Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ರಷ್ಯಾ ವಿಶ್ವ ಯುವ ಶೃಂಗ ಸಭೆಯಲ್ಲಿ ವಿಜಯಪುರದ ಶಿಫಾ ಭಾಗಿ

ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ಗೆ ರೂ.3೦ ಲಕ್ಷಕ್ಕೂ ಅಧಿಕ ಲಾಭ

ನಕಲಿ ಕ್ರಿಮಿನಾಶಕ ಔಷಧಿ ಉತ್ಪಾದಿಸುತ್ತಿದ್ದ ಈರ್ವರ ಬಂಧನ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕ್ರೀಡೆಗಳು ಆರೋಗ್ಯ ಭಾಗ್ಯದ ದಿಕ್ಸೂಚಿ :ಸಂಗಮೇಶ ಬಬಲೇಶ್ವರ
(ರಾಜ್ಯ ) ಜಿಲ್ಲೆ

ಕ್ರೀಡೆಗಳು ಆರೋಗ್ಯ ಭಾಗ್ಯದ ದಿಕ್ಸೂಚಿ :ಸಂಗಮೇಶ ಬಬಲೇಶ್ವರ

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಆಲಮಟ್ಟಿಯ ಹಳಕಟ್ಟಿ ಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ

ಉದಯರಶ್ಮಿ ದಿನಪತ್ರಿಕೆ

ಆಲಮಟ್ಟಿ: ಶಿಕ್ಷಣ ರಂಗದಲ್ಲಿ ಕ್ರೀಡಾ ಚಟುವಟಿಕೆಗಳು ಮಹತ್ವದ ಪಾತ್ರವಹಿಸುತ್ತದೆ. ಕ್ರೀಡೆಗಳು ಮನ ತಣಿಕೆಯ ಆಟಗಳಾಗಿವೆ ಅಲ್ಲದೇ ಆರೋಗ್ಯ ಭಾಗ್ಯ ಕುಣಿಕೆಯ  ಕಣಜವೂ ಅಗಿವೆ. ಆ ಕಾರಣ ಕ್ರೀಡೆಗಳಿಗೆ ಶಾಲಾ ಹಂತದಲ್ಲೇ ಪ್ರಾಮುಖ್ಯತೆ ನೀಡಬೇಕಾದ ಅಗತ್ಯತೆ ಇದೆ ಎಂದು ಧಾರವಾಡ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಪ್ರಾಯಿಸಿದರು.
     ಆಲಮಟ್ಟಿಯ ರಾವಬಹದ್ದೂರ ಫ.ಗು.ಹಳಕಟ್ಟಿ ಪ್ರೌಢಶಾಲೆಯಲ್ಲಿ ನಡೆದ ನಿಡಗುಂದಿ “ಎ”ವಲಯಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಾನವನ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆ ಅತ್ಯಗತ್ಯ ಎಂದರು.
    ಜೀವನದಲ್ಲಿ ಎಲ್ಲ ಸಂಪತ್ತುಗಿಂತ ಆರೋಗ್ಯ ಸಂಪತ್ತವೇ ಮೇಲು. ಆರೋಗ್ಯ ಸಂಪತ್ತು ಅತೀ ಶ್ರೇಷ್ಠ ಸಂಪತ್ತು ಎನ್ನುವುದು ಎಲ್ಲರಿಗೂ ತಿಳಿದಿದ್ದರೂ ಈ ಸಂಪತ್ತು ಸಂರಕ್ಷಿಸಿಕೊಳ್ಳಲು ಭಾಗಶಃ ವಿಫಲರಾಗುತ್ತಿದ್ದೇವೆ. ಆರೋಗ್ಯ ಖನಿಜ ಎಷ್ಟೋಂದು ಅಗಾಧ ಎಂಬುದು ಪ್ರತಿಯೊಬ್ಬರ ಅರಿವಿಗೆ ಬಂದದ್ದು ಮಾತ್ರ ಕೋವಿಡ್ ಸಂದರ್ಭದಲ್ಲಿ, ಕೋವಿಡ್ ನಿಂದ ಮೃತನಾದ ವ್ಯಕ್ತಿಯ ಶವವನ್ನು
ಯಾರೂ ಸಂಬಂಧಿಗಳು, ಬಂಧುಗಳು, ಪತ್ನಿ, ಪತಿ, ಮಕ್ಕಳು ಮತ್ತು ಕೆಲಸಗಾರರು
ಮುಟ್ಟದೇ ಹತ್ತಿರವೂ ಬಾರದೇ, ಸುಳಿಯದೇ ಯಂತ್ರಗಳಿಂದ ಶವಸಂಸ್ಕಾರ
