ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದಲ್ಲಿ ಸೆ. ೪ ರಂದು ನಡೆಯಲಿರುವ ಕಿಚಡಿ ಜಾತ್ರೆಗಾಗಿ ಸುಮಾರು ೪೦ ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಬೃಹತ್ ರಥದ ಪುರ ಪ್ರವೇಶ ಕಾರ್ಯಕ್ರಮ ರವಿವಾರ ನಡೆಯಿತು.
ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳ ಹಾಗೂ ಶ್ರೀ ಜನಾರ್ಧನ ಮಹಾರಾಜರ ಸಾನಿಧ್ಯದಲ್ಲಿ ನಡೆದ ನೂತನ ರಥದ ಪುರಪ್ರವೇಶ ಕಾರ್ಯಕ್ರಮದಲ್ಲಿ
ಸ್ಥಳಿಯ ಬಸ್ ನಿಲ್ದಾಣದ ಮಹಾದ್ವಾರದಿಂದ ನೂರಾರು ಮಹಿಳೆಯರಿಂದ ಆರತಿ ಕುಂಭ, ಸಕಲ ವಾದ್ಯ ವೃಂದಗಳೊAದಿಗೆ ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ವರೆಗೆ ಮೆರವಣಿಗೆ ಮೂಲಕ ತರಲಾಯಿತು. ನಂತರ ವಿಶೇಷ ಪೂಜೆ, ಮಹಾಮಂಗಳಾರತಿಯ ನಂತರ ಮಹಾಪ್ರಸಾದ ವಿತರಣೆ ನಡೆಯಿತು.
ಪ್ರಭುಲಿಂಗ ಸೇವಾ ಸಮೀತಿಯ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಅಣ್ಣಪ್ಪಗೌಡ ಪಾಟೀಲ, ಬಾಳಪ್ಪ ಹಳಿಂಗಳಿ, ರಾಚಯ್ಯ ಮಠಪತಿ, ರಾಮಣ್ಣ ಬಗನಾಳ, ಗುರಪ್ಪ ಬಳಗಾರ, ಬಸಪ್ಪ ಮುಗಳಖೋಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ, ಶಂಕರ ಬಟಕುರ್ಕಿ, ಪರಪ್ಪಾ ಪಾಲಭಾವಿ, ಬೀರಪ್ಪ ಹಳೆಮನಿ, ಪ್ರಕಾಶ ಪಾಟೀಲ, ಬಸವರಾಜ ಕುಂಚನೂರ, ಉಮೇಶ ಪೂಜಾರಿ, ಅಶೋಕ ಧಡೂತಿ, ಆನಂದ ಕವಟಿ, ಅಶೋಕ ಮೋಟಗಿ, ಪ್ರಭು ಮುಧೋಳ, ಮಹಾಲಿಂಗ ಮಾಯಣ್ಣವರ, ಮಹಾಂತೇಶ ಜಾಲಿಕಟ್ಟಿ, ಪ್ರಕಾಶ ಪಾಲಭಾವಿ, ಮಹಾಲಿಂಗ ಬಳಗಾರ, ಪ್ರವೀಣ ಪೂಜಾರಿ, ಶ್ರೀಶೈಲ ಮಠಪತಿ, ಅವ್ವನಪ್ಪ ಮುಗಳಖೋಡ ಸೇರಿದಂತೆ ಹಲವಾರು ಜನ ಪ್ರಮುಖರು ಭಾಗವಹಿಸಿದ್ದರು.