Author: editor.udayarashmi@gmail.com

ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಗುವಿನ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೇ ಸಮುದಾಯದ ಭಾಗವಹಿಸುವಿಕೆಯು ಅತ್ಯಂತ ಮಹತ್ವದ್ದಾಗಿದ್ದು, ಮಕ್ಕಳ ಶೈಕ್ಷಣಿಕ ಉನ್ನತಿಗೆ ಪಾಲಕರ ಪಾತ್ರ ಬಹು ಮಹತ್ವದ್ದಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಹೇಳಿದರು.ಅವರು, ನಗರದ ಸರಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ ೪೯ರ ಅಫಜಲಪುರ ಟಕ್ಕೆ ವಿಜಯಪುರ ನಗರ ವಲಯದ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಹಾಗೂ ಶಾಲಾ ಪೋಷಕರ-ಶಿಕ್ಷಕರ ಮಹಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಸರಕಾರಿ ಶಾಲೆಗಳಲ್ಲಿ ಹಮ್ಮಿಕೊಂಡ ವಿಶೇಷ ಮಹಾ ಪೋಷಕರ ಸಭೆಗೆ ಅಫಜಲಪುರ ಟಕ್ಕೆಯ ಬಹತೇಕ ಎಲ್ಲ ಪಾಲಕರು ಪಾಲ್ಗೊಂಡು ತಮ್ನ ಮಗುವಿನ ಶೈಕ್ಷಣಿಕ ಪ್ರಗತಿ ತಿಳಿದುಕೊಳ್ಳಲು ಇದೊಂದು ಸದಾವಕಾಶ ಒದಗಿಸಿದೆ. ಮನೆಯೇ ಮೊದಲ ಪಾಠ ಶಾಲೆ, ಜನನಿ ಮೊದಲ ಗುರು ಎಂಬಂತೆ ಮಕ್ಕಳು ಶಾಲೆಯಲ್ಲಿ ಕಲಿತ ದೈನಂದಿನ ವಿಷಯಗಳ ಕುರಿತಾಗಿ, ಪಾಲಕರು ಮಕ್ಕಳೊಂದಿಗೆ ಬೆರೆತು ಪ್ರೋತ್ಸಾಹಿಸಬೇಕು.…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಮುತ್ತಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಟಕ್ಕಳಕಿ ಗ್ರಾಮದಲ್ಲಿ ಎಲ್ಲೆಂದರಲ್ಲಿ ರಸ್ತೆ ಮೇಲೆ ಚರಂಡಿ ನೀರುವ ಹರಿಯುತ್ತಿದೆ. ಇದರಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಟಕ್ಕಳಕಿ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ಅವರು, ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಗ್ರಾಮದ ಕೆಲವೊಂದು ವಾರ್ಡಿನಲ್ಲಿ ಚರಂಡಿ ಮೇಲೆ ನೀರು ಹರಿಯುತ್ತಿದೆ. ಸಿಸಿ ರಸ್ತೆ ಮೇಲೆ ಕಸ ಕಡ್ಡಿ, ಚರಂಡಿ ನೀರು ಹರಿಯುತ್ತಿದೆ. ಸರಿಯಾದ ಕುಡಿಯುವ ನೀರಿನ ಸೌಲಭ್ಯ ಇಲ್ಲ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ವಿದ್ಯುತ್ ದೀಪದ ವ್ಯವಸ್ಥೆ ಸಹ ಸರಿಯಾಗಿ ಇಲ್ಲ. ಇದನ್ನು ಗಮನಸಿದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯವೈಖರಿ ಯಾವ ರೀತಿಯಿಂದ ಕೂಡಿದೆ ಎಂಬುವದು ಗೊತ್ತಾಗುತ್ತಿದೆ. ಸ್ಥಳದಲ್ಲಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಎಸ್.