Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ತಡವಲಗಾ ಗ್ರಾಮದ ಗಣೇಶ ನಗರದ ಶ್ರೀ ಶಾಂತಾಬಾಯಿ ಎಂ ಖೇಡ ಪ್ರೌಢ ಶಾಲೆಯ ವಿದ್ಯಾರ್ಥಿನಿ ರೂಪಾ ದೇವರನಾವದಗಿ ಜಿಲ್ಲಾಮಟ್ಟದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.ವಿಜಯಪುರ ನಗರದ ಕ್ರೀಡಾಂಗಣದಲ್ಲಿ ಬಾಲಕ ಮತ್ತು ಬಾಲಕಿಯರ ಮೇಲಾಟ ಸ್ಪರ್ಧೆಗಳಲ್ಲಿ ಭಾಗವಹಿಸಿ, ಅದರಲ್ಲಿ 100 ಮೀ ಮತ್ತು 200 ಮೀ ಓಟದ ಸ್ಪರ್ಧೆಯಲ್ಲಿ ಪ್ರಥಮ ಬರುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆಂದು ದೈಹಿಕ‌‌ ಶಿಕ್ಷಣ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಹಾಗೂ ಖೇಡ ಶಾಲೆಯ ದೈ.ಶಿ ಪ್ರಕಾಶ ಐರೋಡಗಿ ಮಾಹಿತಿ ನೀಡಿದ್ದಾರೆ.ಇನ್ನು ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ , ಕಾರ್ಯದರ್ಶಿ, ನಿರ್ದೇಶಕರು ಹಾಗೂ ಶಾಲಾ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ವಿಧ್ಯಾರ್ಥಿನಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಮಕ್ಕಳನ್ನು ಬಹಳ ಪ್ರೀತಿಸುತ್ತಿದ್ದರು. ದೇಶದ ಭವಿಷ್ಯಕ್ಕೆ ಮಕ್ಕಳೇ ಅಡಿಪಾಯ ಎಂದು ಬಲವಾಗಿ ನಂಬಿದ್ದರು. ಮಕ್ಕಳ ಹಕ್ಕುಗಳು, ಅವರ ಸುರಕ್ಷತೆ ಮತ್ತು ಉಜ್ವಲ ಭವಿಷ್ಯಕ್ಕಾಗಿ ನಾವು ಏನು ಮಾಡಬೇಕು ಎಂಬುದರ ಬಗ್ಗೆ ಈ ದಿನ ನಮಗೆ ನೆನಪಿಸುತ್ತದೆ. ಮಕ್ಕಳ ಸಂತೋಷ ಮತ್ತು ಅವರ ಉತ್ತಮ ಬೆಳವಣಿಗೆಯಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಹೇಳಿದರು.ತಾಲೂಕಿನ ಕನ್ನೊಳ್ಳಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳ ದಿನಾಚರಣೆ ನಿಮಿತ್ಯವಾಗಿ ಶಿಕ್ಷಕರ-ಪೋಷಕರ ಮಹಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಕರು-ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಗಟ್ಟಿಯಾಗಿ ಓದಿಸಬೇಕು. ಉತ್ತಮ ಕಲಿಕಾ ಪ್ರಗತಿ, ಶಾಲೆಯಲ್ಲಿ ದಾಖಲಾತಿ ಮತ್ತು ಹಾಜರಾತಿ ಇರಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪೂರ್ವ ಸಿದ್ಧತೆ, ಪರೀಕ್ಷಾ ಭಯ ನಿವಾರಣೆ, ಪಾಠ ಆಧಾರಿತ ಮೌಲ್ಯಮಾಪನ, ವಿಶ್ಲೇಷಣೆ ಸೇರಿದಂತೆ ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣಾ ನೀತಿ, ಬಾಲ್ಯ ವಿವಾಹ ನಿಷೇಧ,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಗೋಲಗೇರಿ ಶ್ರೀ ಸಿದ್ಧರಾಮ ಸ್ವಾಮೀಜಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಗೋಲಗೇರಿ ಕ್ಲಸ್ಟರ್ ಮಟ್ಟದಲ್ಲಿ ಹಮ್ಮಿಕೊಂಡ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕ ಗುರುರಾಜ ಹುರಕಡ್ಲಿ ಉದ್ಘಾಟಿಸಿದರು.ಈ ವೇಳೆ ನಿರ್ದೇಶಕರಾದ ಎಚ್.ಬಿ.ಚಿಂಚೋಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಂಯೋಜಕ ಎಂ.ಪಿ.ಬೀಸೆ, ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಶ್ರೀಶೈಲ ಜಾಲವಾದಿ, ಗೋಲಗೇರಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಶರಣು ಚಟ್ಟಿ, ಪಾರ್ಚಾರ್ಯ ಶ್ರೀಮಂತ ಕೆ.ಎಸ್, ವ್ಹಿ.ಟಿ.ಹಿರೇಕುರುಬರ, ಪ್ರಕಾಶ ಓಂಕಾರ, ಶಿವಶಂಕರ ಬಿರಾದಾರ, ಮುಖ್ಯೋಪಾಧ್ಯಾಯ ವೈ.ಎಚ್.ಪೂಜಾರಿ, ಎಸ್.ಎಚ್.ಕುಂಬಾರ, ಪ್ರಕಾಶ್ ನಾಯಕ್,ಪಿ.ಎಂ.ಶೇಖ್, ಜೆ.ಎಸ್.ದೊಡಮನಿ, ಎಸ್.ಕೆ.ಬಿರಾದಾರ, ಎಂ.ಎಸ್.ಚೌಧರಿ, ಡಿ.ಎಸ್.ಹಿರೇಮಠ ಸಿ.ಎಸ್.ಹಿರೇಮಠ ಸೇರಿದಂತೆ ಕ್ಲಸ್ಟರ್‌ನ ಶಿಕ್ಷಕರು ಉಪಸ್ಥಿತರಿದ್ದರು. ಕಿರಿಯ, ಹಿರಿಯ, ಪ್ರೌಢ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.ಈ ವೇಳೆ ಕ್ಲಸ್ಟರ್ ಹಂತದಿಂದ ತಾಲೂಕು ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಒಂದು ಮಗು ವಿದ್ಯೆ ಕಲಿತ ಬಳಿಕ ವೈದ್ಯೆ, ಇಂಜಿನಿಯರಿಂಗ್ ಕೆಲಸದಲ್ಲಿ ತೊಡಗಿ ಬಿಡುವಿಲ್ಲದೇ ತಂದೆ-ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಸ್ವಾರ್ಥ ಜೀವನವನ್ನು ನಡೆಸುತ್ತಿದ್ದಾರೆ. ಕಾರಣ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದಾಗ ಮಾನವೀಯ ಗುಣ ಬೆಳೆಯಲು ಸಾಧ್ಯ. ಅನಾಥ ಮಕ್ಕಳ ಸರ್ವತೋಮುಖ ಬೆಳೆವಣಿಗೆಯಾಗಲೂ ಸಾಧ್ಯ ಎಂದು ಮಹಾಂತ ಸ್ವಾಮೀಜಿ ಹೇಳಿದರು.