ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ

32 ನೆಯ ದಿವಸದ ಶರಣಮಾಸದ ಮಾಲಿಕೆಯಲ್ಲಿ ಡಾ. ಸುಮಂಗಲಾ ಮೇಟಿ ಅವರು ಶರಣೆ ಅಕ್ಕಮ್ಮ ಅವರ ಬಗೆಗೆ ಅತ್ಯಂತ ಪ್ರಬುದ್ಧವಾಗಿ ತಮ್ಮ ಅನುಭಾವವನ್ನು ನೀಡಿದರು.
ಡಾ. ಸುಮಂಗಲಾ ಅವರು ಶರಣು ಶರಣೆಯರು ಭೌತಿಕದ ಮೂಲಕ ಆಧ್ಯಾತ್ಮಿಕ ಅನುಸಂಧಾನ ನಡೆಸಿದ್ದಾರೆ ಎಂದು ಹೇಳುತ್ತಾ, ಅಕ್ಕಮ್ಮ ವೃತಕ್ಕೆ ಮಹತ್ವದ ಸ್ಥಾನವನ್ನು ಕೊಟ್ಟಿದ್ದಳು, 64 ವ್ರತಗಳನ್ನು, 56 ಶೀಲಗಳನ್ನು, 32 ನಿಯಮಗಳನ್ನು ಕುರಿತು ಚರ್ಚಿಸಿದ್ದಾಳೆನ್ನುವುದು, ಶರಣೆ ಅಕ್ಕಮ್ಮನ ಅಂಕಿತ “ಆಚಾರವೇ ಪ್ರಾಣವಾದ ರಾಮೇಶ್ವರ ಲಿಂಗ. ಈ ಅಂಕಿತ ಅವಳ ವ್ಯಕ್ತಿತ್ವದ ಅಸ್ಮಿತೆ.ಅದು ವಿಚಾರ ಪ್ರಾಣವಲ್ಲ, ಆಚಾರಪ್ರಾಣ. ಅಕ್ಕಮ್ಮ ಬಸವಾದಿ ಶರಣರ ಕಾಲದಲ್ಲಿದ್ದು, ಸನ್ನಡತೆಯ ಜೀವನ ನಡೆಸಿ ಜೀವನಾನು ಭವದಿಂದ ಕಂಡುoಡ ವಸ್ತು ವೈವಿಧ್ಯಗಳ ಕುರಿತು ಚರ್ಚಿಸಿದ್ದಾಳೆ. ಅಂತರಂಗದಲ್ಲಿ ವೃತ, ಬಹಿರಂಗದಲ್ಲಿ ಆಚಾರ, ಉಭಯ ಸಿದ್ಧರಾಗಿ ನಡೆಯುವುದೇ ವೃತಾಚಾರ ಎಂಬ ಧೋರಣೆ ಹೊಂದಿದ್ದಳು.
ನೇಮ ಆಚಾರ ಶೀಲ ಇವು ಅಕ್ಕಮ್ಮನ ವಚನಗಳ ಮೂಲ ದ್ರವ್ಯ ಅವುಗಳಿಗೆ ಪೂರಕವಾಗಿ ಧಾನ್ಯ, ಪಶು, ಪಕ್ಷಿ,ಜನಪದ ನಂಬಿಕೆ, ರೂಡಿ, ವೃತ್ತಿ, ಪರಿಭಾಷೆ ಗಳನ್ನು, ಗುರುಲಿಂಗ ಜಂಗಮ ಕುರಿತು ವಿವರಿಸಿದ್ದಾಳೆ. ಕಾಯಕ, ಆಚರಣೆ, ದಾಸೋಹ, ಪಂಚಾಚಾರ, ಲಿಂಗಾಚಾರ, ಸದಾಚಾರ, ಶಿವಾಚಾರ್ಯ, ಗಣಾಚಾರ, ಭ್ರುತ್ಯಾಚಾರದ ವಿವರಣೆಯೊಂದಿಗೆ ಅಕ್ಕಮ್ಮಳ
ಹಲವಾರು ವಚನಗಳ ಅರ್ಥಪೂರ್ಣವಾದ ವಿಶ್ಲೇಷಣೆಯೊಂದಿಗೆ ತಮ್ಮ ಮಾತನ್ನು ಮುಗಿಸಿದರು.