ಬಡಿಗೇರ ಅವರಿಗೆ ಈ ಎಲ್ಲ ಸಮಸ್ಯೆಗಳು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಬ್ಬು ಹೇರಿಕೊಂಡು ಹೋಗುವ ವಾಹನಗಳಿಗೆ ಕಡ್ಡಾಯವಾಗಿ ರಿಪ್ಲೆಕ್ಟರ್ ಅಳವಡಿಸುವ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆಗಳು ವಿಶೇಷ ಮುತವರ್ಜಿ ವಹಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಬ್ಬು ನುರಿಸುವ ಹಂಗಾಮು ಆರಂಭಗೊಂಡಿದೆ, ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಕಬ್ಬು ಹೇರಿಕೊಂಡು ಟ್ರಾಕ್ಟರ್, ಲಾರಿಗಳು ಪ್ರಯಾಣ ಮಾಡುತ್ತಿವೆ, ಅನೇಕ ಹೆದ್ದಾರಿಗಳಲ್ಲಿ ಈ ವಾಹನಗಳು ಸಂಚರಿಸುತ್ತಿವೆ, ಆದರೆ ಬಹುತೇಕ ಈ ತೆರನಾದ ವಾಹನಗಳಿಗೆ ರಿಪ್ಲೆಕ್ಟರ್‌ಗಳಿಲ್ಲ, ಇದರಿಂದಾಗಿ ಹಿಂಬದಿಯಾಗಿ ಬರುವ ವಾಹನಗಳಿಗೆ ವಾಹನ ಬರುವಿಕೆ ಗೊತ್ತಾಗುವುದಿಲ್ಲ, ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ, ದುರದೃಷ್ಟವಶಾತ್ ಅಪಘಾತವಾದರೆ ಜೀವ ಹಾನಿಯೂ ಸಂಭವಿಸುವ ಸಾಧ್ಯತೆ ಇರುತ್ತದೆ, ಅದರ ಜೊತೆಗೆ ಕಬ್ಬು ಬೆಳೆಗಾರರು ಕಷ್ಟಪಟ್ಟು ಬೆಳೆದ ಬೆಳೆಯೂ ಸಹ ಹಾನಿಯಾಗಿ ರೈತರಿಗೆ ದೊಡ್ಡ ಮಟ್ಟದ ಆರ್ಥಿಕ ಹೊರೆಯೂ ಉಂಟಾಗುತ್ತದೆ, ಈ ಎಲ್ಲ ಕಾರಣಗಳಿಂದ ಕಬ್ಬು ಹೇರಿಕೊಂಡು ಬರುವ ವಾಹನಗಳಿಗೆ ರಿಪ್ಲೆಕ್ಟರ್ ಹಾಗೂ ಪೂರಕವಾದ ಸುರಕ್ಷಾ ಉಪಕರಣಗಳನ್ನು ಅಳವಡಿಸುವ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆಗಳು…

Read More

ಬಿಹಾರ ವಿಧಾನಸಭೆ ಚುನಾವಣೆ | ಎನ್.ಡಿ.ಒ ಗೆ ಪ್ರಚಂಡ ಗೆಲುವು | ಅತಿದೊಡ್ಡ ಪಕ್ಷವಾಗಿ ಬಿಜೆಪಿ | ಕಾಂಗ್ರೆಸ್ ಗೆ ಮರ್ಮಾಘಾತ ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಪ್ರಚಂಡ ಬಹುಮತ ಸಾಧಿಸಿದೆ. 