Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಆರಂಭವಾಗಿ ಆರು ವರ್ಷವಾದರೂ ಸ್ವಂತ ಸೂರಿಲ್ಲದ ವಿದ್ಯಾಲಯ

ಅಧಿಕಾರಿಗಳ ನಡೆ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

ಬಿಜೆಪಿ ಸಭೆಯಲ್ಲಿ ಹಿಂದುಳಿದ ವರ್ಗಗಳ ಕಾರ್ಯಕರ್ತರ ಅಸಮಾಧಾನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಈ ರಾಜ್ಯ ಹೆದ್ದಾರಿಯಲ್ಲಿ ತಗ್ಗು-ದಿನ್ನೆ ಹೊಂಡಗಳದೇ ಸಾಮ್ರಾಜ್ಯ!
(ರಾಜ್ಯ ) ಜಿಲ್ಲೆ

ಈ ರಾಜ್ಯ ಹೆದ್ದಾರಿಯಲ್ಲಿ ತಗ್ಗು-ದಿನ್ನೆ ಹೊಂಡಗಳದೇ ಸಾಮ್ರಾಜ್ಯ!

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕೊಡಂಗಲ್ ರಾಜ್ಯ ಹೆದ್ದಾರಿಯಲ್ಲಿನ ತಗ್ಗು-ಗುಂಡಿಗಳು ಜಲಮಯ | ಕಣ್ತೆರೆಯದ ಅಧಿಕಾರಿಗಳು

