ಶ್ರೀ ಬಸವೇಶ್ವರ ಕೋ-ಆಪರೇಟಿವ್ಹ್ ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಶ್ರೀಬಸವೇಶ್ವರ ಕೋ-ಆಪರೇಟಿವ್ಹ್ ಬ್ಯಾಂಕು ಎಲ್ಲ ಸದಸ್ಯರ, ಬ್ಯಾಂಕಿನ ಸಿಬ್ಬಂದಿ ಹಾಗೂ ನಿರ್ದೇಶಕರ ಶ್ರಮದಿಂದ ೨೦೨೪-೨೫ ನೇ ಹಣಕಾಸು ವರ್ಷದಲ್ಲಿ ಒಟ್ಟು ರೂ.೩೫,೧೩೨.೩೭ ವ್ಯವಹಾರ ಮಾಡಿ ೧.೧ ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ಶ್ರೀಬಸವೇಶ್ವರ ಕೋ-ಆಪರೇಟಿವ್ಹ್ ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ ಹೇಳಿದರು.
ಪಟ್ಟಣದ ಪಂಚಾಚಾರ್ಯ ಜನಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ಯಾಂಕಿನ ೬೧ ನೇ ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಬ್ಯಾಂಕಿನಲ್ಲಿ ಪ್ರಸ್ತುತ ೩,೨೫೬ ಸಾಮಾನ್ಯ ಸದಸ್ಯರು, ೩,೨೭೨ ಸಹ ಸದಸ್ಯರನ್ನು ಹೊಂದಿದೆ. ಒಟ್ಟು ರೂ. ೩೪೮.೮೨ ಲಕ್ಷ ಶೇರು ಬಂಡವಾಳ, ೪೧೦.೧೩ ಲಕ್ಷ ಕಾಯ್ದಿಟ್ಟ ನಿಧಿ ಹಾಗೂ ಇತರೇ ನಿಧಿಗಳು ಸೇರಿ ಒಟ್ಟು ೯೫೬.೪೯ ಲಕ್ಷ ರೂ. ಹೊಂದಿದೆ. ಗ್ರಾಹಕರಿಂದ ರೂ.೧೦,೩೩೮.೧೯ ಲಕ್ಷ ಠೇವುಗಳು ಹೊಂದಿದೆ. ದುಡಿಯುವ ಬಂಡವಾಳ ರೂ. ೧೨,೦೯೦.೯೭ ಲಕ್ಷ ಇದೆ. ೨೦೨೫ರ ವರ್ಷಾಂತ್ಯಕ್ಕೆ ಸಾಲಗಾರರಿಂದ ಬರತಕ್ಕ ಸಾಲ ಬಾಕಿ ೬,೮೩೧.೬೨ ಲಕ್ಷವಿದೆ. ಇದರ ಪೈಕಿ ಒಟ್ಟು ೮೧ ಸಾಲಗಾರರಿಂದ ಮುದ್ದತ್ ಮೀರಿದ ಬರತಕ್ಕ ಮೊತ್ತ ೩೫೫.೪೨ ಲಕ್ಷವಿದೆ. ಇದು ಶೇ.೫.೨೦ ರಷ್ಟಿದೆ. ಪ್ರಸ್ತಕ ಸಾಲಿನಲ್ಲಿ ರೂ. ೭೫೬.೩೨ ಲಕ್ಷ ಸಾಲ ವಿತರಿಸಲಾಗಿದ. ಅನುತ್ಪಾದಕ ಸಾಲದ ಮೊತ್ತ ೮೫.೮೫ ರಷ್ಟಿದೆ. ಜುಲೈ ೧ ರಿಂದ ಬ್ಯಾಂಕಿನ ಎಲ್ಲ ಸದಸ್ಯ ಸಾಲಗಾರರಿಗೆ ಅಪಘಾತ ವಿಮಾ ರಕ್ಷಣೆ ಹಾಗೂ ಲಾಕರ್ ವಿಮಾ ರಕ್ಷಣೆ ಒದಗಿಸಲಾಗಿದೆ. ಬ್ಯಾಂಕಿನಲ್ಲಿ ಆರ್ಟಿಜಿಎಸ್, ನೆಪ್ಟ್ ಸೌಲಭ್ಯವಿದೆ. ಮುಂದಿನ ದಿನಗಳಲ್ಲಿ ಎಟಿಎಂ, ಯುಪಿಆರ್ ಮೊಬೈಲ್ ಬ್ಯಾಂಕ್ ಸೌಲಭ್ಯ ಆರಂಭಿಸಲಾಗುವದು ಎಂದರು.