ಮಾಡಿರುವ ದುರಂತ, ಹೃದಯ ವಿದ್ರಾವಕ ಘಟನೆಗಳು ಇನ್ನೂ ಎಲ್ಲರ ಕಣ್ಮುಂದೆ ಇದೆ
ಎಂದು ನೆನಪಿಸಿದರು.
      ಮಾಹಿತಿ, ತಂತ್ರಜ್ಞಾನದ ಅವಿಷ್ಕಾರ ನಿತ್ಯ ಜಗದಲ್ಲಿ ವಿಭಿನ್ನವಾಗಿ ನಡೆಯುತ್ತಲೇ ಇವೆ. ಮಕ್ಕಳಿಗಿಂತ ಮಹತ್ವದ್ದು ಬೇರೊಂದಿಲ್ಲ. ಮಕ್ಕಳ ಸಂರಕ್ಷಣಾ ಅವಿಸ್ಕಾರವೇ ನಮಗೆ ದೊಡ್ಡದು. ಮಕ್ಕಳ ಆರೋಗ್ಯ ಭರಿತ ನಗುವೇ ಅಮೃತ ಸಿಂಚನ.ಅವರ ಸಂತಸವೇ ಪರಮಾನಂದ. ಮಗುವಿನ ನಗುವು ನಾಗರಿಕ ಸಮಾಜಕ್ಕೆ ದೊಡ್ಡ ಆಸ್ತಿ, ಮನುಷ್ಯನಿಗೆ ಆಸ್ತಿ ಅಂತಸ್ತು ಮುಖ್ಯವಲ್ಲ, ಸಂಸ್ಕಾರಯುತ ಮಕ್ಕಳಿಂದ ಪಾಲಕ ಸಮೂಹಕ್ಕೆ ಸಂತೃಪ್ತಿ. ಆ ದಿಸೆಯಲ್ಲಿ ಮಕ್ಕಳ ದೈಹಿಕ, ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸುವ ವಿಶೇಷ ಆಸ್ಥೆ ವಹಿಸಬೇಕಾಗಿದೆ. ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸರ್ಕಾರ, ಶಿಕ್ಷಕರು,ಪಾಲಕರು ಹಾಗೂ ಸಮಾಜ ಪ್ರಯತ್ನಿಸಬೇಕು ಎಂದರು. 
     ಆರೋಗ್ಯಕ್ಕೆ ಕ್ರೀಡೆ ಮುಖ್ಯವಾಗಿದ್ದರು ವ್ಯಕ್ತಿಯ ವ್ಯಕ್ತಿತ್ವವನ್ನು ಜಾಗತೀಕರಣವಾಗುವದು ಅವನ ಉತ್ತಮ ಸ್ಪರ್ಧೆ ಎನ್ನುವುದಕ್ಕೆ ಓಲಂಪಿಕ ಕ್ರೀಡೆಯಲ್ಲಿ ಪಿ.ಸಿಂಧು ಅವರನ್ನು ಉದಾಹರಿಸಿದರು.
ಸಂಸ್ಕಾರವುಳ್ಳ “ನಗು,ಮಗು”  ಸಮಾಜದ ಚೈತನ್ಯವಾಗಿದೆ ಎಂದು ಸಂಗಮೇಶ ಬಬಲೇಶ್ವರ ಹೇಳಿದರು.
     ಅಧ್ಯಕ್ಷತೆಯನ್ನು ವಿಶ್ರಾಂತ ಪ್ರಾಚಾರ್ಯ,ಎಸ್ ವಿವಿ ಆಡಳಿತ ಮಂಡಳಿ ಸದಸ್ಯ ಸುರೇಶಗೌಡ ಪಾಟೀಲ ವಹಿಸಿದ್ದರು.
     ಕಾರ್ಯಕ್ರಮದಲ್ಲಿ ತಹಶೀಲ್ದಾರ ಎ.ಡಿ.ಅಮರಾವದಗಿ, ಉಪಮುಖ್ಯ ಅಭಿಯಂತರ ಐ.ಎಲ್.ಕಳಸಾ, ಸರ್ಕಾರಿ ನೌಕರರ ಸಂಘ ಆಲಮಟ್ಟಿ ಯೋಜನಾ ಶಾಖೆ ಅಧ್ಯಕ್ಷ ಸದಾಶಿವ ದಳವಾಯಿ, ಸಹಾಯಕ ಕಾರ್ಯಪಾಲಕ ಅಭಿಯಂತರ ರವಿ ಚಂದ್ರಗಿರಿಯವರ,
ಗುತ್ತಿಗೆದಾರ ಬಸವರಾಜ ಬಾದರದಿನ್ನಿ,ಗ್ರಾಪಂ ಅಧ್ಯಕ್ಷೆ ಕವಿತಾ ಬಡಿಗೇರ, ಕ್ರೀಡಾಕೂಟ ಸಂಘಟನಾ ಕಾರ್ಯದರ್ಶಿ, ಹಿರಿಯ ದೈಹಿಕ ಶಿಕ್ಷಕ ಎಸ್.ಎಚ್.ನಾಗಣಿ, ಭೂ ನ್ಯಾಯ ಮಂಡಳಿ ಸದಸ್ಯ ಮಂಜುನಾಥ ಹಿರೇಮಠ, ಸಿಡಿಪಿಒ ಶಿಲ್ಪಾ ಹಿರೇಮಠ, ನಿಡಗುಂದಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಸ್.ಗಲಗಲಿ, ಸಿಆರ್ ಸಿ ಸುರೇಶ ಹುರಕಡ್ಲಿ, ಬಿ.ಎಸ್.ಅವಟಿ, ಬಿ.ಎಸ್.ಶೀಲವಂತ, ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ,
