Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಅಧ್ಯಾತ್ಮದಲ್ಲಿ ನಂಬಿಕೆ ಮುಖ್ಯ. ವಿಜ್ಞಾನದಲ್ಲಿ ಮೂಲನಂಬಿಕೆ ಇರಬೇಕೆ ವಿನಹ ಮೂಢನಂಬಿಕೆ ಇರಬಾರದು. ಯಾವುದನ್ನು ಪ್ರಶ್ನಿಸಿದೆ ಒಪ್ಪಿಕೊಳ್ಳಬಾರದು. ಸರಿಯಾಗಿ ಪರಿಶೀಲಿಸಿ, ಪರೀಕ್ಷಿಸಿ ಸರಿಯಾದುದನ್ನು ಮಾತ್ರ ಒಪ್ಪಿಕೊಳ್ಳಬೇಕು ಎಂದು ಸರ್ಕಾರಿ ಪಿ.ಬಿ.ಪ.ಪೂ ಕಾಲೇಜಿನ ಉಪನ್ಯಾಸಕ ಡಾ.ಲಿಂಗಾನಂದ ಗವಿಮಠ ಹೇಳಿದರು.ಶ್ರಾವಣ ಮಾಸದ ನಿಮಿತ್ತ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ಓಣಿಗೊಂದು ದಿನ ವಚನ ಶ್ರಾವಣ ಅಂಗವಾಗಿ ಮೂಲ ಸಿದ್ಧೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ನಡೆದ ಹತ್ತೊಂಬತ್ತನೆ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ‘ನಂಬಿಕರೆದಡೆ ಓ ಎನ್ನನೆ ಶಿವನು? ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.ಯಾರು ಒಳ್ಳೆಯವರಾಗಿರುತ್ತಾರೆ ಅವರಿಗೆ ಒಳ್ಳೆಯದಾಗುತ್ತದೆ. ಬೇರೆಯವರಿಗೆ ಒಳ್ಳೆಯದಾಗಲಿ ಎಂದು ಬಯಸುವವರಿಗೂ ಒಳ್ಳೆಯದಾಗುತ್ತದೆ. ಯಾರು ತಮ್ಮನ್ನು ತಾವು ಅರಿತುಕೊಳ್ಳುತ್ತಾರೆ ಅವರಿಗೆ ಎದುರಿಗೆ ಬರುವ ಮನುಷ್ಯರಲ್ಲಿಯೂ ದೇವರು ಕಾಣಲು ಸಾಧ್ಯ ಎಂದರು.ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮುಖ್ಯ ಅತಿಥಿಯಾಗಿ ಮಾತನಾಡಿ, ಓಲೆಮಠದಿಂದ ನಡೆಯುತ್ತಿರುವ ಓಣಿಗೊಂದು ದಿನ ವಚನ ಶ್ರಾವಣ ಜನಜಾಗೃತಿ ಕಾರ್ಯಕ್ರಮವಾಗಿದೆ. ಇದೊಂದು ಸಮಾಜ ಮತ್ತು ದೇಶ ಕಟ್ಟುವ…
ಜಿ.ಪಿ ಪೋರವಾಲ ಕಲಾ ವಾಣಿಜ್ಯ ಮತ್ತು ವಿ.ವಿ ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಶಾ ಮುಕ್ತ ಭಾರತ ಅಭಿಯಾನ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ “ನಶಾ ಮುಕ್ತ ಭಾರತದ ಅಭಿಯಾನ” ಅಡಿಯಲ್ಲಿ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ದೈಹಿಕ ನಿರ್ದೇಶಕರಾದ ಡಾ. ರವಿ ಗೋಲಾ ಮುಖ್ಯ ಅತಿಥಿಯಾಗಿ ಮಾತನಾಡಿ, ನಶಾ ಮುಕ್ತ ಭಾರತದ ಅಭಿಯಾನದಡಿಯಲ್ಲಿ, ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳನ್ನು ತ್ಯಜಿಸಲು ಮತ್ತು ಇತರರನ್ನು ಮಾದಕ ದ್ರವ್ಯಗಳಿಂದ ದೂರವಿರಲು ಪ್ರೋತ್ಸಾಹಿಸಲು, ಕುಟುಂಬ, ಸ್ನೇಹಿತರು ಮತ್ತು ಸಮಾಜವನ್ನು ಮಾದಕ ದ್ರವ್ಯ ಮುಕ್ತ ಮಾಡಲು ಕೈಲಾದಷ್ಟು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.ರಾಷ್ಟ್ರೀಯ ಸೇವಾ ಯೋಜನೆಯ ಘಟಕ ೧ ಕಾರ್ಯಕ್ರಮ ಅಧಿಕಾರಿ ಡಾ. ಶ್ರೀಕಾಂತ್ ಎಲ್. ಪಾಟೀಲ್ ಪ್ರತಿಜ್ಞಾವಿಧಿ ಬೋಧಿಸಿದರು.ಕಾಲೇಜಿನ ಪ್ರಾಂಶುಪಾಲ ಪ್ರೊ. ಡಿ.ಎಂ. ಪಾಟೀಲ್, ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕ ಪ್ರೊ. ಬಸವರಾಜ್ ಮಹಾಜನ್ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನೆಯ ಘಟಕ ೨ ಕಾರ್ಯಕ್ರಮ ಅಧಿಕಾರಿ ಪ್ರೊ. ವಿ.ಎ ಪಾಂಡೆ ವೇದಿಕೆ ಮೇಲಿದ್ದರು.ಡಾ.…
ಉದಯರಶ್ಮಿ ದಿನಪತ್ರಿಕೆ ಚಡಚಣ: ಸತ್ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಹೊಂದಿರುವ ಶಿಕ್ಷಕ ಈ ಸಮಾಜದ ಶ್ರೇಷ್ಠ ವ್ಯಕ್ತಿ. ಅಂತಹ ಶಿಕ್ಷಕರಿಗೆ ನಿವೃತ್ತಿ ಎಂಬುದಿಲ್ಲ. ಇವರು ಸಮಾಜಕ್ಕೆ ಸದಾ ಮಾರ್ಗದರ್ಶಕರಾಗಿರುತ್ತಾರೆ ಎಂದು ಭೀಮಾಶಂಕರ ಸಕ್ಕರೆ ಕಾರ್ಖಾನೆ ಮರಗೂರ ನಿರ್ದೇಶಕ ಸಿದ್ದಣ್ಣಸಾಹುಕಾರ ಬಿರಾದಾರ ಅಭಿಪ್ರಾಯಪಟ್ಟರು.ಚಡಚಣ ಪಟ್ಟಣದಲ್ಲಿ ನಿವೃತ್ತ ಶಿಕ್ಷಕಿ ಶ್ರೀಮತಿ ಸುವರ್ಣಾ ಭೀಮಷ್ಯಾ ತೇಲಿ ಗುರುಮಾತೆ ಅವರ ಅಭಿನಂದನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿ, ಸಂಸ್ಕಾರ ಕಲಿಸಿ ಸಮಾಜ ಸೇವೆ ಮಾಡಿದ ಶಿಕ್ಷಕರು ನಿವೃತ್ತಿಯಾಗುವುದು ಸೇವಾ ದಾಖಲೆಯಲ್ಲಿ ಮಾತ್ರವೇ ಹೊರತು ನಿಜವಾದ ಅರ್ಥದಲ್ಲಿ ಸಮಾಜಕ್ಕೆ ಸದಾ ಮಾರ್ಗದರ್ಶಕರಾಗಿಯೇ ಇರುವ ಶಿಕ್ಷಕರಿಗೆ ನಿವೃತ್ತಿ ಎಂಬುದಿಲ್ಲ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿ ನಿವೃತ್ತ ಉಪನ್ಯಾಸಕ ಶಿವಶರಣ ಹಂಜಗಿ ಮಾತನಾಡಿ, ಸುವರ್ಣಾ ತೇಲಿ ಅವರು ಉಮರಾಣಿಯಲ್ಲಿ 28 ವರ್ಷಗಳ ಪ್ರಾಮಾಣಿಕ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ, ಶಿಕ್ಷಕರ ಶಿಕ್ಷಕ ಸಂಘಗಳ, ಹಾಗೂ ಸಮಾಜದ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.