ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ಕೂಡಗಿ ಟೌನಸಿಪನ ಬಾಲ ಭಾರತಿ ಪಬ್ಲಿಕ್ ಸ್ಕೂಲ್ ನಲ್ಲಿ “ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ” ಕುರಿತ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಭಾರತ ಸೇವಾದಳ ಜಿಲ್ಲಾ ಸಮಿತಿ ಸದಸ್ಯರಾದ ಅಶೋಕ್ ಗುಡದಿನ್ನಿ, ಶಾಲೆಯ ಪ್ರಾಂಶುಪಾಲ ಸಂದೀಪ್ ಸಮಸೋಲೆ, ಶಿಕ್ಷಕರ ವೃಂದ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಸೇವಾದಳ ಸಂಪನ್ಮೂಲ ವ್ಯಕ್ತಿ ಎಸ್.ಎಲ್. ರಾಠೋಡ ಕಾರ್ಯಾಗಾರದಲ್ಲಿ ಭಾಗವಹಿಸಿದರು.
ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಅವರು ತರಬೇತಿ ನೀಡಿದರು. ಅವರು ರಾಷ್ಟ್ರೀಯ ಏಕತೆ, ಧ್ವಜದ ಗೌರವ ಹಾಗೂ ರಾಷ್ಟ್ರಗೀತೆ ಪಠಿಸುವ ಶಿಷ್ಟಾಚಾರಗಳ ಬಗ್ಗೆ ವಿವರಿಸಿ, ವಿದ್ಯಾರ್ಥಿಗಳಲ್ಲಿ ದೇಶಪ್ರೇಮದ ಮನೋಭಾವವನ್ನು ಬೆಳೆಸುವಂತೆ ಪ್ರೇರಣೆ ನೀಡಿದರು.