ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಗ್ರಾಮೀಣ ಪ್ರದೇಶದ ಜಾತ್ರೆಗಳು ಜನತೆಯಲ್ಲಿ ಸೌಹಾರ್ದತೆ ಸಾರಲು ಸಹಕಾರಿಯಾಗಿವೆ ಎಂದು ಅನುಗ್ರಹ ಆಸ್ಪತ್ರೆಯ ಖ್ಯಾತನೇತ್ರ ತಜ್ಞ ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹೇಳಿದರು.
ತಾಲ್ಲೂಕಿನ ಮಣ್ಣೂರ ಗ್ರಾಮದಲ್ಲಿ ಸೋಮವಾರ ಅಬೂಸಾಹೇಬ ಜಾತ್ರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿವಿಧ ಜಾತಿ, ಸಮುದಾಯಗಳನ್ನು ಜಾತ್ರೆಗಳು ಒಂದುಗೂಡಿಸುತ್ತವೆ. ಇಂದು ಮುಸ್ಲಿಂ ದೇವರ ಜಾತ್ರೆಯಲ್ಲಿ ಇಡೀ ಗ್ರಾಮದ ಜನತೆ ಪಾಲ್ಗೊಂಡಿರುವುದು ನಾವೆಲ್ಲ ಮಾನವರು ಒಂದೇ ಎಂಬ ಭಾವ ಸಾರುವಂತಿದೆ. ಅಂತೆಯೇ ತಾಲ್ಲೂಕಿನ ಮುಳಸಾವಳಗಿ, ಮಣ್ಣೂರ, ಜಾಲವಾದ ಗ್ರಾಮಗಳ ದರ್ಗಾಗಳ ಉರುಸ್‌ಗಳು ಇಂದಿಗೂ ಭಾವೈಕ್ಯತೆ ಬೆಸೆಯುವ ತಾಣಗಳಾಗಿವೆ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಂಬಣ್ಣ ಆನೆಗುಂದಿ, ಅನುಗ್ರಹ ಆಸ್ಪತ್ರೆಯ ಸಂಗಮೇಶ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯರಾದ ವಸಂತ ರಾಠೋಡ, ಭೀಮಣ್ಣ ಹರವಾಳ, ರಾಜು ಮಣ್ಣೂರ, ರಾಮಣ್ಣ ಕಮತಗಿ, ಭೀಮಾಶಂಕರಗೌಡ ಪಾಟೀಲ, ಸುರೇಶ ಪ್ಯಾಟಿ ಸೇರಿದಂತೆ ಜಾತ್ರಾ ಕಮಿಟಿಯ ಸರ್ವ ಸದಸ್ಯರು ಇದ್ದರು.