ಮುಖ್ಯ ಅತಿಥಿ ಎಸ್ ಬಿ ಪಾಟೀಲ ಅವರು,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೆಂಗಳೂರಿನ ಕೊಡತಿ ಗ್ರಾಮದ ಸರ್ವೆ ನಂಬರ್ ೮೨ರಲ್ಲಿ ೭ ಎಕರೆ ಜಮೀನಿನಲ್ಲಿ ಮೀಸಲಿರುವ ೧೭ ನಿವೇಶನಗಳಿಗಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕರ್ನಾಟಕ ಮೂಲದ ಅರ್ಹ ನಿವೇಶನ ರಹಿತ ಸೈನಿಕರು/ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು ಅಗತ್ಯ ದಾಖಲಾತಿಗಳೊಂದಿಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರ ಕಚೇರಿ ಹಾಗೂ ದೂರವಾಣಿ ಸಂಖ್ಯೆ: ೦೮೩೫೨-೨೫೦೯೧೩ ಸಂಪರ್ಕಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿ, ಅನುಷ್ಠಾನಗೊಳಿಸುತ್ತಿದ್ದು, ಈ ಯೋಜನೆಗಳ ಲಾಭ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಕಾರ್ಯ ಯೋಜನೆ ಸಿದ್ಧಪಡಿಸಿಕೊಂಡು ಕಾರ್ಯನಿರ್ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಅಧಿಕಾರಿಗಳಿಗೆ ಸೂಚಿಸಿದರು.ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ೨೦೨೫-೨೬ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯ ಯೋಜನೆ ಕಾರ್ಯಕ್ರಮಗಳ ಜುಲೈ -೨೦೨೫ರ ಅಂತ್ಯಕ್ಕೆ ಸಾಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಎಸ್‌ಸಿಪಿ ಟಿಎಸ್‌ಪಿ ಅನುದಾನವನ್ನು ಕಾಲಮಿತಿಯೊಳಗೆ ವೆಚ್ಚ ಮಾಡಬೇಕು. ಎಸ್‌ಸಿಪಿ ಟಿಎಸ್‌ಪಿ ಅನುದಾನ ಉಳಿಕೆಯಾಗದಂತೆ ನೋಡಿಕೊಂಡು ಸಮರ್ಪಕವಾಗಿ ಬಳಕೆ ಮಾಡುವಂತೆ ಸೂಚಿಸಲಾಯಿತು.ವಿವಿಧ ನಿಗಮಗಳಿಂದ ಕೊರೆದಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ, ವಿದ್ಯುತ್ ಪರಿವರ್ತಕ ಹಾಗೂ ವಿದ್ಯುತ್ ಕಂಬ ಒದಗಿಸುವಂತೆಯೂ, ಅವಶ್ಯ ಇರುವ ಕಾಲೋನಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಕ್ರಮವಹಿಸಬೇಕು.