ಭಕ್ತರು ಸುರಕ್ಷಿತವಾಗಿ ಮರಳಿ ಸ್ವಗ್ರಾಮಕ್ಕೆ ತೆರಳಲು ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಎಚ್ಚರಿಕೆಯ ಸೂಚನೆ
ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಶುಕ್ರವಾರ ರಾತ್ರಿ ೨.೨೦ ಲಕ್ಷ ಕಿಂತಲೂ ಅಧಿಕ ಕ್ಯುಸೆಕ್ಸ್ ನೀರು ಹರಿಬಿಟ್ಟಿದ್ದರಿಂದ ಭೀಮೆಯ ವಡಿಲು ತುಂಬಿ ತುಳುಕುತ್ತಿದೆ ಸಾರ್ವಜನಿಕರು ನದಿಯ ಅಕ್ಕಪಕ್ಕ ಸಂಚರಿಸಬಾರದು ಮೈಮರೆತರೆ ಪ್ರಾಣಕ್ಕೆ ಅಪಾಯ ಕಟ್ಟಿಟ್ಟಬುತ್ತಿ. ದೇವಿಯ ದರ್ಶನಕ್ಕೆ ಬಂದಂತ ಭಕ್ತರು ಸುರಕ್ಷಿತವಾಗಿ ಸ್ವಗ್ರಾಮಕ್ಕೆ ತೆರಳಬೇಕು ಎಂದು ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಎಚ್ಚರಿಕೆ ನೀಡಿದರು.
ಕೆಬಿಜೆಎನ್‌ಎಲ್ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಸಮೀಪದ ಬಗಲೂರ ಹಾಗೂ ಘತ್ತರಗಿ ಮದ್ಯದಲ್ಲಿ ನಿರ್ಮಿಸಲಾದ ಬ್ಯಾರೇಜ ಕಂ ಬ್ರಿಡ್ಜಗೆ ಬೇಟಿನೀಡಿ ನೀರಿನ ಪ್ರಮಾಣ ಪರಿಶೀಲಿಸಿ ಅವರು ಮಾತನಾಡಿದರು.
ಕಳೆದ ಒಂದು ವಾರದಿಂದ ನಮ್ಮ ರಾಜ್ಯ ಸೇರಿದಂತೆ ಮಹರಾಷ್ಟç ರಾಜ್ಯದಲ್ಲಿ ಅಧಿಕ ಮಳೆಯಾದ್ದರಿಂದ ಶುಕ್ರವಾರ ರಾತ್ರಿ ಉಜನಿ ಜಲಾಶಯದಿಂದ ಎರಡು ಲಕ್ಷದ ಇಪ್ಪತ್ತು ಸಾವಿರ ಕ್ಯೂಸೆಸ್ ನೀರನ್ನು ಹರಿಬಿಟ್ಟಿದ್ದಾರೆ ನದಿಯ ದಡದ ಗ್ರಾಮಗಳಾದ ಶಿರಸಗಿ, ಹಾವಳಗಿ, ಬಗಲೂರ ಗ್ರಾಮದ ಸಾರ್ವಜನಿಕರು ಸಣ್ಣಪುಟ್ಟ ಮಕ್ಕಳು, ದನಕರಗಳು, ನದಿಯ ದಡದ ಕಡೆಗೆ ಬರದ ಹಾಗೆ ನಿಗಾ ವಹಿಸಬೇಕು ವಿಶೇಷವಾಗಿ ಯುವಕರು ಇನಷ್ಠಾಗ್ರಾಮ್ ರೀಲ್ಸ, ಸೆಲ್ಪಿ ಪೋಟೋ ತೆಗೆದುಕೊಳ್ಳುವ ಭರದಲ್ಲಿ ಯಾಮಾರಿದರೆ ಅನಾಹುತ ತಪ್ಪಿದ್ದಲ್ಲ ಎಂದು ಹೇಳಿದ ಅವರು ದ್ವೀಚರ್ಕ ವಾಹನ, ಅಟೋರಿಕ್ಷಾ, ಜೀಪ ಟ್ಯಾಕ್ಷಿ ಸೇರಿದಂತೆ ಎಲ್ಲ ಖಾಸಗಿ ವಾಹನಗಳನ್ನು ನಿರ್ಭಂದಿಸಲಾಗಿದೆ ಅಮವಾಸೆಗೆ ಬಂದAತ ಭಕ್ತರಿಗೆ ದೇವಿಯ ದರ್ಶನ ಸಿಗದಿದ್ದರೂ ಪರವಾಗಿಲ್ಲ ಮುಂದಿನ ಅಮವಾಸೆಗೆ ಖಂಡಿತವಾಗಿ ದೇವಿಯ ದರ್ಶನ ಪಡೆಯಬಹುದು ಎಂದರು.
