ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ

31 ನೆಯ ದಿನದ ಶರಣ ಮಾಲಿಕೆಯಲ್ಲಿ ಶರಣೆ ಅಂಜಲೀನಾ ಗ್ರೇಗರಿ ಅವರು
ಶಿವಯೋಗ ಸಾಧಕ ಶ್ರೀ ತಪೋವನ ಕುಮಾರಸ್ವಾಮಿಗಳು ಅವರ ಬಗೆಗೆ ಅತ್ಯಂತ ಭಕ್ತಿ- ಭಾವದಿಂದ ಮಾತನಾಡಿದರು.
ಬೈಲಹೊಂಗಲದ ಹುಣಸಿಕಟ್ಟಿಯಲ್ಲಿ ಪುಣ್ಯ ಪುರುಷರ ಉದಯ, ಬಾಲ್ಯ,ಚಿಕ್ಕ ವಯಸ್ಸಿನಲ್ಲಿಯೇ ಬಾಲಯೋಗಿಯ ವಿದ್ಯೆ ಮತ್ತು ಬುದ್ಧಿಯನ್ನು ನೋಡಿ ಶೂರ್ಪಾಲ ಮಾಸ್ತರರು” ಈ ದಿವ್ಯಜ್ಯೋತಿ ಬೆಳಗಲಿದೆ ” ಎಂದು ಹೇಳಿದ್ದು, ಹನುಮಂತ ದೇವರ ಗುಡಿಯಲ್ಲಿ ಧ್ಯಾನ ಮಾಡುತ್ತಿದ್ದುದು, ಶಾಲೆಯಲ್ಲಿ ನಡೆಯುವ ಸರಸ್ವತಿ ಪೂಜೆಯನ್ನು ನೋಡಿ ಅಚಲ ಭಕ್ತಿಯ ನಿಷ್ಠಾವಂತರಾಗಿ, ಮಧುರ ಗಾನದ ಕಲೆ, ವಾಕ್ ಸಿದ್ಧಿ, ಕ್ಲಿಷ್ಟಮಯ ಶಾಸ್ತ್ರಗಳ ವಿದ್ವತ್ತು ಪಡೆದು ಪ್ರವಚನ ಮಾಡುತ್ತಾ ಅವರು ನುಡಿದುದೆಲ್ಲವೂ ಸತ್ಯವಾಗಿ ಪರಿಣಮಿಸುತ್ತವೆನ್ನುವುದು, 14 ವರ್ಷದಲ್ಲಿರುವಾಗಲೇ ನಿಜಗುಣರ ಶಾಸ್ತ್ರವನ್ನು ಓದು ತ್ತಿದ್ದುದು, ಅವರ ಅನುಭವದ ಜಿಜ್ಞಾಸುಗಳನ್ನು ಪ್ರವಚನಗಳ ಮೂಲಕ ತಿಳುವಳಿಕೆ ನೀಡಲು ಪ್ರಾರಂಭಿಸಿದ್ದು, ಹದಿನಾಲ್ಕು ವರ್ಷದವರಿದ್ದಾಗ ಶಾಲೆಯಲ್ಲಿ ಕಲೆಕ್ಟರ್ ಬಂದಾಗ ಇಂಗ್ಲಿಷ್ನಲ್ಲಿ ಭಾಷಣ ಮಾಡಿದ್ದು, ದೊಡ್ಡವರಾದ ಮೇಲೆ ದೇವಿ ಪುರಾಣದ 18 ಅಧ್ಯಾಯಗಳನ್ನು ಒಂದೇ ದಿನದಲ್ಲಿ ಪಠಣ ಮಾಡಿದ ಕುಮಾರೇಶರಿಗೆ ಕುಂಡಲಿನಿಶಕ್ತಿ ಪ್ರಾಪ್ತವಾಗಿದ್ದು,
ಧಾರವಾಡದ ಕರ್ನಾಟಕ ಕಾಲೇಜ್, ಕೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ ಪೌರ್ವಾತ್ಯ, ಪಾಶ್ಚಿಮಾತ್ಯ ಸಾಹಿತ್ಯ ಸoಸ್ಕೃತಿ, ತತ್ವ ಸಿದ್ಧಾಂತ, ರಾಜಕಾರಣ, ವಿಜ್ಞಾನ ಸುಜ್ಞಾನವನ್ನು ಅಭ್ಯಾಸ ಮಾಡಿದ್ದು. ಬಿ.ಎ ಓದುವಾಗ ರಾಜನೀತಿ, ಅರ್ಥಶಾಸ್ತ್ರ ಮುಖ್ಯ ವಿಷಯಗಳ ಜೊತೆಗೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪ್ರಭುತ್ವ ಪಡೆದದ್ದು ಬೆಳಿಗ್ಗೆ ನಾಲ್ಕರಿಂದ ಏಳರವರೆಗೆ ಸ್ನಾನ,ಯೋಗ, ಪ್ರಾಣಾಯಾಮ ಮಾಡುತ್ತಿದ್ದುದು, ನಂತರ ಧಾರವಾಡದಲ್ಲಿ ಗುರುಸಿದ್ಧ ಪ್ರಭುದೇವರ ಕರೆಯಿಂದ ಅವರ ಅನುಗ್ರಹ ಪಡೆದು ಆಶ್ರಮ ಸ್ವೀಕಾರ ಮಾಡಿದ್ದು, ಕನ್ನಡ ನಾಡಿನ ತುಂಬೆಲ್ಲ ಸಂಚರಿಸಿ ಬಸವಾದಿ ಶರಣರು ಮಾಡಿದ ಕ್ರಾಂತಿಯನ್ನು ಅಧಿಕಾರವಾಣಿಯಿಂದ ಪ್ರಚಾರ ಮಾಡಿದ್ದು,ಪಾರಮಾರ್ಥಿಕ ಜಗತ್ತಿನಲ್ಲಿ ಆದರ್ಶಪ್ರಾಯ ರಾಗುತ್ತಾರೆನ್ನುವುದನ್ನು ತಿಳಿಸಿ ದರು.
