Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಕಡ್ಲಿಗರ ಹುಣ್ಣಿಮೆಯಂದು ಕಡಲಿಗೆ ಒಡಲು ತುಂಬುವುದು ಸಂಪ್ರದಾಯ. ಅದಕ್ಕಾಗಿ ಗುರುವಾರ, ರೈತರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.ಬೆಳಿಗ್ಗೆಯಿಂದಲೇ ಹಲವು ಮಹಿಳೆಯರು ಆಗಮಿಸಿ ಕೃಷ್ಣಾ ನದಿಗೆ ಉಡಿ ತುಂಬಿ, ಕೃಷ್ಣೆಗೆ ಅರ್ಪಿಸಿದರು.ಬಾಗಿನ ಅರ್ಪಿಸಿದ ಬಳಬಟ್ಟಿ ರೈತರು;ಗುರುವಾರ ಸಂಜೆ ಬಳಬಟ್ಟಿ ಗ್ರಾಮದ ಹಲವು ರೈತರು ಸೇರಿ ಕೃಷ್ಣೆಗೆ ಬಾಗಿನ ಅರ್ಪಿಸಿದರು. ಮೊದಲೆಲ್ಲಾ ಪ್ರತಿ ವರ್ಷ ಕಡ್ಲಿಗರ ಹುಣ್ಣಿಮೆಯಂದೇ ಸರ್ಕಾರ ಬಾಗಿನ ಅರ್ಪಿಸಲಿ ಬಿಡಲಿ, ರೈತರು ಮಾತ್ರ ಎಲ್ಲರೂ ಸೇರಿ ಬಾಗಿನ ಅರ್ಪಿಸುತ್ತಿದ್ದರು.ಈಗ ಜಲಾಶಯ ಪೂರ್ತಿಯಾದ ಮೇಲೆ ಬಾಗಿನ ಅರ್ಪಿಸುವ ಸಂಪ್ರದಾಯ ಹೆಚ್ಚಿದೆ.ಆದರೆ ಇದಕ್ಕೆ ಅಪವಾದ ಎಂಬಂತೆ ಗುರುವಾರ, ನಿಡಗುಂದಿ ತಾಲ್ಲೂಕಿನ ಬಳಬಟ್ಟಿ ಗ್ರಾಮದ ರೈತರು ಕೃಷ್ಣೆಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ನದಿಯೊಳಗೆ ತೆರಳಿ ಬಾಗಿನ ಅರ್ಪಿಸಿದರು.ವೈ.ಎಲ್. ಗಣಿ, ಎಸ್.ಕೆ. ಹುಗ್ಗಿ,ವೈ.ಕೆ. ಮಾಡಿಗೊಂಡ, ಎಂ.ಎನ್. ತುಪ್ಪದ, ಎನ್.ಎಸ್. ವಿಭೂತಿಮಠ, ಎನ್.ಡಿ. ವಾಲಿಕಾರ, ಎಸ್.ವೈ. ಮಾಳಗೊಂಡ, ಎಸ್.ಬಿ. ಕುಮಟಗಿ,…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಅಪರಾಧ ತಡೆ ಹಾಗೂ ಶಾಂತಿ ಮತ್ತು ಭದ್ರತೆಯ ಸ್ಥಿರತೆಯನ್ನು ಕಾಪಾಡುವಲ್ಲಿ, ಸಾರ್ವಜನಿಕರ ಸುರಕ್ಷತೆಗಾಗಿ ರಾಜ್ಯ ಸರ್ಕಾರವು ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದೆ ಎಂದು ಪಿಐ ಗುರುಶಾಂತ ದಾಶ್ಯಾಳ ಹೇಳಿದರು.ತಾಲೂಕಿನ ನರಸಲಗಿ ಗ್ರಾಮದಲ್ಲಿ ಪೊಲೀಸ್ ಇಲಾಖೆಯು ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮದಡಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಇಲಾಖೆಯ ಮೇಲೆ ಜನರಲ್ಲಿ ನಂಬಿಕೆ ಬೆಳೆಸುವದು. ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ವಿಶ್ವಾಸದ ಸಂಬಂಧವನ್ನು ನಿರ್ಮಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.