ಉದಯರಶ್ಮಿ ದಿನಪತ್ರಿಕೆ

ವರದಿ: ರಶ್ಮಿ ನೂಲಾನವರ
ಸಿಂದಗಿ: ಇದು ರಾಜ್ಯ ಹೆದ್ದಾರಿ. ಆದರೆ ಸ್ಥಳೀಯ ರಸ್ತೆಗಿಂತಲೂ ಹೆಚ್ಚು ಹಾಳಾಗಿದೆ. ನಿತ್ಯ ಈ ರಸ್ತೆ ಮೇಲೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಶಹಾಪೂರ, ಮಳ್ಳಿ, ಕೆಂಭಾವಿ, ಗೋಲಗೇರಿ, ಸಿಂದಗಿಗೆ ಬರಲು ಇದೇ ಪ್ರಮುಖ ದಾರಿಯಾದರೂ ಈ ರಸ್ತೆ ಇದುವರೆಗೂ ದುರಸ್ತಿಯಾಗದಿರುವುದು ದುರಂತವೇ ಸರಿ.
ಈ ರಸ್ತೆಯುದ್ದಕ್ಕೂ ತಗ್ಗು-ದಿನ್ನೆಗಳು ನಿರ್ಮಾಣವಾಗಿವೆ. ಪ್ರತಿದಿನ ಹಲವು ಬೈಕ್ ಸವಾರರು, ವಾಹನ ಚಾಲಕರು ಸಂಚರಿಸಲು ಪರದಾಡುವಂತಾಗಿದೆ.
ಹೇಳಿಕೊಳ್ಳಲು ಮಾತ್ರ ಇದು ಕೊಡಂಗಲ್ ರಾಜ್ಯ ಹೆದ್ದಾರಿ. ಆದರೆ ಈ ಹೆದ್ದಾರಿಯಲ್ಲಿ ಒಮ್ಮೆ ಸಂಚರಿಸಿದರೆ ಸಾಕು ಹೊಲದ ರಸ್ತೆಯಲ್ಲಿ ಸಂಚರಿಸುವ ಅನುಭವವಾಗುತ್ತದೆ. ಈ ರಸ್ತೆಯ ಮೇಲೆ ನಿತ್ಯ ಇಲ್ಲಿಂದ ಪ್ರಯಾಣ ಬೆಳೆಸುವವರ ಸ್ಥಿತಿ ಅಧೋಗತಿ ಎನ್ನುವಂತಾಗಿದೆ. ಹೇಳೋರು-ಕೇಳೋರು ಯಾರು ಇಲ್ಲದಂತಾಗಿದೆ ಎಂದು ಸವಾರರು ಬೇಸರ ವ್ಯಕ್ತಪಡಿಸುತ್ತಾರೆ.
ಮಳೆ ಬಂದರೆ ಸಾಕು ಈ ರಸ್ತೆಯಲ್ಲಿನ ತಗ್ಗು-ಗುಂಡಿಗಳ ಜಲಮಯವಾಗಲಿದ್ದು, ವಾಹನ ಸವಾರರಿಗೆ ರಸ್ತೆಯೇ ಗೊತ್ತಾಗುತ್ತಿಲ್ಲ. ಇಂತಹ ದುಸ್ಥಿತಿಯೆಡೆಯ ಸುಧಾರಣೆಗೆ ಸರಕಾರ ಮೊದಲ ಆದ್ಯತೆ ನೀಡಬೇಕು. ಈ ಹೆದ್ದಾರಿಯು ಸಿಂದಗಿಯಿಂದ ಪ್ರಾರಂಭವಾಗುತ್ತದೆ. ಮನ್ನಾಪೂರ, ಯಂಕಂಚಿ, ಗೋಲಗೇರಿ ಸೇರಿದಂತೆ ವಿವಿಧೆಡೆ ರಸ್ತೆಯ ಮಧ್ಯದಲ್ಲಿಯೇ ಐದಾರು ಇಂಚುಗಳಷ್ಟು ಆಳ ಮತ್ತು ಅಗಲವಾದ ಹೊಂಡಗಳಾಗಿವೆ. ಹೊಂಡಗಳನ್ನು ತಪ್ಪಿಸುವ ಭರದಲ್ಲಿ ವಾಹನಗಳು ಮುಖಾಮುಖಿ ಡಿಕ್ಕಿಯಾಗುವ ಸಾಧ್ಯತೆಗಳಿವೆ. ಇತ್ತೀಚೆಗೆ ಅಸಂತಾಪೂರ ಸಾರಿಗೆ ಇಲಾಖೆಯ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಪ್ರಯಾಣಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಡಾಂಬರ್ ಕಿತ್ತುಹೋಗಿರುವ ಪರಿಣಾಮ ಪ್ರಯಾಣಿಕರ ಸುಗಮ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿದೆ. ಈ ರಸ್ತೆಗೆ ಸಂಚರಿಸುವ ಅದೇಷ್ಟೋ ವಾಹನಗಳು ಅನೇಕ ಬಾರಿ ರಸ್ತೆ ಮಧ್ಯದಲ್ಲಿ ಹಾಳಾಗಿ ನಿಂತಿರುವ ಅನೇಕ ಉದಾಹರಣೆಗಳು ಇವೆ. ಸಂಬಂಧಿಕರು ಮಾತ್ರ ಇದಕ್ಕೂ ನಮಗೂ ಏನು ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಕಳೆದ ಎರಡು-ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೆಚ್ಚಿನ ಹೊಂಡಗಳು ಸೃಷ್ಟಿಯಾಗಿವೆ. ಈ ಹಿನ್ನೆಲೆಯಲ್ಲಿ ವಾಹನಗಳ ಓಡಾಟ ಕ್ಕೆ ಮತಷ್ಟು ಸಮಸ್ಯೆಯಾಗುತ್ತಿದೆ. ಆದ್ದರಿಂದ ಇನ್ನಾದರೂ ಈ ರಸ್ತೆ ದುರಸ್ತಿಗೆ ಸಂಬಂಧಿಕರು ಮುಂದಾಗಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.

“ಕೊಡಂಗಲ್ ರಾಜ್ಯ ಹೆದ್ದಾರಿಯ ಸ್ಥಿತಿ ಚಿಂತಾಜನಕವಾಗಿದೆ. ಆ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಕಾರಣ ಇದಕ್ಕೆ ಸಂಬಂದಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಆದಷ್ಟು ಬೇಗ ಸರಿಪಡಿಸಬೇಕು.”