ಅಕ್ಕಮ್ಮ ಶರಣ ಸಾಹಿತ್ಯ ಸಂಕುಲದಲ್ಲಿ ಒಬ್ಬ ಸೃಜನಶೀಲ, ಶ್ರೇಷ್ಠ, ಪರಿಪೂರ್ಣ ವಚನಕಾರ್ತಿಯಾಗಿದ್ದಳು.
ಅಕ್ಕಮಹಾದೇವಿ ನಂತರದ ಹಿರಿಯ ವಚನಕಾರ್ತಿ ಅಕ್ಕಮ್ಮ ಮೂಲತಃ ಯಾದಗಿರಿ ಜಿಲ್ಲೆಯ ಎಲೇರಿ ಗ್ರಾಮದವಳು. ತತ್ವ ನಿಷ್ಠ,ಲಿಂಗತತ್ವ ಚಿಂತನೆ, ವೈಚಾರಿಕ ನೆಲೆಯಲ್ಲಿ ಗುರು ಲಿಂಗ ಜಂಗಮ ತತ್ವಗಳ ಬಗ್ಗೆ ವಿವರವಾಗಿ ತಿಳಿಸಿದರು .
ಅಕ್ಕಮ್ಮನ ಇರುವಿನ ಬಗ್ಗೆ ಅನೇಕ ಮಾಹಿತಿಗಳ ಗೊಂದಲ ಮಾಡದೆ ಅವಳ ವಚನ ಚಳುವಳಿ ಕಾರ್ಯ ನಿರ್ವಹಿಸಲು ಮುಂದಾಗ ಬೇಕು ಎಂದು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ಸಂಸ್ಥಾಪಕರಾದ ಡಾ ಶಶಿಕಾಂತ ಪಟ್ಟಣ- ರಾಮದುರ್ಗ ಇವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ದತ್ತಿ ದಾಸೋಹಿಗಳಾದ ಡಾ. ವೀಣಾ ಎಲಿಗಾರ ಅವರು ತಮ್ಮ ಅತ್ತೆ-ಮಾವನವರ ಬಗೆಗೆ ಅಭಿಮಾನದ ಮಾತುಗಳನ್ನಾಡಿ, ಇಂದಿನ ಉಪನ್ಯಾಸದ ವಿಷಯದ ಬಗೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಶರಣೆ ವಿಜಯ ಮಹಾಂತಮ್ಮ ಅವರ ವಚನ ಪ್ರಾರ್ಥನೆ, ಶರಣೆ ಪ್ರೇಮಕ್ಕ ಹೊರಟ್ಟಿ ಅವರ ವಚನ ಮಂಗಳ, ಡಾ. ಶಶಿಕಾಂತ ಪಟ್ಟಣ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಸಾಂಗವಾಗಿ ನೆರವೇರಿತು.

ವಿಶೇಷ ದತ್ತಿ ಉಪನ್ಯಾಸ ೩೨೯
ಡಾ. ವೀಣಾ ಎಲಿಗಾರ ಅವರ
ಅತ್ತೆಯವರಾದ ಲಿಂ .ಶ್ರೀಮತಿ ನೀಲಗಂಗಾದೇವಿ ಮತ್ತು ಮಾವನವರಾದ ಲಿಂ. ಶ್ರೀ ಚನ್ನಬಸಪ್ಪ ನಿಂಗಪ್ಪ ಯಲಿಗಾರ ಇವರ ಸ್ಮರಣಾರ್ಥ ವಿಶೇಷ ದತ್ತಿ ಉಪನ್ಯಾಸ ೩೨೯
