Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ದೇವರಾಜ ಅರಸು ಕರ್ನಾಟಕ ನಾಮಕರಣದ ರೂವಾರಿ :ಅರಳಿ

ಸಾಮಾಜಿಕ ಬದಲಾವಣೆಗೆ ಅರಸು ಕೊಡುಗೆ ಸದಾ ಸ್ಮರಣೀಯ

ಒಂದು ಛಾಯಾಚಿತ್ರ ಜಗತ್ತಿನ ಇತಿಹಾಸ ನೆನಪಿಸುತ್ತದೆ :ಸಾಲಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ
(ರಾಜ್ಯ ) ಜಿಲ್ಲೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಕೊಲ್ಹಾರ: ರೈತರಿಗೆ ಸರಿಯಾದ ಸಮಯಕ್ಕೆ ಗೊಬ್ಬರ ಹಾಗೂ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕರೆ ಸರ್ಕಾರಕ್ಕೆ ಸಾಲ ಕೊಡಬಲ್ಲ ರೈತ ಆದರೆ ಇಂದು ರೈತ ತನ್ನ ಗೊಬ್ಬರ ಪಡೆಯಲು ಹೋರಾಟ ಮಾಡಿ ಪಡೆಯುವ ದುಸ್ಥಿತಿ ಬಂದಿದೆ ಎಂದು ದಿಗಂಬರೇಶ್ವರ ಮಠದ ಶ್ರೀ ಕಲ್ಲಿನಾಥ ದೇವರು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಕರವೇ ಕಾರ್ಯಕರ್ತರು ರೈತರಿಗೆ ಯೂರಿಯಾ ಗೊಬ್ಬರ ಲಭ್ಯತೆ ಹಾಗೂ ಸತತ ಸುರಿದ ಮಳೆಯಿಂದ ಹಾನಿಯಾದ ಬೆಳೆ ಪರಿಹಾರ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಪಟ್ಟಣದ ತಹಶೀಲ್ದಾರ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮುಖಂಡ ಟಿ.ಟಿ. ಹಗೇದಾಳ ಮಾತನಾಡಿ ರಾಜ್ಯದಲ್ಲಿ ನಮ್ಮ ತಾಲೂಕಿನಲ್ಲಿಯೇ ಅತಿ ಹೆಚ್ಚು ಭೂಮಿಯನ್ನು ಸರ್ಕಾರ ವಿವಿಧ ಯೋಜನೆಗಳಿಗೆ ಸ್ವಾಧೀನ ಪಡಿಸಿಕೊಂಡಿದ್ದು, ಮುಂದೆ ಯಾವುದೇ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬಾರದು. ನಮ್ಮ ಮುಂದಿನ ಮಕ್ಕಳು, ಮೊಮ್ಮಕ್ಕಳಿಗೆ ಭೂಮಿ ಇಲ್ಲದಂತಾಗುತ್ತದೆ. ಜಿಲ್ಲಾಡಳಿತ ಅತೀ ಶೀಘ್ರದಲ್ಲಿ ಮಳೆಯಿಂದ ಹಾನಿಯಾದ ಬೆಳೆಗಳ ವರದಿಯನ್ನು ಪಡೆದು ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕದ ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ ರೈತರಿಗೆ ಶೀಘ್ರ ಯೂರಿಯಾ ಗೊಬ್ಬರ ಒದಗಿಸಿಕೊಡುವುದು ಮತ್ತು