ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಸಲಹೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಬಡತನ ಒಂದು ಸಮಸ್ಯೆ ಅಲ್ಲ ಅದನ್ನು ಮೆಟ್ಟಿ ನಿಂತಾಗ ಜೀವನದ ಗುರಿ ಮುಟ್ಟಬಹುದು ಎಂದು ವಿಜಯಪುರದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀ ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕ್ರೀಡೆ, ಸಾಂಸ್ಕೃತಿಕ, ಏನ್.ಎಸ್.ಎಸ್, ಎನ್.ಸಿ.ಸಿ ಮತ್ತು ರೆಡ್ ಕ್ರಾಸ ವಿಭಾಗಗಳು ಹಮ್ಮಿಕೊಂಡಿದ್ದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡುತ್ತಾ, ನಾನು ಬಡತನದಲ್ಲಿ ಬೆಳೆದು ಬಂದವನು. ಒಂದು ಹಾಲಿನ ಕಂಪನಿಯ ಕ್ಯಾನ್ ತೊಳೆಯುತ್ತಿದ್ದ ನಾನು ಅದೇ ಕಂಪನಿಯ ಪರವಾನಗಿಯ ನವೀಕರಣದ ಅಧಿಕಾರಿಯಾಗಿದ್ದು ಹೆಮ್ಮೆಯ ಸಂಗತಿ ಎಂದರು.
ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎಸ್.ಆರ್.ಅವಜಿ ಅವರು ಸರಸ್ವತಿ ಪ್ರತಿಮೆಗೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು.
ಸಂಸ್ಥೆಯ ಹಿರಿಯ ನಿರ್ದೇಶಕ ಬಸವರಾಜ ಯಂಕಂಚಿ ಮಾತನಾಡಿ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವರ್ಷವಿಡಿ ಜರುಗುತ್ತಿರಬೇಕು, ಅಂದಾಗ ಮಾತ್ರ ಈ ಉದ್ಘಾಟನೆಗೆ ಮಹತ್ವ ಬರುತ್ತದೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಎಸ್.ಬಿ.ರಾಠೋಡ ಬಡತನ ಪ್ರದೇಶದಲ್ಲಿರುವ ನಮ್ಮ ವಿದ್ಯಾರ್ಥಿಗಳು ಕೂಡ ಸಾಕಷ್ಟು ಸಾಧನೆ ಮಾಡಿ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಮುಂದೆಯು ಅಲಂಕರಿಸಲಿದ್ದಾರೆ ಎಂದರು.
ನಿರೂಪಣೆಯನ್ನು ಪ್ರೊ.ಎಸ್.ಎಪ್.ಬಿರಾದಾರ, ಪ್ರೊ.ಪೂಜಾ ಬುರಡ, ಪ್ರೊ.ಎಸ್.ಎಸ್.ಪಾಟೀಲ ವಂದನಾರ್ಪಣೆಯನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಇಂಡಿ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ, ಸಂಸ್ಥೆಯ ನಿರ್ದೇಶಕ ಎ. ಆರ್. ಕುಲಕರ್ಣಿ, ಐ.ಕ್ಯೂ.ಎ.ಸಿ ಸಂಯೋಜಕ ಡಾ.ಎಸ್.ಎಸ್.ದೇಸಾಯಿ, ಯೂತ್ ರೆಡ್ ಕ್ರಾಸ್ ಸಂಯೋಜಕ ಪ್ರೊ.ಎಂ.ಕೆ. ಬಿರಾದರ, ಕ್ರೀಡಾ ವಿಭಾಗದ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಎಸ್.ಎಸ್.ಅವಟಿ. ಏನ್.ಸಿ.ಸಿ ಅಧಿಕಾರಿ ಡಾ.ಎಮ್.ಎಸ್.ಮಾಗಣಗೇರಿ, ಎನ್‌ಎಸ್‌ಎಸ್ ಘಟಕ-೧ ಅಧಿಕಾರಿ ಪ್ರೊ. ಎಂ.ಎ.ಜನವಾಡ, ಎನ್‌ಎಸ್‌ಎಸ್ ಘಟಕ-೨ ಅಧಿಕಾರಿ ಪ್ರೊ.ಎ.ಎಸ್.ಪಾಟೀಲ, ಮಲ್ಲಿಕಾರ್ಜುನ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್.ಚವ್ಹಾಣ, ಮಾಹಾವಿದ್ಯಾಲಯದ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.