ಗ್ರಾಹಕರು ತಾವು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಸಹಕಾರ ನೀಡಬೇಕು.ಸಕಾಲದಲ್ಲಿ ಸಾಲ ಮರುಪಾವತಿ ಮಾಡುವದರಿಂದ ಉಳಿದ ಸದಸ್ಯರಿಗೆ ಸಾಲ ಸೌಲಭ್ಯ ನೀಡಲು ಅನುಕೂಲವಾಗುತ್ತದೆ. ಬ್ಯಾಂಕಿನಿಂದ ಸಿಗುವ ಸೌಲಭ್ಯಗಳನ್ನು ಎಲ್ಲರೂ ಸದ್ಭಳಕೆ ಮಾಡಿಕೊಳ್ಳಬೇಕೆಂದರು.
ಸಾಮಾನ್ಯ ಸಭೆಯನ್ನು ಉದ್ಘಾಟಿಸಿದ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಈ ಬ್ಯಾಂಕು ಎಲ್ಲರ ಸಹಕಾರದಿಂದ ಲಾಭಾಂಶದಲ್ಲಿ ನಡೆಯುತ್ತಿರುವದು ಸಂತಸದಾಯಕ ಸಂಗತಿ. ಆಡಳಿತ ಮಂಡಳಿಯವರು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದರೆ ಸಹಕಾರಿಗಳು ಮಾತ್ರ ಉಳಿಯಲು ಸಾಧ್ಯ. ಈ ಬ್ಯಾಂಕಿನ ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆಯಿಂದ ಪ್ರಗತಿಯಾಗುತ್ತಿರುವದು ಶ್ಲಾಘನೀಯ ಎಂದರು.
ರಾಜ್ಯ ವಿಮಾ ಸಹಕಾರ ಮಹಾಮಂಡಳ ಅಧ್ಯಕ್ಷ ಶಿವನಗೌಡ ಬಿರಾದಾರ, ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಸಿ.ಎಸ್.ತಳ್ಳೊಳ್ಳಿ ಅವರು ಬ್ಯಾಂಕಿನ ವಾರ್ಷಿಕ ವರದಿ ವಾಚಿಸಿದರು.
ವೇದಿಕೆಯಲ್ಲಿ ಜನತಾ ಬಜಾರ ಅಧ್ಯಕ್ಷ ಬಾಲಚಂದ್ರ ಮುಂಜಾನೆ, ಬ್ಯಾಂಕಿನ ಉಪಾಧ್ಯಕ್ಷರಾದ ಬಸವರಾಜ ಗೊಳಸಂಗಿ, ನಿರ್ದೇಶಕರಾದ ಶಂಕರಗೌಡ ಬಿರಾದಾರ, ಉಮೇಶ ಹಾರಿವಾಳ, ಅನಿಲ ದುಂಬಾಳಿ, ಜಗದೀಶ ಕೊಟ್ರಶೆಟ್ಟಿ, ಸಿದ್ರಾಮಪ್ಪ ಕಿಣಗಿ, ಶ್ರೀಶೈಲ ಪತ್ತಾರ, ಶಿವಾನಂದ ಪಟ್ಟಣಶೆಟ್ಟಿ, ನೀಲಪ್ಪ ನಾಯಕ, ಕಮಲಾಬಾಯಿ ತಿಪ್ಪನಗೌಡರ, ಸುರೇಖಾ ಪಡಶೆಟ್ಟಿ, ಯಮನಪ್ಪಗೌಡ ಪಾಟೀಲ, ಭೀಮನಗೌಡ ಪಾಟೀಲ, ರಾಜಶೇಖರ ಗುತ್ತರಗಿಮಠ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಸಿ.ಎಸ್.ತಳ್ಳೊಳ್ಳಿ ಇದ್ದರು. ಎಸ್.ಎಸ್.ಮಂಟೂರ ಪ್ರಾರ್ಥಿಸಿದರು. ಶಂಕರಗೌಡ ಬಿರಾದಾರ ಸ್ವಾಗತಿಸಿದರು. ಲೆಕ್ಕಿಖ ರಾಘವೇಂದ್ರ ಚಿಕ್ಕೊಂಡ ನಿರೂಪಿಸಿದರು. ಜಗದೀಶ ಕೊಟ್ರಶೆಟ್ಟಿ ವಂದಿಸಿದರು.