Subscribe to Updates
Get the latest creative news from FooBar about art, design and business.
Author: editor.udayarashmi@gmail.com
ರಾಜ್ಯ ಮಟ್ಟದ ಮಾಳಿ/ ಮಾಲಗಾರ ಸಮಾಜ ನೌಕರರ / ವೃತ್ತಿ ಪರರ ಸಮಾವೇಶದಲ್ಲಿ ಶಾಸಕ ಜಗದೀಶ ಗುಡಗುಂಟಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ನಾವು ಬೆಳೆಯುವುದಲ್ಲದೆ, ನಮ್ಮ ಸುತ್ತ ಮುತ್ತಲಿನವರನ್ನು ಬೆಳೆಸಬೇಕು, ಮನೆಯೇ ಮೊದಲ ಪಾಠಶಾಲೆ ಆಗಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.ನಗರದ ಬಸವ ಭವನದಲ್ಲಿ ಜಮಖಂಡಿ ತಾಲೂಕಾ ಮಾಳಿ ಸಮಾಜ ನೌಕರರ ಸಂಘ ಹಾಗೂ ಜಮಖಂಡಿ ಮಾಳಿ ಸಮಾಜದಿಂದ ಏರ್ಪಡಿಸಿದಕರ್ನಾಟಕ ರಾಜ್ಯ ಮಟ್ಟದ ಮಾಳಿ/ ಮಾಲಗಾರ ಸಮಾಜ ನೌಕರರ / ವೃತ್ತಿ ಪರರ ಸಮಾವೇಶ ಹಾಗೂ 2024/25 ನೇ ಸಾಲಿನ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಸನ್ಮಾನ ಹಾಗೂ ರಾಜ್ಯ / ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ, ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಮಾಳಿ ಸಮಾಜ ಸಣ್ಣ ಸಮಾಜ ಇವರು ಕಾಯಿಪಲ್ಲೆ, ಹೂ ವ್ಯಾಪಾರ ಮಾಡುತ್ತಾ, ಎಲ್ಲ ಸಮಾಜದ ಬಾಂಧವರೊಂದಿಗೆ ಅನೋನ್ಯತೆಯಿಂದ ತಮ್ಮ ಜೀವನ ಸಾಗಿಸುತ್ತಿದ್ದಾರೆ. ತಂದೆ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಸೈಬರ್ ಕ್ರೈಂ, ಮಾದಕ ವ್ಯಸನ ಮತ್ತು ರಸ್ತೆ ಸಂಚಾರಿ ನಿಯಮ ಉಲ್ಲಂಘನೆಯಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಜನರು ತಮಗೆ ಅರಿವಿಲ್ಲದೆಯೇ ಎಪಿಕೆ ಫೈಲ್ ಬಳಕೆಯಿಂದ ಹಣ ಕಳೆದುಕೊಳ್ಳುತ್ತಿದ್ದಾರೆ. ನಿತ್ಯ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಜಾಗೃತರಾಗಬೇಕು ಎಂದು ಡಿವೈಎಸ್‌ಪಿ ಜಮೀರ್ ರೋಷನ್ ಹೇಳಿದರು.ನಗರದ ಕಡಪಟ್ಟಿ ಕ್ರಾಸ್ ಬಳಿಯ ಶ್ರೀ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ ಪೊಲೀಸ್ ಇಲಾಖೆ ಸಹಯೋಗದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ವಿನೂತನ ಉಪಕ್ರಮದೊಂದಿಗೆ ಸದಾ ನಿಮ್ಮ ಸೇವೆಯಲ್ಲಿ ಪೊಲೀಸ್ ಇಲಾಖೆ ಮತ್ತು ಮನೆ-ಮನೆಗೆ ಭೇಟಿ; ಅಹವಾಲು ಸ್ವೀಕಾರ ಕಾಠ್ಯಕ್ರಮದಲ್ಲಿ ಅವರು ಮಾತನಾಡಿದರು.