ಸ್ಥಳೀಯ ಜನರ ಸಹಕಾರದಿಂದ ಶಾಂತಿ, ಸುವ್ಯವಸ್ಥೆ ಕಾಪಾಡಬಹುದು. ಸಾರ್ವಜನಿಕರ ಸಹಕಾರದಿಂದ ಪೊಲೀಸರು ಶಂಕಾಸ್ಪದ ಚಟುವಟಿಕೆಗಳನ್ನು ಬೇಗ ಗುರುತಿಸಿ ತಡೆಗಟ್ಟಲು ಸಾಧ್ಯ. ಜನರು ಪೊಲೀಸ್ ಇಲಾಖೆಯ ಬಗ್ಗೆ ಯಾವುದೇ ಭಯ ಪಡಬಾರದು. ಯುವಜನಾಂಗಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಅವರನ್ನು ಸಕಾರಾತ್ಮಕವಾದ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುವ ಜವಾಬ್ದಾರಿ ಸಮಾಜದ ಮೇಲಿದೆ ಎಂದರು.ಸೈಬರ್ ಅಪರಾಧ ಮತ್ತು ನಕಲಿ ಮಾಹಿತಿ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕಾಡಳಿತದಿಂದ ನಿಜಶರಣ ಹಡಪದ ಅಪ್ಪಣ್ಣನವರ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಉಪತಹಸೀಲ್ದಾರ ಬಿ.ಆರ್.ಪೋಲೇಶಿ ಅವರು ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಹಡಪದ ಸಮಾಜದ ಮುಖಂಡರಾದ ಗುರುಲಿಂಗ ಹಡಪದ ಅವರು ಹಡಪದ ಅಪ್ಪಣ್ಣವರ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಹಡಪದ ಸಮಾಜ ತಾಲೂಕಾಧ್ಯಕ್ಷ ಮಹಾಂತೇಶ ಹಡಪದ, ಕಾರ್ಯದರ್ಶಿ ಬಸವರಾಜ ಕೋರವಾರ, ನಾಗೇಶ ನಾಗೂರ, ಶಿವಾನಂದ ಬಳವಾಟ, ಶಿವಾನಂದ ಹಡಪದ, ಬಸವರಾಜ ಮುತ್ತಗಿ, ಮಲ್ಲು ಇವಣಗಿ, ಕಿರಣ ನಾಗೂರ, ರಾಚಪ್ಪ ಹಡಪದ, ಚನ್ನು ಹಡಪದ, ಮಹೇಶ ನಾಗೂರ, ಸಾತಪ್ಪ ಹಳ್ಳಿ, ತಹಸೀಲ್ದಾರ ಕಾರ್ಯಾಲಯದ ಸಿಬ್ಬಂದಿ ಇತರರು ಇದ್ದರು.
ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ವಿಜಯಪುರ ಜಿಲ್ಲಾ ಮಟ್ಟದ ಸಂವಾದ ಸಭೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ ಹಾಗೂ ನೀರಾವರಿಯಂತಹ ಅನೇಕ ಯೋಜನೆಗಳ ಪೂರಕ ವರದಿಯನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದೆ ಎಂದು ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ವಿಶ್ವಾಸ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರಕಾರ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಆರ್ಥಿಕ ತಜ್ಞ ಪ್ರೊ.