ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದ ಕಾಂಗ್ರೆಸ್ ಯುವ ಧುರೀಣ ಸಲೀಮ ಸರಕಾವಸರನ್ನು ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖಾತರ ವಿಭಾಗದ ಸಾಮಾಜಿಕ ಜಾಲತಾಣದ ಸಂಚಾಲಕರನ್ನಾಗಿ ನೇಮಕಗೊಂಡುಇದ್ದಾರೆ.
ಕಾAಗ್ರೆಸ್ ಧುರೀಣ ಸಿದ್ದು ಕೊಣ್ಣೂರ, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀಯವರ ಸಿಫಾರಸ್ಸಿನ ಮೇರೆಗೆ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯಾದ್ಯಕ್ಷ ಎಂಎಲ್‌ಸಿ ಕೆ. ಅಬ್ದುಲ್ ಜಬ್ಬಾರ್ ರವರ ಅನುಮೋದನೆಯೊಂದಿಗೆ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಶಫೀಕ ಬೇಪಾರಿ ನೇಮಕಗೊಳಿಸಿ ಆದೇಶಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇಮಕಗೊಂಡಿರುವ ಸಲೀಮ ಸರಕಾವಸ್‌ರನ್ನು ಸ್ಥಳಿಯ ಅಂಜುಮನ್ ಇಸ್ಲಾಂ ಸಮೀತಿ ಹಾಗೂ ಸ್ಥಳಿಯ ಕಾಂಗ್ರೆಸ್ ಮುಖಂಡರಿಂದ ಶುಕ್ರವಾರದಂದು ಸನ್ಮಾನಿಸಿ ಗೌರವಿಸಲಾಯಿತು.
ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಶಫೀಕ ಬೇಪಾರಿ, ಪ್ರಮುಖರಾದ ಅಶೋಕ ಮೋಟಗಿ, ಶಿವಾನಂದ ಪಾಟೀಲ, ಪಿರಸಾಬ ನದಾಫ, ಮುತ್ತು ಮೇತ್ರಿ, ರುಸ್ತುಂ ಮಾಲದಾರ, ಮಲೀಕ ಸರಕಾವಸ, ಶೌಕತ ಮಿರ್ಜಿ, ರವಿ ದೊಡವಾಡ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.