243 ಸ್ಥಾನಗಳಲ್ಲಿ 202 ಸ್ಥಾನಗಳಲ್ಲಿ NDA ಮುನ್ನಡೆ ಸಾಧಿಸಿದೆ. ಇನ್ನು ಭಾರತೀಯ ಜನತಾ ಪಕ್ಷ (BJP) ಸುಮಾರು 95 ಪ್ರತಿಶತದಷ್ಟು ಸ್ಟ್ರೈಕ್ ರೇಟ್‌ನೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದು ಅತ್ಯಂತ ಸೂಕ್ಷ್ಮ ರಾಜಕೀಯ ರಾಜ್ಯದಲ್ಲಿ ಚುನಾವಣಾ ರಣತಂತ್ರದ ಮೂಲಕ ಆಡಳಿತ ಮೈತ್ರಿಕೂಟದ ಮುಖವಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಮತ್ತು ಪ್ರಚಾರದ ಪ್ರಭಾವವನ್ನು ಪುನರುಚ್ಚರಿಸಿದೆ.ರಾಷ್ಟ್ರೀಯ ಜನತಾದಳ (RJD), ಕಾಂಗ್ರೆಸ್ (Congress) ಮತ್ತು ಮೂರು ಎಡ ಪಕ್ಷಗಳನ್ನು ಒಳಗೊಂಡಿರುವ ಮಹಾಘಟಬಂಧನ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಅವರನ್ನು ಬಿಂಬಿಸಿದ್ದರೂ ಹೀನಾಯ ಸೋಲು ಅನುಭವಿಸಿದೆ ಎಂದು ತೋರುತ್ತದೆ. ವಿರೋಧ ಪಕ್ಷಗಳ ಮೈತ್ರಿಕೂಟವು 35 ಸ್ಥಾನಗಳ ಗಡಿಯನ್ನು ದಾಟಲು ಹೆಣಗಾಡುತ್ತಿದೆ.ಬಿಜೆಪಿ ಸ್ಪರ್ಧಿಸಿದ 101 ವಿಧಾನಸಭಾ ಸ್ಥಾನಗಳಲ್ಲಿ…

Read More

ಅಸಂಖ್ಯಾತ ಭಕ್ತರ ಮಧ್ಯೆ ಸಾಗಿದ ದೈವಿಕ ಚಕ್ರಗಳು ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಹಲಕರ್ಟಿ ಗ್ರಾಮದ ಶ್ರೀ ವೀರಭದ್ರೇಶ್ವರರ ಜಾತ್ರಾ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ ಹಾಗೂ ವಿಜ್ರಂಭಣೆಯಿಂದ ಜರುಗಿತು. ಸಾವಿರಾರು ಭಕ್ತರ ಸಾನ್ನಿಧ್ಯದಲ್ಲಿ ಎರಡು ದಿನಗಳ ಜಾತ್ರಾ ಕಾರ್ಯಕ್ರಮ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶೋಭೆ ಪಡೆಯಿತು.ರವಿವಾರ ಸಂಜೆ ೭ ಗಂಟೆಗೆ ಅಗ್ನಿ ಪುಟು ಪ್ರಾರಂಭಗೊಂಡಿತು. ಭಕ್ತಾದಿಗಳು ಅಗ್ನಿ ಕುಂಡಕ್ಕೆ ಕಟ್ಟಿಗೆ ಹಾಗೂ ಎಣ್ಣೆ ಸಮರ್ಪಿಸಿದರು. ಮಧ್ಯರಾತ್ರಿ ೨ ಗಂಟೆಗೆ ಅಗ್ನಿ ಪ್ರವೇಶ ವಿಧಿ ಪ್ರಾರಂಭಗೊಂಡಿತು. ಮೊದಲು ಪುರವಂತರು ಅಗ್ನಿ ಕುಂಡದ ಸುತ್ತ ಪ್ರದಕ್ಷಿಣೆ ಹಾಕಿ ಅಗ್ನಿ ಪ್ರವೇಶಿಸಿದರು.ನಂತರ ಕರ್ನಾಟಕದ ವಿವಿಧ ಜಿಲ್ಲೆಗಳ ಮತ್ತು ಇತರೆ ರಾಜ್ಯಗಳ ಮೂಲೆ ಮೂಲೆಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತರು ಅಗ್ನಿ ಪ್ರವೇಶಿಸಿ ಪುನೀತರಾದರು.ಸೋಮವಾರದಂದು ಬೆಳಿಗ್ಗೆ ಮಹಾರುದ್ರಾಭಿಷೇಕದೊಂದಿಗೆ ಸಕಲ ಪೂಜಾ ಕ್ರಮಗಳನ್ನು ನೆರವೇರಿಸಲಾಯಿತು. ಸಂಜೆ ೫ ಗಂಟೆಗೆ ಆರಂಭವಾದ ಮದ್ದು ಸುಡುವ ಕಾರ್ಯಕ್ರಮ ಭಕ್ತರ ಚಿತ್ತವನ್ನು ಬಾನಂಗಳದತ್ತ ಸೆಳೆಯಿತು.