ಡಾ.ಎಚ್.ಎಸ್.ವಿಕಾಸ, ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್.ಅವಟಿ, ಕ್ರೀಡಾಕೂಟದ ಸಂಘಟನಾ ಅಧ್ಯಕ್ಷ, ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ, ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ,
ಗ್ರಾಪಂ ಮಾಜಿ ಸದಸ್ಯ, ಸಂಪಾದಕ ಶಂಕರ ಜಲ್ಲಿ, ನಿಡಗುಂದಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ತೊರಗಲ್ಲಮಠ, ಹಿರಿಯ ಪತ್ರಕರ್ತ ಜಿ.ಸಿ.ಮುತ್ತಲದಿನ್ನಿ, ಚಂದ್ರಶೇಖರ ಕೋಳೇಕರ, ನೀಲೇಶ ಗಾಂಧಿ, ಅಲಿ ಮಕಾನದಾರ, ತಾಪಂ. ಇಒ ವೆಂಕಟೇಶ ವಂದಾಲ, ಭಾಗ್ಯಶ್ರೀ ಕೊಂಡಿ, ಜಿ.ಸಿ.ದ್ಯಾಮಣ್ಣವರ, ಸುರೇಶ ವಡ್ಜರ, ಕಾರ್ತಿಕ ಪಾಟೀಲ, ಲೋಹಿತ ಚೋಪಡೆ, ಜಿ.ಎಸ್.ಯರವಿನತೆಲಿಮಠ, ಮುಖ್ಯೋಪಾಧ್ಯಾಯ ಎಸ್.ಐ.ಗಿಡ್ಡಪ್ಪಗೋಳ, ಜಿ.ಸಿ.ಮುತ್ತಲದಿನ್ನಿ, ಪ್ರಕಾಶ ಚವ್ಹಾಣ, ಶಿಕ್ಷಣ ಪ್ರೇಮಿ ಬಿ.ವಿ.ಶಿವಯೋಗಿಮಠ, ನಿಜಗುಣ ಶಿವಯೋಗಿ ತಳವಾರ, ಅಲ್ಲಾಭಕ್ಷ ಬಾಗವಾನ,ವಸಂತ ಸೋಮಲು ರಾಠೋಡ, ಅಮರಪ್ಪ ಬಾದವಾಡಗಿ, ವಸಂತ ಬೆಟದೂರ, ಸಿದ್ದು ಕೋರವಾರ,ಆನಂದ ಲಮಾಣಿ ಮೊದಲಾದವರಿದ್ದರು.
ಶಿಕ್ಷಕ ರಮೇಶ್ ವಡ್ಡರ ಕ್ರೀಡಾ ಪ್ರತಿಜ್ಞಾವಿಧಿ
ಬೋಧಿಸಿದರು.
ಕ್ರೀಡಾ ಜ್ಯೋತಿಯ ಉತ್ಸುವಾರಿ ಎಂ .ಜಿ.ದಾನಪ್ಪನವರ ವಹಿಸಿದ್ದರು.
 ಕ್ರೀಡಾಕೂಟದ ಯಶಸ್ವಿಗೆ ನಿಡಗುಂದಿ ತಾಲೂಕಿನ ವಿವಿಧ ಶಾಲೆಗಳ ದೈಹಿಕ ಶಿಕ್ಷಕರು ಸ್ಪಧಾ೯ ನಿಣಾ೯ಯಕರಾಗಿ ಕಾರ್ಯನಿರ್ವಹಿಸಿದರು. ಎಂ.ಎಸ್.ಸಜ್ಜನ, ಪ್ರಕಾಶ ಧನಶೆಟ್ಟಿ, ಟಿ.ಬಿ.ಕರದಾನಿ, ಮಮತಾ ಕರೇಮುರಗಿ,ಪ್ಪಭು ಕಲಗೊಂಜ, ಅಂಬಿಕಾ ಇಟಗಿ, ಡಿ.ಟಿ.ಧನರಾಜ, ಟಿ.ಎಫ್.ದಾಸರ, ಎಂ.ಬಿ.ದಶವಂತ, ಆರ್.ಎಂ.ರಾಠೋಡ,ಎಲ್.ಆರ್.ಸಿಂಧೆ, ಶ್ರೀಧರ ಚಿಮ್ಮಲಗಿ, ಶಾಂತೂ ತಡಸಿ, ಸಚೀನ ಹೆಬ್ಬಾಳ, ಇಬ್ರಾಹಿಂ ಹುನಗುಂದ, ಕವಿತಾ ಮರಡಿ, ಮಂಜುಳಾ ಸಂಗಾಪುರ, ಸರೋಜಾ ಕಬ್ಬೂರ, ಕಾಂಚನಾ ಕುಂದರಗಿ,ವಿದ್ಯಾ ಹಿರೇಮಠ, ಅನು ಪಟೇಲ, ವಿದ್ಯಾ ಮಹೇಂದ್ರಕರ, ರೇಣುಕಾ ಶಿವಣಗಿ, ದಾನಾಬಾಯಿ ಲಮಾಣಿ, ಗೋಪಾಲ ಬಸಪ್ಪ ಬಂಡಿವಡ್ಡರ ಇತರರು ಸಹಕರಿಸಿದರು.
ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಸ್ವಾಗತಿಸಿದರು. ಶಿಕ್ಷಕ ಗುಲಾಬಚಂದ ಜಾಧವ ನಿರೂಪಿಸಿದರು. ಎನ್.ಎಸ್.ಬಿರಾದಾರ ವಂದಿಸಿದರು.

