ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಸೋಮವಾರ ಪಿಐ ಗುರುಶಾಂತ ದಾಶ್ಯಾಳ ಅವರು ಪೊಲೀಸ್ ಠಾಣೆಯ ವ್ಯಾಪ್ತಿಯ ರಡಿ ಮತ್ತು ಕಮ್ಯೂನಲ್ ಗೂಂಡಾಗಳ ಪರೇಡ್ ನಡೆಸಿದರು.
ಪಿಐ ಗುರುಶಾಂತ ದಾಶ್ಯಾಳ ಅವರು, ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದಲ್ಲಿ ನೀವು ಯಾವುದೇ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ ಸಂಘಟಿತ ಅಪರಾಧ ಧರ್ಮ ಸಂಘಟಿತ ಅಪರಾಧದಲ್ಲಿ ಮತ್ತು ಅಕ್ರಮ ಕೂಟಗಳಲ್ಲಿ ಭಾಗವಹಿಸಬಾರದು. ಒಂದು ಇಂತಹ ಘಟನೆಗಳಲ್ಲಿ ಭಾಗವಹಿಸಿದರೆ ನಿಮ್ಮ ಮೇಲೆ ನಿರ್ಧಾಕ್ಷಣ್ಯ ಕ್ರಮ ಕೈಗೊಂಡು ಗಡಿಪಾರು ಮಾಡಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಿಎಸ್ಐಗಳಾದ ಎಂ.ಐ. ಮುಲ್ಲಾ, ಎಂ. ಆರ್.ಕಂಚಗಾರ, ಎಎಸ್ಐ ಎಂ.ಐ. ತಳವಾರ, ಸಿಬ್ಬಂದಿಗಳಾದ ಜಗದೀಶ ತಕ್ಕೋಡ,ಪಿ.ಜಿ.ಅಚನೂರ, ಶಿವಬಸಪ್ಪ ಮೊಕಾಶಿ, ಜಿ.ಎಂ.ಪಲ್ಲೇದ, ಬಸವರಾಜ ಶೇಬಗೊಂಡ, ಎಂ.ಎಚ್.ಹುಗ್ಗೇನವರ, ಮಹಾಂತೇಶ ಸಜ್ಜನ, ವೆಂಕಣ್ಣ ಬಿರಾದಾರ, ಶಿವಬಸಪ್ಪ ಮಾಮನಿ, ಸಂತೋಷಕುಮಾರ ಬಿರಾದಾರ ಇತರರು ಇದ್ದರು.