ಸಿಂದಗಿ ಪಟ್ಟಣದ ಹೊರವಲಯದಲ್ಲಿರುವ ಭೀಮಾ ಯುನಿವರ್ಸಲ್ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಇಂಡಿ ತಾಲೂಕಿನ ಝಳಕಿಯ ಶಿವಶಂಕರ ವಿದ್ಯಾವರ್ಧಕ ಸಂಘದ ಧೂಳಖೇಡದಲ್ಲಿ ನಡೆಯುವ ಶ್ರೀಚಂದ್ರಶೇಖರ ಶ್ರವಣ ದೋಷವುಳ್ಳ ಮಕ್ಕಳ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಂದ ಮಲ್ಲಗಂಬ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಪ್ರತಿಭೆಯನ್ನು ಭೀಮಾದಂತಹ ಶಾಲೆಗಳು ಗುರುತಿಸಿ ಇಂತಹ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.ಈ ವೇಳೆ ಮಕ್ಕಳ ಜನಪದ ಹಾಡು, ನೃತ್ಯ, ಉತ್ತರ ಕರ್ನಾಟಕದ ಜೋಗತಿ ನೃತ್ಯ, ಅಪ್ಪಟ ಜಾನಪದ ಕಲೆ, ತಲೆಯ ಪಡವಣ ಹೊತ್ತುಕೊಂಡು ನೃತ್ಯ ಪ್ರದರ್ಶನ, ಶಿಕ್ಷಕ ಆಂಗಿಕ ಸಂಜ್ಞೆ ಮೂಲಕ…

Read More

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಡಿಜಿಟಲ್ ವೇದಿಕೆಗಳು ಪತ್ರಿಕೋದ್ಯಮದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಮುನ್ನುಡಿ ಬರೆದಿದ್ದು, ಜಗತ್ತಿನ ಪ್ರತಿಯೊಂದು ಘಟನೆಯು ಕ್ಷಣಾರ್ಧದಲ್ಲಿ ಅಂಗೈ ತಲುಪುತ್ತಿದೆ ಎಂದು ಪ್ರೋ. ಪವನಕುಮಾರ ಮಹೇಂದ್ರಕರ ಹೇಳಿದರು.ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ನ.೧೪ ರಂದು ಹಮ್ಮಿಕೊಳ್ಳಲಾಗಿದ್ದ ‘ಡಿಜಿಟಲ್ ವೇದಿಕೆಗಳು ಮತ್ತು ಪತ್ರಿಕೋದ್ಯಮದಲ್ಲಿ ಅವುಗಳ ಪಾಮುಖ್ಯತೆ’ ಎಂಬ ವಿಷಯದ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಪತ್ರಿಕೋದ್ಯಮದ ವ್ಯಾಪ್ತಿ ಇಂದು ವಿಶಾಲವಾಗಿದೆ. ಇದು ಡಿಜಿಟಲ್ ಯುಗ, ಮಾಹಿತಿ ತಂತ್ರಜ್ಞಾನದ ಯುಗ ಎಲ್ಲ ಮಾಹಿತಿಗಳು ನಮ್ಮ ಬೆರಳ ತುದಿಯಲ್ಲಿಯೇ ಸಿಗುತ್ತವೆ. ಯುವ ಪತ್ರಕರ್ತರು ವಿದ್ಯಾರ್ಥಿ ದೆಸೆಯಿಂದಲೇ ನವ ಮಾಧ್ಯಮಗಳು ಅಂದರೆ ಡಿಜಿಟಲ್ ವೇದಿಕೆಗಳನ್ನು ಬಳಸುವುದನ್ನು ಕಲಿತುಕೊಳ್ಳಬೇಕು ಎಂದರು.ವೆಬ್ ಪುಟಗಳು, ಯೂಟ್ಯೂಬ್, ಫೇಸ್ಬುಕ್, ವಾಟ್ಸಪ್ಪ್, ಬ್ಲಾಗ್, ಟೆಲಿಗ್ರಾಮ್, ಇನ್ಸ್ಟಾಗ್ರಾಮ್…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರತಿಯೊಬ್ಬ ಭಾರತೀಯನು ನಮ್ಮ ರಾಷ್ಟçವನ್ನು ಬಲಿಷ್ಟ ಮತ್ತು ಸಮರ್ಥಗೊಳಿಸಲು ಕೆಲಸ ಮಾಡಬೇಕು. ಒಂದು ಶಕ್ತಿಶಾಲಿ ರಾಷ್ಟçಕ್ಕಾಗಿ ನಾವೆಲ್ಲರು ಒಟ್ಟಾಗಿ ಶ್ರಮಿಸಬೇಕಾಗಿದೆ ಎಂದು ರಾಷ್ಟಿçಯ ಯುವಜನೋತ್ಸವ ಸಮಿತಿ ಸದಸ್ಯ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ. ಜಾವೀದ ಜಮಾದಾರ ಕರೆ ನೀಡಿದರು.