ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕು ಬಮ್ಮನಜೋಗಿ ತಾಂಡಾಗೆ ಸರಕಾರಿ ಪ್ರೌಢಶಾಲೆ ಮಂಜೂರಾದ ಪ್ರಯುಕ್ತ ಶಾಸಕ ರಾಜುಗೌಡ ಪಾಟೀಲರಿಗೆ ಗ್ರಾಮಸ್ಥರು ಸನ್ಮಾನಿಸಿದರು.
ಮತಕ್ಷೇತ್ರದ ಕುದರಿಸಾಲವಾಡಗಿ ಗ್ರಾಮದ ಶಾಸಕರ ನಿವಾಸಕ್ಕೆ ಶನಿವಾರ ತೆರಳಿದ ಬಮ್ಮನಜೋಗಿ ತಾಂಡಾ ನಿವಾಸಿಗಳು ಶಾಸಕರಿಗೆ ಸನ್ಮಾನ ಕೈಗೊಂಡರು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಬಿ.ಡಿ.ಪಾಟೀಲ ಮಾತನಾಡಿ, ತಾಂಡಾ ಜನತೆಯ ಬಹುದಿನಗಳ ಬೇಡಿಕೆಯಂತೆ ಪ್ರೌಢಶಾಲೆ ಮಂಜೂರು ಮಾಡಿದ್ದು ಬಹಳ ಸಂತೋಷ. ತಾಂಡಾದ ಮಕ್ಕಳು ಎಂಟನೇ ತರಗತಿ ನಂತರ ಶಾಲೆ ಬಿಡುತ್ತಿದ್ದರು. ಇವರ ಉನ್ನತ ಅಭ್ಯಾಸಕ್ಕಾಗಿ ಪ್ರೌಢಶಾಲೆ ಅತ್ಯಗತ್ಯವಾಗಿತ್ತು. ಈ ಪ್ರೌಢಶಾಲೆಯಿಂದ ಸುತ್ತಲಿನ ರಾಮನವಸ್ತಿ, ಇಬ್ರಾಹಿಂಪುರ ಹಾಗೂ ತಾಂಡಾ, ಬಮ್ಮನಜೋಗಿ ಹಾಗೂ ತಾಂಡಾಗಳ ಶಾಲೆಗಳ ಮಕ್ಕಳಿಗೆ ಕಲಿಯಲು ಅನುಕೂಲವಾಗಲಿದೆ ಎಂದರು.
ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷ ಅಶೋಕ ನಾಯಿಕ, ಭೂದಾನಿ ದೇಸು ನಾಯಿಕ, ತಾಲ್ಲೂಕು ಪಂಚಾಯಿತ ಮಾಜಿಸದಸ್ಯ ದಿಲೀಪ್ ರಾಥೋಡ, ಗ್ರಾಮ ಪಂಚಾಯಿತ ಸದಸ್ಯರಾದ ಕಾಮಸಿಂಗ ಚವ್ಹಾಣ, ಶಾಂತು ರಾಥೋಡ, ಬಾಬು ರಾಠೋಡ, ಭೀಮು ನಾಯಕ, ರಾಮು ಪವಾರ, ವಿ.ಕೆ.ರಾಠೋಡ, ಅರವಿಂದ ರಾಠೋಡ, ನೀಲು ಪವಾರ, ಹೆಗ್ಗು ನಾಯಿಕ, ಶಿಕ್ಷಕರಾದ ನಾಗೇಶ ನಾಗೂರ ಎನ್,ಎಸ್.ಹರವಾಳ ಇದ್ದರು.