Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಜಿಲ್ಲೆಯ ಕೈಮಗ್ಗ ನೇಕಾರರಿಗೆ ೨೦೨೫-೨೬ನೇ ಸಾಲಿಗೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಸೌಲಭ್ಯ ಒದಗಿಸಲಾಗುತ್ತಿದ್ದು, ಆಸಕ್ತ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.ಸಾಲ ಸೌಲಭ್ಯ ಪಡೆಯಲಿಚ್ಛಿಸುವ ಕೈಮಗ್ಗ ನೇಕಾರರು ಅರ್ಜಿಗಳನ್ನು ಕೈಮಗ್ಗ ಮತ್ತು ಜವಳಿ ಇಲಾಖೆ ವಿಜಯಪುರ ಕಚೇರಿಯಿಂದ ಪಡೆದು, ಭರ್ತಿ ಮಾಡಿ, ಅರ್ಜಿಯೊಂದಿಗೆ ಕೇಂದ್ರ ಸರ್ಕಾರ ನೀಡಿರುವ ನೇಕಾರರ ಪೆಹಚಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ರೇಷನ್ ಕಾರ್ಡ್, ಆಧಾರ ಕಾರ್ಡ್, ಆಧಾರ ನಂಬರ್ ಸೀಡ್ ಇರುವ ಬ್ಯಾಂಕ್ ಪಾಸ್ ಬುಕ್, ಭಾವಚಿತ್ರದಂತಹ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಜುಲೈ ೩೦ರೊಳಗೆ ಸಲ್ಲಿಸಬೇಕು.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಕಟ್ಟಡ, ಶಿಕಾರಖಾನಾ, ಸ್ಟೇಶನ್ ಬ್ಯಾಕ್ ರೋಡ, ವಿಜಯಪುರ ಇವರನ್ನು ಸಂಪರ್ಕಿಸುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯ ವತಿಯಿಂದ ಪತ್ರಕರ್ತರಿಗೆ ಆರು ವಿಷಯಗಳ ಕುರಿತ ಫೆಲೋಷಿಪ್‌ಗೆ ಅರ್ಜಿ ಆಹ್ವಾನಿಸಲಾಗಿದೆ.ಅಕಾಡೆಮಿಯ ಸಾಮಾನ್ಯ ಆಯವ್ಯಯದಡಿ ಎರಡು, ಮಹಿಳಾ ಆಯವ್ಯಯದಡಿ ಎರಡು ಹಾಗೂ ಪರಿಶಿಷ್ಟ ಜಾತಿ ಉಪಯೋಜನೆಯಡಿ ಒಂದು ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಒಂದು ಫೆಲೋಷಿಪ್ ನೀಡಲಾಗುವುದು. ಫೆಲೋಷಿಪ್ ಅವಧಿ ೬ ತಿಂಗಳು.ಕನಿಷ್ಠ ಐದು ವರ್ಷ ಸೇವಾನುಭವ ಹೊಂದಿರುವ, ಕನಿಷ್ಠ ೩೦ ವರ್ಷದಿಂದ ೫೦ ವರ್ಷ ವಯೋಮಿತಿಯ ಪತ್ರಕರ್ತರು ಫೆಲೋಷಿಪ್‌ಗೆ ಅರ್ಜಿ ಸಲ್ಲಿಸಬಹುದು. ಪತ್ರಕರ್ತರು ಪದವೀಧರರಾಗಿರಬೇಕು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳು ಹಾಗೂ ಉಪಗ್ರಹ ಸುದ್ದಿವಾಹಿನಿಗಳಲ್ಲಿ ಕಾರ್ಯನಿರ್ವಹಿಸುತ್ತಿರಬೇಕು. ಈ ಕುರಿತು ಸಂಪಾದಕರ ದೃಢೀಕರಣ ಪತ್ರ ಸಲ್ಲಿಸಬೇಕು.