ಸೆ.೪ ರಂದು ಚಿಮ್ಮಡದಲ್ಲಿ ನಡೆಯಲಿರುವ ಶ್ರೀ ಪ್ರಭುಲಿಂಗೇಶ್ವರ ಜಾತ್ರೆ
ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಈ ಭಾಗದಲ್ಲಿ ಕಿಚಡಿ ಜಾತ್ರೆಯಂದೇ ಪ್ರಸಿದ್ದಿ ಪಡೆದ ಚಿಮ್ಮಡ ಶ್ರೀ ಪ್ರಭುಲಿಂಗೇಶ್ವರ ಜಾತ್ರೆಯನ್ನು ಈ ಬಾರಿ ವಿಶಿಷ್ಟ ರೀತಿಯಲ್ಲಿ ಅಧ್ದೂರಿಯಿಂದ ಆಚರಿಸಲು ಸೇವಕರ ಸಭೆಯಲ್ಲಿ ನಿರ್ಧರಿಸಲಾಯಿತು.
ಸ್ಥಳಿಯ ವಿರಕ್ತಮಠದ ಚನ್ನಬಸವೇಶ್ವರ ಸಭಾ ಮಂಟಪದಲ್ಲಿ ಆಯೋಜಿಸಲಾಗಿದ್ದ ಜಾತ್ರಾ ಸೇವಾಕಾರ್ಯ ಪ್ರಾರಂಭೋತ್ಸವ ಸಭೆಯ ಸಾನಿಧ್ಯವಹಿಸಿದ್ದ ಶ್ರೀ ಪ್ರಭು ಮಹಾಸ್ವಾಮಿಗಳು ಮಾತನಾಡಿ ಗ್ರಾಮದ ಎಲ್ಲ ಸಮುದಾಯಗಳ ಪ್ರತಿ ಕುಟುಂಬದ ಸದಸ್ಯರು ತಾವು ಸಲ್ಲಿಸುತಿದ್ದ ಪಾರಂಪರಿಕ ಸೇವೆಯನ್ನು ಮರೆಯಬಾರದು ಜಾತ್ರೆಯು ಪ್ರಸಿದ್ದಿ ಪಡೆಯುತಿದ್ದಂತೆಯೇ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದರಿಂದ ಭಕ್ತರಿಗೆ ಯಾವುದೇ ತರಹದ ತೊಂದರೆಯಾಗದಂತೆ ನಾವೆಲ್ಲ ನೋಡಿಕೊಳ್ಳಬೇಕಾಗಿದೆ. ಕಿಚಡಿ ಪ್ರಸಾದವನ್ನೂ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸ ಬೇಕಾಗಿದೆ, ಪ್ರಸಾದದ ಗುಣಮಟ್ಟವನ್ನೂ ಕಾಪಾಡಬೇಕಾಗಿದೆ, ಹಾಗೂ ಎಲ್ಲ ಭಕ್ತಾದಿಗಳಿಗೆ ಮುಟ್ಟುವಂತೆ ಸೇವಕರು ನೋಡಿಕೊಳ್ಳಬೇಕಾಗಿದೆ ಎಂದರು.
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪ್ರಭು ಪಾಲಭಾವಿ ಮಾತನಾಡಿ, ಜಾತ್ರೆ ಮುಗಿಯುವವರೆಗೆ ಗ್ರಾಮದ ಪ್ರತಿಯೊಬ್ಬರು ಪ್ರಭುವಿನ ಸೇವಕರಾಗಿ ವ್ಯವಸ್ಥಿತವಾಗಿ ದುಡಿದು ಜಾತ್ರೆಯನ್ನು ಯಶಸ್ವಿಗೊಳಿಸಿ ಪ್ರಭುವಿನ ಕೃಪೆಗೆ ಪಾತ್ರರಾಗಬೇಕು, ಈ ಬಾರೀಯೂ ದೇಣಿಕೆ ಮೊತ್ತ ಹೆಚ್ಚಿಸಲಾಗಿಲ್ಲ ಎಂದರು.
ಜಾತ್ರೆಯನ್ನು ಯಶಸ್ವಿಗೊಳಿಸುವ ಕುರಿತು ಹಲವಾರು ಯುವಕರು ಸೂಕ್ತ ಸಲಹೆಗಳನ್ನು ನೀಡಿದರು.
ಪ್ರಮುಖರಾದ ರಾಮಣ್ಣ ಮುಗಳಖೋಡ, ಬಾಳಪ್ಪ ಹಳಿಂಗಳಿ, ರಾಮಣ್ಣ ಬಗನಾಳ, ಬಿ.ಎಸ್. ಪಾಟೀಲ, ಗುರಲಿಂಗಪ್ಪಾ ಪೂಜಾರಿ, ಶಂಕರ ಬಟಕುರ್ಕಿ
ಬೀರಪ್ಪಾ ಹಳೆಮನಿ, ಶಂಕರ ಪಾಟೀಲ, ಅಶೋಕ ಧಡೂತಿ, ಉಮೇಶ ಪೂಜಾರಿ, ಚಂದ್ರಕಾಂತ ಜಾಡಗೌಡರ, ಗುರಪ್ಪಾ ಬಳಗಾರ, ಪ್ರಭು ನೇಸೂರ, ದುಂಡಪ್ಪಾ ಪಾಟೀಲ, ರಾಚಯ್ಯ ಮಠಪತಿ, ಬಸವರಾಜ ಕುಂಚನೂರ, ವಿಜಯಕುಮಾರ ಪೂಜಾರಿ
ಸೇರಿದಂತೆ ಹಲವಾರು ಜನ ಪ್ರಮುಖರು ಸೇರಿದಂತೆ ಗ್ರಾಮದ ಎಲ್ಲ ಸಮುದಾಯಗಳ ಸಾವಿರಾರು ಜನ ಸೇವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.