ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಉಕ್ಕಲಿ ಗ್ರಾಮದ ಗೊಲ್ಲಾಳೇಶ್ವರ ಜಾತ್ರೆಯ ಹಿನ್ನೆಲೆಯಲ್ಲಿ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಶಿವಾನಂದ ಪಾಟೀಲ ಅವರು ಗೊಲ್ಲಾಳೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದುಕೊಂಡರು.
ನಂತರ ಗ್ರಾಮಸ್ಥರು ದೇವಸ್ಥಾನದ ಪರವಾಗಿ ಸಚಿವ ಶಿವಾನಂದ ಪಾಟೀಲ ಹಾಗೂ ಯರನಾಳ ವಿರಕ್ತಮಠದ ಸಂಗನಬಸವ ಸ್ವಾಮೀಜಿಯವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಎ.ಎಂ.ಪಾಟೀಲ, ಸುಭಾಸ ಕಲ್ಯಾಣಿ, ಪಂಡಿತ ಓಜಿ, ಡಾ.ಎಂ.ಎಂ.ಪಾಟೀಲ, ಶೇಖರಗೌಡ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗೊಂಡ ಸಿಂದಗಿ, ಬಾಬು ತಿಕೋಟಾ, ನಿಂಗನಗೌಡ ಬಿರಾದಾರ, ಬಿ.ಬಿ.ಬಿರಾದಾರ, ನಿಂಗೊಂಡ ಕೊಟ್ಲಿ ಇತರರು ಇದ್ದರು.