ನಂತರ ನಡೆದ ಭವ್ಯ ರಥೋತ್ಸವ ಜಾತ್ರೆಯ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಇಂದಿನ ತಾಂತ್ರಿಕ ಯುಗದಲ್ಲಿ ಪಾಲಕರು ತಮ್ಮ ಮಕ್ಕಳನ್ನು ವಿದ್ಯಾಲಯಗಳಲ್ಲಿ ದಾಖಲು ಮಾಡಿದರೆ ಮಾತ್ರ ಸಾಲದು, ಅವರ ಚಟುವಟಿಕೆಗಳ ಕುರಿತು ವಿಶೇಷ ಗಮನ ವಹಿಸುವ ಅವಶ್ಯಕತೆಯಿದೆ ಎಂದು ಪ್ರಾಚಾರ್ಯರಾದ ಶ್ರೀಮತಿ ಎಸ್.ಕೆ ರಾಠೋಡ ಹೇಳಿದರು.ಗ್ರಾಮದ ಸರಕಾರಿ ಪದವಿ ಪೂರ್ವ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪೋಷಕ ಉಪನ್ಯಾಸಕರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಂದೆ-ತಾಯಿಂದಿರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು, ಕಾಲಕಾಲಕ್ಕೆ ಶಾಲಾ ಕಾಲೇಜುಗಳಿಗೆ ಭೇಟಿನೀಡಿ ಮಕ್ಕಳ ಶಿಕ್ಷಣ, ನಡತೆಯ ಕುರಿತ ಮಾಹಿತಿ ಪಡೆಯಬೇಕು, ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದಾಗಿದೆ ಎಂದರು.ಉಪನ್ಯಾಸಕ ಪ್ರವಿಣ ಮೈತ್ರಿ ಮಾತನಾಡಿ, ಕಡಿಮೆ ಅವಧಿಯಲ್ಲಿ ಜಿಲ್ಲೆಯಲ್ಲಿಯೇ ಮಹತ್ವದ ಸಾಧನೆ ಮಾಡಿದ ಈ ವಿದ್ಯಾಲಯ ಉಪನ್ಯಾಸಕರ ಮೇಲೆ ವಿಶೇಷ ಜವಾಬ್ದಾರಿಯಿದೆ ಎಂದರು. ಉಪನ್ಯಾಸಕ ಎ.ಬಿ. ಗೌಡಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು.ಸರಕಾರಿ ಪ.ಪೂ. ಕಾಲೇಜಿನ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಬಸವರಾಜ ಕುಂಚನೂರ ಪಂಡಿತ ಜವಾಹರಲಾಲ ನೆಹರು ರವರ ಭಾವಚಿತ್ರಕ್ಕೆ ಪೂಷ್ಪಾರ್ಚಣೆ ಮಾಡುವ ಮೂಲಕ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ವಿಜಯಪುರ – ಗದಗ ತೋಂಟದಾರ್ಯ ಮಠದ ಹೆಸರಿನಿಂದ ಕನ್ನಡ ಪುಸ್ತಕ ಪರಿಷತ್ತು, ವಿಜಯಪುರ ಇವರೂ ಕೊಡಮಾಡುವ ೨೦೨೪ ರ “ಡಾ ತೋಂಟದ ಸಿದ್ಧಲಿಂಗ ಶ್ರೀ ಸಮಗ್ರ ಸಾಹಿತ್ಯ ಪ್ರಶಸ್ತಿ” ಗೆ ಗಡಿಭಾಗ ಚಡಚಣದ ಕ್ರಿಯಾಶೀಲ ಯುವ ಸಾಹಿತಿ ವಿದ್ಯಾ ಕಲ್ಯಾಣಶೆಟ್ಟಿ ಅವರು ಆಯ್ಕೆ ಆಗಿದ್ದಾರೆ.ನ.