ಎಂ.ಗೋವಿಂದರಾವ್ ಆಯೋಗದ ಅಧ್ಯಕ್ಷರನ್ನಾಗಿ ಮಾಡಿ ಆರ್ಥಿಕ ತಜ್ಞರನ್ನೊಳಗೊಂಡ ಸಮಿತಿ ರಚಿಸಿದೆ. ಸಮಗ್ರ ಸಂಯುಕ್ತ ಅಭಿವೃದ್ದಿ ಸೂಚ್ಯಂಕದಲ್ಲಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿ ವರದಿ ಪೂರಕವಾಗಿರಲಿ ಎಂದರು.ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ನೀರಾವರಿಯಂತಹ ಅನೇಕ ಯೋಜನೆಗಳನ್ನು ರೂಪಿಸಿ ಸರ್ಕಾರ ಅನುಷ್ಠಾನಗೊಳಿಸುತ್ತಿದೆ. ಸರ್ಕಾರದ ಯೋಜನೆಗಳ ಲಾಭ ಕಟ್ಟಕಡೆಯ ವ್ಯಕ್ತಿಗೆ ತಲುಪುವಂತಾಗಲು ಅಧಿಕಾರಿಗಳು ಬದ್ದತೆಯಿಂದ ಕಾರ್ಯನಿರ್ವಹಿಸಬೇಕು. ಆರೋಗ್ಯ ವಲಯಕ್ಕೆ ಮತ್ತುಷ್ಟು ಆದ್ಯತೆ ಸೇರಿದಂತೆ ಶಿಕ್ಷಣ…
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ ಉದಯರಶ್ಮಿ ದಿನಪತ್ರಿಕೆ ಹಡಪದ ಅಪ್ಪಣ್ಣನವರ ವಚನಗಳು ಸಾರ್ವಕಾಲಿಕ : ಬಬಲೇಶ್ವರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಿಜಶರಣ ಹಡಪದ ಅಪ್ಪಣ್ಣನವರು ನಮ್ಮ ನಾಡಿನ ಸ್ವತ್ತು ಇದ್ದಂತೆ. ಬಸವಾದಿ ಕಾಲದ ಎಲ್ಲ ಶರಣರು ಸಮ ಸಮಾಜವನ್ನು ನಿರ್ಮಿಸುವಲ್ಲಿ ಬಹಳಷ್ಟು ಶ್ರಮಿಸಿದವರು ಎಂದು ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಗುರುವಾರ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ೧೨ನೇ ಶತಮಾನದ ಶರಣರು ಅಂದಿನ ಸಮಾಜದಲ್ಲಿದ್ದ ಮೂಢನಂಬಿಕೆ, ಮೌಢ್ಯತೆಯನ್ನು ತೊಡೆದು ಹಾಕಲು ವಚನಗಳ ಮೂಲಕ ಸಂದೇಶ ಸಾರಿದರು. ಹಡಪದ ಅಪ್ಪಣ್ಣ ಅವರು ಜ್ಞಾನಿಗಳು, ಇದೇ ಜಿಲ್ಲೆಯವರು. ಅವರ ವಚನಗಳು ಸಾರ್ವಕಾಲಿಕವಾಗಿವೆ ಎಂದು ಅವರು ಹೇಳಿದರು.ಡಿವೈಎಸ್‌ಪಿ ಬಸವರಾಜ ಯಲಿಗಾರ ಅವರು ಮಾತನಾಡಿ, ೧೨ನೇ ಶತಮಾನದ ಶರಣರು ಸಮಾಜದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ. ಮಾನವನಿಗೆ ಗುರುವಿನ ಅಸ್ತಿತ್ವ ಬಹಳ ಮುಖ್ಯ. ಗುರು ಇಲ್ಲದಿದ್ದರೆ ಬದುಕು ಅಪೂರ್ಣವಾಗುತ್ತದೆ. ಗುರುವಿನ ಅಣತಿಯಂತೆ ನಡೆದರೆ ಬದುಕು ಬಂಗಾರವಾಗುತ್ತದೆ. ಎಂದು ಮರೆಗುದ್ದಿ ದಿಗಂಬರೇಶ್ವರ ಮಠದ ತೋಂಟದಾರ್ಯ ಸ್ವಾಮೀಜಿ ಹೇಳಿದರು.