ಗಂಗಾಧರ ಹಿರೇಮಠ ಗೆ ಸನ್ಮಾನ

ಇದೇ ಸಂದರ್ಭದಲ್ಲಿ ಈಚೆಗೆ ಸೇವಾ ನಿವೃತ್ತಿ ಹೊಂದಿದ ಬಹುಮುಖ ಪ್ರತಿಭೆಯ ದೈಹಿಕ ಶಿಕ್ಷಕ ಹಾಗೂ ಯೋಗಪಟು ಗಂಗಾಧರ ಹಿರೇಮಠ ಅವರನ್ನು ಹಳಕಟ್ಟಿ ಶಾಲೆ ಪರವಾಗಿ ಸತ್ಕರಿಸಿ ಗೌರವಿಸಲಾಯಿತು.

ಪಠ್ಯಾಸಕ್ತಿ ಜತೆಗೆ ಕ್ರೀಡಾಸಕ್ತಿಯೂ ಇರಲಿ

  ಕ್ರೀಡಾಲೋಕ ಭಾವೈಕ್ಯತೆಯ ಪ್ರತೀಕವಾಗಿದ್ದು, ಸಾಮರಸ್ಯದ ಹೃತಿಕವಾಗಿದೆ. ಕ್ರೀಡೆಗಳು ಜೀವ ಚೈತ್ರದ ಉಲ್ಲಾಸ, ಖುಷಿ ಭವಭಾವದ ಫಿಟ್ನೆಸ್ ವ್ಯಕ್ತಿತ್ವ ರೂಪಿಸುತ್ತದೆ. ಆ ಹಿನ್ನೆಲೆಯಲ್ಲಿ ಇಂದಿನ ಶಾಲಾ ಯುವ ಮಕ್ಕಳು ಕ್ರೀಡಾ ಆಟೋಟಗಳ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಪಠ್ಯಾಸಕ್ತಿ ಜತೆಗೆ ಕ್ರೀಡಾಸಕ್ತಿಯ ಪ್ರೇಮಭಾವದ ಉನ್ಮಾದೊಂದಿಗೆ ಆರೋಗ್ಯಯುತ ಚೈತನ್ಯ ಕಾಣಬೇಕು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಕರೆ ನೀಡಿದರು.
ಕ್ರೀಡೆಗಳು ಭವಿಷ್ಯತ್ತಿನ ಲವಲವಿಕೆಯ ನಗೆ ಉತ್ಸಾಹಕ್ಕೆ ಸ್ಪೂತಿ೯ಯಾಗಿದೆ. ಕ್ರೀಡಾ ಕೌಶಲ್ಯದ ಸುಗಂಧದಿಂದ ಶಿಕ್ಷಣ ಜ್ಞಾನ ವೃದ್ಧಿಸುತ್ತದೆ. ಕ್ರೀಡೆಗಳಿಗೆ ಜಗಮನ ಸೆಳೆಯಬಲ್ಲ ಶಕ್ತಿಯಿದೆ. ವ್ಯಕ್ತಿಗತ ಸಾಧನೆಯ ಹಿರಿಮೆ ಗರಿಮೆ ಸೃಷ್ಟಿಸಬಲ್ಲವು. ಕ್ರೀಡಾಳುಗಳು ಸೋಲು-ಗೆಲುವಿಗಾಗಿ ಸೆಣಸದೇ ಉತ್ತಮ ಗುಣಮಟ್ಟದ ಕ್ರೀಡಾ ಮನೋಭಾವನೆಯಿಂದ ಆಟಗಳ ಅಭಿರುಚಿ ಬೆಳೆಸಿಕೊಂಡು ದೈಹಿಕ ಮತ್ತು ಮಾನಸಿಕ ಸದೃಢತೆಯಿಂದ ಮಿನುಗಲು ಪ್ರಯತ್ನಿಸಬೇಕು ಎಂದು ಬಬಲೇಶ್ವರ ಸಲಹೆ ನೀಡಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ರಷ್ಯಾ ವಿಶ್ವ ಯುವ ಶೃಂಗ ಸಭೆಯಲ್ಲಿ ವಿಜಯಪುರದ ಶಿಫಾ ಭಾಗಿ

ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ಗೆ ರೂ.3೦ ಲಕ್ಷಕ್ಕೂ ಅಧಿಕ ಲಾಭ

ನಕಲಿ ಕ್ರಿಮಿನಾಶಕ ಔಷಧಿ ಉತ್ಪಾದಿಸುತ್ತಿದ್ದ ಈರ್ವರ ಬಂಧನ!

ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ :ಬಿಜೆಪಿ ಮನವಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ರಷ್ಯಾ ವಿಶ್ವ ಯುವ ಶೃಂಗ ಸಭೆಯಲ್ಲಿ ವಿಜಯಪುರದ ಶಿಫಾ ಭಾಗಿ
    In (ರಾಜ್ಯ ) ಜಿಲ್ಲೆ
  • ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ಗೆ ರೂ.3೦ ಲಕ್ಷಕ್ಕೂ ಅಧಿಕ ಲಾಭ
    In (ರಾಜ್ಯ ) ಜಿಲ್ಲೆ
  • ನಕಲಿ ಕ್ರಿಮಿನಾಶಕ ಔಷಧಿ ಉತ್ಪಾದಿಸುತ್ತಿದ್ದ ಈರ್ವರ ಬಂಧನ!
    In (ರಾಜ್ಯ ) ಜಿಲ್ಲೆ
  • ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ :ಬಿಜೆಪಿ ಮನವಿ
    In (ರಾಜ್ಯ ) ಜಿಲ್ಲೆ
  • ಸೆ.೧೪ ರಂದು ವಾರ್ಷಿಕ ಸರ್ವ ಸಾಧಾರಣ ಸಭೆ
    In (ರಾಜ್ಯ ) ಜಿಲ್ಲೆ
  • ಕ್ರೀಡಾಕೂಟ: ಬಾಲಭಾರತಿ ಶಾಲೆ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ಕೀಳು ಮಟ್ಟದ ರಾಜಕೀಯಕ್ಕೆ ನಾಂದಿ ಹಾಡಿದ ಭೂಸನೂರ
    In (ರಾಜ್ಯ ) ಜಿಲ್ಲೆ
  • ಭಾರತ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿದ ಪ್ರಶಿಕ್ಷಣಾರ್ಥಿಗಳು
    In (ರಾಜ್ಯ ) ಜಿಲ್ಲೆ
  • ನೆಚ್ಚಿನ ಶಿಕ್ಷಕಿಯ ವರ್ಗಾವಣೆಗೆ ಕಣ್ಣೀರಿಟ್ಟ ವಿದ್ಯಾರ್ಥಿಗಳು
    In (ರಾಜ್ಯ ) ಜಿಲ್ಲೆ
  • ರೈತರ ಬೇಡಿಕೆಯಂತೆ ಪರಿಹಾರ ದರ ನಿಗದಿಗೆ ಆಗ್ರಹ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.