ಜಮಖಂಡಿಯಲ್ಲಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ರಸ್ತೆ ತಡೆದು ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ರಾಜ್ಯ ಸರ್ಕಾರ ಉಪನ್ಯಾಸಕರ ನೇಮಕಾತಿಯಲ್ಲಿ ದೃಢವಾದ ನಿರ್ಧಾರ ತೆಗೆದುಕೊಳ್ಳದೆ, ವಿದ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಮೊಟಕು ಗೊಳಿಸುತ್ತಿರುವುದನ್ನು ಖಂಡಿಸಿ ಪದವಿ ಹಂತದಲ್ಲಿ ಕಾಯಂ ಅಥವಾ ಅತಿಥಿ ಉಪನ್ಯಾಸಕರ ನೇಮಕಾತಿಗೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ನಗರದ ದೇಸಾಯಿ ವೃತ್ತದಲ್ಲಿ ಶುಕ್ರವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ರಾಜ್ಯದ 432 ಪದವಿ ಕಾಲೇಜುಗಳಲ್ಲಿ 6 ಸಾವಿರ ಕಾಯಂ ಉಪನ್ಯಾಸಕರ ಪೈಕಿ 3 ಸಾವಿರಕ್ಕೂ ಹೆಚ್ಚು ಜನರು ನಿವೃತ್ತರಾಗಿದ್ದಾರೆ. ಪದವಿ ಹಂತದಲ್ಲಿ ಉಪನ್ಯಾಸಕರ ಕೊರತೆ ಉಂಟಾಗಿದ್ದು, ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. 2025-26ನೇ ಸಾಲಿನಲ್ಲಿ ಖಾಲಿ ಇರುವ 12,000 ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು 55 ಸಾವಿರ ಅರ್ಜಿಗಳ ಸಲ್ಲಿಕೆಯಾಗಿದೆ. ತರಗತಿಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಉಪನ್ಯಾಸಕರಕೊರತೆಯಿಂದಾಗಿ ತರಗತಿಗಳು ನಡೆಯುತ್ತಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಅತಿಥಿ ಉಪನ್ಯಾಸಕರನ್ನಾದರೂ ನೇಮಕ ಗೊಳಿಸಿ ತೊಂದರೆಯನ್ನು ವಿದ್ಯಾರ್ಥಿಗಳಿಗಾಗುತ್ತಿರುವ ಸರಿ ಪಡಿಸಬೇಕೆಂದು ಆಗ್ರಹಿಸಿದರು. ರಾಜ್ಯ ಸರ್ಕಾರದ ನಿರ್ಲಕ್ಷತನ ದಿಂದಾಗಿ ಕಾಯಂ ಪ್ರಾಂಶುಪಾಲರ ಕೊರತೆ, ಉಪನ್ಯಾಸಕರ ಕೊರತೆಯಿಂದಾಗಿ ಶೈಕ್ಷಣಿಕ ವ್ಯವಸ್ಥೆ ಯೇಬುಡಮೇಲಾಗಿದೆ. ಇಲ್ಲಿಂದ ಕಲಿತು ಪದವಿಧರ ರಾಗಿ ಹೊರ ಬರುವ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಇದೇ ರೀತಿ ಮುಂದುವರಿದರೆ ಸರ್ಕಾರದ ಶಿಕ್ಷಣ ಸಂಸ್ಥೆಗಳು ನಿರ್ಣಾಮ ವಾಗಲಿದೆ. ಸಮಸ್ಯೆಯನ್ನು ಅರಿತು ರಾಜ್ಯ ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕು ಎಂದು ಎಬಿವಿಪಿ ಆಗ್ರಹಿಸಿದೆ. ಪುಂಡಲೀಕ ಪೂಜಾರಿ, ಪರಶುರಾಮ ಜಿಟ್ಟಿ, ರಾಕೇಶ ಗುರವ, ಉತ್ತಮ ನಾಯಕ, ಶೀತಲ ಆಲಗೂರ, ದರೇಪ್ಪ ಬಳೋಜಿ, ಸಿಕ್ರು ನ್ಯಾಮಗೌಡ, ಮಹಾಂತೇಶ ಗೋರೆ, ರೋಹನ ಸಿಂಧೆ, ಅಭಿಷೇಕ ಕೂಡಗಿ, ಈರಣ್ಣ ಬುದ್ದಿ, ವಿಠಲ ಪಾಟೀಲ, ಈರಣ್ಣ ಮಠಪತಿ, ಪ್ರಜ್ವಲ ಎಮ್ಮಿ, ದರ್ಶನ ಪಾಟೀಲ, ಇತರರು ಇದ್ದರು. ಉಪತಹಸೀಲ್ದಾರ ಬಿದರಿ ಅವರಿಗೆ ಮನವಿ ಸಲ್ಲಿಸಲಾಯಿತು.