ಪೊಲೀಸ್ ಇಲಾಖೆಯೊಂದಿಗೆ ಜನರಲ್ಲಿರುವ ಭಯದ ವಾತಾವರಣ ಕಡಿಮೆಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರ ಮನೆ-ಮನೆಗೆ ಭೇಟಿ ನೀಡುತ್ತಿದೆ. ಜನರೊಂದಿಗೆ ಮುಕ್ತವಾಗಿ ಚರ್ಚಿಸಿ ತೊಂದರೆಗಳ ಅಹವಾಲು ಸ್ವೀಕಾರ ಮಾಡಲಾಗುತ್ತಿದೆ. ಅಹವಾಲು ಸ್ವೀಕರಿಸಿದ ಕುಟುಂಬದವರಿಗೆ ನ್ಯಾಯ ನೀಡುವ ಕೆಲಸ ಮಾಡಲಾಗುವುದು. ಸಮನ್ವಯ ಸಾಧನೆಗಾಗಿ ಪೊಲೀಸ್ ಇಲಾಖೆ ಈ ವ್ಯವಸ್ಥೆ ಕೈಗೊಂಡಿದೆ ಎಂದರು.ಪಾಸ್ ಪೋರ್ಟ್ಗಾಗಿ, ವೆರಿಫಿಕೇಶನ್, ಕಳ್ಳತನ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುವ ಜನತೆ ಸಮತೋಲಿತ ಮತ್ತು ನೈಸರ್ಗಿಕ ಆಹಾರವನ್ನು ಸೇವಿಸುವ ಮೂಲಕ ದೈಹಿಕ ಸದೃಢತೆಯನ್ನು ಕಾಯ್ದುಕೊಳ್ಳಬೇಕು ಎಂದು ವೈದ್ಯೆ ಡಾ. ಪೂಜಾ ತೊದಲಬಾಗಿ ಹೇಳಿದ್ದಾರೆ.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ. ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ಹಾಗೂ ಎಂ. ಬಿ. ಪಾಟೀಲ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಉದ್ಙಾಟಿಸಿ ಅವರು ಮಾತನಾಡಿದರು.ಯುವ ಜನತೆ ದುಶ್ಚಟಗಳಿಂದ ದೂರವಿರಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಲು ಗುಣಮಟ್ಟದ ಆಹಾರ ಸೇವನೆ, ಕವಾಯತುಗಳನ್ನು ಮಾಡಬೇಕು. ಮಾನಸಿಕ ಒತ್ತಡವನ್ನು ನಿಭಾಯಿಸಲು ಮನೋವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಮೊಬೈಲ್ ವೀಕ್ಷಣೆಯನ್ನು ಕಡಿಮೆ ಮಾಡಬೇಕು. ನಿರಂತರವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು. ಈ ಮೂಲಕ ಹೃದಯದ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದು ಅವರು ಹೇಳಿದರು.ಸಂಸ್ಥೆಯ ವಿದ್ಯಾರ್ಥಿಗಳ ಕಲ್ಯಾಣಾಧಿಕಾರಿ ಸೂರ್ಯಕಾಂತ ಬಿರಾದಾರ…
ಉದಯರಶ್ಮಿ ದಿನಪತ್ರಿಕೆ ದೇವರ ಹಿಪ್ಪರಗಿ: ಮಕ್ಕಳು ತಮ್ಮ ತರಗತಿಗೆ ಅನುಗುಣವಾಗಿ ಗುಣಮಟ್ಟದ ಶಿಕ್ಷಣ ಪಡೆಯುವುದು ಅವರ ಪ್ರಮುಖ ಹಕ್ಕುಗಳಲ್ಲಿ ಒಂದಾಗಿದೆ. ಎಂದು ಸ್ನೇಹ, ಐಎಲ್‌ಪಿ ಸಂಯೋಜಕ ಸಾಗರ ಘಾಟಗೆ ಹೇಳಿದರು.ತಾಲ್ಲೂಕಿನ ಕುದರಗೊಂಡ ಗ್ರಾಮದಲ್ಲಿ ಗುರುವಾರ ವಿದ್ಯಾಸಾಥಿ ಕಲಿಕಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.