ನಗರದ ಕಂದಗಲ ಹಣಮಂತ್ರಾಯ ರಂಗಮಂದಿರದಲ್ಲಿ ಭಾರತ ಸರ್ಕಾರದ ಯುವಕಾರ್ಯ ಮತ್ತು ಕ್ರೀಡಾ ಮಂತ್ರಾಲಯ ಎನ್.ಎಸ್.ಎಸ್. ಕೇಂದ್ರ ಸಂವನ ಇಲಾಖೆ, ಮೆರಾ ಭಾರತ ಕೇಂದ್ರ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸರದಾರ ವಲ್ಲಭಾಯಿ ಪಟೇಲ ಅವರ ೧೫೦ನೇ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಏಕತಾ ಯುವ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ, ಭಾರತವು ಭಾಷೆ, ಧರ್ಮ ಮತ್ತು ಸಂಸ್ಕೃತಿಯ ವೈವಿದ್ಯತೆಗಳ ಸಮ್ಮಿಲನವಾಗಿದೆ. ಈ ವೈವಿದ್ಯತೆಯೇ ನಮ್ಮ ದೇಶದ ಶಕ್ತಿ. ನಮ್ಮ ಭಿನ್ನತೆಗಳು ಹೊರತಾಗಿಯು ನಾವು ಒಂದು ಪ್ರಗತಿಶೀಲ ರಾಷ್ಟ್ರಕ್ಕಾಗಿ ಒಗ್ಗಟ್ಟಾಗಿ ನಿಲ್ಲಬೇಕು. ಒಗ್ಗಟ್ಟು, ಶಾಂತಿ ಮತ್ತು ಗೌರವದಿಂದ ಕೂಡಿದ ಸಹಬಾಳ್ವೆಯೇ ನಮ್ಮ ದೇಶದ ಬಲ. ಯುವಜನತೆ ದೇಶದ ಅಮೂಲ್ಯ ಸಂಪನ್ಮೂಲ.…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ :“ಮಕ್ಕಳು ದೇವರ ಪ್ರತಿರೂಪ. ಸುಳ್ಳು–ಮೋಸಗಳ ಅರಿವು ಇಲ್ಲದ ಶುದ್ಧ ಜೀವಿಗಳು. ಅವರ ಶಿಕ್ಷಣ ಹಕ್ಕು ಹಾಗೂ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ಹೋರಾಡಬೇಕು,” ಎಂದು ಶಿಕ್ಷಕ ಬಸವರಾಜ ಕರಜಗಿ ಹೇಳಿದರು.ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. ೨, ಮರಡಿಯಲ್ಲಿ ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿದ್ದ ಪಂಡಿತ ಜವಾಹರಲಾಲ್ ನೆಹರೂ ಅವರ ಜನ್ಮದಿನದ ಅಂಗವಾಗಿ ಮಕ್ಕಳ ದಿನಾಚರಣೆ ಹಾಗೂ ಪೋಷಕ–ಶಿಕ್ಷಕರ ಮಹಾಸಭೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು. “ಇಂದಿನ ಮಕ್ಕಳೇ ಭವ್ಯ ಭಾರತದ ನಾಳೆಯ ಪ್ರಜೆಗಳು. ಉತ್ತಮ ಸಂಸ್ಕಾರಯುತ ಮಕ್ಕಳನ್ನು ಸಮಾಜಕ್ಕೆ ನೀಡುವುದು ಪೋಷಕರ ಕರ್ತವ್ಯ,” ಎಂದು ತಿಳಿಸಿದರು.ಶಿಕ್ಷಕ ಡಿ.