ಫೆಲೋಷಿಪ್‌ನ ವಿಷಯಗಳು ಈ ಕೆಳಗಿನಂತಿವೆ೧. ಬಾಲ್ಯವಿವಾಹ, PಔಅSಔ, ಮರ್ಯಾದೆಗೇಡು ಹತ್ಯೆ- ಮಾಧ್ಯಮ ದೃಷ್ಟಿಕೋನ೨. ಕೃಷಿ ಸಂವಹನ- ಒಂದು ಅಧ್ಯಯನ೩. ಕಲ್ಯಾಣ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ೪. ಬುಡಕಟ್ಟು ಕಾಯ್ದೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ- ಮಾಧ್ಯಮ ನೋಟ೫. Role…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರ ವತಿಯಿಂದ ಹಮ್ಮಿಕೊಳ್ಳಲಾದ ಯುವ ಕವಿಗೋಷ್ಠಿಗೆ ವಿಜಯಪುರ ಜಿಲ್ಲೆ, ಸಿಂದಗಿ ತಾಲೂಕಿನ ಯುವಕವಿ ಸಾಯಬಣ್ಣ ಮಲ್ಲಪ್ಪ ಮಾದರ ಆಯ್ಕೆಯಾಗಿದ್ದಾರೆ.ದಿನಾಂಕ ೨೧-೦೭-೨೦೨೫ ರಂದು ಸೋಮವಾರ ಬೆಳಗ್ಗೆ ೧೦. ೩೦ ಗಂಟೆಗೆ ಕನ್ನಡ ಭವನ ಬೆಳಗಾವಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಬಡವರು, ಕೂಲಿಕಾರ್ಮಿಕರು, ಆರ್ಥಿಕ ದುರ್ಬಲರ ಹಸಿವು ನೀಗಿಸುವ ಸದುದ್ದೇಶದಿಂದ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ ಎಂದು ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.ಪಟ್ಟಣದ ಬಸ್ ನಿಲ್ದಾಣದಲ್ಲಿ ಸುಮಾರು 82 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ ಶುಕ್ರವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದು ಬಹು ಜನರಿಗೆ ವರದಾನವಾಗಲಿದೆ, ನವಕರ್ನಾಟಕ ನಿರ್ಮಾಣಕ್ಕಾಗಿ ಪಂಚ ಗ್ಯಾರಂಟಿಗಳನನ್ನು ಅನುಷ್ಠಾನಕ್ಕೆ ತರುವ ಮೂಲಕ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಪ್ರಮುಖರಾದ ಮಾಜಿ ಜಿಪಂ ಅಧ್ಯಕ್ಷೆ ಸಿದ್ದನಗೌಡ ಪೊಲೀಸ್ ಪಾಟೀಲ, ಬಾಬುಗೌಡ ಮಾಲಿ ಪಾಟೀಲ್, ವಾಮನರಾವ್ ದೇಶಪಾಂಡೆ, ಬಾಪುಗೌಡ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿಗೌಡ ಮಾಲಿ ಪಾಟೀಲ್, ಶಹಾಪುರ ಬ್ಲಾಕ್ ಅಧ್ಯಕ್ಷ ಶಿವಮಹಾಂತ ಸಾಹು ಚಂದಲಾಪುರ, ಕೆಂಭಾವಿ ಬ್ಲಾಕ್ ಅಧ್ಯಕ್ಷ ಬಸನಗೌಡ ಹೊಸ್ಮನಿ ಯಾಳಗಿ…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಪ್ರತಿಯೊಬ್ಬ ವ್ಯಕ್ತಿಯು ತನ್ನ ಬದುಕಿನಲ್ಲಿ ಪಾಲಕರ ಹಾರೈಕೆ, ಸ್ನೇಹಿತರೊಂದಿಗೆ ಆಟ ಪಾಠ, ವಿದ್ಯೆ, ಉದ್ಯೋಗ, ಸಾಂಗತ್ಯ ಮಕ್ಕಳು ಎಂದು ತನ್ನ ಬದುಕಿನಲ್ಲಿ ಹಲವಾರು ಮಜಲುಗಳನ್ನು ಕಾಣುತ್ತಾನೆ. ಎಷ್ಟೋ ಬಾರಿ ಔದ್ಯೋಗಿಕವಾಗಿ ಆರ್ಥಿಕವಾಗಿ, ಉನ್ನತ ಸ್ಥಾನಕ್ಕೆ ಹೋದಾಗ ಆತ ಕೆಲ ಸಂಗತಿಗಳನ್ನು ಮರೆತುಬಿಡುತ್ತಾನೆ. ಎಲ್ಲವೂ ತಾನೇ ತನ್ನಿಂದ ಎಂಬ ಅಹಂಭಾವ ಆತನಲ್ಲಿ ಉಂಟಾಗುತ್ತದೆ. ಅಂತಹ ಸಮಯದಲ್ಲಿ ಆತ ನೆನಪಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳು ಹೀಗಿವೆ.