ತಾಲ್ಲೂಕಿನ ಒಟ್ಟು ೧೫ ಗ್ರಾಮಗಳಲ್ಲಿ ವಿದ್ಯಾಸಾಥಿ ಕಲಿಕಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಶಾಲಾ ಅವಧಿ ಹೊರತುಪಡಿಸಿ ಹೆಚ್ಚಿನ ಕಲಿಕೆ ಒದಗಿಸಲು ಸೇವಾ ಮನೋಭಾವನೆಯ ವಿದ್ಯಾಸಾಥಿ ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಗಿದೆ. ಇವರ ಕಾರ್ಯ ತಳಪಾಯ ಕಲಿಕಾ ಮೌಲ್ಯಮಾಪನ ಮಾಡಿ ಪ್ರತಿ ಕೇಂದ್ರಕ್ಕೆ ೩೦ ಮಕ್ಕಳನ್ನು ಗುರುತಿಸುವುದಾಗಿದೆ. ಇಂದಿನ ದಿನಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬ ಪಾಲಕರ ಜವಾಬ್ದಾರಿಯಾಗಿದೆ. ಶಾಲಾ ಅವಧಿಯನ್ನು ಹೊರತುಪಡಿಸಿ, ಕೇಂದ್ರ ನಿಗದಿಪಡಿಸಿದ ಸಮಯಕ್ಕೆ ಮಕ್ಕಳನ್ನು ಕಳುಹಿಸುವಂತೆ ಪಾಲಕರಿಗೆ ತಿಳಿಸಿದರು.ಶಾಲೆಯ ಸಹಶಿಕ್ಷಕ ಎಸ್.ಎಸ್.ಬಿರಾದಾರ ಮಾತನಾಡಿ ನಾವು ಎಲ್ಲಾ ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಿ ಚಟುವಟಿಕೆ ಮೂಲಕ ಶಿಕ್ಷಣ ಕೊಡುತ್ತೇವೆ ಮತ್ತು ನಾವು ಪ್ರತಿ ಗುರುವಾರ…
ಹಿರಿಯ ಸಹಕಾರಿ ಧುರೀಣ ಶಿವಪ್ಪಗೌಡ ಬಿರಾದಾರ ವಿಷಾದ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕರ್ನಾಟಕ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರುಗಳು ಕೇವಲ ತಮ್ಮ ಮತಕ್ಷೇತ್ರವನ್ನಷ್ಟೇ ಉಸ್ತುವಾರಿ ಮಾಡುವುದರ ಮೂಲಕ ನಾಮಕೇವಾಸ್ತೆ ಜಿಲ್ಲಾ ಉಸ್ತುವಾರಿ ಸಚಿವರ ಹುದ್ದೆ ಹೊಂದುತ್ತಿರುವುದು ವಿಷಾದನೀಯ ಎಂದು ಹಿರಿಯ ಸಹಕಾರಿ ಧುರೀಣ ಶಿವಪ್ಪಗೌಡ ಬಿರಾದಾರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು, ಜಿಲ್ಲಾ ಉಸ್ತುವಾರಿಗಳಾದವರು ತಮ್ಮ ಜಿಲ್ಲೆಯ ಎಲ್ಲ ಮತಕ್ಷೇತ್ರಗಳ ಬಗ್ಗೆ ಗಮನಹರಿಸಿ ಆ ಕ್ಷೇತ್ರಗಳನ್ನು ಅಭಿವೃದ್ದಿ ಪಡಿಸಬೇಕು. ಆದರೆ ವಿಪರ್ಯಾಸವೆಂದರೆ ತಮ್ಮ ಮತ ಕ್ಷೇತ್ರಗಳನ್ನು ಅಷ್ಟೇ ಅಭಿವೃದ್ದಿ ಪಡಿಸುತ್ತಿದ್ದಾರೆ. ಹೀಗಾದರೆ ಜಿಲ್ಲಾ ಉಸ್ತುವಾರಿ ಹುದ್ದೆ ಯಾಕೆಬೇಕು ಎಂದು ಪ್ರಶ್ನಿಸಿದ ಅವರು ವರ್ಷದಲ್ಲಿ ಕನಿಷ್ಠ ತ್ರೈಮಾಸಿಕ ಸಭೆಯನ್ನು ತಾಲೂಕಾ ಮಟ್ಟದಲ್ಲಿ ಕರೆದು ಜನರ ಅಹವಾಲುಗಳನ್ನು ಸ್ವೀಕರಿಸುವಂತಾಗಬೇಕು. ಇದರಿಂದ ಶಾಸಕರಿಗೂ ಕಾರ್ಯದ ಭಾರದ ಒತ್ತಡ ಕಡಿಮೆಯಾಗುತ್ತದೆ ಮತ್ತು ತಾಲೂಕಿನ ಪ್ರಗತಿ ಸಾಧ್ಯವಾಗುತ್ತದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ತಮ್ಮ ಹುದ್ದೆಯ ಘನತೆಯನ್ನು ಹೆಚ್ಚಿಸಿದಂತಾಗುತ್ತದೆ. ಜನರ ತೆರಿಗೆ ಹಣ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಅಜ್ಞಾನವೆಂಬ ಕತ್ತಲೆಯನ್ನು ಹೊಡೆದೊಡಿಸುವ ಜ್ಞಾನದ ಬೆಳಕನ್ನು ಹೊತ್ತಿಸುವ ಗುರುವಿನ ಮಾರ್ಗದರ್ಶನದಲ್ಲಿ ನಡೆದಾಗಲೇ ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ನಿವೃತ್ತ ಮುಖ್ಯಗುರು ಎಸ್.ಎಸ್.ಯಂಕಂಚಿ ಹೇಳಿದರು.ಸಿಂದಗಿ ಪಟ್ಟಣದ ಜ್ಯೋತಿ ನಗರದ ಲಕ್ಷ್ಮಿ ಕಲ್ಯಾಣ ಮಂಟಪ ಸಿಂದಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಆರ್ಯಭಟ ಪ್ರಭಾತ ಪ್ರಾಢ ಶಾಖೆ ವತಿಯಿಂದ ಗುರುಪೂರ್ಣಿಮಾ ನಿಮಿತ್ತ ಹಮ್ಮಿಕೊಂಡ ಗುರು ಉತ್ಸವ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಗುರು ಪೂರ್ಣಿಮಾ ಕೇವಲ ಧಾರ್ಮಿಕ ಮಹತ್ವವನ್ನು ಹೊಂದಿರುವ ದಿನವಲ್ಲ. ಬದಲಾಗಿ ಪ್ರತಿಯೊಬ್ಬ ವ್ಯಕ್ತಿಯ ಬದುಕಿಗೆ ಮಾರ್ಗದರ್ಶನ ಮಾಡಿದ ಗುರುವನ್ನು ಗೌರವಿಸುವ ದಿನವಾಗಿದೆ. ಇಂದಿನ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಮತ್ತು ಶಿಸ್ತು ಬಹಳ ಅತ್ಯವಶಕ. ರಾಷ್ಟಿçÃಯ ಸ್ವಯಖಸೇವಕ ಸಂಘವು ಮಕ್ಕಳಲ್ಲಿ ಈ ಮೌಲ್ಯಗಳನ್ನು ಬೆಳಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ನಮ್ಮ ಲೌಕಿಕ ಸಾಧನೆ, ಅಲೌಕಿಕ ಸಿದ್ದಿಗೂ ಕಾರಣವಾಗಿರುವ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುವ ಹಬ್ಬವನ್ನಾಗಿ ನಮ್ಮ ಸಂಸ್ಕೃತಿಯಲ್ಲಿ ಗುರುಪೂರ್ಣಿಮೆಯನ್ನು ಆಚರಣೆ ಮಾಡಲಾಗುತ್ತಿದೆ ಎಂದರು.ಈ ವೇಳೆ ತಾಲೂಕು…
ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಅನಿಷ್ಟ ಪದ್ಧತಿಯ ನಿರ್ಮೂಲನೆಗೆ ಸಾಕಷ್ಟು ಪ್ರಚಾರಗೊಳಿಸಿ ಜಾಗೃತಿ ಹಾಗೂ ಕಾನೂನಿನ ಅರಿವು ಮೂಡಿಸಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಸೂಚಿಸಿದರು.ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಲ್ಯ ವಿವಾಹ ನಿಷೇಧ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ೨೦೦೫, ನಿಯಮ ೨೦೦೬ ಹಾಗೂ ಪೋಕ್ಸೋ ಕಾಯ್ದೆಯ ಪರಿಶೀಲನಾ ಸಭೆಯ ಅಧ್ಯಕತೆ ವಹಿಸಿ ಮಾತನಾಡಿದ ಅವರು, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಸಮರ್ಪಕ ಜಾರಿ ಒಳಗೊಂಡಂತೆ ಮಹಿಳಾ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೊಂದ ಮತ್ತು ಸಂಕಷ್ಟಕೊಳಗಾಗಿರುವ ಮಹಿಳೆಯರಿಗೆ ಕೌನ್ಸೆಲಿಂಗ್ ಹಾಗೂ ಅಗತ್ಯ ಕಾನೂನು ನೆರವು ಒದಗಿಸುವಂತೆ ಅವರು ಸೂಚನೆ ನೀಡಿದರು.ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಸಂಬಂಧಿಸಿದ ಇಲಾಖೆಗಳು ನಿರಂತರ ಸಭೆ, ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಏರ್ಪಡಿಸುವ ಮೂಲಕ ಸೂಕ್ತ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ವಾರಸುದಾರರ ಖಾತೆ ಬದಲಾವಣೆ ಮಾಡಲು ಪೌತಿ-ವಾರಸಾ ಖಾತೆ ಆಂದೋಲನವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ತಿಳಿಸಿದ್ದಾರೆ.ಮಾಲೀಕತ್ವವು ಮೃತರ ವಾರಸುದಾರರ ಹೆಸರಿಗೆ ಬದಲಾವಣೆಯಾಗದಿದ್ದಲ್ಲಿ, ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಪೌತಿ-ವಾರಸಾ ಸ್ವರೂಪದ ಮ್ಯುಟೇಷನ್ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಿ ಪೌತಿ-ವಾರಸಾ ಖಾತೆ ಆಂದೋಲನ ನಡೆಸಲಾಗುತ್ತಿದೆ. ಅಂತಹ ವಾರಸುದಾರರಿಗೆ ಸರ್ಕಾರದಿಂದ ಸಿಗಬಹುದಾದ ಹಲವಾರು ಪ್ರಯೋಜನಗಳಿಂದ ಹಾಗೂ ಜಮೀನು ಅಭಿವೃದ್ಧಿಗೆ ಸಂಬಂಧಿಸಿದ ಸಾಲ ಸೌಲಭ್ಯ, ಬೆಳೆ ಹಾನಿ ಪರಿಹಾರ, ಬೆಳೆ ವಿಮೆಯಂತಹ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಮೃತರ ವಾರಸುದಾರರ ಮನೆ ಬಾಗಿಲಿಗೆ ಆಗಮಿಸಿ, ಇ-ಪೌತಿ-ವಾರಸಾ ಖಾತೆಯನ್ನು ದಾಖಲಿಸಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ. ವಾರಸುದಾರರು ಅಗತ್ಯ ದಾಖಲೆಗಳಾದ ವಂಶ ವೃಕ್ಷ ಮತ್ತು ಮಹಜರ್ ಅಥವಾ ಪಂಚನಾಮಾ, ಎಲ್ಲ ವಾರಸುದಾರರ ಆಧಾರ್ ಕಾರ್ಡ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು.…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣ ಪಡೆಯಲು ಯಾವುದೇ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಪ್ರತಿ ವಿದ್ಯಾರ್ಥಿಗಳಿಗೂ ಅಗತ್ಯ ನೋಟ್ ಬುಕ್, ಪೆನ್ ಗಳನ್ನು ವಿತರಿಸಲಾಗುತ್ತಿದೆ ಎಂದು ಚಂದ್ರಗಿರಿ ಚಂದ್ರಮ್ಮ ದೇವಸ್ಥಾನದ ಧರ್ಮಾಧಿಕಾರಿ ಚಂದ್ರಕಾಂತ ಸಿರಿಯಪ್ಪ ದೇಸಾಯಿ ಹೇಳಿದರು.