ಕುಮಾರೇಶರು 1932 ರಿಂದ 1962 ರವರೆಗೆ 30 ವರ್ಷಗಳ ಕಾಲ ಮಹಾಸಾಧನೆಯನ್ನು ಮಾನವ ಕೋಟಿಯ ಕಲ್ಯಾಣಕ್ಕಾಗಿ ಮಾಡುತ್ತಾರೆ . ಧರ್ಮದ ಸಾರ ಸರ್ವಸವನ್ನು, ಲಿಂಗದ ಆಕಾರ, ಅದರ ಬಣ್ಣ, ಮಹಿಮೆ, ಪೂಜಾ ವಿಧಾನ ಹಾಗೂ ಅದರ ಹುಟ್ಟು ಪ್ರಸಾರಗಳೆಲ್ಲವನ್ನು ಲಿಂಗಾಚಾರ ವೈಭವದಲ್ಲಿ ಹೇಳಿದ್ದು,ಮತ್ತು ತಮ್ಮ ವಿಶಿಷ್ಟ ತತ್ವಗಳನ್ನು ಜಗತ್ತಿನಾದ್ಯಂತ ವಿಶ್ವಕಲ್ಯಾಣ ಗುಣ ಸಿದ್ದಾಂತಗಳನ್ನು ಕನ್ನಡ ಹಿಂದಿ ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟಿಸಿ ಪೌರ್ವಾರ್ಥ್ಯ ಮತ್ತು ಪಾಶ್ಚಿಮಾತ್ಯ ಪಂಡಿತರಿಗೆ ಶಿವಶರಣರ ತತ್ವ ಜ್ಞಾನದ ಅನುಭಾವವನ್ನು ಪ್ರಚಾರ ಮಾಡಿದ್ದು, 1932 ರಿಂದ ಪ್ರವಾಸ ಕೈಗೊಂಡು ಇಡೀ ಭಾರತದಾದ್ಯoತ ಆಮಂತ್ರಿತರಾಗಿ ಜನತೆಯ ಆಧ್ಯಾತ್ಮಿಕ ಹಸಿವನ್ನು ಇಂಗಿಸಿದರೆನ್ನುವುದು, ಅಮೂಲ್ಯವಾದ ಇಪ್ಪತ್ತು ಗ್ರಂಥಗಳನ್ನು ಬರೆದದ್ದು, ಇವು ಸಮಾಜದಲ್ಲಿ ಗಣನೀಯವಾಗಿ ಕ್ರಾಂತಿಯಾಗಲು ಕಾರಣವಾಗಿದ್ದು, ದೇಶ ವಿದೇಶ ಗಳ ಅನುಭಾವಿಗಳು ಇವರಿಗೆ ತಲೆಬಾಗಿದ್ದು, ಯಾವುದೇ ಭೇದಭಾವವಿಲ್ಲದೆ ಸಾಮೂಹಿಕ ಪ್ರಾರ್ಥನಾ ಯೋಗವನ್ನು ಜಾರಿಗೆ ತಂದದ್ದು ಹಂಚಿಕೊಂಡರು.
