ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಹೋದರ-ಸಹೋದರಿಯರ ಮಧ್ಯೆ ಇರುವ ಪ್ರೀತಿ, ಮಮತೆ, ಹಾಗೂ ಭರವಸೆಯ ನಂಟಿಗೆ ಪ್ರತೀಕವಾದ ರಕ್ಷಾ ಬಂಧನ ಹಬ್ಬ ಶ್ರಾವಣದ ಸಂಭ್ರಮದಲ್ಲಿ ಚಡಚಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭಾವಪೂರ್ಣವಾಗಿ ಜರಗಿತು.
ಶನಿವಾರ ಬೆಳಿಗ್ಗೆ ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿ ಕಟ್ಟುವ ಮೂಲಕ ಈ ಪವಿತ್ರ ಆಚರಣೆಗೆ ಚಾಲನೆ ನೀಡಿದರು.
ಹಣೆಗೆ ತಿಲಕವಿಟ್ಟು, ಆರತಿ ಬೆಳಗುವುದಾದ ನಂತರ ಕಲ್ಲುಸಕ್ಕರೆಯ ಸಿಹಿಯಿಂದ ಸಂತೋಷ ಹಂಚಿಕೊಂಡರು.
