ಉದಯರಶ್ಮಿ ದಿನಪತ್ರಿಕೆ
ಆಲಮೇಲ: ವರ್ಷದ ೧೨ ತಿಂಗಳಲ್ಲಿ ಒಂದು ಪವಿತ್ರವಾದ ಮಾಸ ವೆಂದರೆ ಅದು ಶ್ರಾವಣ ಮಾಸ ಈ ಮಾಸದಲ್ಲಿ ಬಹಳ ವಿಶೇಷವಾಗಿ ಆಚರಿಸುವುದರೊಂದಿಗೆ ನಾವು ಒಳ್ಳೇಯದನ್ನು ಮಾತನಾಡಿ, ಒಳ್ಳೆಯದನ್ನು ಕೇಳಿ, ಒಳ್ಳೆಯ ಜಾಗಕ್ಕೆ ಹೋಗಿ, ಒಳ್ಳೆಯ ನುಡಿಗಳನ್ನು ಕೇಳಿ ಪಾಲಿಸಿಕೊಂಡು ಹೋದಾಗ ಮಾತ್ರ ಈ ತಿಂಗಳಿಗೆ ಒಂದು ಅರ್ಥ ಬರುತ್ತದೆ ಎಂದು ಬಡದಾಳದ ಡಾ.ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಹೇಳಿದರು.
ಅವರು ತಾಲೂಕಿನ ದೇವರನಾವದಗಿ ಗ್ರಾಮದ ಮಲ್ಲಿಕಾರ್ಜುನ ಹಾಗೂ ಸೋಮೇಶ್ವರ ದೇವರ ಜಾತ್ರಾ ಮಹೋತ್ಸವದ ಪುರಾಣ ಮಹಾಮಂಗಲ ಹಾಗೂ ಧರ್ಮಸಭೆಯನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.
ಜಗತ್ತನಲ್ಲಿ ಮನೆ ಕಟ್ಟಬೇಕಾದರೆ ಬೇರೆ ಬೇರೆ ದೇಶದವರು ಮನೆಯ ಕೋಲಿಗೆ ಬೇರೆ ಬೇರೆ ಹೆಸರಿಡುತ್ತಾರೆ. ಆದರೆ ನಮ್ಮ ಭಾರತ ದೇಶದಲ್ಲಿ ದೇವರ ಕೋಲಿಗೆ ಭಾರತ ಎಂದು ಹೆಸರಿಡುತ್ತಾರೆ. ಇದು ನಮ್ಮ ಭಾರತ ದೇಶ ಕಲಿಸಿಕೊಟ್ಟ ಆಚಾರ, ವಿಚಾರ, ಸಂಪ್ರದಾಯ. ಇವತ್ತಿನ ದಿನಮಾನದಲ್ಲಿ ಪುರಾಣ ಪುಣ್ಯ ಕಥೆಗಳು ಏಕೆ ಹಚ್ಚುತ್ತಾರೆ ಅಂದರೆ ನಮ್ಮಲ್ಲಿರುವ ಅವಗುಣಗಳನ್ನು ತೊಲಗಿ ಶಿವಗುಣಗಳು ಬರಲಿ ಎಂದು ನಮ್ಮಲ್ಲಿ ಎರಡು ಮನಸುಗಳಿವೆ, ಒಂದು ಒಳ್ಳೆಯ ಮನಸು ಇನ್ನೊಂದು ಕೆಟ್ಟ ಮನಸು ಇವುಗಳಲ್ಲಿ ಒಳ್ಳೆಯದನ್ನು ಇಟ್ಟುಕೊಂಡು ಕೆಟ್ಟದ್ದನ್ನು ಹೊರಹಾಕುವ ಗುಣ ಬೇಳೆಸಿಕೊಳ್ಳಬೇಕು ಎಂದು ಭಕ್ತರಿಗೆ ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಕನ್ನೊಳ್ಳಿಯ ಷ.ಭ್ರ.ಸಿದ್ದಲಿಂಗ ಶಿವಾಚಾರ್ಯರು, ಜೈಯಣ್ಣ ಕುಲಕರ್ಣಿ, ಮಲ್ಲಿಕಾರ್ಜುನ ಯರಗಲ್ಲ ಮಾತನಾಡಿದರು.
ಅಶೋಕ ಯರಗಲ್ಲ ನೀರೂಪಿಸಿದರು, ಚನ್ನು ನಾರಾಯಣಪೂರ ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ವೇ.ಬಸಲಿಂಗಯ್ಯ ಹಿರೇಮಠ, ಕಮೀಟಿ ಅಧ್ಯಕ್ಷ ಬಸನಗೌಡ ಬಮ್ಮನಜೋಗಿ, ವೇ.ಶ್ರೀಶೈಲ ಮಠಪತಿ, ಶ್ರೀಶೈಲ ಬಾಲಪ್ಪಗೋಳ, ಹಸನ್ ನಧಾಫ್, ಡಾ.ಹರೀಶ ಕುಲಕರ್ಣಿ, ಸಿದ್ದಣ್ಣ ಯರಗಲ್ಲ, ಕುಮಾರಿ.ಅಭಿಲಾಷಾ ಗುಗ್ರಿ, ರವಿ ಉಕ್ಕಲಿ, ನಿಂಗಣ್ಣ ಬಿರಾದಾರ, ಡಾ.ಮಹಾಂತೇಶ ಹಿರೇಗೌಡರ, ಶಿವು ಬಮ್ಮನಜೋಗಿ, ಮಹೇಂದ್ರ ಗುಗ್ರಿ, ಸುರೇಶ ಒಡ್ಡರ, ರೇವಸಿದ್ದ ಬಡಿಗೇರ, ಶರಣು ಬಮ್ಮನಜೋಗಿ, ನಿಂಗಣ್ಣ ಸಿಂದಗಿ, ಮುದುಕ ಬಡಿಗೇರ, ಮಲಕಣ್ಣ ನೆಲ್ಲಗಿ, ಶಿಕ್ಷಕ ಮಹಾಂತೇಶ ಪೂಜಾರಿ, ರಾಜು ಬಾಲಪ್ಪಗೋಳ, ಜಗದೀಶ ದೇಸುಣಗಿ, ಸೇರಿದಂತೆ ಗ್ರಾಮದ ಮಲ್ಲಿಕಾರ್ಜುನ ದೇವರ ಭಕ್ತಾದಿಗಳು, ವಾಸುದೇವ ಬಲವಂತ ಫಡಕೆ ಸಂಘದ ಸದಸ್ಯರು ಇದ್ದರು.