Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಅಂಚೆ ಕಛೇರಿಯಲ್ಲಿ ಕೆಟ್ಟು ಹೋದ ಬ್ಯಾಟರಿಗಳು | ಅಸಹಕಾರ ಧೋರಣೆಯ ಸಿಬ್ಬಂದಿ | ಮೂಲಭೂತ ಸೌಕರ್ಯಗಳ ಕೊರತೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಸ್ಥಳೀಯ ಮುಖ್ಯ ಅಂಚೆ ಕಛೇರಿಯಲ್ಲಿ ಬ್ಯಾಟರಿಗಳು ಸಂಪೂರ್ಣವಾಗಿ ಕೆಟ್ಟು ಹೋಗಿದ್ದು, ಸಾರ್ವಜನಿಕರು ಯಾವುದೇ ಕೆಲಸದ ನಿಮಿತ್ಯವಾಗಿ ಅಂಚೆ ಕಛೇರಿಗೆ ಹೋದರೆ, ವಿದ್ಯುತ್ ಇದ್ದರೆ ಮಾತ್ರ ಅವರ ಕೆಲಸ ಕಾರ್ಯಗಳು ಆಗುತ್ತವೆ.ಏಕೆಂದರೆ ಕಚೇರಿಯಲ್ಲಿ ಜನರೇಟರ್ ಇಲ್ಲದ ಕಾರಣ ಕಂಪ್ಯೂಟರ್, ಪ್ರಿಂಟರ್ ಕಾರ್ಯನಿರ್ವಹಿಸುವದಿಲ್ಲ. ನಮಗೆ ತುರ್ತು ಕೆಲಸ ಇದೆ ಎಂದು ಸಾರ್ವಜನಿಕರು ಹೇಳಿದರೆ, ಅಲ್ಲಿನ ಸಿಬ್ಬಂದಿಯ ಉತ್ತರ ಮಾತ್ರ ವಿದ್ಯುತ್ ಇಲ್ಲ.ವಿದ್ಯುತ್ ಬರೋವರೆಗೂ ಅಲ್ಲಿ ಕುಳಿತುಕೊಳ್ಳಲಿಕ್ಕೆ ಆಸನದ ವ್ಯವಸ್ಥೆ ಕೂಡಾ ಇಲ್ಲ. ಗ್ರಾಹಕರು ಕಸದ ರಾಶಿ ತುಂಬಿರುವ, ಸ್ವಚ್ಛತೆ ಇಲ್ಲದ ನೆಲದ ಮೇಲೆ ಕುಳಿತುಕೊಳ್ಳಬೇಕು. ಇಲ್ಲಿ ಗ್ರಾಹಕರಿಗೆ ಮೂಲಭೂತ ಸೌಕರ್ಯಗಳು ಇಲ್ಲದೆ ಇರುವುದು ಎದ್ದು ಕಾಣುತ್ತದೆ. ಮೂತ್ರಾಲಯ ಇಲ್ಲದಿರುವುದು ಕೇಳಿದರೆ ಹಳ್ಳದ ದಂಡೆಗೆ ಹೋಗಿರಿ ಎಂಬ ಉಡಾಫೆ ಉತ್ತರ ಮಾತ್ರ ಸಿಗುತ್ತದೆ.ಇಲ್ಲಿ ಯಾವೊಬ್ಬ ಅಧಿಕಾರಿ, ಸಿಬ್ಬಂದಿ ಸರಿಯಾದ ಮಾಹಿತಿ ನೀಡದೆ ಕಳಿಸುತ್ತಾರೆ.ಈ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ವಾಡ್೯ ನಂ.21 ರಲ್ಲಿ ಬರುವ ಗುರುಪಾದೇಶ್ವರ ನಗರ ಹಾಗೂ ಕುಮುದಾ ನಗರ ಉದ್ಯಾನವನಗಳಲ್ಲಿ ಮಹಾನಗರ ಪಾಲಿಕೆ ವತಿಯಿಂದ ಸೋಮವಾರ ಗಿಡಗಳನ್ನು ನೆಡಲಾಯಿತು.ಪಾಲಿಕೆ ಸದಸ್ಯ ಕುಮಾರ ಗಡಗಿ ಅವರು ಗಿಡನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ದೇವೇಂದ್ರ ಹೆಳವರ, ಶಿವಾನಂದ ಚನ್ನಾಳ, ಡಾ.ಮನಗೂಳಿ ಹಾಗೂ ಪಾಲಿಕೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಗ್ರಾಮೀಣ ಪ್ರದೇಶದ ಜಾತ್ರೆಗಳು ಜನತೆಯಲ್ಲಿ ಸೌಹಾರ್ದತೆ ಸಾರಲು ಸಹಕಾರಿಯಾಗಿವೆ ಎಂದು ಅನುಗ್ರಹ ಆಸ್ಪತ್ರೆಯ ಖ್ಯಾತನೇತ್ರ ತಜ್ಞ ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹೇಳಿದರು.