ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಆವೇಶದಲ್ಲಿ ಮನುಷ್ಯ ಮಾಡಿದ ತಪ್ಪಿಗೆ ನಿರಂತರವಾಗಿ ಇಡೀ ಜೀವನ ಪರ್ಯಂತ ಶಿಕ್ಷೆ ಅನುಭವಿಸಬೇಕಾಗುತ್ತದೆ. ಆ ತಪ್ಪನ್ನು ತಿದ್ದಿಕೊಳ್ಳಲು ದೇವರ ಮೊರೆ ಹೋಗಬೇಕಾದ ಸಂದರ್ಬದಲ್ಲಿ ಭಜನೆಯಲ್ಲಿ ಅಡಗಿರುವ ಸಂದೇಶವನ್ನು ಅರಿತು ನಡೆಯಬೇಕಾಗುತ್ತದೆ ಆದ್ದರಿಂದ ಇಂದಿನ ಯುವ ಸಮೂಹ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾದ ಭಜನೆ ಮಾಡುವ ಪರಿಪಾಠವನ್ನು ನಿತ್ಯವೂ ಮಾಡಬೇಕೆಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಪಟ್ಟಣದಲ್ಲಿ ದ್ಯಾಮವ್ವದೇವಿ ಯುವಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ ಮತ್ತು ಕನ್ನಡ ಜಾನಪದ ಪರಿಷತ್ತು ತಾಲೂಕಾ ಘಟಕ ಕೊಲ್ಹಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶ್ರಾವಣ ಮಾಸದ ಒಂದು ತಿಂಗಳ ಪರ್ಯಂತ ಕೈಗೊಂಡ ಹರಭಜನಾ ಮುಕ್ತಾಯ ಹಾಗೂ ಅವಳಿ ಜಿಲ್ಲೆಯ ಭಜನಾ ತಂಡಗಳ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ನಮ್ಮ ದೇಶದ ಸಂಸ್ಕೃತಿ ಮನೆಯಲ್ಲಿ ತಂದೆ ತಾಯಿಗಳು ಮಕ್ಕಳಿಗೆ ಸಂಸ್ಕಾರ ಕೊಡಬೇಕು ಈ ಹಿಂದೆ ಸಂತರು, ದಾಸರು, ಬಸವಾದಿ ಶರಣರು ತಮ್ಮ ವಚನ, ಕೀರ್ತನೆಗಳ ಮೂಲಕ ನಿತ್ಯ ಎಚ್ಚರಕೆಯ ಮಾತುಗಳನ್ನು ಹೇಳುತ್ತಾ ಬಂದಿದ್ದಾರೆ. ನಾವು ನಿತ್ಯ ಅಂತಹ ವಿಚಾರಗಳನ್ನು ಹೊಸ ವಿಷಯಗಳನ್ನು ಕಲಿತು ಒಳ್ಳೆಯ ಗುಣಗಳನ್ನು ಭಜನೆ ಮೂಲಕ ಕಲಿಯುವುದಾಗಿದೆ. ಕೆಟ್ಟ ಆಲೋಚನೆಗಳನ್ನು ಬಿಟ್ಟು ತರ್ಕ, ವಿತರ್ಕಗಳ ಕಲೆಯ ಮೂಲಕ ಸನಾತನ ಧರ್ಮವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲರ ಮೇಲಿದೆ ಎಂದರು.
ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು, ಶೀಲವಂತಮಠದ ಕೈಲಾಸನಾಥ ಮಹಾಸ್ವಾಮಿಗಳು, ಶೀರೋಳ ಮಹಾಂತಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಪಟ್ಟಣ ಪಂಚಾಯತಿ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ ಜ್ಯೋತಿಯನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖಂಡ ಸಿ.ಎಂ.ಗಣಕುಮಾರ,
ಶಂಕ್ರೆಪ್ಪ ದೇಸಾಯಿ, ದ್ಯಾಮವ್ವದೇವಿ ಸೇವಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೆಳ್ಳುಬ್ಬಿ, ಕಾರ್ಯದರ್ಶಿ ಈರಯ್ಯ ಮಠಪತಿ, ಶಶಿಧರ ದೇಸಾಯಿ, ಚಿನ್ನಪ್ಪ ಗಿಡ್ಡಪ್ಪಗೋಳ, ಕೆ.ಎಸ್.ಸೊನ್ನದ, ವಿರುಪಾಕ್ಷಿ ಕೊಲಕಾರ, ಪ.ಪಂ ಸದಸ್ಯರಾದ ಶ್ರೀಶೈಲ ಅಥಣಿ, ಅಪ್ಪಾಸಿ ಮಟ್ಟಿಹಾಳ, ಬಾಬು ಭಜಂತ್ರಿ. ಮುಖಂಡರಾದ ಸಂಗಪ್ಪ ಹುಚ್ಚಪ್ಪಗೋಳ, ಜಾನಪದ ಪರಿಷತ್ತಿನ ಅಧ್ಯಕ್ಷ ಮಲ್ಲಪ್ಪ ಗಣಿ, ಭಿಮಪ್ಪ ಬೀಳಗಿ, ಇಸ್ಮಾಯಿಲ್ ತಹಶೀಲ್ದಾರ, ಅನೇಕ ಮಹಣೀಯರು ಉಪಸ್ಥಿತರಿದ್ದರು.