ತನ್ನನ್ನು ಬೆಳೆಸಿದ್ದು ತನ್ನ ಪಾಲಕರು. ತನ್ನೆಲ್ಲ ಬೇಕು ಬೇಡಗಳನ್ನು ಅವಶ್ಯಕತೆಗಳನ್ನು ಪೂರೈಸಿದ್ದು ಪಾಲಕರು. ಹಗಲು ರಾತ್ರಿ ತಾವು ಎಚ್ಚರವಿದ್ದು ಮಕ್ಕಳನ್ನು ಬೆಳೆಸಿದವರು ತನ್ನ ಪಾಲಕರು. ತಮ್ಮ ಕಷ್ಟಗಳನ್ನು ತಮಗೆ ಮಾತ್ರ ಇಟ್ಟುಕೊಂಡು ಮಕ್ಕಳಿಗೆ ಸುಖವನ್ನು ಧಾರೆ ಎರೆದವರು. ಮಕ್ಕಳ ಇಚ್ಚಿಸಿದ ಎಲ್ಲವನ್ನು ತಂದುಕೊಟ್ಟವರು ಅವರ ಪಾಲಕರು. ಮನುಷ್ಯನ ಮೂಲಭೂತ ಅವಶ್ಯಕತೆಗಳಾದ ಆಹಾರ, ಬಟ್ಟೆ, ಸೂರು ಮತ್ತು ವಿದ್ಯೆ ದಯಪಾಲಿಸಿ ತನ್ನ ಕಾಲ ಮೇಲೆ ತಾನು ನಿಲ್ಲುವಂತೆ ಬೆಳೆಸಿದವರು ಅವರೇ…

Read More

ಉದಯರಶ್ಮಿ ದಿನಪತ್ರಿಕೆ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರುಮುಖ್ಯಮಂತ್ರಿಗಳು ಸನ್ಮಾನ್ಯರೇ,ಬಸವಣ್ಣ ಸಾಂಸ್ಕೃತಿಕ ನಾಯಕನೆಂದು ತಮ್ಮ ಸರಕಾರ ಘೋಷಿಸಿ ಈಗ ಒಂದು ವರ್ಷವಾಗುತ್ತಾ ಬಂತು. ಈ ಸಂದರ್ಭದಲ್ಲಿ ಸಮಾಜವಾದಿ ಮತ್ತು ಬಸವಾಯತರಾದ ತಮಗೆ ಅನಂತ ಭಕ್ತಿ ಪೂರ್ವಕ ಶರಣಾರ್ಥಿಗಳು.ಹನ್ನೆರಡನೆಯ ಶತಮಾನದ ಸಮಗ್ರ ಪರಿಪೂರ್ಣ ಕ್ರಾಂತಿಯನ್ನು ಇಂದು ಇಡೀ ಜಗತ್ತೇ ಮಾದರಿ ಎಂದು ಕೊಂಡಾಡುತ್ತಿದೆ. ಆ ನಿಟ್ಟಿನಲ್ಲಿ ಬಸವಣ್ಣನವರ ವಚನ ಸಾಹಿತ್ಯ ಪ್ರಸಾರ ಶರಣರ ಸ್ಮಾರಕಗಳ ಸಂರಕ್ಷಣೆ, ಬೇರೆ ಬೇರೆ ವಿಶ್ವ ವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಸ್ಥಾಪನೆ, ವಚನಸಾಹಿತ್ಯ ಪರಿಷ್ಕರಣೆ ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಸರಕಾರವು ಗಮನಕೊಟ್ಟು ವೈಚಾರಿಕ ಪುರುಷ ಸಮಾಜವಾದಿ ಬಸವಣ್ಣನವರ ತತ್ವಗಳನ್ನು ಇಂದು ಜಗತ್ತಿನ ಎಲ್ಲ ರಾಷ್ಟಗಳಿಗೆ ತಲುಪಿಸಬೇಕಾದದ್ದು ತಮ್ಮ ಆದ್ಯ ಕರ್ತವ್ಯ ಮತ್ತು ಹೆಮ್ಮೆಯ ವಿಷಯವಾಗಿದೆ.1 ) ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯಕ್ಕೆ ಇಲ್ಲಿಯವರೆಗೂ ಬಸವೇಶ್ವರ ವಿಶ್ವ ವಿದ್ಯಾಲಯವೆಂದು ನಾಮಕರಣ ಮಾಡಿಲ್ಲ. ಕಾರಣ ಜಮಖಂಡಿಯಲ್ಲಿರುವ ಬಾಗಲಕೋಟೆ ವಿಶ್ವ ವಿದ್ಯಾಲಯಕ್ಕೆ ಜಗಜ್ಯೋತಿ ಶ್ರೀ ಬಸವೇಶ್ವರ ವಿಶ್ವ ವಿದ್ಯಾಲಯವೆಂದು ನಾಮಕರಣ ಮಾಡಲು ಕಳಕಳಿಯ…

Read More