ತಾಲ್ಲೂಕಿನ ಮಣ್ಣೂರ ಗ್ರಾಮದಲ್ಲಿ ಸೋಮವಾರ ಅಬೂಸಾಹೇಬ ಜಾತ್ರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿವಿಧ ಜಾತಿ, ಸಮುದಾಯಗಳನ್ನು ಜಾತ್ರೆಗಳು ಒಂದುಗೂಡಿಸುತ್ತವೆ. ಇಂದು ಮುಸ್ಲಿಂ ದೇವರ ಜಾತ್ರೆಯಲ್ಲಿ ಇಡೀ ಗ್ರಾಮದ ಜನತೆ ಪಾಲ್ಗೊಂಡಿರುವುದು ನಾವೆಲ್ಲ ಮಾನವರು ಒಂದೇ ಎಂಬ ಭಾವ ಸಾರುವಂತಿದೆ. ಅಂತೆಯೇ ತಾಲ್ಲೂಕಿನ ಮುಳಸಾವಳಗಿ, ಮಣ್ಣೂರ, ಜಾಲವಾದ ಗ್ರಾಮಗಳ ದರ್ಗಾಗಳ ಉರುಸ್‌ಗಳು ಇಂದಿಗೂ ಭಾವೈಕ್ಯತೆ ಬೆಸೆಯುವ ತಾಣಗಳಾಗಿವೆ ಎಂದರು.ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಂಬಣ್ಣ ಆನೆಗುಂದಿ, ಅನುಗ್ರಹ ಆಸ್ಪತ್ರೆಯ ಸಂಗಮೇಶ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯರಾದ ವಸಂತ ರಾಠೋಡ, ಭೀಮಣ್ಣ ಹರವಾಳ, ರಾಜು ಮಣ್ಣೂರ, ರಾಮಣ್ಣ ಕಮತಗಿ, ಭೀಮಾಶಂಕರಗೌಡ ಪಾಟೀಲ, ಸುರೇಶ ಪ್ಯಾಟಿ ಸೇರಿದಂತೆ ಜಾತ್ರಾ ಕಮಿಟಿಯ ಸರ್ವ ಸದಸ್ಯರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಎನ್‌ಟಿಪಿಸಿ ಕೂಡಗಿಯಿಂದ ಆಲಮಟ್ಟಿ ರಸ್ತೆಗೆ ಹೊಂದಿಕೊಂಡು ಬರುವ ಗದಗ ಹುಟಗಿ ರೇಲ್ವೇ ಮಾರ್ಗಕ್ಕೆ ತೆಲಗಿ ಸಮೀಪ ಹೊಸದಾಗಿ ರೇಲ್ವೇ ಹಳಿಮಾರ್ಗ ಕೆಳಗಡೆ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿತು.ತಾಲೂಕಿನ ಕವಲಗಿ ಗ್ರಾಮದಿಂದ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮದ್ಯದಲ್ಲಿ ಬರುವ ರೇಲ್ವೇ ಮಾರ್ಗದ ಮಾನವ ಕಾವಲುಗಾರ ತಡೆಗೇಟ್ ಬದಲಾಗಿ ಹಳಿ ಕೆಳಬಾಗದಲ್ಲಿ ಸೇತುವೆ ನಿರ್ಮಿಸಲು ದಕ್ಷೀಣ ಮದ್ಯ ರೇಲ್ವೇ ಇಲಾಖೆ ಮಂಜೂರಾತಿ ನೀಡಿ ಕಾಮಗಾರಿ ಪ್ರಾರಂಭಿಸಲು ಸಂಸದ ರಮೇಶ ಜಿಗಜಿಣಗಿಯವರ ಸತತ ಪ್ರಯತ್ನವೇ ಕಾರಣ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.ಸೇತುವೆ ಕಾಮಗಾರಿಗೆ ಅಂದಾಜು ಎಂಟು ಕೋಟಿ ವೆಚ್ಚವಾಗಲಿದೆ. ಈ ಸೇತುವೆ ನಿರ್ಮಾಣವಾಗುವದರಿಂದ ಬೀಳಗಿ ಬಾರಖೇಡ ರಾಜ್ಯ ಹೆದ್ದಾರಿಯಲ್ಲಿ ಕಬ್ಬು ಹೊತ್ತು ಸಾಗಿಸುವ ಮತ್ತು ಎತ್ತರದ ಸಗಟು ತೆಗೆದುಕೊಂಡು ಬರುವ ವಾಹನಗಳಿಗೆ ಬಹಳ ಅನುಕೂಲವಾಗುತ್ತದೆ. ಕಾರಣ ತೆಲಗಿ ರೇಲ್ವೇ ನಿಲ್ದಾಣದ ಹತ್ತೀರವಿರುವ ಕೆಳ ಸೇತುವೆ ಕಿರಿದಾಗಿದ್ದರಿಂದ ಕಬ್ಬಿನ ಟ್ಯಾಕ್ಟರ ಲಾರಿ ಮತ್ತು…