ಅವರು ತಮ್ಮ ಸ್ವಂತ ಖರ್ಚಿನಲ್ಲಿ ಇಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯ ೬೫ ವಿದ್ಯಾರ್ಥಿಗಳಿಗೆ ತಲಾ ಎರಡು ನೋಟ್ ಬುಕ್ ೨ ಪೆನ್ ಹಾಗೂ ಮಂಜಪ್ಪ ಹರ್ಡೇಕರ ಪ್ರೌಢಶಾಲೆಯ ೩೦೦ ವಿದ್ಯಾರ್ಥಿಗಳಿಗೆ ತಲಾ ಐದು ನೋಟ್ ಬುಕ್ ಹಾಗೂ ಎರಡು ಪೆನ್ ಗಳನ್ನು ಗುರುವಾರ ವಿತರಿಸಿ ಮಾತನಾಡಿದ ಅವರು, ಈ ಶಾಲೆಯಲ್ಲಿ ಕಲಿತಕ್ಕಂತ ಮಕ್ಕಳಿಗೆ ಅಜೀವ ಪರ್ಯಂತ ಪ್ರತಿವರ್ಷ ಸಹ ಪೆನ್ನು ಪುಸ್ತಕವನ್ನು ನೀಡುವೆ. ಸ್ವ ಸಂತೋಷದಿಂದ ಆತ್ಮ ತೃಪ್ತಿಗಾಗಿ ಈ ಸಮಾಜ ಋಣವನ್ನು ತೀರಿಸಲು ಪ್ರಯತ್ನಿಸುತ್ತಿರುವೆ. ಕಳೆದ ಮೂರು ವರ್ಷಗಳಿಂದ ಈ ನೋಟ್ ಬುಕ್ ವಿತರಿಸುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ನೈಜ ಪ್ರತಿಭಾವಂತ ಮಗುವಿನ ಶಿಕ್ಷಣಕ್ಕೂ ಆರ್ಥಿಕ ಸಹಾಯ ಮಾಡುವುದಾಗಿಯೂ ಅವರು ತಿಳಿಸಿದರು.ಹಿರಿಯ ಶಿಕ್ಷಕ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪರಿಸರ ಸಂರಕ್ಷಿಸುವ ಕೆಲಸದಲ್ಲಿ ನಾವೆಲ್ಲರೂ ಕೈಜೋಡಿಸಬೇಕು. ನಮ್ಮ ಪರಿಸರ ಪ್ರೀತಿಯ ಕೆಲಸ ಮುಂದಿನ ಜನಾಂಗದವರಿಗೆ ಸ್ಪೂರ್ತಿಯಾಗಬೇಕು. ನಾವು ನೆಟ್ಟ ಗಿಡಗಳು ದೊಡ್ಡದಾದಾಗ ಅವುಗಳಿಂದ ಸಿಗುವ ಖುಷಿ ದೊಡ್ಡದು ಎಂದು ಪಿಎಸ್‌ಐ ಸಂಜಯ ತಿಪರೆಡ್ಡಿ ಹೇಳಿದರು.ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಅರಣ್ಯ ಇಲಾಖೆ, ಪುರಸಭೆ, ಹಸಿರು ತೋರಣ ಗೆಳೆಯರ ಬಳಗದ ಸಹಯೋಗದೊಂದಿಗೆ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಮಾತನಾಡಿ, ಪರಿಸರ ಸಂರಕ್ಷಣೆ ವಿಷಯದಲ್ಲಿ ನಾಗರಿಕರಿಗೆ ಎಲ್ಲ ರೀತಿಯ ನೆರವು ನೀಡುತ್ತೇವೆ. ಮುದ್ದೇಬಿಹಾಳ ಪಟ್ಟಣದ ಸೌಂದರ್ಯ ವರ್ಧನೆಗೆ ಜೆಸಿಬಿ, ನೀರು, ಅಲ್ಲಲ್ಲಿ ಸಾರ್ವಜನಿಕ ಆಸನಗಳ ಜೋಡಣೆಗೆ ಆದ್ಯತೆ ನೀಡುತ್ತೇವೆ. “ಅಮೃತ ಮಿತ್ರ” ಯೋಜನೆಯ ಅಡಿಯಲ್ಲಿ ಇನ್ನೂ ಹತ್ತು ಉದ್ಯಾನವನಗಳನ್ನು ತಲಾ ಹತ್ತು ಲಕ್ಷ ರೂ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದರು.ಪುರಸಭೆ ಉಪಾಧ್ಯಕ್ಷೆ ಪ್ರೀತಿ ಶರಣು ದೇಗಿನಾಳ ಮಾತನಾಡಿ, ಮುದ್ದೇಬಿಹಾಳ ಪಟ್ಟಣದಲ್ಲಿ ಮೊದಲು ಗಿಡಗಳು ಕಾಣುತ್ತಿರಲಿಲ್ಲ. ಈಗ ಹಸಿರು ತೋರಣ ಬಳಗದಿಂದಾಗಿ ಗಿಡಗಳು ಬೆಳೆದು…
