ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ರಾಜ್ಯದ ಪವಿತ್ರ ಪುಣ್ಯಕ್ಷೇತ್ರ ಧರ್ಮಸ್ಥಳ ಮಂಜುನಾಥ ಮತ್ತು ಅಣ್ಣಪ್ಪ ಸ್ವಾಮಿ ದೇವಾಲಯದ ಬಗ್ಗೆ ಕಳೆದ ಹಲವು ದಿನಗಳಿಂದ ಪಟ್ಟಭದ್ರ ಹಿತಾಸಕ್ತಿಯ ಸಂಘಟನೆಯವರು ನಿರಂತರ ಅಪಪ್ರಚಾರ ಮಾಡುತ್ತಿರುವದನ್ನು ಖಂಡಿಸಿ ಭಾರತೀಯ ಜನತಾಪಕ್ಷ ಬಸವನ ಬಾಗೇವಾಡಿ ಮಂಡಲ ಘಟಕದ ವತಿಯಿಂದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಪಟ್ಟಣದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಕೆ.ಬೆಳ್ಳುಬ್ಬಿ ದೇಶದಲ್ಲಿರುವ ಎಡಪಂಕ್ತಿಯ ಸಂಘಟಣೆಗಳು ಹಿಂದೂ ಧರ್ಮ ವಿರೋಧಿ ಮಹಣೀಯರು ಸೇರಿಕೊಂಡು ಕೆಲವೇ ಕೆಲವು ಧರ್ಮ ವಿರೋಧಿಯ ಪಟ್ಟಭದ್ರ ಹಿತಾಸಕ್ತಿಯ ನೀಚ ವ್ಯಕ್ತಿತ್ವ ಗುಣಗಳುಳ್ಳ ವ್ಯಕ್ತಿಗಳು ಇಂತಹ ಪವಿತ್ರ ದೇವಸ್ಥಾನದ ಮತ್ತು ಧರ್ಮಾಧಿಕಾರಿಗಳ ವ್ಯಕ್ತಿತ್ವಕ್ಕೆ ಮಸಿಬಳಿಯಲು ಕುಹಕ ಬುದ್ದಿಯನ್ನು ತೋರಿಸುತ್ತಿದ್ದು ಸತ್ಯ ಹೊರಬಂದು ಮಾನಗೇಡಿ ಮನುಷ್ಯತ್ವವುಳ್ಳ ವ್ಯಕ್ತಿಗಳಿಗೆ ತಕ್ಕ ಶಿಕ್ಷೆಯನ್ನು ಮಂಜುನಾಥ ಸ್ವಾಮಿ ಕಲ್ಪಿಸುವ ಕಾಲ ದೂರವಿಲ್ಲ ಎಂದರು.
ಬಸವನ ಬಾಗೇವಾಡಿ ಮಂಡಲದ ಪದಾದಿಕಾರಿಗಳು ಪಟ್ಟಣದ ಸರ್ವಜನತೆ ಪ್ರತಿಭಟಣೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಈ ಸಂಧರ್ಬದಲ್ಲಿ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಶಿರೋಳದ ಮಹಾಂತಸ್ವಾಮಿಗಳು, ಮಂಡಲ ಅಧ್ಯಕ್ಷ ಸಿದ್ದರಾಮ ಕಾಖಂಡಕಿ, ಚಂದ್ರಶೇಖರಯ್ಯ ಗಣಕುಮಾರ, ಸಂಗಪ್ಪ ಚಿತ್ತಾಪೂರ, ಗುರುಪಾದ ಗಣಿ, ಚಿನ್ನಪ್ಪ ಗಿಡ್ಡಪ್ಪಗೋಳ, ಸರ್ವ ಪದಾದಿಕಾರಿಗಳು ಪಾಲ್ಗೊಂಡಿದ್ದರು.