ಎಸ್. ಬಗಲಿ ಮಾತನಾಡಿ, “ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು, ರಾಗಿಮಾಲ್ಟ್ ಹಾಗೂ ಕೇನೆ ಭರಿತ ಹಾಲು, ಪಠ್ಯಪುಸ್ತಕ, ಸಮವಸ್ತ್ರ ,ಶೂ–ಸಾಕ್ಸ್, ವಿದ್ಯಾರ್ಥಿವೇತನ ಮೊದಲಾದ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಮಕ್ಕಳು ಭವಿಷ್ಯ ರೂಪಿಸಿಕೊಳ್ಳಬೇಕು,” ಎಂದು ಸಲಹೆ ನೀಡಿದರು.ಶಿಕ್ಷಕ ಜಗದೀಶ ಚಲವಾದಿ ಮಾತನಾಡಿ, ಮಕ್ಕಳ ಗುಣಾತ್ಮಕ ಕಲಿಕೆಗಾಗಿ ಸರ್ಕಾರದ ಯೋಜನೆಗಳಾದ ಓದು…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಆ ದಂಪತಿಗಳಿಗೆ ಮಕ್ಕಳಿರಲಿಲ್ಲ.. ಬಹಳಷ್ಟು ವರ್ಷಗಳ ಕಾಲ ಮಕ್ಕಳಿಗಾಗಿ ಹಾತೊರೆದ ಆ ದಂಪತಿಗಳು ತಮ್ಮ ನೋವನ್ನು ಮರೆಯಲು ಸಾಧ್ಯವಾಗಿರಲಿಲ್ಲ. ಅದೊಂದು ದಿನ ಕಾರ್ಯನಿಮಿತ್ತ ತಮ್ಮ ಊರಿನಿಂದ ಮತ್ತೊಂದು ಊರಿಗೆ ತೆರಳಿದಾಗ ದಾರಿಯಲ್ಲಿ ದಣಿವನ್ನು ಆರಿಸಿಕೊಳ್ಳಲು ಕುಳಿತುಕೊಳ್ಳಬೇಕೆಂದರೆ ಒಂದೇ ಒಂದು ಮರ ಇಲ್ಲದೆ ಇರುವುದು ಗಮನಕ್ಕೆ ಬಂತು. ಕೂಡಲೇ ಕಾರ್ಯ ಪ್ರವೃತ್ತರಾದ ದಂಪತಿಗಳು ಸುಮಾರು ನಾಲ್ಕೈದು( 2.8 ಮೈಲಿ ) ಕಿಲೋಮೀಟರ್ ದೂರದವರೆಗಿನ ರಸ್ತೆಯಲ್ಲಿ ತಾವೇ ಗುಂಡಿಗಳನ್ನು ತೋಡಿ ಸಸಿಗಳನ್ನು ನೆಟ್ಟು ಪ್ರತಿದಿನ ಅವುಗಳಿಗೆ ನೀರುಣಿಸತೊಡಗಿದರು.ಮೊದಮೊದಲು ಈ ದಂಪತಿಗಳ ಕೃತ್ಯವನ್ನು ನೋಡಿ ಜನ ತಮಾಷೆ ಮಾಡಿ ನಗುತ್ತಿದ್ದರು. ಬೇರೆ ಕೆಲಸ ಇಲ್ಲ ಇವರಿಗೆ ಎಂದು ಹೀಯಾಳಿಸುತ್ತಿದ್ದರು ಮುಂದಿನ ಕೆಲವೇ ವರ್ಷಗಳಲ್ಲಿ ಆ ಮರಗಳು ಬೆಳೆದು ನಿಂತು ಆ ಹಾದಿಯಲ್ಲಿ ಹೋಗುವ ಜನರಿಗೆ ನೆರಳನ್ನು ನೀಡತೊಡಗಿದವು.ಸಾವಿರಾರು ಪಕ್ಷಿಗಳಿಗೆ ಆಶ್ರಯ ತಾಣವಾಗಿ ಆ ದಾರಿಯಲ್ಲಿ ಹಾದು ಹೋಗುವ ಜನರಿಗೆ, ಜಾನುವಾರುಗಳಿಗೆ ನೆರಳನ್ನು ನೀಡುವ ಮರಗಳ…

Read More

ಡಾ. ಎಂ.ಎಂ.ಕಲಬುರ್ಗಿ ಸಮಗ್ರ ಸಾಹಿತ್ಯ 40 ಸಂಪುಟಗಳ ಲೋಕಾರ್ಪಣೆ ಅಂಗವಾಗಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಶರತಚಂದ್ರ ಸ್ವಾಮೀಜಿ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಂಶೋಧನೆಗಳು ಸತ್ಯದಿಂದ ಕಡೆಗೆ ಹೋಗಬೇಕು ಎಂಬ ತತ್ವದಡಿ ಡಾ. ಎಂ. ಎಂ. ಕಲಬುರ್ಗಿ ಅವರು ಸಂಶೋಧನೆ ನಡೆಸುತ್ತಿದ್ದರು ಎಂದು ಮೈಸೂರಿನ ಕುಂದೂರು ಮಠದ ಡಾ. ಶರತಚಂದ್ರ ಸ್ವಾಮಿಗಳು ಹೇಳಿದ್ದಾರೆ.ಶನಿವಾರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಗ್ರಂಥಾಲಯ ಸಭಾಂಗಣದಲ್ಲಿ ಡಾ. ಎಂ. ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ 40 ಸಂಪುಟಗಳ ಲೋಕಾರ್ಪಣೆ ಅಂಗವಾಗಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಅನುಭಾವದ ಸಂಶೋಧನೆ ಮತ್ತು ಆಸಕ್ತಿ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಲೇಖನಿಗೆ ದೊಡ್ಡ ಶಕ್ತಿಯಿದೆ. ಸತ್ಯ ಸಂಶೋಧನೆ ಸಮಾಜಕ್ಕೆ ಪೂರಕವಾಗಿದ್ದರೆ, ಪೀತ ಸಂಶೋಧನೆ ಮಾರಕವಾಗಿದೆ. ನಂಬಿಕೆಗಿಂತ ಸತ್ಯವನ್ನು ಸಂಶೋಧಿಸುವ ಗುಣ ಬೆಳೆಸಿಕೊಳ್ಳಬೇಕು. ಸಂಶೋಧನೆಯಂದೆ ಭೂಮಿಯಿಂದ ಚಿನ್ನ ತೆಗೆದಂತೆ. ಕಾಲ ಗರ್ಭದಲ್ಲಿರುವ ಸತ್ಯ ಸಂಗತಿಗಳನ್ನು ಹೆಕ್ಕಿ ತೆಗೆದು ಸಂಸ್ಕೃತಿಯನ್ನು ಕಟ್ಟುವ…

Read More

ನೂತನ ವಿಜಯಪುರ ಸೌಹಾರ್ದ ಸಹಕಾರಿ ಒಕ್ಕೂಟಕ್ಕೆ ಅವಿರೋಧ ಆಯ್ಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನೂತನ ವಿಜಯಪುರ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷರಾಗಿ ಸಂಜಯ ಪಾಟೀಲ (ಕನಮಡಿ) ಹಾಗೂ ಉಪಾಧ್ಯಕ್ಷರಾಗಿ ಚಂದ್ರಶೇಖರ ಕವಟಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿ.ಸಿ.ಕುದಾಪುರ ಪ್ರಕಟಿಸಿದರು.ಶನಿವಾರ ನಡೆದ ಸಭೆಯಲ್ಲಿ ವಿಜಯಪುರ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ನೂತನ ಆಡಳಿತ ಮಂಡಳಿ ಸದಸ್ಯರಾದ ಅರುಣ ವಾರದ್,ಸುರೇಶ ಬಿರಾದಾರ್,ಸಿದ್ದು ಮಲ್ಲಿಕಾರ್ಜುನಮಠ, ಅರುಣಮಠ,ಮೋನೇಶ ಪತ್ತಾರ,ಸತೀಶ ಶಿಂತ್ರೆ,ವಿವೇಕಾನಂದ ಶಿರೋಳ್ಕರ್, ಯಮನಪ್ಪ ಸಾತಿಹಾಳ್ (ವಿಜಯಪುರ ಗ್ರಾಮಾಂತರ),ಭಾಲಚಂದ್ರ ಮುಂಜಾನೆ (ಬಸವನ ಬಾಗೇವಾಡಿ )ರಾಜು ಹಂಚಾಟೆ( ಮುದ್ದೇಬಿಹಾಳ ), ಆರ್.ಡಿ.ಕುಲಕರ್ಣಿ (ಸಿಂದಗಿ), ಚಂದ್ರಕಾಂತ ಪಾಟೀಲ (ಚಡಚಣ ತಾ. ಇಂಡಿ),ಮಲಕಪ್ಪ ರೊಟ್ಟಿ (ತಾಂಬಾ, ಇಂಡಿ) ಹಾಗೂ ಸಹಕಾರ ಭಾರತಿ ಜಿಲ್ಲಾ ಸಂಘಟನೆ ಕಾರ್ಯದರ್ಶಿ ದೀಪಕ ಶಿಂತ್ರೆ ಮತ್ತು ಪ್ರಧಾನ ಕಾರ್ಯದರ್ಶಿ ಪರಶ್ರಾಮ ಚಿಂಚಲಿ ಉಪಸ್ಥಿತರಿದರು .

Read More