…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ದೇಶ ಭಕ್ತಿಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಸಮಸ್ತ ಭಾರತೀಯರು ಮನೆಗಳ ಮೇಲೆ ತಿರಂಗ ಧ್ವಜ ಹಾರಿಸಬೇಕಿದೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.ಸಿಂದಗಿ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಸ್ತುತ ದೇಶವು ಹಿಂದೆಂದಿಗಿಂತಲೂ ಸದೃಢವಾಗಿದೆ. ಬಿಜೆಪಿ ಸ್ನೇಹಕ್ಕೆ ಮತ್ತು ಪ್ರೀತಿಗೆ ಮುಂದಾಳತ್ವ ವಹಿಸುವ ಪಕ್ಷವಾಗಿದೆ. ದೇಶ ಭಕ್ತಿಯ ಮೂಲಕ ಸ್ವಾತಂತ್ರ್ಯ ಕಾಪಾಡುವುದು ಮೊದಲ ಆಶಯವಾಗಿದೆ. ಆಪರೇಶನ್ ಸಿಂಧೂರ ಮತ್ತು ಆಪರೇಶನ್ ಮಹಾದೇವ ಯಶಸ್ಸಿಗೆ ಕಾರಣರಾದ ದೇಶದ ಸೈನಿಕರಿಗೆ ನಮನ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಆ.13ರಿಂದ 15ರವರೆಗೆ ದೇಶದ ಎಲ್ಲಡೆ ಹರ್ ಘರ್ ತಿರಂಗ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.ಈ ವೇಳೆ ಅಭಿಯಾನದ ಮೂಲಕ ಬೈಕ್ ರ‍್ಯಾಲಿ ನಡೆಸಿ ಪಟ್ಟಣದ ಬಸವೇಶ್ವರ ವೃತ್ತದಿಂದ, ಸ್ವಾಮಿ ವಿವೇಕಾನಂದ ವೃತ್ತ, ತೋಂಟದ ಸಿದ್ದಲಿಂಗ ಶ್ರೀಗಳ ರಸ್ತೆಯ…
ಲೇಖನ- ವಿವೇಕಾನಂದ. ಎಚ್. ಕೆ.ಪ್ರಗತಿಪರ ಚಿಂತಕರುಬೆಂಗಳೂರು ಉದಯರಶ್ಮಿ ದಿನಪತ್ರಿಕೆ ಈ ಪದಗಳ ನಿಜವಾದ ಅರ್ಥವನ್ನು, ಆಶಯವನ್ನು ಗ್ರಹಿಸಲು ಓದು, ಅಧ್ಯಯನ, ಚಿಂತನೆ, ಅನುಭವ, ಅನುಭಾವ, ಸಂವೇದನಾಶೀಲತೆ, ಕ್ರಿಯಾಶೀಲತೆ, ವಿಶಾಲತೆ, ಒಳ್ಳೆಯತನ, ಭೌಗೋಳಿಕ, ಕಾನೂನಾತ್ಮಕ ಮತ್ತು ಪ್ರಾಕೃತಿಕ ಮೌಲ್ಯಗಳ ಜ್ಞಾನ ಇರಬೇಕಾಗುತ್ತದೆ. ಇಲ್ಲದಿದ್ದರೆ ಎಲ್ಲವೂ ಒಂದು ಹುಚ್ಚರ ಸಂತೆಯಂತೆ ಭಾಸವಾಗುತ್ತದೆ.ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಕ್ರಾಂತಿಯಿಂದ ಇವುಗಳ ನಡುವಿನ ವ್ಯತ್ಯಾಸವನ್ನು ಗ್ರಹಿಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ ಎನಿಸುತ್ತದೆ.ಈ ವಿಫಲತೆಯನ್ನು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಕಾರ್ಪೊರೇಟ್ ಕುಳಗಳು ಬಹಳ ಯಶಸ್ವಿಯಾಗಿ ಉಪಯೋಗಿಸಿಕೊಂಡು ಜನರನ್ನು ನೇರ ನಿಯಂತ್ರಣಕ್ಕೆ ಒಳಪಡಿಸಿಕೊಂಡಿದೆ. ಒಂದು ರೀತಿ ಶ್ವಾನಗಳಿಗೆ ಬಿಸ್ಕೆಟ್ ಹಾಕುವಂತೆ ಜನರ ಮನೋಭಾವವನ್ನೇ ದಿವಾಳಿತನದತ್ತ ದೂಡಿ ಜೀತದಾಳುಗಳಂತೆ ಉಪಯೋಗಿಸಿಕೊಳ್ಳುತ್ತಿದೆ.