ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಶಾಲೆಯಲ್ಲಿ ಸಂಭ್ರಮದಿಂದ ರಕ್ಷಾಬಂಧನ ಹಬ್ಬ ಆಚರಿಸಲಾಯಿತು.
ನೂರಾರು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರಿಗೆ ರಾಖಿ ಕಟ್ಟಿ ಸಂಭ್ರಮಿಸಿದರು. ಇದೇ ವೇಳೆ ಶಿಕ್ಷಕಿಯರು ಅತಿಥಿಗಳಿಗೆ ರಾಖಿ ಕಟ್ಟಿ ಆರತಿ ಬೆಳಗಿ ದೀರ್ಘಾಯುವಾಗಿ ಬಾಳುವಂತೆ ಹರಿಸಿದರು.
ಸಾನಿಧ್ಯ ವಹಿಸಿ ಮಾತನಾಡಿದ ವೇದಮೂರ್ತಿ ಅಮರೇಶ್ವರ ಶಾಸ್ತಿಗಳು, ಸತತವಾಗಿ ೩೬ ವರ್ಷಗಳ ಕಾಲ ನಿರಂತರವಾಗಿ ರಕ್ಷಾ ಬಂಧನ ಹಬ್ಬವನ್ನು ಶಾಲೆಯಲ್ಲಿ ಆಚರಿಸುತ್ತಾ ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಭಾತೃತ್ವ ಭಾವನೆಗಳನ್ನು ಕೊಡುತ್ತಾ ಬಂದಿರುವ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದರು.
ಇದೇ ವೇಳೆ ಬೀರಪ್ಪ ಹೊಸೂರ ಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಎಸ್.ಆಯ್.ಜೋಗೂರ, ಅಲೋಕ ಬಡದಾಳ, ಅಕ್ಷಯ ಕುಲಕರ್ಣಿ, ಮುಖ್ಯ ಗುರು ಲಕ್ಷ್ಮೀಪುತ್ರ ಕಿರನಳ್ಳಿ, ಸಮರ್ಥ ಕೊಳಾರಿ, ಈರಣ್ಣ ಕಲಶೆಟ್ಟಿ, ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಲಕ್ಷ್ಮೀಬಾಯಿ ಹಳೇಮನಿ, ಸೀತಾ ಆರೇಶಂಕರ, ಸರುಬಾಯಿ ಬಂಡಗರ, ಸುನೀತಾ ಗುಂಡದ, ವೀಣಾ ರಾಂಪೂರಮಠ, ರಕ್ಷಿತಾ ಹಡಪದ ಮುಂತಾದವರು ಉಪಸ್ಥಿತರಿದ್ದರು.