ನದಿ ಪರಿಶೀಲನೆ ಸಂದರ್ಭದಲ್ಲಿ ತಹಸೀಲ್ದಾರ್ ಧನಪಾಲ ಶೆಟ್ಟಿ, ಸಿಂದಗಿ ಸಿಪಿಐ ನಾನಾಗೌಡ ಪೋಲಿಸಪಾಟೀಲ, ಕಂದಾಯ ನಿರೀಕ್ಷಕ ಆರ್ ಆಯ್ ಅತ್ತಾರ, ಗ್ರಾಮ ಲೆಕ್ಕಾಧಿಕಾರಿ ಅಕ್ಕಮ್ಮ ಗಸ್ಥಿ, ಪೋಲೀಸ ಸಿಬ್ಬಂದಿಗಳಾದ ಭಿಮು ಲಮಾಣಿ, ನಿಂಗಪ್ಪ ಪೂಜಾರಿ, ಈರಣ್ಣ ಕೋಟ್ಯಾಳ, ಸೇರಿದಂತೆ ಕೆಬಿಜೆಎನ್‌ಎಲ್ ಅಧಿಕಾರಿಗಳು ಇದ್ದರು.
“ಉಜನಿ ಜಲಾಶಯದಿಂದ ಗುರುವಾರ ಒಂದು ಲಕ್ಷದ ಹನ್ನೊಂದು ಸಾವಿರದ ಆರುನೂರು ಕ್ಯೂಸೆಸ್ ನೀರು ಬಿಡಲಾಗಿತ್ತು ಶುಕ್ರವಾರ ರಾತ್ರಿ ಎರಡು ಲಕ್ಷ ಇಪ್ಪತ್ತು ಸಾವಿರ ಕ್ಯೂಸೆಸ್ ನೀರನ್ನು ಬಿಟ್ಟಿದ್ದಾರೆ ರವಿವಾರ ಸಾಯಂಕಾಲ ಅಥವಾ ಸೋಮುವಾರ ಬೆಳಿಗ್ಗೆ ನೀರಿನ ಪ್ರಮಾಣ ಕಡಿಮೆ ಆಗುವ ಎಲ್ಲ ಸಾದ್ಯತೆ ಇದೆ ನೀರಿನ ಪ್ರಮಾಣ ಕಡಿಮೆಯಾಗುವರೆಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು.”
– ಸಿದ್ರಾಮ ಶೀಲವಂತ
ಎಇ, ಕೆಬಿಜೆಎನ್‌ಎಲ್, ಇಂಡಿ
ನಿರಾಸೆಗೊಂಡ ಭಾಗ್ಯವಂತಿ ಭಕ್ತರು
ಅಫಜಲಪೂರ ತಾಲೂಕಿನ ಶ್ರೀಕ್ಷೆತ್ರ ಘತ್ತರಗಿ ಗ್ರಾಮದಲ್ಲಿ ಭದ್ರನೆಲೆಯಾಗಿ ನೆಲಸಿದ ಶ್ರೀಭಾಗ್ಯವಂತಿ ದೇವಿಯ ದರ್ಶನಕ್ಕೆ ಪ್ರತಿ ಶುಕ್ರವಾರ ನೂರಾರು ಭಕ್ತರು ಆಗಮಿಸಿದರೆ ಅಮವಾಸೆಗೆ ವಿಶೇಷವಾಗಿ ಮಹಾರಾಷ್ಟ್ರ, ಆಂದ್ರ, ತೆಲಂಗಾಣದಿಂದ ವಾಹನ ಮುಗಿಸಿಕೊಂಡ ಸಾವಿರಾರು ಭಕ್ತರು ಬರುವುದು ಸರ್ವೆ ಸಾಮಾನ್ಯ ಬ್ಯಾರೇಜ ಕಂ ಬ್ರಿಡ್ಜ ಸಂಪೂರ್ಣ ಜಲಾವ್ರತ ಅಗಿದ್ದರಿಂದ ಬಂದಂತ ಭಕ್ತರು ಮೋರಟಗಿ ಹೆದ್ದಾರಿ ಪಕ್ಕದಲ್ಲಿ ನಿಂತು ಕೈಮುಗಿದು ಮರಳಿದರು.