ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಳಿಗಿಂತ ಶ್ರೇಷ್ಠವಾದ ವೃತ್ತಿ ಎಂದು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಆಡಳಿತ ವಿಭಾಗದ ಉಪಕುಲ ಸಚಿವ ಡಾ.ಡಿ.ಕೆ ಕಾಂಬಳೆ ಹೇಳಿದರು.
ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ರವಿವಾರ ಹಿರಿಯ ವಿದ್ಯಾರ್ಥಿಗಳ ಸಂಘದ ಅಡಿಯಲ್ಲಿ 14 ವರ್ಷದ ವಿದ್ಯಾರ್ಥಿಗಳ ಬೃಹತ್ ಸಮ್ಮಿಲನ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಅವರು ಮಾತನಾಡಿದರು.
ಮಕ್ಕಳ ಬದುಕನ್ನು ರೂಪಿಸುವ ಶಿಕ್ಷಕನಿಗೆ ಸಮಾಜದಲ್ಲಿ ಉನ್ನತವಾದ ಸ್ಥಾನಮಾನವಿದೆ. ಇಂತಹ ವೃತ್ತಿಯನ್ನು ಗೌರವದಿಂದ ನಿರ್ವಹಿಸಿ ಸಮಾಜ ಸುಧಾರಿಸುವ ಮಕ್ಕಳನ್ನು ತಯಾರಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಅಶೋಕ ಹಂಚಲಿ ಮಾತನಾಡಿ ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರ್ಯತೆ ಉಳಿಸಿಕೊಂಡ ವೃತ್ತಿ ಎಂದರೆ ಶಿಕ್ಷಕರ ವೃತ್ತಿ ಎಂದು ಹೇಳಿದರು.
ಪ್ರಾಚಾರ್ಯ ಡಾ. ಎಸ್. ಬೋಳರೆಡ್ಡಿ ಮಾತನಾಡಿ, 2009 ರಿಂದ 2023ರ ವರಗಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರ ಸವಿ ನೆನಪಿನೊಂದಿಗೆ ಉಜ್ವಲ ಭವಿಷ್ಯಕ್ಕೆ ಹಾರೈಸಿದರು. ಕಾರ್ಯಕ್ರಮದಲ್ಲಿ ಸುಮಾರು 410 ಕ್ಕಿಂತ ಹೆಚ್ಚು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಇರಬಾ ಶೆಟ್ಟಿ, ಶಂಕ್ರಮ್ಮಪಾಟೀಲ, ಬಿ.ಎಸ್. ಬಾಪುಗೊಂಡ, ಸುಜಾತಾ ಗೊರನಾಳ, ಪಿ.ಎಂ ರೆಡ್ಡಿ, ರಿಯಾಜ್, ಶೋಭಾ ನಾವಿ ಪಿ.ಆರ್ ಡೋಣೂರ, ಸಜ್ಜನ ಇದ್ದರು.
ನಿರೂಪಣೆಯನ್ನು ಮಲ್ಲಿಕಾರ್ಜುನ್ ಕೆಂಗನಾಳ, ಸ್ವಾಗತವನ್ನು, ಮಾರುತಿ ಪಿ.ಎನ್, ವಂದನಾರ್ಪನೆಯನ್ನು ಶಾರದಾ ಮನಮಿ ನೆರವೇರಿಸಿದರು.