ಉದಯರಶ್ಮಿ ದಿನಪತ್ರಿಕೆ
ಇಂಡಿ: ಕನ್ನಡ ಫಿಲಂ ಚೇಂಬರ ವತಿಯಿಂದ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ವೈ ಎಂ ಪೂಜಾರ ಅವರಿಗೆ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ವೈದ್ಯಕೀಯ ಸೇವೆ ಆರೋಗ್ಯ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವವಿಸಲಾಗಿದೆ.
ಇಂಡಿ ತಾಲ್ಲೂಕಿನ ಚಿಕಬೇವನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ವೈ ಎಮ್ ಪೂಜಾರ ಅವರ ಗಣನೀಯ ಸೇವೆಗೆ ಕನ್ನಡ ಫಿಲಂ ಚೇಂಬರ ವತಿಯಿಂದ ಪ್ರಶಸ್ತಿ ಲಭಿಸಿದೆ
ತಮ್ಮ ಕ್ಷೇತ್ರ ವ್ಯಾಪ್ತಿಯ ಸ್ಥಳೀಯ ಧಾರ್ಮಿಕ ಸಂಘ ಸಂಸ್ಥೆಗಳ ಹಾಗೂ ಚುನಾಯಿತ ಪ್ರತಿನಿಧಿಗಳ ಜೊತೆ ಚರ್ಚಿಸಿ ಯುವ ರಕ್ತಧಾನಿಗಳ ಮನವೊಲಿಸಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ರಕ್ತದ ಕೊರತೆಯಿಂದ ಹೋಗುವ ಜೀವಗಳು ಉಳಿಸುವ ಕಾರ್ಯ ಮಾಡಿದ್ದಾರೆ.
ಅದಲ್ಲದೆ ವಯೋವೃದ್ಧರು ಕಣ್ಣು ಪೊರೆಯಿಂದ ಕಣ್ಣು ಕಾಣದೆ ಕಂಗಾಲಾಗಿ ಬದುಕುತ್ತಿರುವವರಿಗೆ ಉಚಿತ ಕಣ್ಣಿನ ಆಪರೇಷನ್ ಕ್ಯಾಂಪುಗಳು ಆಯೋಜನೆ ಹಾಗೂ ತಾಯಿ ಮಗುವಿನ ಆರೈಕೆ, ಸಾಂಕ್ರಾಮಿಕ, ಅಸಾಂಕ್ರಮಿಕ ರೋಗಗಳು ನಿಯಂತ್ರಣ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕ್ರಮ ಮಾಡುತ್ತಿದ್ದಾರೆ.
ಜೊತೆಗೆ ಶಾಲಾ ಕಾಲೇಜುಗಳ ಹದಿಹರೆಯದ ಮಕ್ಕಳ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ತಾಲ್ಲೂಕಿನಲ್ಲಿ ಗುರಿಗೆ ತಕ್ಕ ಸಾಧಕರು ಮುಂಚೂಣಿಯ ಮಾರ್ಗದರ್ಶಕರು ಮೇಲ್ವಿಚಾರಣೆಯ ಅಧಿಕಾರಿಗಳು ಎಂದು ಪ್ರಸಂಸ ನಿಯವಾಗಿದ್ದು ಮನಗಂಡು ಆರೋಗ್ಯ ಇಲಾಖೆಯ ವೈದ್ಯಕೀಯ ಆರೋಗ್ಯ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಲಭಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಚೆಂಬರ್ ಅಧ್ಯಕ್ಷ ರವೀಂದ್ರ, ನಿರ್ದೇಶಕ ಜೆ ಎಸ್ ಅಗಡಿ, ನಟಿ ಭೂಮಿಕಾ, ಬೇಲೂರು ಮಹೇಶ್, ಹಾಸ್ಯ ನಟ ರಾಯ ಕೋಕಿಲ, ಕಾಳಿ ಸ್ವಾಮಿ, ನಟಿ ಸವಿ ಪ್ರಕಾಶ್, ಚಂದನ ವಾಹಿನಿ ನಿರೂಪಕಿ ಹಾಗೂ ಸಂಗೀತ ಕಲಾವಿದರು, ರಂಗಭೂಮಿ ಕಲಾವಿದರು ಉಪಸ್ಥಿತರಿದ್ದರು.