ಬಬಲೇಶ್ವರ ತಾಲೂಕ ಚಿಕ್ಕಗಲಗಲಿಯ ಸಾಯಿಬಾಬಾ ಆಶ್ರಮದಲ್ಲಿ ಏರ್ಪಡಿಸಿದ ” ಗುರು ಪೂರ್ಣಿಮಾ ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಸಾಯಿಬಾಬಾ ಆಶ್ರಮದ ಚಮನಸಾಬ ಬಾಬಾ ಅವರು ನೊಂದವರ ಕಣ್ಣೀರೊರೆಸುವ ಗುರು ಆಗಿದ್ದಾರೆ. ಅವರ ಪ್ರೀತಿ ಮತ್ತು ಮಾರ್ಗದರ್ಶನ ಭಕ್ತರಿಗೆ ಒಳಿತು ಮಾಡಲಿ ಎಂದರು.ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿದ ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಗುರುವಿನ ಅವಶ್ಯಕತೆ ಇರುತ್ತದೆ. ತಾಯಿ ಮೊದಲ ಗುರುವಾಗಿ ನಂತರ ಧರ್ಮಗುರು, ವಿಧ್ಯಾಗುರು, ಸ್ನೇಹಗುರು, ಕುಟುಂಬಗುರು, ಸಮಾಜಗುರು ಹೀಗೆ ವಿವಿಧ ರೂಪಗಳಲ್ಲಿ ಗುರುವಿನ ಅಸ್ತಿತ್ವ ಕಾಣುತ್ತೇವೆ. ಭಗವಂತನ ಇರುವಿಕೆ ತೋರುವವನೆ ಗುರು ಅದಕ್ಕಾಗಿ ಗುರು ಶ್ರೇಷ್ಠ ಎನಿಸಿದ್ದಾನೆ ಎಂದರು.ಕೆಂಗಲಗುತ್ತಿ- ಜಂಬಗಿ ಹಿರೇಮಠದ ಪೂಜ್ಯ ಅಡವಿಸಿದ್ದೇಶ್ವರ ಸ್ವಾಮೀಜಿ ಮತ್ತು…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರು ತಾಪಂ ಕಾರ್ಯಾಲಯ ಎದುರು ಧರಣಿ ನಡೆಸಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಾತನಾಡಿ, ಕಾರ್ಮಿಕ ವಿರೋಧಿ ನಾಲ್ಕು ಲೇಬರ್‌ಕೋಡ್‌ಗಳ ಜಾರಿ ಮಾಡಬಾರದು. ₹31 ಸಾವಿರ ವೇತನ ನಿಗದಿಗೊಳಿಸಬೇಕು. ಪಿಂಚಣಿ, ಸೇವಾ ಹಿರಿತನ ಭತ್ಯೆ ಹೆಚ್ಚಳ. ಪಂಚಾಯತಿಗೆ ಒಂದು ಎಸ್.ಡಿ.ಎ., 2ನೇ ಡಿಇಒ ನೇಮಕಾತಿ ಮಾಡಬೇಕು. ಆರೋಗ್ಯ ವಿಮೆ ಜಾರಿಗೊಳಿಸಬೇಕು. ಸ್ವಚ್ಛ ವಾಹಿನಿಯರ ಒಡಂಬಡಿಕೆ ರದ್ದು ಮಾಡಿ, ತರಬೇತಿ ಪಡೆದ ಎಲ್ಲರಿಗೂ ಕಡ್ಡಾಯ ಕೆಲಸಕ್ಕೆ ₹7500 ಗೌರವಧನ ನೀಡಬೇಕು. ಸಿಂಗಲ್ ಚಾಲಕರನ್ನು ಪರಿಗಣಿಸಿ ₹15 ಸಾವಿರ ಗೌರವಧನ ನೀಡಬೇಕೆಂದು ಆಗ್ರಹಿಸಿದರು.