೧೯ ರಂದು ಭಾರತದ ಶ್ರೇಷ್ಠ ಚಿಂತಕ ಮ ನು ಬಳೆಗಾರ ಮತ್ತು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಅವರು ಪ್ರಶಸ್ತಿ ಪ್ರದಾನ ಮಾಡುವರು ಎಂದು ಕನ್ನಡ ಪುಸ್ತಕ ಪರಿಷತ್ತು ಪ್ರಧಾನ ಕಾರ್ಯದರ್ಶಿಯಾದ ಶಂಕರ ಬೈಚಬಾಳ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಪ್ರಾಥಮಿಕ ಶಾಲೆಯಲ್ಲಿ ವೈಶಿಷ್ಟ್ಯ ಪೂರ್ಣ ಮಕ್ಕಳ ದಿನಾಚರಣೆ ಹಾಗೂ ಜವಾಹರಲಾಲ್ ನೇಹರು ರವರ ಜಯಂತಿಯನ್ನು ಆಚರಿಸಲಾಯಿತು.ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಶಿವರಾಜ ಸಾರಂಗಮಠ ಹಾಗೂ ಸಮರ್ಥ ಅಗಸರ ಚಾಚಾ ನೇಹರು ವೇಷದಲ್ಲಿ ಉಪಸ್ಥಿತರಿದ್ದರು.ಶಾಲೆಯಲ್ಲಿ ಶಿಶು ವಿಹಾರದಿಂದ ಹಿಡಿದು 7ನೇ ತರಗತಿಯ ಎಲ್ಲಾ ಮಕ್ಕಳಿಗೋಸ್ಕರ ವಿವಿಧ ಮನೋರಂಜನಾ ಕ್ರೀಡಾ ಪ್ರಬಂಧ , ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಕ್ರಮಾಂಕ ಪಡೆದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಹಿತ್ಯ ಒಳಗೊಂಡ ಬಹುಮಾನ ನೀಡಲಾಯಿತು.ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎಸ್.ಆಯ್.ಜೋಗೂರ ಮಕ್ಕಳ ದಿನಾಚರಣೆಯನ್ನು ಬಹಳ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಿದ್ದು ಶಾಲೆಯ ಹಾಗೂ ಶಿಕ್ಷಕರ ಶಿಷ್ಟಾಚಾರ ಎದ್ದುಕಾಣುತ್ತದೆ. ಮಕ್ಕಳ ಪಾಲಿಗೆ ಈ ದಿನ ಅತ್ಯಂತ ಮಹತ್ವ ಪಡೆದಿದೆ ಹಾಗಾಗಿ ನಮ್ಮ ಶಾಲೆಯು ನಮ್ಮ ಮಕ್ಕಳ ಸಂತೋಷವನ್ನು ವಿವಿಧ ಚಟುವಟಿಕೆಗಳ ಮಾಡಿಸುವುದರ ಮುಖಾಂತರ ದ್ವಿಗುಣ ಗೊಳಿಸಿರುವುದು ಶಿಕ್ಷಕರ ಕಾರ್ಯ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯಭೇರಿ ಸಾಧಿಸಿದ ಹಿನ್ನೆಲೆಯಲ್ಲಿ ಜಯಭೇರಿ ಸಾಧಿಸಿದ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.ಗಾಂಧೀವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಬಿಜೆಪಿ ಬಾವುಟ ಹಿಡಿದು ಸಂಭ್ರಮೋತ್ಸವದಲ್ಲಿ ಭಾಗಿಯಾದರು. ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನಿಸಿ ವಿಜಯೋತ್ಸವ ಸಂಭ್ರಮದಲ್ಲಿ ಮಿಂದೆದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ಬಿಜೆಪಿಯ ಜನಪರ ನಿಲುವಿಗೆ ಬಿಹಾರ ಜನತೆ ಗೆಲುವಿನ ಉಡುಗೊರೆ ನೀಡಿದ್ದಾರೆ. ಬಿಹಾರ ಸರ್ವತೋಮುಖ ವಿಕಾಸವನ್ನು ಕೇಂದ್ರವಾಗಿರಿಸಿಕೊಂಡು ಚುನಾವಣೆ ಎದುರಿಸಿದ್ದ ಬಿಜೆಪಿಗೆ ಬಿಹಾರ ಜನತೆ ಮತ್ತೊಮ್ಮೆ ಆಶೀರ್ವದಿಸಿದ್ದಾರೆ, ವಿನಾಕಾರಣ ಬಿಜೆಪಿಯ ಕೇಂದ್ರ ಸರ್ಕಾರಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿರುವ ಕಾಂಗ್ರೆಸ್ ಮೊದಲಾದ ಪಕ್ಷಗಳಿಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಜನತೆ ಬಿಜೆಪಿಯೊಂದಿಗೆ ಇದ್ದಾರೆ ಎಂಬುದು ಇನ್ನೊಮ್ಮೆ ಸಾಬೀತಾಗಿದೆ, ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಈ ಬಿಹಾರ ಚುನಾವಣೆಯೇ ದಿಕ್ಸೂಚಿ, ಇಲ್ಲಿಯೂ ಬಿಜೆಪಿ ಅತ್ಯಂತ ದಾಖಲೆಯೊಂದಿಗೆ ವಿಜಯ ಸಾಧಿಸಲಿದೆ, ಪ್ರಧಾನಿ ನರೇಂದ್ರ…

Read More

ಮಕ್ಕಳ ದಿನಾಚರಣೆ ಪ್ರಯುಕ್ತ ಅಕಾಡೆಮಿ ಕೇಂದ್ರ ಕಛೇರಿಗೆ ವಿಶೇಷ ದೀಪಾಲಂಕಾರ | ಬೆಳಿಗ್ಗೆಯಿಂದ ಸಂಜೆವರೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಉದಯರಶ್ಮಿ ದಿನಪತ್ರಿಕೆ ಧಾರವಾಡ: ದೇಶದ ಮೊದಲ ಪ್ರಧಾನಿಯಾಗಿ ನವ ಭಾರತದ ನಿರ್ಮಾಣಕ್ಕೆ ಅಡಿಪಾಯ ಹಾಕಿದವರು ಪಂಡಿತ ಜವಾಹರಲಾಲ ನೆಹರೂಜಿಯವರು. ಅವರ ಆದರ್ಶಗಳು ಸದಾ ನಮ್ಮೆಲ್ಲರಿಗೂ ಪ್ರೇರಣೆ ನೀಡುವಂತಹವು. ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ನೆಹರೂ ರವರು ತಮ್ಮ ಜನ್ಮ ದಿನವನ್ನು ದೇಶದ ಮಕ್ಕಳಿಗಾಗಿ ಸಮರ್ಪಿಸಿದವರು. ಇಂದು ಮಕ್ಕಳ ದಿನಾಚರಣೆಯನ್ನು ನಾವೆಲ್ಲ ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಮಕ್ಕಳೇ ನಾಡಿನ ನಾಳಿನ ಭವಿಷ್ಯ ಆಶಾಕಿರಣಗಳಾಗಿದ್ದು, ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಾ ಬದ್ಧವಾಗಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಅವರು ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಕೇಂದ್ರ ಕಚೇರಿಯಲ್ಲಿ ನಾಡಿನ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಮುದ್ದು ಮಕ್ಕಳ ಸಮ್ಮುಖದಲ್ಲಿ ಮಕ್ಕಳ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.ಮಕ್ಕಳ ದಿನಾಚರಣೆ ಪ್ರಯುಕ್ತ ಅಕಾಡೆಮಿಯ ಕೇಂದ್ರ ಕಛೇರಿಗೆ ವಿಶೇಷ ದೀಪಾಲಂಕಾರ ವ್ಯವಸ್ಥೆಯನ್ನು ಮಾಡಲಾಗಿತ್ತು. ಜೊತೆಗೆ…

Read More