೧೯೬೪ರಲ್ಲಿ ಪ್ರಾರಂಭವಾದ ಬ್ಯಾಂಕು ೬ ದಶಕಗಳಲ್ಲಿ ರೂ.೧೦೮ಕೋಟಿ ಠೇವಣಿ ಸಂಗ್ರಹ | ರೂ.೭೨ಕೋಟಿ ಸಾಲ ವಿತರಣೆ | ಅಧ್ಯಕ್ಷ ಶರಣಪ್ಪ ವಾರದ ವಿವರಣೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ದಿ.ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್ ೬೦ ವರ್ಷಗಳನ್ನು ಪೂರೈಸಿದ ಪ್ರಯುಕ್ತ ಷಷ್ಠಿಪೂರ್ತಿ ಹಾಗೂ ೬೧ನೆಯ ವರ್ಷದ ವಾರ್ಷಿಕ ಮಹಾಸಭೆಯನ್ನು ಸೆ.೨೦ರಂದು ಅನುಗ್ರಹ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಶರಣಪ್ಪ ವಾರದ ಹೇಳಿದರು.ಸಿಂದಗಿ ಪಟ್ಟಣದ ದಿ.ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕಿನ ಕಛೇರಿಯಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದ ಸಾನಿಧ್ಯವನ್ನು ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಹಿಕೊಳ್ಳಲಿದ್ದು, ಉದ್ಘಾಟನೆಯನ್ನು ಸಿಂದಗಿ ಶಾಸಕ ಅಶೋಕ ಮನಗೂಳಿ ನೆರವೇರಿಸಲಿದ್ದಾರೆ.೧೯೬೪ರಲ್ಲಿ ಪ್ರಾರಂಭವಾದ ಬ್ಯಾಂಕು ೬ ದಶಕಗಳಲ್ಲಿ ರೂ.೧೦೮ಕೋಟಿ ಠೇವಣಿ ಸಂಗ್ರಹಿಸಿದ್ದು, ರೂ.೭೨ಕೋಟಿ ಸಾಲ ವಿತರಿಸಿದ್ದು, ಒಟ್ಟು ೬ ಶಾಖೆಗಳನ್ನು ಹೊಂದಿ ಎಲ್ಲ ಶಾಖೆಗಳು ಸಹಕಾರಿ ರಂಗದಲ್ಲಿ ಎ ಗ್ರೇಡ್‌ನಲ್ಲಿ ಪ್ರಗತಿಯತ್ತ ಸಾಗಲು ನಿರ್ದೇಶಕರ, ವ್ಯವಸ್ಥಾಪಕರ, ಸಿಬ್ಬಂದಿ ವರ್ಗದ ಸಹಕಾರ ಹಾಗೂ ಪರಿಶ್ರಮವೇ…
ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಾದ್ಯಂತ ಇರುವ ಶಾಲಾ-ಕಾಲೇಜ್ ಆವರಣದ ೧೦೦ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ತಂಬಾಕು ಉತ್ಪನ್ನಗಳ ಮಾರಾಟವಾಗದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ ನೀಡಿದರು.ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣಾ ಕಾರ್ಯಕ್ರಮದ ೨೦೨೫-೨೬ನೇ ಸಾಲಿನ ಎರಡನೇ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಶಾಲೆಯ ಮುಖ್ಯೋಪಾಧ್ಯಾಯರು ಸೇರಿದಂತೆ ಶಾಲಾ ಅಭಿವೃದ್ಧಿ ಸಮಿತಿಯವರು ಕೊಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ತಂಬಾಕು ಉತ್ಪನ್ನಗಳ ಉಪಯೋಗದಿಂದ ದುಷ್ಪರಿಣಾಮ ಹಾಗೂ ಕಾಯ್ದೆಯ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅವರು ಸೂಚನೆ ನೀಡಿದರು.ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ನಿಯಂತ್ರಣಕ್ಕೆ ತನಿಖಾ ದಳಗಳನ್ನು ರಚಿಸಿಕೊಂಡು ಕ್ರೀಯಾಶೀಲತೆಯಿಂದ ಕಾಲ ಕಾಲಕ್ಕೆ ದಾಳಿ ನಡೆಸಬೇಕು. ಎಲ್ಲ ಶಾಲೆಗಳಲ್ಲಿ ಆಗಾಗ ಪಾಲಕರ ಸಭೆ ಜರುಗಿಸಿ, ಮಾಹಿತಿ ನೀಡಬೇಕು.