– ಚಂದ್ರಶೇಖರ ಕೆಂಭಾವಿ
ಸಮಾಜ ಸೇವಕರು

“ಯಂಕಂಚಿ ಗ್ರಾಮದಿಂದ ಸಿಂದಗಿ ನಗರಕ್ಕೆ ಹೋಗಬೇಕಾದರೆ ಇದು ಪ್ರಮುಖ ರಾಜ್ಯ ಹೆದ್ದಾರಿ ರಸ್ತೆ. ಪ್ರತಿನಿತ್ಯ ಸಂಚಿರಿಸುವ ನಮಗೆ ಇದರಿಂದ ತುಂಬಾ ಕಷ್ಟವಾಗುತ್ತಿದೆ. ಸ್ವಲ್ಪ ಆಯಾ ತಪ್ಪಿದರೂ ನಮ್ಮ ಕೈ-ಕಾಲು ಮುರಿಯುತ್ತೋ ಏನೋ ಎಂಬಂತಾಗಿದೆ.”

*- ಸಿದ್ದರಾಮ ಡಗ್ಗಾ*

ಯಂಕಂಚಿ ಗ್ರಾಮದ ನಿವಾಸಿ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಆರಂಭವಾಗಿ ಆರು ವರ್ಷವಾದರೂ ಸ್ವಂತ ಸೂರಿಲ್ಲದ ವಿದ್ಯಾಲಯ

ಅಧಿಕಾರಿಗಳ ನಡೆ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

ಬಿಜೆಪಿ ಸಭೆಯಲ್ಲಿ ಹಿಂದುಳಿದ ವರ್ಗಗಳ ಕಾರ್ಯಕರ್ತರ ಅಸಮಾಧಾನ

ಇತರರ ಸ್ಥಾನದಲ್ಲಿ ನಿಂತು ಯೋಚಿಸುವ ಗುಣವಿರಲಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಆರಂಭವಾಗಿ ಆರು ವರ್ಷವಾದರೂ ಸ್ವಂತ ಸೂರಿಲ್ಲದ ವಿದ್ಯಾಲಯ
    In (ರಾಜ್ಯ ) ಜಿಲ್ಲೆ
  • ಅಧಿಕಾರಿಗಳ ನಡೆ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ಬಿಜೆಪಿ ಸಭೆಯಲ್ಲಿ ಹಿಂದುಳಿದ ವರ್ಗಗಳ ಕಾರ್ಯಕರ್ತರ ಅಸಮಾಧಾನ
    In (ರಾಜ್ಯ ) ಜಿಲ್ಲೆ
  • ಇತರರ ಸ್ಥಾನದಲ್ಲಿ ನಿಂತು ಯೋಚಿಸುವ ಗುಣವಿರಲಿ
    In ವಿಶೇಷ ಲೇಖನ
  • ಶಿಸ್ತು, ಭಾವೈಕ್ಯ ಮೂಡಿಸುವ ಭಾರತ ಸೇವಾದಳ :ನಡುಗಡ್ಡಿ
    In (ರಾಜ್ಯ ) ಜಿಲ್ಲೆ
  • ಅರ್ಹ‌ ಮತದಾರರು ಮತದಾರ ಪಟ್ಟಿಯಿಂದ ಹೊರಗುಳಿಯಬಾರದು
    In (ರಾಜ್ಯ ) ಜಿಲ್ಲೆ
  • ವಿಜಯಪುರದಲ್ಲಿ ಕೋಚ್ ಡಿಪೋ ಸ್ಥಾಪಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಕಾನಿಪ ಸಂಘದ ವಿವಿಧ ಸ್ಥಾನಗಳಿಗೆ ಹಿರಿಯ ಪತ್ರಕರ್ತರ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಮತಗಟ್ಟೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಹಕರಿಸಿ :ಬೋಸಗಿ
    In (ರಾಜ್ಯ ) ಜಿಲ್ಲೆ
  • ನಾಳೆ ಸಚಿವ ಎಂ.ಬಿ.ಪಾಟೀಲ ರಿಂದ ನೂತನ ಶಾಲಾ ಕಟ್ಟಡ ಉದ್ಘಾಟನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.