ಕುಮಾರೇಶರು 1936 ರಿಂದ ಲಿಂಗಾಯತ ಧರ್ಮದ ತತ್ವಜ್ಞಾನ, ಶಿವಶರಣರ ಸಂಪಾದನೆ, ಶರಣರ ಮಾರ್ಗ ಶ್ರೇಷ್ಠತೆ, ಶರಣರ ವಿಕಾಸವಾದ,ಶರಣರ ಅನುಭವ, ಶೂನ್ಯ ಸಂಪಾದನೆ ಬಗೆಗೆ ನೂರಾರು ಪ್ರವಚನ ನೀಡಿದ್ದು, ಇದರ ಜೊತೆಗೆ ಅವರ ಸಂದೇಶಗಳನ್ನು, ದೇಶ ವಿದೇಶಗಳ ಅನುಭಾವಿಗಳ ಅಭಿಪ್ರಾಯಗಳನ್ನು, ಧಾರವಾಡದ ತಪೋವನದಲ್ಲಿ 1965 ರಲ್ಲಿ ಬಂದು ನೆಲೆಸಿದ್ದು, ಆರು ತಿಂಗಳು ಕಾಲ ಧ್ಯಾನಸ್ಥರಾಗಿದ್ದು ನಂತರ ತಮ್ಮ ಸಂದೇಶವನ್ನು ಮಾನವ ಕೋಟಿಗೆ ಬಿತ್ತರಿಸಿದ್ದು,ನಂತರ ಒಂದು ವರ್ಷ ಕಾಲ ಉಗ್ರ ತಪಸ್ಸು ಮಾಡಿ, 25000 ಜನರಿಗೆ ದರ್ಶನ ಕೊಟ್ಟಿದ್ದು, ಹೇ ಪ್ರಭೋ ಪ್ರಸೀದ ಓಂ” ದಿವ್ಯ ಮಂತ್ರ ಘೋಷಿಸಿದ್ದು, ಶ್ರೀಗಳ ಸತ್ಸಂಗದ ವಿವರಣೆ, ದೇಶ ವಿದೇಶಗಳ ಗೌರವ ಸನ್ಮಾನ, 1,500 ಜನರಿಗೆ ಲಿಂಗ ದೀಕ್ಷೆ ನೀಡಿದ್ದು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗ್ರಂಥಗಳಲ್ಲಿ ಲಿಂಗಾಯತ ಧರ್ಮದ ಬಗೆಗೆ ಹಲವಾರು ಲೇಖನಗಳನ್ನು ಬರೆದು ಕೊಟ್ಟಿದ್ದರ ಜೊತೆಗೆ ಇನ್ನೂ ಹಲವಾರು ವಿಷಯಗಳನ್ನು ತಿಳಿಸಿಕೊಟ್ಟರು.
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಕುಮಾರೇಶರ ಬಗೆಗೆ ಮಾತಾಡುತ್ತಾ,ರೋಮ್ ನ ಪೋಪ್ ಅವರಿಗೆ ಇಷ್ಟಲಿಂಗದ ಮಹತ್ವವನ್ನು ಐದು ನಿಮಿಷದಲ್ಲಿ ಹೇಳುವುದು ಒಂದು ಘಂಟೆಯವರೆಗೆ ವಿಸ್ತರಿಸಿದ್ದನ್ನು ಪೋಪ್ ಅವರೂ ಸಹಅಷ್ಟೇ ಆಸಕ್ತಿಯಿಂದ ಕೇಳಿದ್ದನ್ನು ಅತ್ಯಂತ ಅಭಿಮಾನದಿಂದ ನೆನಪು ಮಾಡಿಕೊಂಡು, ಇನ್ನಷ್ಟು ವಿಷಯಗಳ ಮೇಲೆ ಬೆಳಕು ಚೆಲ್ಲಿದರು.ದತ್ತಿ ದಾಸೋಹಿ ಗಳಾದ ಸುಧಾ ಪಾಟೀಲ ಅವರು ಅಕ್ಕನ ಅರಿವು ವೇದಿಕೆಯ ಶರಣ ಮಾಸದ ಕಾರ್ಯಕ್ರಮಗಳ ಬಗೆಗೆ,ವೇದಿಕೆಯ ಚಟುವಟಿಕೆ ಗಳ ಬಗೆಗೆ ಅತ್ಯಂತ ಅಭಿಮಾನದಿಂದ ಮಾತಾಡಿದರು.
ಶರಣೆ ಜಯಶ್ರೀ ಆಲೂರ ಅವರ ವಚನ ಪ್ರಾರ್ಥನೆ, ಡಾ. ತಾರಾ. ಬಿ. ಎನ್ ಅವರ ಸ್ವಾಗತ, ಶರಣೆ ಶಾರದಾ ಅಂಬೆಸಂಗೆ ಅವರ ಶರಣು ಸಮರ್ಪಣೆ, ಶರಣೆ ಬನಶ್ರೀ ಹತ್ತಿ ಅವರ ವಚನ ಮಂಗಳ ಮತ್ತು ಡಾ. ಶಾರದಾಮಣಿ ಹುನಶಾಳ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.

ವಿಶೇಷ ದತ್ತಿ ಉಪನ್ಯಾಸ – 328
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂ. ಶ್ರೀ ಬಿ.ಎಂ.ಪಾಟೀಲ ಮತ್ತು ತಾಯಿಯವರಾದ ಲಿಂ.ಶ್ರೀಮತಿ ಅಕ್ಕಮಹಾದೇವಿ ಪಾಟೀಲ – ಗದಗ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ – 328
