ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ‘ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನಾಚರಣೆ’ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಮ್ಮ ಜೀವನದ ದಿನಿತ್ಯದಲ್ಲಿ ಸಂಖ್ಯಾಶಾಸ್ತ್ರ ಪ್ರಮುಖ ಪಾತ್ರವಹಿಸುತ್ತಿದ್ದು ಮಾಹಿತಿ ಪ್ರತಿಯೊಂದು ಹಂತದಲ್ಲೂ ಸೃಷ್ಟಿಯಾಗುತ್ತದೆ ಆರೋಗ್ಯ ಪರೀಕ್ಷೆಯಿಂದ ಮಳೆ ಅಂಕಿ ಅಂಶಗಳವರೆಗೆ, ಕಂಪನಿಗಳ ಮಾರಾಟದವರೆಗೆ, ಮಣ್ಣಿನ ಪರೀಕ್ಷೆಯವರೆಗೆ. ಈ ಅಂಕಿ ಅಂಶಗಳಿಗೆ ಅರ್ಥ ಕೊಡುವುದು ಸಂಖ್ಯಾಶಾಸ್ತ್ರ ಎಂದು ಧಾರವಾಡದ ಕೃಷಿ ಕಾಲೇಜಿನ ಕೃಷಿ ಸಂಖ್ಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಡಾ. ಆಶಾಲತಾ ಕೆ.ವಿ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಸಂಖ್ಯಾಶಾಸ್ತ್ರ ವಿಭಾಗದ ಸಹಯೋಗದಲ್ಲಿ ಸೋಮವಾರದಂದು ಜರುಗಿದ ‘ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ, ಶೈಕ್ಷಣಿಕ ಮತ್ತು ಸಂಶೋಧನೆಯಲ್ಲಿ ಅಂಕಿ ಅಂಶಗಳ ಪಾತ್ರವನ್ನು ಒತ್ತಿ ಹೇಳಿದರು. ಸಂಖ್ಯಾಶಾಸ್ತ್ರವೆಂಬ ಸ್ನೇಹಿತನ ಸಹಕಾರವಿಲ್ಲದೆ ಯಾವುದೇ ವಿಜ್ಞಾನವೂ ಸಂಪೂರ್ಣವಾಗುವುದಿಲ್ಲ ಅಲ್ಲದೆ ಎಲ್ಲಾ ವಿಜ್ಞಾನಗಳಿಗೆ ಸಂಖ್ಯಾಶಾಸ್ತ್ರ ಒಳ್ಳೆಯ ಗೆಳೆಯ”. ವೈದ್ಯಕೀಯ ಕ್ಷೇತ್ರದಲ್ಲಿ, ಬಾಡಿ ಮಾಸ್ ಇಂಡೆಕ್ಸ್ ಅಂಕಿಅಂಶಗಳ ಮೂಲಕ ಅಳೆಯಲಾಗುತ್ತದೆ. ಔಷಧಿಗಳ ಪ್ರಮಾಣ ನಿಗದಿಪಡಿಸುವುದೂ ದೊಡ್ಡ ಮಟ್ಟದ ಅಂಕಿಅಂಶಗಳ ಅಧ್ಯಯನದ ಫಲಿತಾಂಶವೆಂದು ಅವರು ಹೇಳಿದರು.
ಪ್ರತಿಯೊಂದು ವಿಜ್ಞಾನಕ್ಕೂ ಸಂಖ್ಯಾಶಾಸ್ತ್ರಜ್ಞರ ಅಗತ್ಯವಿದೆ. ಸಂಖ್ಯಾಶಾಸ್ತ್ರವಿಲ್ಲದೆ ಸಂಶೋಧನೆ ಅಪೂರ್ಣ, ನಿರ್ಧಾರಗಳು ಅನಿಶ್ಚಿತ, ಪ್ರಗತಿ ಕಷ್ಟ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಅವರು ಮಾತನಾಡಿ, ನಮ್ಮ ಜೀನವದ ಪ್ರತಿ ಕ್ಷಣವೂ ಸಂಖ್ಯಾಶಾಸ್ತçವು ಬಳಕೆಯಾಗುತ್ತಿದ್ದು ಅಂಕಿ ಸಂಖ್ಯೆಗಳು ಪ್ರಮುಖ ಪಾತ್ರವಹಿಸುತ್ತವೆ. ಶಿಕ್ಷಣ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಂಖ್ಯಾಶಾಸ್ತ್ರದ ವ್ಯಾಪಕ ಅನ್ವಯಿಕೆಗಳ ಬಗ್ಗೆ ಮಾತನಾಡಿದರು.
ಸುಸ್ಥಿರ ಅಭಿವೃದ್ದಿ ಸಾಧಿಸುವಲ್ಲಿ ಸಂಖ್ಯಾಶಾಸ್ತ್ರ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ನಿತ್ಯ ವ್ಯವಹಾರಿಕವಾಗಿ ಅಂಕಿ ಸಂಖ್ಯೆಗಳು ಅತ್ಯಂತ ಅವಶ್ಯಕವಾಗಿವೆ ಎಂದು ಹೇಳಿದರು.
ಈ ವೇಳೆಯಲ್ಲಿ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹುಚ್ಚೇಶ ಬೂದಿಹಾಳ, ಮಾತನಾಡಿ, ನಮ್ಮ ದಿನನಿತ್ಯ ಜೀವನದಲ್ಲಿ ಅಂಕಿ ಸಂಖ್ಯೆಗಳು ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ಡಾ. ಧರ್ಮಗುರು ಪ್ರಸಾದ ಮಾತನಾಡಿದರು.
ಈ ಸ೦ದರ್ಭದಲ್ಲಿ ಪಿಯುಸಿ ಪ್ರಾಚಾರ್ಯ ಪ್ರೊ.ಸಿ. ಬಿ. ಪಾಟೀಲ, ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹುಚ್ಚೇಶ ಬೂದಿಹಾಳ,ಪೊ. ಜಯಶ್ರೀ ಡಿ. ಹೊರಕೇರಿ, ಪೊ. ಶೈಲಾ ಬ ನಗನೂರ, ಪೊ. ರಾಜೇಶ್ವರಿ ಹಟಗಾರ, ಪೊ. ಶ್ರೀಧರ್ ಜೋಶಿ, ಪೊ. ತಿರುಮಲಾ ಸಾರವಾಡ ಸೇರಿದಂತೆ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.