ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: 2025-26ನೇ ಸಾಲಿನ ಕೊಲ್ಹಾರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಅ.೩೧ ರಂದು ಬೆಳಿಗ್ಗೆ 9:30 ಕ್ಕೆ ಪಟ್ಟಣದ ಶ್ರೀ ಸಂಗಮೇಶ್ವರ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಸವನ ಬಾಗೇವಾಡಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್. ಅವಟಿ ಪ್ರಕಟಣೆಗೆ ತಿಳಿಸಿದ್ದಾರೆ.
ಈ ಬಾರಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಪುರುಷ ಹಾಗೂ ಮಹಿಳೆಯರು ದಸರಾ ಸಿಎಂ ಕಪ್ ಕ್ಯೂ ಆರ್ ಕೋಡ್ ನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕಡ್ಡಾಯವಾಗಿ ತಾವು ಭಾಗವಹಿಸುವ ಕ್ರೀಡೆಗಳನ್ನು ನೋಂದಣಿ ಮಾಡಿಕೊಂಡು ನೋಂದಣಿ (ರಜಿಸ್ಟರೇಷನ್) ಫಾರ್ಮ್ ನೊಂದಿಗೆ ಕಡ್ಡಾಯವಾಗಿ ಭಾಗವಹಿಸತಕ್ಕದು. ಇದರ ಜೊತೆಗೆ ಶಾಲೆ, ಕಾಲೇಜಿನ ಗುರುತಿನ ಚೀಟಿ, ರೇಷನ್ ಕಾರ್ಡ್, ಆಧಾರ ಕಾರ್ಡ್, ಮತದಾರನ ಗುರುತಿನ ಚೀಟಿ, ಸರ್ಕಾರದಿಂದ ಅಧಿಕೃತವಿರುವ ಯಾವುದಾದರೂ ಒಂದು ಗುರುತಿನ ಚೀಟಿಗಳನ್ನು ಹಾಗೂ ಒಂದು ಐಡೆಂಟಿ ಸೈಜ್ ಫೋಟೋ ತರಬೇಕು.
ಪುರುಷ ಹಾಗೂ ಮಹಿಳೆಯರಿಗಾಗಿ ಓಟಗಳು, ಜಿಗಿತಗಳು, ಎಸೆತಗಳು, ರಿಲೇ, ಖೋಖೋ, ಕಬಡ್ಡಿ, ವ್ಹಾಲಿಬಾಲ್, ಥ್ರೋ ಬಾಲ್, ಪುಟ್ಬಾಲ್, ಯೋಗಾಸನ, ಈಜು ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕ್ರೀಡಾಧಿಕಾರಿ ಮೊ.9663297654 ಸಂಪರ್ಕಿಸಬಹುದು.