ತಿನ್ನುವುದಕ್ಕಾಗಿ ಬದುಕಬೇಕೋ, ಬದುಕುವುದಕ್ಕಾಗಿ ತಿನ್ನಬೇಕೋ ಎಂಬ ಗೊಂದಲ ಸೃಷ್ಟಿ ಮಾಡಿದೆ. ಆದರೆ ತಿನ್ನುವುದಕ್ಕೂ, ಬದುಕುವುದಕ್ಕೂ ಜೀವನ ಪರ್ಯಂತ ದುಡಿಯಲೇ ಬೇಕಾದ ಅನಿವಾರ್ಯತೆಯಂತು ಸೃಷ್ಟಿಯಾಗಿದೆ. ಬಹುತೇಕ ಮದ್ಯಮ ಮತ್ತು ಕೆಳ ಮದ್ಯಮ ಜನರ ಬದುಕು ಬೀಳುತ್ತಿರುವ ಗೋಡೆಯನ್ನು ಹಿಡಿದು ನಿಲ್ಲಿಸುವುದರಲ್ಲಿಯೇ ತಮ್ಮ ಇಡೀ ಜೀವನ…
ಲೇಖನ- ರಶ್ಮಿ ಕೆ. ವಿಶ್ವನಾಥ್ಮೈಸೂರು ಉದಯರಶ್ಮಿ ದಿನಪತ್ರಿಕೆ ವ್ಯಕ್ತಿ ಪೂಜೆ ಬೇಕೇ..?? ಮಾನವರೇ ದೇವರಾದರೆ ದೇವರ ಅಸ್ತಿತ್ವಕ್ಕೆ ಬೆಲೆ ಎಲ್ಲಿ..?! ಎಂದು ಕೇಳುತ್ತಾರೆ ನಮ್ಮ ದೊಡ್ಡವರುಬೇಕು ಎನ್ನುತ್ತೇನೆ ನಾನು. ಅದರೆ ವ್ಯಕ್ತಿಗಲ್ಲ, ದೇವರಂತಹ ವ್ಯಕ್ತಿಗೆ. ಮನುಷ್ಯ ದೇವರಾಗಿಬಿಡಬೇಕು ತನ್ನ ಉತ್ತಮ ಯೋಚನೆಗಳಿಂದ, ಉತ್ತಮ ಕೆಲಸಗಳಿಂದ.ಇನ್ನು ದೇವರೆಂದರೆ ಯಾರು? ನೀವು ರಾಮ, ಕೃಷ್ಣ, ಅಲ್ಲಾ, ಯೇಸು ಇವರೆಲ್ಲರೂ ದೇವರೆಂದರೆ, ನಾನು ಮನುಷ್ಯನಲ್ಲಿರಬೇಕಾದ ಒಳ್ಳೆಯತನವನ್ನೇ ದೇವರೆನ್ನುತ್ತೇನೆ. ದೇವರು ಒಬ್ಬೊಬ್ಬರಿಗೆ ಒಂದೊಂದು ರೂಪ. ಅವರವರ ಅಸ್ಮಿತೆಗೆ ಬಿಟ್ಟಂತೆ. ಆದರೆ ದೇವರು ಎಂಬ ಪದದ ತೂಕ ಮಾತ್ರ ಬಲು ಎತ್ತರದ್ದು. ಯಾರಿಗೂ ನಿಲುಕದ್ದು. ಅಷ್ಟೆಲ್ಲಾ ಒಳ್ಳೆಯವರಾಗಿ ಬಾಳಿದ ಪಾಂಡವರೇ, ಸ್ವರ್ಗಕ್ಕೆ ಹೋಗಿ ಸೇರುವಷ್ಟು ಪುಣ್ಯ ಸಂಪಾದನೆ ಮಾಡಲಾಗಲಿಲ್ಲ. ಸ್ವರ್ಗಕ್ಕೆ ಹೋಗುವ ದಾರಿಯಲ್ಲೇ, ಹೋಗುತ್ತಲೇ ಪ್ರಾಣ ಬಿಟ್ಟವರು. ಇನ್ನೂ ನಾವು-ನೀವು ಎಲ್ಲಿಯವರು?ಹುಲು ಮಾನವರು ದೇವರಾಗಬಾರದೆಂದಿಲ್ಲ, ಆಗಬಹುದು ಅದು ಅವರ ಒಳ್ಳೆಯ ಕೆಲಸಗಳಿಂದ. ಆದರೆ ಒಳ್ಳೆಯವರನ್ನು ಪೂಜಿಸುವವರು ಬೇಕಲ್ಲಾ!ಯಾರಿದ್ದಾರೆ?!.ಇರುವವರೆಲ್ಲಾ ಅರ್ಹರಲ್ಲದ ವ್ಯಕ್ತಿಪೂಜೆಯಲ್ಲಿ ನಿರತರಾಗಿಬಿಟ್ಟಿದ್ದಾರೆ. ಊರತುಂಬಾ ಹರಡಿಕೊಂಡಿರುವ ಅನರ್ಹರು, ಅಲ್ಲಲ್ಲೇ ಇರುವ…
ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ 20 ನೆಯ ಶರಣಮಾಸದ ಮಾಲಿಕೆಯಲ್ಲಿ ಅಂತರಾಷ್ಟ್ರೀಯ ಗಾಯಕರಾದ ಡಾ. ಮೃತ್ಯುಂಜಯ ಶೆಟ್ಟರ ಅವರು ವಚನ ಗಾಯನ ಪರಂಪರೆಯ ಕುರಿತು ಅತ್ಯಂತ ವಿದ್ವತ್ಪೂರ್ಣವಾಗಿ ಮಾತನಾಡಿದರು.12 ನೆಯ ಶತಮಾನದಲ್ಲಿ ಹಲವಾರು ಶರಣರು ವಚನ ರಚನೆಯೊಂದಿಗೆ ವಚನಗಳನ್ನು ವಾದ್ಯಗಳ ಮೂಲಕ, ಗಾಯನದ ಮೂಲಕ, ನರ್ತನ ಕಲೆ ಮೂಲಕ ಸಾಮಾಜಿಕ ಪರಿವರ್ತನೆಯ ಸಲುವಾಗಿ ಹೇಗೆ ಬಳಸಿಕೊಂಡಿದ್ದರು ಎನ್ನುವುದರಿಂದ ಹಿಡಿದು ಈಗಿನವರೆಗೆ ಮಧ್ಯ ಮಧ್ಯ ಶರಣರ ವಚನಗಳನ್ನು ಸುಶ್ರಾವ್ಯವಾಗಿ ಭಕ್ತಿ ಪೂರ್ವಕದಿಂದ ಹಾಡುತ್ತಾ ವಿವರಿಸಿದರು.ಮೊದಲಿನಿಂದಲೂ ಸಂಗೀತವು ಆಯಾ ಪ್ರದೇಶದ ಪ್ರಾದೇಶಿಕ ಹಿನ್ನೆಲೆಯಿಂದ ಮೂಡಿಬಂದಿದೆ, ಆಗಿನಿಂದಲೂ ನಾದ ಪ್ರಪಂಚ ಸಮೃದ್ಧವಾಗಿತ್ತು, ಭಕ್ತಿ, ಶ್ರದ್ಧೆ ವಿಚಾರ,ಭಾವನೆಗಳಿಂದ ವಿಕಾಸಗೊಂಡು ಕವಲು ಹೊಂದಿ ಗಾಯನ ಸ್ವರೂಪದ ಸಂಗೀತವು ರೂಪುಗೊಳ್ಳುತ್ತಾ ಬಂದಿದೆ. ನಾಲ್ಕನೆಯ ಶತಮಾನದಲ್ಲಿ ಮಾನಸೋ ಲ್ಲಾಸ ಗ್ರಂಥಬಂದದ್ದು, ರಾಜಾಶ್ರಯದಲ್ಲಿ ಸಂಗೀತ ಗಾರರು ಬೆಳೆದದ್ದನ್ನು ಹಂಚಿಕೊಂಡರು.1951 ರಿಂದ 2025ರ ವರೆಗೆ ಮಲ್ಲಿಕಾರ್ಜುನ ಮನ್ಸೂರ ಬಸವರಾಜ ರಾಜಗುರು ಸಿದ್ದರಾಮಯ್ಯ ಜಂಬಲದಿನ್ನಿ ಇನ್ನೂ ಅನೇಕ ಪ್ರಖ್ಯಾತ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನ ಕೂಡಗಿ ಟೌನಸಿಪನ ಬಾಲ ಭಾರತಿ ಪಬ್ಲಿಕ್ ಸ್ಕೂಲ್ ನಲ್ಲಿ “ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ” ಕುರಿತ ಕಾರ್ಯಾಗಾರವನ್ನು ಆಯೋಜಿಸಲಾಯಿತು.ಭಾರತ ಸೇವಾದಳ ಜಿಲ್ಲಾ ಸಮಿತಿ ಸದಸ್ಯರಾದ ಅಶೋಕ್ ಗುಡದಿನ್ನಿ, ಶಾಲೆಯ ಪ್ರಾಂಶುಪಾಲ ಸಂದೀಪ್ ಸಮಸೋಲೆ, ಶಿಕ್ಷಕರ ವೃಂದ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಸೇವಾದಳ ಸಂಪನ್ಮೂಲ ವ್ಯಕ್ತಿ ಎಸ್.ಎಲ್. ರಾಠೋಡ ಕಾರ್ಯಾಗಾರದಲ್ಲಿ ಭಾಗವಹಿಸಿದರು.ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಅವರು ತರಬೇತಿ ನೀಡಿದರು. ಅವರು ರಾಷ್ಟ್ರೀಯ ಏಕತೆ, ಧ್ವಜದ ಗೌರವ ಹಾಗೂ ರಾಷ್ಟ್ರಗೀತೆ ಪಠಿಸುವ ಶಿಷ್ಟಾಚಾರಗಳ ಬಗ್ಗೆ ವಿವರಿಸಿ, ವಿದ್ಯಾರ್ಥಿಗಳಲ್ಲಿ ದೇಶಪ್ರೇಮದ ಮನೋಭಾವವನ್ನು ಬೆಳೆಸುವಂತೆ ಪ್ರೇರಣೆ ನೀಡಿದರು.