ಬೆಳೆಹಾನಿ ಪರಿಹಾರಕ್ಕೆ ಆದೇಶ ಮಾಡುವುದು ಆಗಬೇಕು ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರ ಜವಾಬ್ದಾರಿ. ತಾಲೂಕಿನ ರೈತರಿಗೆ ವಿತರಿಸಲು ಬಂದಂತಹ ಯೂರಿಯಾ ಗೊಬ್ಬರವನ್ನು ಹಾವೇರಿ ಜಿಲ್ಲೆಗೆ ಕಳುಹಿಸುವ ಮೂಲಕ ಈ ಭಾಗದ ರೈತರಿಗೆ ದ್ರೋಹವೆಸಗಲಾಗಿದೆ ಎಂದು ಆರೋಪಿಸಿದರು.
ವಿಜಯಪುರ ಎಸಿ ಗುರುನಾಥ ದಡ್ಡಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಉದ್ದೇಶಿಸಿ ಮಾತನಾಡಿ, ರೈತರಿಗೆ ಗೊಬ್ಬರ ಅಂಗಡಿಯವರು ಯೂರಿಯಾ ಗೊಬ್ಬರವನ್ನು ಸಕಾಲದಲ್ಲಿ ನೀಡಬೇಕು ನೀಡಿದೆ ಸಂಗ್ರಹಿಸಿದ್ದರೆ ಅಂತಹ ಅಂಗಡಿ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಈ ಭಾಗದ ರೈತರ ಬೆಳೆಗಳಿಗೆ ಬೆಳೆಹಾನಿ ಪರಿಹಾರ ಶೀಘ್ರದಲ್ಲೇ ವರದಿ ಪಡೆದು ಪರಿಹರಿಸುತ್ತೇವೆ ಎಂದು ಹೇಳಿದರು.
ಬಳೂತಿ ಗ್ರಾಮದಲ್ಲಿ ಆಶ್ರಯ ಯೋಜನೆಯಲ್ಲಿ ಮನೆ ನಿರ್ಮಾಣವಾದರು ಹಕ್ಕುಪತ್ರ ವಿತರಣೆ ಹಾಗೂ ಹಳ್ಳದ ಗೆಣ್ಣೂರ ಗ್ರಾಮದ ಸಾರ್ವಜನಿಕ ಸ್ಥಳಗಳ ಸಮಸ್ಯೆ ಎಲ್ಲವನ್ನೂ ಮಾಹಿತಿ ಪಡೆದು ತಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಂಗಮೇಶ ಸಗರ, ಕರವೇ ತಾಲೂಕು ಅಧ್ಯಕ್ಷರಾದ ಮಹಾಂತೇಶ ಗಿಡ್ಡಪ್ಪಗೋಳ ಮತ್ತು ರವಿ ಗೊಳಸಂಗಿ, ಗ್ರಾಪಂ ಸದಸ್ಯ ಪ್ರದೀಪಗೌಡ ಪಾಟೀಲ ಹಾಗೂ ತಹಶೀಲ್ದಾರ ಎಸ್.ಎಂ. ಮ್ಯಾಗೇರಿ, ಪಿಎಸ್ಐ ಎಮ್ ಬಿ ಬಿರಾದಾರ, ಉಪ ಕೃಷಿ ನಿರ್ದೇಶಕ ಶರಣಗೌಡ, ಇಒ ಸುನೀಲ ಮದ್ದಿನ ಮಾತನಾಡಿದರು.
ಈ ಸಂದರ್ಭದಲ್ಲಿ ಶಶಿಕಾಂತ ಬಿರಾದಾರ, ಮುದಕಪ್ಪ ಚಲವಾದಿ, ಶ್ರೀಶೈಲ ಬೆಣ್ಣೂರ, ಸುರೇಶ ಗಿಡ್ಡಪ್ಪಗೋಳ, ಗೋಪಾಲ ಕಾಖಂಡಕಿ, ಕಲ್ಲಪ್ಪ ಗಿಡ್ಡಪ್ಪಗೋಳ, ಬಸವರಾಜ ನ್ಯಾಮಗೊಂಡ, ಗುಳಪ್ಪ ಗುಗ್ಗರಿ, ಸತ್ಯಪ್ಪ ಕುಳೊಳ್ಳಿ ತಾಲೂಕಿನ ಹಲವು ಗ್ರಾಮಗಳಿಂದ ಸೇರಿದ್ದ ರೈತರು, ರೈತ ಮಹಿಳೆಯರು ಹಾಗೂ ಕರವೇ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮೂತ್ರ ವಿಸರ್ಜನೆಗೆ ಪರದಾಡಿದ ರೈತರು

ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದಿರುವುದರಿಂದ ದಿನ ಪೂರ್ತಿ ಧರಣಿ ನಡೆಸಿದ ರೈತರು ಮೂತ್ರ ವಿಸರ್ಜನೆ ಮಾಡಲು ಮುಳ್ಳು ಕಂಟಿಯನ್ನು ಆಶ್ರಯಿಸುವುದು ಸಾಮಾನ್ಯವಾಗಿತ್ತು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ದೇವರಾಜ ಅರಸು ಕರ್ನಾಟಕ ನಾಮಕರಣದ ರೂವಾರಿ :ಅರಳಿ

ಸಾಮಾಜಿಕ ಬದಲಾವಣೆಗೆ ಅರಸು ಕೊಡುಗೆ ಸದಾ ಸ್ಮರಣೀಯ

ಒಂದು ಛಾಯಾಚಿತ್ರ ಜಗತ್ತಿನ ಇತಿಹಾಸ ನೆನಪಿಸುತ್ತದೆ :ಸಾಲಿ

ರೈತನ ಬೆಳೆ ಮಣ್ಣುಪಾಲು ಕಣ್ಣೀರು ಮಾತ್ರ ರೈತನ ಪಾಲು :ಕೋನಳ್ಳಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ದೇವರಾಜ ಅರಸು ಕರ್ನಾಟಕ ನಾಮಕರಣದ ರೂವಾರಿ :ಅರಳಿ
    In (ರಾಜ್ಯ ) ಜಿಲ್ಲೆ
  • ಸಾಮಾಜಿಕ ಬದಲಾವಣೆಗೆ ಅರಸು ಕೊಡುಗೆ ಸದಾ ಸ್ಮರಣೀಯ
    In (ರಾಜ್ಯ ) ಜಿಲ್ಲೆ
  • ಒಂದು ಛಾಯಾಚಿತ್ರ ಜಗತ್ತಿನ ಇತಿಹಾಸ ನೆನಪಿಸುತ್ತದೆ :ಸಾಲಿ
    In (ರಾಜ್ಯ ) ಜಿಲ್ಲೆ
  • ರೈತನ ಬೆಳೆ ಮಣ್ಣುಪಾಲು ಕಣ್ಣೀರು ಮಾತ್ರ ರೈತನ ಪಾಲು :ಕೋನಳ್ಳಿ
    In (ರಾಜ್ಯ ) ಜಿಲ್ಲೆ
  • ರಂಗಭೂಮಿ ಕಲಾವಿದ ರಾಜಕುಮಾರ್ ಗೆ ನಾಟಕ ಅಕಾಡೆಮಿ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಶ್ರಾವಣ ಸದ್ವಿಚಾರ
    In (ರಾಜ್ಯ ) ಜಿಲ್ಲೆ
  • ಡಿ ದೇವರಾಜ ಅರಸು ಸಾಮಾಜಿಕ ಪರಿವರ್ತನೆಯ ಹರಿಕಾರ
    In (ರಾಜ್ಯ ) ಜಿಲ್ಲೆ
  • ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಜಿಲ್ಲಾ ಪ್ರವಾಸ
    In (ರಾಜ್ಯ ) ಜಿಲ್ಲೆ
  • ಕಲಾ, ಸಾಂಸ್ಕೃತಿಕ ತಂಡಗಳ ಧನಸಹಾಯಅರ್ಜಿ ಸಲ್ಲಿಕೆಗೆ ಸೆ.೪ವರೆಗೆ ಅವಧಿ ವಿಸ್ತರಣೆ
    In (ರಾಜ್ಯ ) ಜಿಲ್ಲೆ
  • ಶರಣರ ಧರ್ಮನಿಷ್ಠೆ ಚಿಂತನೆಗಳು ಬಧುಕಿಗೆ ಪೂರಕ :ಪರಶುರಾಮ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.