ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ
20 ನೆಯ ಶರಣಮಾಸದ ಮಾಲಿಕೆಯಲ್ಲಿ ಅಂತರಾಷ್ಟ್ರೀಯ ಗಾಯಕರಾದ ಡಾ. ಮೃತ್ಯುಂಜಯ ಶೆಟ್ಟರ ಅವರು ವಚನ ಗಾಯನ ಪರಂಪರೆಯ ಕುರಿತು ಅತ್ಯಂತ ವಿದ್ವತ್ಪೂರ್ಣವಾಗಿ ಮಾತನಾಡಿದರು.
12 ನೆಯ ಶತಮಾನದಲ್ಲಿ ಹಲವಾರು ಶರಣರು ವಚನ ರಚನೆಯೊಂದಿಗೆ ವಚನಗಳನ್ನು ವಾದ್ಯಗಳ ಮೂಲಕ, ಗಾಯನದ ಮೂಲಕ, ನರ್ತನ ಕಲೆ ಮೂಲಕ ಸಾಮಾಜಿಕ ಪರಿವರ್ತನೆಯ ಸಲುವಾಗಿ ಹೇಗೆ ಬಳಸಿಕೊಂಡಿದ್ದರು ಎನ್ನುವುದರಿಂದ ಹಿಡಿದು ಈಗಿನವರೆಗೆ ಮಧ್ಯ ಮಧ್ಯ ಶರಣರ ವಚನಗಳನ್ನು ಸುಶ್ರಾವ್ಯವಾಗಿ ಭಕ್ತಿ ಪೂರ್ವಕದಿಂದ ಹಾಡುತ್ತಾ ವಿವರಿಸಿದರು.
ಮೊದಲಿನಿಂದಲೂ ಸಂಗೀತವು ಆಯಾ ಪ್ರದೇಶದ ಪ್ರಾದೇಶಿಕ ಹಿನ್ನೆಲೆಯಿಂದ ಮೂಡಿಬಂದಿದೆ, ಆಗಿನಿಂದಲೂ ನಾದ ಪ್ರಪಂಚ ಸಮೃದ್ಧವಾಗಿತ್ತು, ಭಕ್ತಿ, ಶ್ರದ್ಧೆ ವಿಚಾರ,ಭಾವನೆಗಳಿಂದ ವಿಕಾಸಗೊಂಡು ಕವಲು ಹೊಂದಿ ಗಾಯನ ಸ್ವರೂಪದ ಸಂಗೀತವು ರೂಪುಗೊಳ್ಳುತ್ತಾ ಬಂದಿದೆ. ನಾಲ್ಕನೆಯ ಶತಮಾನದಲ್ಲಿ ಮಾನಸೋ ಲ್ಲಾಸ ಗ್ರಂಥಬಂದದ್ದು, ರಾಜಾಶ್ರಯದಲ್ಲಿ ಸಂಗೀತ ಗಾರರು ಬೆಳೆದದ್ದನ್ನು ಹಂಚಿಕೊಂಡರು.
1951 ರಿಂದ 2025ರ ವರೆಗೆ ಮಲ್ಲಿಕಾರ್ಜುನ ಮನ್ಸೂರ ಬಸವರಾಜ ರಾಜಗುರು ಸಿದ್ದರಾಮಯ್ಯ ಜಂಬಲದಿನ್ನಿ ಇನ್ನೂ ಅನೇಕ ಪ್ರಖ್ಯಾತ ಸಂಗೀತಗಾರರ ಜೊತೆ ಜೊತೆಗೆ
ವಚನಗಾಯನ ಬೇರೆ ಬೇರೆ ಹಂತದಲ್ಲಿ ಬೆಳೆದು ಬಂದದ್ದನ್ನು, ಶ್ರೀ ಪಂಚಾಕ್ಷರಿ ಗವಾಯಿಗಳು ಮತ್ತು ಶ್ರೀ ಪುಟ್ಟರಾಜ ಗವಾಯಿಗಳ ಹಿರಿಮೆ-ಗರಿಮೆಯನ್ನು ಅತ್ಯಂತ ಭಕ್ತಿಪೂರ್ವಕವಾಗಿ ನೆನೆಯುತ್ತಾ
ಈಗಿನ ವಚನ ಸಂಗೀತ ಕಾರರಾದ ವೆಂಕಟೇಶ ಕುಮಾರ, ಶ್ರೀಪಾದ್ ಹೆಗ್ಡೆ, ಸಂಗೀತಾ ಕಟ್ಟಿ, ಅಶೋಕ ಕೂಗನ್ನವರ, ಸಂಗಮೇಶ್ವರ ಗುರವ,ಸೋಮನಾಥ ಮರಡೂರ ಅವರ ಜೊತೆಗೆ ಇನ್ನೂ ಹಲವಾರು ಸಂಗೀತ ಗಾರರನ್ನು ಸಹ
ನೆನೆಸಿಕೊಂಡರು.
ತಮ್ಮ ಅಜ್ಜನವರಾದ ಶಿ. ಶಿ ಬಸವನಾಳ ಅವರ ಮನೆಯಲ್ಲಿ
ಮೃತ್ಯುಂಜಯ ಸ್ವಾಮಿಗಳು, ಹರ್ಡೇಕರ ಮಂಜಪ್ಪನವರು, ಮಲ್ಲಿಕಾರ್ಜುನ ಮನ್ಸೂರ್ ಅವರೆಲ್ಲರೂ ಕೂಡಿ ಮೊದಲ ಸಲ ಬಸವ ಜಯಂತಿ ಮತ್ತು ಅಕ್ಕನ ಜಯಂತಿ ಪ್ರಾರಂಭ ಮಾಡಿದ್ದನ್ನು, ಅಲ್ಲಿ ವಚನ ಗಾಯನ ಮಾಡುವುದನ್ನು ನೆನಪಿಸಿಕೊಂಡರು.