ಭೀರಪ್ಪ ಮರನೂರ ಬಸವರಾಜ ಮಾಚಕನೂರ ಶ್ರೀಧರ ಸಪ್ತಸಾಗರ ನಿಂಗವು ಇಲ್ಲೇಳಿ, ಧರೆಪ್ಪ ಕಂಬುಗಿ, ದಯಾನಂದ ಕವಟಗಿ, ಅಮಿತ ತಿರೋಳ, ದೊಡ್ಡವ್ವ ಪೂಜಾರಿ, ಶಕುಂತಲಾ ದೊಡಮನಿ ತೂಗವ್ವ ಛಲವಾದಿ, ಮಹಾದೇವ ಕಾಂಬಳೆ, ಸರಸ್ವತಿ ಕಾಂಬಳೆˌ ಭರತ ಮಾದರ ಬಾಗವ್ವ ಕುರಣಿ, ಶೄತಿ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಗುರು ಶಿಷ್ಯರ ನಡುವಿನ ಅನ್ಯೋನ್ಯ ಸಂಬಂಧವಿದೆ. ಗುರುವಿನ ನೆರವು ಇಲ್ಲದೆ ಏನು ಸಾಧಿಸಲು ಸಾಧ್ಯವಿಲ್ಲ. ನನ್ನ ಗುರು ನವಲಗುಂದ ಹುರಕಡ್ಲಿ ಅಜ್ಜನವರಿಂದ ನಾನು ಪ್ರಭಾವಿತನಾಗಿ ಅವರು ಹೇಳಿಕೊಟ್ಟ ಹಾದಿಯಲ್ಲಿ ಇರುವೆ ಗುರುಪೌರ್ಣಿಮೆಯ ದಿನ ಅವರ ನೆನೆಪಿನ ದಿನ ಕೂಡ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ಶ್ರೀ ಗುರು ಚಂದ್ರಶೇಖರ ಸಂಸ್ಥಾನ ಹಿರೇಮಠ ತದ್ದೇವಾಡಿಯಲ್ಲಿ ಗುರುಪೌರ್ಣಿಮೆಯ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ನಾನು ಕೂಡ ಮಠಗಳಿಂದ ಸಣ್ಣ ವಯಸ್ಸಿನಲ್ಲಿ ಮುಧೋಳ ಶ್ರೀ ಮೃತ್ಯುಂಜಯ ಮಠದಿಂದ ನನ್ನ ಶಿಕ್ಷಣ ಪ್ರಾರಂಭವಾಯಿತು. ಆ ದಿನ ಉತ್ತರ ಕರ್ನಾಟಕದಲ್ಲಿ ವಿದ್ಯಾರ್ಥಿಗಳು ವಸತಿ ಶಾಲೆಗಳು ಇಲ್ಲದೆ ಮಠದಲ್ಲಿ ಇರುವ ದಿನವಾಗಿತು. ಆದ್ದರಿಂದ ಮಠಗಳ ಮೇಲೆ ನನಗೆ ಹೆಚ್ಚು ಗೌರವವಿದೆ.ನಾನು ಸಮಾಜ ಕಲ್ಯಾಣ ಸಚಿವ ಇದ್ದಾಗ ಉತ್ತರ ಕರ್ನಾಟಕದಲ್ಲಿ ವಿದ್ಯಾರ್ಥಿಗಳಿಗೆ ವಸತಿ ನಿಲಯ ಸೌಲಭ್ಯವಿಲ್ಲದ ಪರಿಸ್ಥಿತಿಯನ್ನು ಗಮನಿಸಿ ನಾನು ಆವಾಗ ಸದನದಲ್ಲಿ ವಸತಿ ನಿಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ ಉತ್ತರ ಕರ್ನಾಟಕದಲ್ಲಿ ಮೊಟ್ಟ ಮೊದಲು…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ತಹಶಿಲ್ದಾರರ ಕಚೇರಿ ಯಲ್ಲಿ 12 ನೇ ಶತಮಾನದ ಪ್ರಮುಖ ವಚನಕಾರರು ಹಾಗೂ ಸಮಾಜ ಸುಧಾಕರರು ಹಡಪದ ಅಪ್ಪಣ್ಣನವರ ಜಯಂತಿಯನ್ನು ಆಚರಿಸಲಾಯಿತು.ಪ್ರಮುಖ ಅತಿಥಿಗಳಾಗಿ ಮಾತನಾಡಿದ ನಾಗರಿಕ ವೇದಿಕೆ ಅಧ್ಯಕ್ಷ ರಮೇಶ ಬಂಟನೂರ, 12 ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು , ಮೌಢ್ಯತೆಯನ್ನು ಜನರಿಂದ ದೂರ ಮಾಡುವ ಕೆಲಸ ಹಡಪದ ಅಪ್ಪಣನವರು ಮಾಡಿದರು.