ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ವಾಡ್೯ ನಂ.21 ರಲ್ಲಿ ಬರುವ ಗುರುಪಾದೇಶ್ವರ ನಗರ ಹಾಗೂ ಕುಮುದಾ ನಗರ ಉದ್ಯಾನವನಗಳಲ್ಲಿ ಮಹಾನಗರ ಪಾಲಿಕೆ ವತಿಯಿಂದ ಸೋಮವಾರ ಗಿಡಗಳನ್ನು ನೆಡಲಾಯಿತು.
ಪಾಲಿಕೆ ಸದಸ್ಯ ಕುಮಾರ ಗಡಗಿ ಅವರು ಗಿಡನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ದೇವೇಂದ್ರ ಹೆಳವರ, ಶಿವಾನಂದ ಚನ್ನಾಳ, ಡಾ.ಮನಗೂಳಿ ಹಾಗೂ ಪಾಲಿಕೆ ಸಿಬ್ಬಂದಿಗಳು ಉಪಸ್ಥಿತರಿದ್ದರು.