ಪ್ರಗತಿಪರ ಸಂಘಟನೆಗಳ ಚಡಚಣ ತಾಲೂಕು ಸಮೀತಿಯ ಉಮರಜ ಗ್ರಾಮದ ಸದಸ್ಯರಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನ ಉಮರಜ ಗ್ರಾಮ ಪಂಚಾಯತಿಯಲ್ಲಿ ಸುಮಾರು ೬೦ ಲಕ್ಷ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳ ಚಡಚಣ ತಾಲೂಕು ಸಮೀತಿಯ ಉಮರಜ ಗ್ರಾಮದ ಸದಸ್ಯರು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.ಉಮರಜ ಪಂಚಾಯತಿ ಅಧಿಕಾರಿ ಪಿಡಿಓ ಎಲ್ ಎಫ್ ನದಾಫ ಮತ್ತು ಗ್ರಾ.ಪಂ.ಅಧ್ಯಕ್ಷ ಕಂವುಸನ ಇಬ್ರಾಹಿಮ್ ಸಾವಳೆ ಇವರಿಬ್ಬರೂ ಕೂಡಿ ೨೦೨೪-೨೫ ನೇ ಸಾಲೀನ ೧೫ ನೇ ಹಣಕಾಸು ಯೋಜನೆಯ ವಿವಿಧ ಕಾಮಗಾರಿಗಳ ಸುಮಾರು ೬೦ ಲಕ್ಷ ರೂಪಾಯಿ ಹಣವನ್ನು ಅಭಿವೃದ್ಧಿ ಕೆಲಸ ಮಾಡಿಸದೆ ಹಣ ಗುಳುಂ ಮಾಡಿದ್ದಾರೆ ಎಂದು ಉಮರಜ ಗ್ರಾಮದ ಗ್ರಾಮಸ್ಥರು ಮತ್ತು ಪ್ರಗತಿಪರ ಸಂಘಟನೆಯ ಜನರು ಆರೋಪಿಸಿ ಅಹೋರಾತ್ರಿ ಅನಿರ್ಧಿಷ್ಠ ಧರಣಿ ಸತ್ಯಾಗ್ರಹವನ್ನು ಇವರ ವಿರುದ್ಧ ಉಮರಜ ಪಂಚಾಯತಿ ಮುಂದೆ ದಿ.೧೪ರ ಸಾಯಂಕಾಲ ದಿಂದ ಆರಂಭಿಸಿದ್ದಾರೆ.ಅಹೋರಾತ್ರಿ ಪ್ರಾರಂಭಗೊಂಡ ಧರಣಿ ಸತ್ಯಾಗ್ರಹದ ಬಗ್ಗೆ ತಿಳಿಯುತ್ತಿದ್ದಂತೆ ಪಿಡಿಓ ಎಲ್…

Read More

ಸರಕಾರಿ ಪ್ರೌಢಶಾಲೆ ಝಳಕಿಯಲ್ಲಿ ಪ್ರೌಢಶಾಲಾ ಮುಖೋಪಾಧ್ಯಾಯರ ಸಭೆಯಲ್ಲಿ ಬಿಇಓ ಸುಜಾತಾ ಮಾಹಿತಿ ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಸುಜಾತ ಹುನೂರ ನೇತೃತ್ವದಲ್ಲಿ ತಾಲೂಕಿನ ಸರಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರುಗಳ ಸಭೆಯನ್ನು ಸರಕಾರಿ ಪ್ರೌಢಶಾಲೆ ಝಳಕಿಯಲ್ಲಿ ಶನಿವಾರ ಆಯೋಜಿಸಲಾಗಿತ್ತು.ಸಭೆಯಲ್ಲಿ ತಾಲೂಕಿನ ಎಲ್ಲಾ ಸರಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.ಸಭೆಯಲ್ಲಿ ಪ್ರಾಸ್ತಾವಿಕವಾಗಿ ತಾಲೂಕಿನ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿಗಳಾದ ಎನ್ ಜೆ ಸಿನಖೇಡ ಶಿಕ್ಷಣ ಸಂಯೋಜಕರು ೨೦೨೫-೨೬ನೇ ಸಾಲಿನ ಫಲಿತಾಂಶ ಸುಧಾರಣೆಗೆ ಘಟಕವಾರು ಮೌಲ್ಯಂಕನ (LBA) ನೂತನ ವ್ಯವಸ್ಥೆ ಬಗ್ಗೆ ಮತ್ತು ಫಲಿತಾಂಶ ಸುಧಾರಣೆಗೆ ಇಲಾಖೆಯ ೨೯ ಅಂಶಗಳ ಕುರಿತು ಮಾಹಿತಿ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಹುನೂರ ಮಾತನಾಡಿ, ೨೦೨೫-೨೬ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಲು ಇಲಾಖೆಯ ನೂತನ ಯೋಜನೆಗಳಾದ ಪ್ರತಿ ಘಟಕವಾರು