮತ್ತು ಝಳಕಿ ಠಾಣಾ ಆರಕ್ಷಕರು ಉಪಸ್ಥಿತರಿದ್ದರು.

