ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ಅನುದಾನಿತ ವಿಶ್ವೇಶ್ವರ ಬಾಲಭಾರತಿ ಶಾಲೆಯಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ, ವಿಶ್ವದ ಬಲಿಷ್ಠ ರಾಷ್ಟ್ರ ಎಂದು ಭಾರತವನ್ನು ಪ್ರಪಂಚದ ಎಲ್ಲಾ ದೇಶಗಳು ತನ್ನತ ನೋಡುವಂತೆ ಮಾಡುವಲ್ಲಿ ನಮ್ಮ ದೇಶದ ಬಾಹ್ಯಾಕಾಶ ವಿಜ್ಞಾನಿಗಳು ಯಶಸ್ವಿ ಚಂದ್ರಯಾನ ವನ್ನು ಸಫಲಗೊಳಿಸಿ ನಮ್ಮ ದೇಶವು ಸಂಶೋಧನೆಯಲ್ಲಿಯೂ ಅಗ್ರಸ್ಥಾನದಲ್ಲಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಪ್ರತಿಯೊಬ್ಬ ಮನುಷ್ಯನ ಆಸೆಯಂತೆ ಚಂದ್ರನಮೇಲೆ ಮನುಷ್ಯ ಹೋಗಬಲ್ಲ ಎಂಬುದಕ್ಕೆ ನಮ್ಮ ಬಾಹ್ಯಾಕಾಶ ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ, ಹಾಗಾಗಿ ವಿದ್ಯಾರ್ಥಿಗಳಾದ ತಾವು ಸಹ ಇಂತಹ ವೈಜ್ಞಾನಿಕ ಅನ್ವೇಷಣೆ ಹಾಗೂ ಸಂಶೋಧನೆಗಳನ್ನು ಮಾಡುವತ್ತ ಬಾಲ್ಯದಿಂದಲೇ ಪ್ರಯತ್ನ ಪಡಬೇಕು ಅದಕ್ಕೆ ಸೂಕ್ತವಾದ ಅವಕಾಶಗಳನ್ನು ಹಾಗೂ ಪ್ರೇರೇಪಣೆ , ಮಾರ್ಗದರ್ಶನ ನಮ್ಮ ಶಾಲೆ ನಿಮಗೆ ನೀಡುತ್ತದೆ. ಮುಂದೊಂದು ದಿನ ವಿಶ್ವದ ವಿಜ್ಞಾನಿಗಳ ಸಾಲಿನಲ್ಲಿ ನಮ್ಮ ದೇಶದ ಪ್ರತಿನಿಧಿತ್ವವನ್ನು ತಮ್ಮಿಂದ ಆಗಬೇಕು ಎಂದರು. ಈ ವೇಳೆ ಕುಮಾರಿ ಸಮೃದ್ಧಿ ಸಗಣಾಚಾರಿ ಮಾತನಾಡಿ, ಇಂದು ನಮ್ಮ ಶಾಲೆಯಲ್ಲಿ ವಿಶ್ವ ಅಂತರಿಕ್ಷ ದಿನಾಚರಣೆಯನ್ನು ನಮಗೆ ಕುತೂಹಲಕಾರಿ ಬಾಹ್ಯಾಕಾಶದ ಉಡಾವಣೆ ದಿಂದ ಹಿಡಿದುಕೊಂಡು ಚಂದ್ರನ ಭೂಮಿಯನ್ನು ತಲುಪಿ ಅಲ್ಲಿಯ ಭೌಗೋಳಿಕವಾಗಿ ಅಂಶಗಳನ್ನು ರವಾನಿಸುವವರೆಗಿನ ಸಂಪೂರ್ಣ ಮಾಹಿತಿಯನ್ನು ವಿಡಿಯೋದ ಮುಖಾಂತರ ನಮ್ಮ ಮುಖ್ಯ ಗುರುಗಳು ನಮಗೆ ತಿಳಿಸಿಕೊಟ್ಟಿದ್ದಾರೆ ಹಾಗಾಗಿ ನಾನು ಇಂದಿನಿಂದಲೇ ವಿಜ್ಞಾನದ ವಿಷಯಗಳ ಅನ್ವೇಷಣೆಗೆ ಪ್ರಾರಂಭಿಸುತ್ತೇನೆ ಎಂದರು.
ಈ ವೇಳೆ ಶಿಕ್ಷಕರಾದ ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಸುವರ್ಣ ಸಾರಂಗಮಠ, ಲಕ್ಷ್ಮೀಬಾಯಿ ಹಳೇಮನಿ, ಸೀತಾ ಆರೇಶಂಕರ, ಸರುಬಾಯಿ ಬಂಡಗರ, ಸುನೀತಾ ಗುಂಡದ, ವೀಣಾ ರಾಂಪೂರಮಠ, ರಕ್ಷೀತಾ ಹಡಪದ ಹಾಗೂ ಮಕ್ಕಳು ಉಪಸ್ಥಿತರಿದ್ದರು