ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚೂನಪ್ಪಾ ಪೂಜೇರಿ ಬಣದ ವಿಜಯಪುರ ತಾಲೂಕಾ ಅಧ್ಯಕ್ಷರಾಗಿ ಜಮಖಂಡಿ ಗ್ರಾಮದ ಅನಮೇಶ ಜಮಖಂಡಿ ಹಾಗೂ ಆಹೇರಿ ಗ್ರಾಮದ ಬಸಗೊಂಡಪ್ಪ ತೇಲಿ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿ ರಾಜ್ಯ ಪ್ರಧಾನಕಾರ್ಯದರ್ಶಿ ರಾಹುಲ್ ಕುಬಕಡ್ಡಿ ಹಾಗೂ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಆದೇಶ ಪ್ರತಿ ನೀಡಿ, ಸಂಘದ ತತ್ವ ಸಿದ್ದಾಂತಗಳನ್ನು ತಿಳಿ ಹೇಳಿ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಒದಗಿಸಬೇಕೆಂದು ಮಾತನಾಡಿದರು.
ವಿಜಯಪುರ ಜಿಲ್ಲೆಯಲ್ಲಿ ರೈತರಿಗೆ ನೂರಾರು ಸಮಸ್ಯೆಗಳು ದಿನನಿತ್ಯ ತಾಂಡವಾಡುತ್ತಿವೆ ಅದಕ್ಕಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ನ್ಯಾಯಸಮ್ಮತವಾದ ನಿರ್ಧಾರ ಕೈಗೊಳ್ಳಬೇಕು ಅದರಲ್ಲಿ ಯಾವುದೇ ಜಾತಿ, ಮತ, ಪಕ್ಷ, ಮರೆತು ಜೊತೆಗೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಪ್ರತ್ಯೆಕ ಹಾಗೂ ಪರೋಕ್ಷವಾಗಿ ಬೆಂಬಲ ನೀಡದೇ ಬಡವ ಶ್ರೀಮಂತ ಎಂದು ರೈತರನ್ನು ವಿಂಗಡನೆ ಮಾಡದೇ ರೈತರಿಗೆ ನೈಜ ನ್ಯಾಯ ಒದಗಿಸಬೇಕು ಎಂದರು.
ಅದೇರೀತಿ ತಾಲೂಕಿನಾಧ್ಯಂತ ರೈತ ಸಂಘದ ಪುರುಷ, ಮಹಿಳಾ ಹಾಗೂ ಯುವ ಘಟಕಗಳನ್ನು ಸ್ಥಾಪನೆ ಮಾಡಲು ಇಂದಿನಿAದಲೇ ಜವಾಬ್ದಾರಿ ನೀಡಿ ಯಾವುದೇ ಬೇಧ ಮಾಡದೇ ನ್ಯಾಯ ಒದಗಿಸುವಂತೆ ಮಾಡಬೇಕು ಎಂದರು.
ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ, ಜಿಲ್ಲಾಧ್ಯಕ್ಷ ಸಂಗಮೆಶ ಸಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಜಿಲ್ಲಾ ಕಾರ್ಯಾದ್ಯಕ್ಷ ಪ್ರಕಾಶ ತೇಲಿ, ಸಂಗಪ್ಪ ಟಕ್ಕೆ, ನಜೀರ ನಂದರಗಿ, ಖಾದರ ವಾಲಿಕಾರ, ಬಸವರಾಜ ಮಸೂತಿ, ಅನಮೇಶ ಜಮಖಂಡಿ, ಬಸಗೊಂಡಪ್ಪ ತೇಲಿ, ನಾಗಠಾಣ ಹೋಬಳಿ ಅಧ್ಯಕ್ಷ ರಾಮಸಿಂಗ ರಜಪೂತ ಸೇರಿದಂತೆ ಇತರರು ಇದ್ದರು.