ಪರೀಕ್ಷೆಗಳನ್ನು ನಡೆಸಿ (LBA) ಅಂಕಗಳನ್ನು SATS ನಲ್ಲಿ ಕೇಂದ್ರಿಕರಿಸುವುದು, ಇಲಾಖೆ ಅಧಿಕಾರಿಗಳು ಪ್ರತಿ ಶುಕ್ರವಾರ ಶಾಲೆಗಳಿಗೆ ಭೇಟಿ ಕೊಟ್ಟು ಕಡಿಮೆ ಫಲಿತಾಂಶ ಬಂದ ಶಾಲೆಗಳ ಮೇಲೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಹಿರಿಯ ಪತ್ರಕರ್ತ ರಿಗೆ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪತ್ರಿಕಾ ದಿನಾಚರಣೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮತ್ತು ಅಭಿನಂದನಾ ಸಮಾರಂಭವನ್ನು ಜುಲೈ ೧೯ ರಂದು ಶನಿವಾರ ಬೆಳಿಗ್ಗೆ ೧೦ ಕೈ ವಿಜಯಪುರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಬೆಣ್ಣೂರ ಹೇಳಿದರು,ಜಿಲ್ಲೆಯ ಎಲ್ಲಾ ಪತ್ರಕರ್ತರು ಹಾಗೂ ಸಂಘದ ಎಲ್ಲ ಸರ್ವ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು,ಜಿಲ್ಲಾಪಂಚಾಯತ್ ರಸ್ತೆಯ ಪತ್ರಿಕಾ ಭವನದಲ್ಲಿ ತುರ್ತು ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾತನಾಡಿದವರು ೨೦೨೪/೨೫ ನೇ ಸಾಲಿನಲ್ಲಿ ಎಸ್‍.ಎಲ್‍.ಸಿ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯ ಪತ್ರಕರ್ತರರ ಮಕ್ಕಳು ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿ /ವಿಧ್ಯಾರ್ಥಿನಿ ಪ್ರತಿಭಾ ಪುರಸ್ಕಾರ ಹಾಗೂ ಪತ್ರಿಕಾ ದಿನಾಚರಣೆ ಮತ್ತು ಜಿಲ್ಲೆಯ ಹಿರಿಯ ಪತ್ರಕರ್ತರ ರಿಗೆ ಜಿಲ್ಲಾ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ವಿಜಯಪುರ ವತಿಯಿಂದ 2025-26ನೇ ಸಾಲಿನ ಜಿಲ್ಲಾ ಪ್ರಶಸ್ತಿಗೆ ದೇವರಹಿಪ್ಪರಗಿ ತಾಲೂಕು ಕನ್ನಡಪ್ರಭ ವರದಿಗಾರ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಗಮೇಶ ಉತ್ನಾಳ ತಿಳಿಸಿದ್ದಾರೆ. ಜು.19ರಂದು ವಿಜಯಪೂರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಸ್ತುವಾರಿ ಸಚಿವರು, ಸಚಿವರು, ಸಂಸದರು, ಶಾಸಕರು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು, ಸಂಘದ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು, ಹಿರಿಯ ಪತ್ರಕರ್ತರು, ಅಧಿಕಾರಿಗಳು ಸೇರಿದಂತೆ ಹಲವಾರು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More