ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಬಿಜೆಪಿ ಅಭಿವೃದ್ದಿ ಕೆಲಸ ಮಾಡದೆಯೇ ಪ್ರಚಾರ ಪಡೆದುಕೊಳ್ಳುತ್ತದೆ, ಆದರೆ ಕಾಂಗ್ರೆಸ್ ಅಭಿವೃದ್ದಿ ಮಾಡಿಯೂ ಪ್ರಚಾರ ಪಡದುಕೊಳ್ಳುವುದಿಲ್ಲ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಾರಂಭಿಸಲಾಗಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ಇನ್ಮುಂದೆ ಹೆಚ್ಚೆಚ್ಚು ಮತದಾರರನ್ನು ತಲುಪಲಿದೆ ಎಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.
ಗ್ರಾಮದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಬಾಗಲಕೋಟ ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ನೇಮಕಗೊಂಡ ಸಲೀಮ ಸರಕಾವಸ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಡವರಿಗೆ ಜೀವನ ಮಟ್ಟ ಸುಧಾರಿಸಲು ರಾಜ್ಯ ಸರಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿಯೂ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದೆ, ಬಡವರು, ಹಿಂದುಳಿದವರ ಏಳ್ಗೆಯೆ ಕಾಂಗ್ರೆಸ್ ಧೇಯವಾಗಿದ್ದು ಸಾಮಾಜಿಕ ಜಾಲತಾಣದ ಮೂಲಕ ಯುವ ಮತದಾರರನ್ನು ತಲುಪುತ್ತಿರುವ ಕಾಂಗ್ರೆಸ್ ಮುಂಬರುವ ಚುನಾವಣೆಗಳಲ್ಲಿ ಭರ್ಜರಿ ಜಯ ಗಳಿಸಲಿದೆ ಎಂದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ ಮಾತನಾಡಿ ಕಟ್ಟ ಕಡೆಯ ವ್ಯಕ್ತಗಳೂ ರಾಜಕೀಯವಾಗಿ ಬೆಳೆಯುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾಧ್ಯ ಇದಕ್ಕೆ ಸಲೀಮ ಸರಕಾವಸ ಉತ್ತಮ ಉದಾಹರಣೆ ಪಕ್ಷದ ಈ ಜವಾಬ್ದಾರಿಯನ್ನು ಬಳಸಿಕೊಂಡು ಉತ್ತಮ ಕೊಡುಗೆ ನೀಡುವ ಮೂಲಕ ನಾಯಕನಾಗಿ ಬೆಳೆಯಬೇಕೆಂದರು.
ಕೆಪಿಸಿಸಿ ಸದಸ್ಯ ಬಸವರಾಜ ಕೊಕಟನೂರ, ಪಂಡಿತ ಭೋಸಲೆ, ಅಶೋಕ ಧಡೂತಿ, ಮಹಾಲಿಂಗ ಮಾಯನ್ನವರ ಮಾತನಾಡಿದರು.
ಎಪಿಎಂಸಿ ಅಧ್ಯಕ್ಷರಾದ ದೇವಲ ದೇಸಾಯಿ, ಸಂಜು ಜೋತಾವರ, ಭರಮು ಉಳ್ಳಾಗಡ್ಡಿ, ಸತ್ಯಪ್ಪ ನೇಸೂರ, ನೂರಸಾಬ ನದಾಫ, ಮಹಮ್ಮದ ಝಾರೆ, ಶಿವಪ್ಪಾ ಪಾಟೀಲ, ಅಜಯಕುಮಾರ ಗಾಣಿಗೇರ, ಅಶೋಕ ಮೋಟಗಿ, ಮಲಿಕ ಸರಕಾವಸ, ಅರುಣಕುಮಾರ ಗಾಣಿಗೇರ, ಶೌಕತ ಮಿರ್ಜಿ ಸೇರಿದಂತೆ ಹಲವಾರು ಜನ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂಧರ್ಬದಲ್ಲಿ ಬಾಗಲಕೋಟ ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ನೇಮಕಗೊಂಡ ಸಲೀಮ ಸರಕಾವಸರನ್ನು ಕಾಂಗ್ರೆಸ್ ಮುಖಂಡರು ಹಾಗೂ ವಿವಿಧ ಸಂಘಟಣೆಯ ಪ್ರಮುಖರು ಸತ್ಕರಿಸಿ ಅಭಿನಂದಿಸಿದರು.
ಕಾರ್ಯಕ್ರಮಕ್ಕೆ ರವಿ ದೊಡವಾಡ ಸ್ವಾಗತಿಸಿದರು, ಗಾಯಕ ಮನು ನಿರೂಪಿಸಿದರು.