ಸಮಾಜವನ್ನು ಕೀಳರಿಮೆಯಿಂದ ನೋಡುವ ಆ ಕಾಲದಲ್ಲಿ ಅದೇ ಸಮಾಜದ ಶ್ರೇಷ್ಠ ವಚನಕಾರರಾದ ಅಪ್ಪಣ್ಣನವರನ್ನು ಬಸವಣ್ಣನವರ ಅನುಭವ ಮಂಟಪದಲ್ಲಿ ಅವರ ಆಪ್ತ ಕಾರ್ಯದರ್ಶಿಗಳಾಗಿ ನೇಮಿಸಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದರು. ಇಂದು ಸಮಾಜದ ಮುಖಂಡರು ಸಹ ಹಡಪದ ಅಪ್ಪಣ್ಣನವರ ಜಯಂತಿಯನ್ನು ಅರ್ಥಪೂರ್ಣವಾಗಿ ವಿಜ್ರಂಭಣೆಯಿಂದ ಆಚರಿಸಿ ಸಮಾಜದ ಸಾಧಕರನ್ನು ಗುರುತಿಸಿ ಗೌರವವಿಸುವ ಕೆಲಸ ಮಾಡಬೇಕು ಎಂದು ಹೇಳಿದರು .ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ನಿರೂಪಿಸಿದರು .ಈ ವೇಳೆ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ಶಂಕರ ಹಡಪದ, ಪಟ್ಟಣ ಪಂಚಾಯತ ಸದಸ್ಯರಾದ ಚಂದ್ರಶೇಖರ ಹಳೇಮನಿ, ಮಲ್ಲಿಕಾರ್ಜುನ ಅಚಲೇರಿ, ಗುರು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಜೋರಾಪುರಪೇಠದಲ್ಲಿರುವ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025 26ನೇ ಸಾಲಿನ ಶಾಲಾ ಸಂಸತ್ತು ಚುನಾವಣೆ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಚುನಾವಣೆ ಮಹತ್ವ ಮತ್ತು ಮತದಾನದ ಹಕ್ಕು ಇದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಶಾಲಾ ಸಂಸತ್ ಚುನಾವಣೆಯನ್ನು ನಡೆಸಲಾಯಿತು.ಶಾಲಾ ವಿದ್ಯಾರ್ಥಿ ಸಂಘದ 9 ಸ್ಥಾನಗಳಿಗೆ ನಡೆದ ಶಾಲಾ ಸಂಸತ ಚುನಾವನಾ ಪ್ರಕ್ರಿಯೆಯನ್ನು ಚುನಾವಣಾ ಆಯೋಗದ ನೀತಿ ಸಂಹಿತೆಯ ಪ್ರಕಾರ ನಡೆಸಲಾಯಿತು. ಶಿಸ್ತು ಹಾಗೂ ಶಾಂತಿಯುತ ಮತದಾನಕ್ಕಾಗಿ ಅರೆ ಪಡೆಯ ಪಾತ್ರವನ್ನು ವಿದ್ಯಾರ್ಥಿನಿಯರು ಅಚ್ಚುಕಟ್ಟಾಗಿ ನೆರವೇರಿಸಿದರು ವಿದ್ಯಾರ್ಥಿನಿಯರು ಗೌಪ್ಯವಾಗಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಮತದಾನ ಮಾಡಿದರು. ಮತದಾನಕ್ಕಿಂತ ಪೂರ್ವದಲ್ಲಿ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಶಾಲೆಗಾಗಿ ತಾವು ಕೈಕೊಳ್ಳುವ ಕಾರ್ಯಗಳನ್ನು ವಿವರಿಸಿ ಮತಯಾಚಿಸಿದರು. ಶಾಲೆಯ ಗೇಟಿನಲ್ಲಿ ನಿಂತು ಅಭ್ಯರ್ಥಿಗಳು ಮತಯಾಚಿಸುವ ದೃಶ್ಯ ನೈಜ ಚುನಾವಣೆಯನ್ನು ನೆನಪಿಸುವಂತಿತ್ತು.ಶಿಕ್ಷಕರಾದ ಸಂತೋಷ್ ಬಾಗ್ಯವಾಡಿ ಪ್ರಿಸೈಡಿಂಗ್ ಅಧಿಕಾರಿಗಳಾಗಿ ಶ್ರೀಮತಿ ಶೀತಲ್ ಪೂಜಾರಿ, ಶ್ರೀ ಕೆ.ಎನ್. ಖಂಡೇಕರ್…