ಸಂಗೀತದಲ್ಲಿ ಲಯ, ಗತಿ, ಪ್ರಮಾಣ, ಪ್ರಕಾರ, ಶಿಸ್ತು,ಬದ್ಧತೆ,ಮಾಧುರ್ಯತೆ ಅತೀ ಮುಖ್ಯ ಎನ್ನುವುದನ್ನು ಹೇಳುತ್ತಾ, ವಚನಗಳು ಷಷ್ಠಿ ಸಮಷ್ಟಿಯ ಬೆಳಕು, ಕನ್ನಡ ಸಾಹಿತ್ಯದ ಹೃದಯ ಭಾಗವೇ ವಚನಗಳು, ಅವುಗಳ ಸಾರವನ್ನು ಅರ್ಥಮಾಡಿಕೊಂಡು ಹಾಡಬೇಕು, ಮನನ ಮಾಡಿಕೊಳ್ಳಬೇಕು ಎನ್ನುವ ಕಿವಿಮಾತು ಹೇಳಿದರು.
ತಾವು 9ನೇ ವರ್ಷದಿಂದ ಹಿಡಿದು ಇಲ್ಲಿಯವರೆಗೆ 55 ವರ್ಷಗಳ ತನಕ ಸಂಗೀತ ಕ್ಷೇತ್ರ ದಲ್ಲಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಂಡಿದ್ದಾರೆನ್ನುವುದರ ಜೊತೆಗೆ ಚಿಕ್ಕವರಿದ್ದಾಗ ತಾಯಿಯ ಸಂಸ್ಕಾರದಿಂದ ಬಂದ ವಚನಸಾರದ ಬಳುವಳಿ ಯನ್ನು ಹೇಳಲು ಮರೆಯಲಿಲ್ಲ.
ಸನ್ಮಾನ, ಬಿರುದು,ವೇದಿಕೆ, ಪದವಿ ಎಲ್ಲವನ್ನೂ ಬಿಟ್ಟು ವಿಶ್ವಮಾನವರಾಗಿ,ವಿಶ್ವ ಭ್ರಾತೃತ್ವಕ್ಕಾಗಿ,ವಿಶ್ವ ಪ್ರೇಮಕ್ಕಾಗಿ ನಾವು ಹಾಡಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು
ಇನ್ನೂ ಹಲವಾರು ಅತ್ಯಮೂಲ್ಯ ಸಂಗೀತದ ವಿಷಯಗಳ ಹರವನ್ನು ನಮ್ಮೊಂದಿಗೆ ಹಂಚಿಕೊಂಡರು.
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಇಂದಿನ ಉಪನ್ಯಾಸಕರಾದ ಡಾ. ಮೃತ್ಯುಂಜಯ ಶೆಟ್ಟರ ಅವರು ನನ್ನ ಆತ್ಮೀಯ ಸ್ನೇಹಿತರು, ನಯ- ವಿನಯದ ವ್ಯಕ್ತಿತ್ವದವರು, ಇಡೀ ಜಗತ್ತಿನಲ್ಲಿ 40 ಕ್ಕಿಂತ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಿದ ಅಂತರಾಷ್ಟ್ರೀಯ ಖ್ಯಾತಿಯ ಗಾಯಕರು ಎಂದು ಹೇಳುತ್ತಾ ವಚನ ಗಾಯನ ಪರಂಪರೆಯ
ಮೇಲೆ ಇನ್ನಷ್ಟು ಬೆಳಕು ಚೆಲ್ಲಿದರು.ದತ್ತಿ ದಾಸೋಹಿ ಗಳಾದ ಶ್ರೀ ಶಿವಾನಂದ ಕಲಕೇರಿ ಅವರು ಅತ್ಯಂತ ಅಭಿಮಾನದಿಂದ ಇಂದಿನ ಉಪನ್ಯಾಸಕರನ್ನು ಹೊಗಳಿ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಶರಣೆ ಪ್ರೇಮಕ್ಕ ಹೊರಟ್ಟಿ ಅವರ ವಚನ ಪ್ರಾರ್ಥನೆ, ಶರಣ ಶ್ರೀಶೈಲ ಐನಾಪುರ ಅವರ ಸ್ವಾಗತ, ಶರಣೆ ಲಲಿತಾ ಅಂಗಡಿ ಅವರ ಶರಣು ಸಮರ್ಪಣೆ, ಶರಣೆ ಶಾಂತಾ ಲಂಬಿ ಅವರ ವಚನ ಮಂಗಳ ಮತ್ತು ಶರಣೆ ಗೀತಾ ದಾನಶೆಟ್ಟಿ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ವಿಶೇಷ ದತ್ತಿ ಉಪನ್ಯಾಸ – 317
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶ್ರೀ ಶಿವಾನಂದ ಕಲಕೇರಿ ಆಯುಕ್ತರು ಆದಾಯ ತೆರಿಗೆ ಇಲಾಖೆ ಬೆಂಗಳೂರು ಇವರ ತಂದೆ ಹಣಮಂತರಾಯ ರಾಮಪ್ಪ ಕಲಕೇರಿ ಮತ್ತು ಲಿಂ. ಗಿರಿಜಾದೇವಿ ಎಚ್ ಕಲಕೇರಿ ಅವರ ಸ್ಮರಣಾರ್ಥ ವಿಶೇಷ ದತ್ತಿ ಉಪನ್ಯಾಸ – 317