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೆಳಗಾವಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಅಥ್ಲೆಟಿಕ್ ಹಾಗೂ ಜುಡೋ ಕ್ರೀಡೆಗಳನ್ನು ವಿಜಯಪುರ ಜಿಲ್ಲಾ ಕ್ರೀಡಾಂಗಣದಲ್ಲಿ ಸೆ.೧೧ ಹಾಗೂ ೧೨ ರಂದು ಏರ್ಪಡಿಸಲಾಗಿದೆ.ಜಿಲ್ಲಾ ಮಟ್ಟದ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ-ದ್ವೀತಿಯ ಸ್ಥಾನ ಪಡೆದ ಕ್ರೀಡಾಪಟುಗಳು ಹಾಗೂ ಗುಂಪು ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ವಿಭಾಗ ಮಟ್ಟದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ದಿನಾಂಕ : ೧೧-೦೯-೨೦೨೫ ರಂದು ಬೆಳಿಗ್ಗೆ ೮ ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕು.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ಧೈವಾಡಿ ಮೊ: ೭೦೧೯೦೦೮೪೪೩ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ವಿಜಯಪುರ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಬೆಂಗಳೂರು (ಕಾಸಿಯಾ) ಇವರ ಸಹಯೋಗದಲ್ಲಿ ಎಂಎಸ್‌ಎಂಇಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು ಯೋಜನೆಯಡಿ ಝಡ್‌ಇಡಿ ಮತ್ತು ಲೀನ್ ಯೋಜನೆಯ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸೆ.೧೧ ರಂದು ಸಿಂದಗಿಯ ಹೋಟೆಲ್ ಡಾಲ್ಪಿನ್‌ನಲ್ಲಿ ಏರ್ಪಡಿಸಲಾಗಿದೆ.ಈ ಕಾರ್ಯಕ್ರಮದಲ್ಲಿ ಎಂಎಸ್‌ಎಂಇ ಉದ್ದಿಮೆದಾರರು ಭಾಗವಹಿಸಿ ಒಂದು ದಿನದ ಅರಿವು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಸದೃಢವಾದ ಶರೀರದ ರಚನೆಯಲ್ಲಿ ಆಹಾರವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಈ ನಿಟ್ಟಿನಲ್ಲಿ ಜನತೆ ಆಹಾರದ ಕಡೆಗೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ ಎಂದು ಪಟ್ಟಣದ ಖ್ಯಾತ ವೈದ್ಯ ಡಾ. ಎನ್.ಬಿ.ವಜೀರಕರ ಹೇಳಿದರು.ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಐಕ್ಯೂಎಸಿ,ವಿಜಯಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಮಹಿಳಾ ವೇದಿಕೆಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರತಿದಿನ ಊಟದಲ್ಲಿ ಧಾನ್ಯ, ತರಕಾರಿ ,ದ್ವಿದಳ ಧಾನ್ಯ, ಸಿರಿಧಾನ್ಯ ಮೊಳಕೆ ಒಡೆದ ಕಾಳುಗಳು ಬಳಸಬೇಕು. ಬೇಯಿಸದೇ ಇರುವ ತರಕಾರಿಗಳಾದ ಗಜ್ಜರಿ , ಸೌತೆಕಾಯಿ, ಮೂಲಂಗಿ , ಬಿಟರೂಟ್, ಈರುಳ್ಳಿ , ಬೆಳ್ಳುಳ್ಳಿ ಅನೇಕ ತರಕಾರಿಯನ್ನು ಹೆಚ್ಚಿಗೆ ಬಳಸಬೇಕು. ಮಾಂಸ ಆಹಾರಕ್ಕಿಂತ ಸಸ್ಯ ಆಹಾರವು ಆರೋಗ್ಯಕ್ಕೆ ಹೆಚ್ಚಿನ ಶಕ್ತಿ ತಂದುಕೊಡುತ್ತದೆ. ದೀರ್ಘಕಾಲದವರೆಗೆ ಸದೃಢವಾದ ಶರೀರವನ್ನು ಕಾಪಾಡಿಕೊಳ್ಳಲು ಬೇಕರಿ ಮತ್ತು ಕರಿದ ಪದಾರ್ಥಗಳಿಂದ ದೂರ ಇರಬೇಕು. ವಯಸ್ಕರು ಪ್ರತಿದಿನ ಮೂರರಿಂದ ಮೂರುವರೆ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ವ್ಯಕ್ತಿ ಶ್ರೀಮಂತನಾಗುತ್ತಾ ಹೋದಂತೆ ವಿಚಾರ ಮತ್ತು ನಡವಳಿಕೆ ಮೃಗವಾಗುತ್ತಾ ಹೋಗಿ ಜ್ಞಾನಿಯಾಗುತ್ತಿದ್ದಂತೆ ಆತನ ವಿಚಾರಗಳಲ್ಲಿ ನಡವಳಿಕೆಗಳಲ್ಲಿ ಗುರುವಾಗುತ್ತಾ ಹೋಗುತ್ತಾನೆ ಎಂದು ಪ್ರಾಚಾರ್ಯ ಕೆ.ಜಿ. ಲಮಾಣಿ ಹೇಳಿದರು.ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಕೂಡಗಿಯಲ್ಲಿ ಏರ್ಪಡಿಸಿದ ರಾಜ್ಯಮಟ್ಟದ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿಯನ್ನು ಪಡೆದ ಸಮಾಜಶಾಸ್ತ್ರದ ಹಿರಿಯ ಉಪನ್ಯಾಸಕರಾದ ಪ್ರೊ: ಬಸವರಾಜ ಜಾಲವಾದಿಯವರ ಅಭಿನಂದನಾ ಸಮಾರಂಭದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡುತ್ತಿದ್ದರು.೨೩ ಜಿಲ್ಲೆಗಳಿಗೆ ದೊರೆಯದ ಈ ಪ್ರಶಸ್ತಿ ನಮ್ಮ ಜಿಲ್ಲೆಗೆ ಬಸವಣ್ಣನ ಈ ನೆಲಕ್ಕೆ ಅದೂ ನಮ್ಮ ಕಾಲೇಜಿಗೆ ಇವರ ರೂಪದಲ್ಲಿ ದೊರಕಿದ್ದು ಭಾಗ್ಯವೇ ಸರಿ ಎಂದರು. ಇಂತಹ ಧನಾತ್ಮಕ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಪ್ರೇರೇಪಣೆಗೊಂಡು ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಬೇಕೆಂದು ಕರೆಕೊಟ್ಟರು.ಪ್ರಾಸ್ಥಾವಿಕ ಮಾತುಗಳನ್ನಾಡಿದ ಪ್ರೊ: ವ್ಹಿ.ಜಿ. ಕಿವುಡಜಾಡರ್ ಮಾತನಾಡಿ, ಅನುಕರಣನೀಯ ವ್ಯಕ್ತಿತ್ವ ಹೊಂದಿದ ಜಾಲವಾದಿಯವರಿಂದ ವಿದ್ಯಾರ್ಥಿಗಳು ಬಹಳ ಕಲಿಯುವುದಿದೆ. ಇಂತಹ ಅರ್ಹ ವ್ಯಕ್ತಿತ್ವದವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದಾಗ ಆ ಪ್ರಶಸ್ತಿಗೆ ಘನತೆ ಬರುತ್ತೆ ಅದಕ್ಕಾಗಿ ರಾಜ್ಯಮಟ್ಟದ ಆಯ್ಕೆ ಸಿಬ್ಬಂದಿಗೆ ಧನ್ಯವಾದಗಳು ಎಂದರು.ಎಸ್.ಬಿ. ದೇಸಾಯಿ…
